ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ ಭಾರತ-ಅಮೆರಿಕ ಸಂಬಂಧಕ್ಕೆ ಅಪಾಯ ಉಂಟಾಗಬಹುದು !

ಅಮೆರಿಕಾದಲ್ಲಿ 5 ಭಾರತೀಯ ಸಂಸದರ ದಾವೆ !

ವಾಷಿಂಗ್ಟನ್ (ಅಮೇರಿಕಾ) – ಅಮೆರಿಕದಲ್ಲಿರುವ ಭಾರತೀಯ ಮೂಲದ 5 ಸಂಸದರು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು ಹತ್ಯೆಯ ಸಂಚಿನ ಬಗ್ಗೆ ಭಾರತ ತನಿಖೆ ನಡೆಸದಿದ್ದರೆ, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧಕ್ಕೆ ಅಪಾಯ ಎದುರಾಗಬಹುದು’, ಎಂದು ಹೇಳಿದ್ದಾರೆ. ಈ ಸಂಸದರ ಹೆಸರುಗಳು ಏಮಿ ಬೇರಾ, ಪ್ರಮೀಳಾ ಜಯಪಾಲ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ ಮತ್ತು ಶ್ರೀ ಠಾಣೆದಾರ್ ಎಂದಾಗಿದೆ.

1. ಈ ಸಂಸದರು ಪ್ರಕಟಣೆಗೊಳಿಸಿದ್ದ ಜಂಟಿ ಮನವಿಯಲ್ಲಿ, ಇದು ಅತ್ಯಂತ ಗಂಭೀರವಾದ ವಿಚಾರ ವಾಗಿದೆ. ಇನ್ನು ಮುಂದೆ ಹೀಗಾಗದಂತೆ ಭಾರತ ಮುತುವರ್ಜಿ ವಹಿಸಬೇಕು. ಭಾರತವು ಅಮೆರಿಕದ ನೆಲದಲ್ಲಿ ಇಂತಹ ಷಡ್ಯಂತ್ರವನ್ನು ಮರು ರೂಪಿಸಬಾರದು ಮತ್ತು ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಹೇಳಿದೆ.

2. ಅಮೇರಿಕಾ ಸರಕಾರವು, ನ್ಯೂಯಾರ್ಕ್‌ನಲ್ಲಿ ಪನ್ನು ಮೇಲೆ ಮಾರಣಾಂತಿಕ ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಇದರಲ್ಲಿ ಭಾರತದ ಕೈವಾಡವಿತ್ತು. ಈ ಸಂಚು ವಿಫಲಗೊಳಿಸಲಾಯಿತು. ಜೂನ್ 2023 ರಲ್ಲಿ ಪ್ರಧಾನಿ ಮೋದಿಯವರ ಅಮೇರಿಕಾ ಭೇಟಿಯ ನಂತರ, ಅಮೆರಿಕಾದ ಅಧಿಕಾರಿಗಳು ಈ ಸೂತ್ರವನ್ನು ಭಾರತಕ್ಕೆ ಪ್ರಸ್ತುತಪಡಿಸಿದ್ದರು. ಅದರ ನಂತರ, ಭಾರತ ಸರಕಾರವು ಇಡೀ ವಿಷಯವನ್ನು ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ತಪಾಸಣೆಯ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪನ್ನು ಬಳಿ ಕೆನಡಾ ಮತ್ತು ಅಮೇರಿಕಾದ ಪೌರತ್ವ ಇದೆ.

ಸಂಪಾದಕೀಯ ನಿಲುವು

ಭಾರತೀಯ ಮೂಲದ ಸಂಸದರು ಭಾರತ ವಿರೋಧಿ ಖಲಿಸ್ತಾನಿ ಭಯೋತ್ಪಾದಕ ಪನ್ನು ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಮೆರಿಕಾದ ಮೇಲೆ ಒತ್ತಡ ಹೇರಬೇಕು. ಹಾಗೆ ಮಾಡದೇ ಭಾರತಕ್ಕೆ ಇಂತಹ ಸಲಹೆ ನೀಡಬಾರದು ಎಂದು ಭಾರತ ಅವರಿಗೆ ತಿಳುವಳಿಕೆ ನೀಡಬೇಕು !