ಹಮಾಸ್‌ನ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಹೂಡಿದ ದೊಡ್ಡ ತಂತ್ರ ! – ಶ್ರೀ. ಭಾವು ತೊರಸೆಕರ

ಇಸ್ರೈಲ್‌ ಪ್ರಧಾನಿ ಬೆಂಜಾಮಿನ್‌ ನೇತಾನ್ಯಾಹು ಮತ್ತು ಪ್ರಧಾನಮಂತ್ರಿ ಮೋದಿ

‘ಸದ್ಯ ಹಮಾಸ್‌ ಮತ್ತು ಇಸ್ರೈಲ್‌ ನಡುವೆ ಭೀಕರ ಯುದ್ಧ ನಡೆದಿದೆ. ಸದ್ಯ ಬರುತ್ತಿರುವ ಸುದ್ದಿಗಳಿಗನುಸಾರ ಹಮಾಸ್‌ನ ಎಲ್ಲ ಶೂರರು ತಮ್ಮ ಬಾಲವನ್ನು ಮುದುರಿಕೊಂಡು ಎಲ್ಲಿಯೋ ಬಿಲಗಳಲ್ಲಿ ಅಥವಾ ಸುರಂಗಗಳಲ್ಲಿ ತಮ್ಮ ಜೀವವನ್ನು ಕಾಪಾಡಿಕೊಳ್ಳಲು ಪಲಾಯನ ಮಾಡುತ್ತಿದ್ದಾರೆ. ಇಸ್ರೈಲ್‌ನ ಆದೇಶದ ಮೇರೆಗೆ ಸುಮಾರು ೫-೬ ಲಕ್ಷಗಳಿಗಿಂತ ಹೆಚ್ಚು ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಉತ್ತರ ಗಾಝಾದಿಂದ ದಕ್ಷಿಣ ಗಾಝಾಕ್ಕೆ ಬಂದಿದ್ದಾರೆ. ಗಾಝಾ ಮತ್ತು ಈಜಿಪ್ತ್‌ನ ಗಡಿಗಳಲ್ಲಿನ ಪ್ರವೇಶದ್ವಾರವನ್ನು ತೆರೆದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಒಂದು ಸುದ್ದಿಗನುಸಾರ ಅಮೇರಿಕ ಮತ್ತು ಇಜಿಪ್ತ್ ನಡುವೆ ಒಂದು ಒಪ್ಪಂದವಾಗಿದ್ದು, ಅದಕ್ಕನುಸಾರ ಈ ಜನರಿಗೆ ನಿರಾಶ್ರಿತರೆಂದು ಇಜಿಪ್ತ್‌ನಲ್ಲಿ ತಾತ್ಕಾಲಿಕವಾಗಿ ಬರಲು ಬಿಡಬೇಕು ಎಂದು ನಿರ್ಧರಿಸಲಾಗಿದೆ. ಈ ಯುದ್ಧದಲ್ಲಿ ಎಷ್ಟು ಜನರು ಸಾವನ್ನಪ್ಪಿದರು ಮತ್ತು ಗಾಯಗೊಂಡರು ? ಎಷ್ಟು ಹಾನಿಯಾಯಿತು? ಎಷ್ಟು ರಾಕೇಟ್‌ಗಳನ್ನು ಬಿಟ್ಟರು ? ಎಂಬ ಅಂಕಿಅಂಶಗಳನ್ನು ನೀಡಲಾಗುತ್ತದೆ; ಆದರೆ ಇದರಲ್ಲಿ ತೆರೆಮರೆಯ ಹಿಂದೆ ನಡೆಯುವ ಚಟುವಟಿಕೆಗಳನ್ನು ಬಹಿರಂಗಪಡಿಸುವ ಪ್ರಯತ್ನ ಸಾಮಾನ್ಯವಾಗಿ ಆಗುವುದಿಲ್ಲ. ನನ್ನ ದೃಷ್ಟಿಯಲ್ಲಿ ಅದೇ ಮಹತ್ವದ್ದಾಗಿದೆ. ಏಕೆಂದರೆ, ಈ ಹಿಂದೆ ಪ್ಯಾಲೇಸ್ಟೈನ್‌ ಮತ್ತು ಇಸ್ರೈಲ್‌ ನಡುವೆ ಯುದ್ಧವು ಆರಂಭವಾದ ನಂತರ ಯಾವ ಆವೇಶದಿಂದ ಜಗತ್ತಿನ ಮುಸ್ಲಿಂ ದೇಶಗಳು ಪ್ಯಾಲೇಸ್ಟೈನ್‌ ಯಾಸರ ಅರಾಫತ್‌ ಮತ್ತು ಅಲ್‌ ಫತಾಹ್‌ ಇವರ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತಿದ್ದವೋ, ಈಗ ಅಂತಹದ್ದೇನೂ ಕಾಣಿಸುವುದಿಲ್ಲ, ಹೀಗೆ ಮೊದಲ ಬಾರಿಗೆ ಆಗುತ್ತಿದೆ. ೫೦-೬೦ ವರ್ಷಗಳ ಹಿಂದೆ ಅವರು ವಿಮಾನಗಳನ್ನು ಹೈಜಾಕ್‌ ಮಾಡಿ ಪ್ರವಾಸಿಗರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುತ್ತಿದ್ದರು ಮತ್ತು ಗಾಯಗೊಂಡ ಪ್ಯಾಲೇಸ್ಟೈನಿ ಜನರನ್ನು ಇಸ್ರೈಲ್‌ನ ಸೆರೆಮನೆಯಿಂದ ಬಿಡಿಸುತ್ತಿದ್ದರು. ಈ ಎಲ್ಲ ಅವಧಿಗಳಲ್ಲಿ ಜಗತ್ತಿನ ಎಲ್ಲ ಮುಸ್ಲಿಂ ದೇಶಗಳ ಸಂಘಟನೆಗಳು ‘ಅಲ್‌ ಫತಾಹ್‌’ನ ಬೆಂಬಲಕ್ಕೆ ದೃಢವಾಗಿ ನಿಂತುಕೊಳ್ಳುತ್ತಿದ್ದವು.

ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರಾದ ಶ್ರೀ. ಭಾವೂ ತೊರಸೆಕರ

ಪ್ರಧಾನಮಂತ್ರಿ ಮೋದಿ ಇವರು ಇಸ್ರೈಲ್‌ ಪ್ರಧಾನಿ ಬೆಂಜಾಮಿನ್‌ ನೇತಾನ್ಯಾಹು ಇವರನ್ನು ಭೇಟಿಯಾದಾಗ,

೧. ಹಮಾಸ್‌ನ ಉದಯ !

ಯಾಸರ ಅರಾಫತ್‌ ಸಕ್ರಿಯನಾಗಿದ್ದ ಕಾಲದಲ್ಲಿ ಹಮಾಸ್‌ನ ಅಸ್ತಿತ್ವವಿರಲಿಲ್ಲ. ಆ ಕಾಲದಲ್ಲಿ ಇಸ್ರೈಲ್‌ ಮತ್ತು ಈಜಿಪ್ತ್ ಇವರ ನಡುವೆ ಒಪ್ಪಂದವಾಯಿತು. ಯಾಸರ ಅರಾಫತ್‌ನಿಗೆ ತನ್ನ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ರಾಜ್ಯವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿ ಅವರಿಗೆ ಸ್ಥಳೀಯ ಮಟ್ಟದಲ್ಲಿ ಒಂದು ಪ್ರಾಧಿಕಾರದಂತೆ ಸ್ಥಳೀಯ ವ್ಯವಹಾರ ಮಾಡಲು ಒಂದು ದೇಶವೆಂದು ಮಾನ್ಯತೆ ನೀಡಬೇಕೆಂಬ ಒಪ್ಪಂದವಾಯಿತು. ಅರಾಫತ್‌ ತನ್ನ ಇಳಿವಯಸ್ಸಿನಲ್ಲಿ ಇಸ್ರೈಲ್‌ನೊಂದಿಗೆ ಒಪ್ಪಂದ ಮಾಡಿಕೊಂಡನು. ಆಗ ಅವನಿಗಿಂತ ಮೂಲಭೂತವಾದಿ ಮತ್ತು ಆಕ್ರಮಣಕಾರಿ ಪ್ಯಾಲೆಸ್ಟೀನಿಯನ್‌ ಜನರು ಈ ಒಪ್ಪಂದವನ್ನು ತಿರಸ್ಕರಿಸಿದರು. ಅದರಿಂದ ಹಮಾಸ್‌ ಉದಯಕ್ಕೆ ಬಂದಿತು. ಹಮಾಸ್‌ನ ಜನರು ಮುಖ್ಯವಾಗಿ ಗಾಝಾ ಪಟ್ಟಿಯವರಾಗಿದ್ದಾರೆ. ಅಲ್ಲಿ ಚುನಾವಣೆಗಳು ನಡೆದಾಗ, ಹಮಾಸ್‌ ಗುಂಪು ಗೆದ್ದಿತ್ತು.

ಅವರಿಗೆ ಇಸ್ರೈಲ್‌ನೊಂದಿಗೆ ಯಾವುದೇ ಒಪ್ಪಂದ ಬೇಕಿರಲಿಲ್ಲ. ಆ ಚುನಾವಣೆಯ ನಂತರ ಹಮಾಸ್‌ನ ರಾಜಕೀಯ ನಾಯಕ ಪ್ಯಾಲೇಸ್ಟಿನಿಯನ್‌ ಪ್ರಾಧಿಕಾರದ ಸರ್ವೋಚ್ಚ ಆಡಳಿತಗಾರನಾದನು. ಸುಮಾರು ೧೦ ರಿಂದ ೧೫ ವರ್ಷಗಳ ಹಿಂದೆ ಹಮಾಸ್‌ ಮತ್ತು ‘ಪ್ಯಾಲೇಸ್ಟೈನ್‌ ಲಿಬರೇಶನ್‌ ಆರ್ಮಿ’ ಇವರ ನಡುವೆ ನಿರಂತರ ಹೊಡೆದಾಡ ನಡೆಯುತ್ತಿತ್ತು. ಆ ಸಮಯದಲ್ಲಿ ಪ್ಯಾಲೇಸ್ಟಿನಿಯನ್‌ ಪ್ರಾಧಿಕಾರದ ಅರಾಫತ್‌ನ ನಿಕಟದ ಸಹಚರ ಮಹಮ್ಮದ್‌ ಅಬ್ಬಾಸ್‌ ಅವರೊಂದಿಗೆ ಜಗಳಗಳು ನಡೆದಿದ್ದವು. ಇಸ್ರೈಲ್‌ ಒಪ್ಪಂದಕ್ಕೆ ಸಹಮತಿ ನೀಡಿತ್ತೆಂದು ಅವನು ಶಾಂತವಾಗಿದ್ದನು; ಆದರೆ ಈ ಒಪ್ಪಂದ ಹಮಾಸ್‌ಗೆ ಒಪ್ಪಿಗೆ ಇರಲಿಲ್ಲ. ಆದುದರಿಂದ ಪ್ರತಿ ಬಾರಿಯೂ ಹಮಾಸ್‌ನ ಬೆಂಬಲಕ್ಕೆ ಹೆಚ್ಚಿನಾಂಶ ಅರಬ್‌ ದೇಶಗಳು ನಿಂತಿದ್ದವು.

೨. ಹಮಾಸ್‌-ಇಸ್ರೈಲ್‌ ಯುದ್ಧದಲ್ಲಿ ಅರಬ್‌

ದೇಶಗಳು ನಿಷ್ಕ್ರಿಯವಾಗಿವೆ; ಆದರೂ ಭಾರತದ ಪ್ರಗತಿಪರರಿಗೆ ಪ್ಯಾಲೇಸ್ಟೈನಿಯರ ಬಗ್ಗೆ ಕನಿಕರ !

ಇದೇ ಈ ಸಲದ ದೊಡ್ಡ ವ್ಯತ್ಯಾಸ. ಸುಮಾರು ೧೦-೧೫ ವರ್ಷಗಳ ನಂತರ ಇಸ್ರೈಲ್‌-ಹಮಾಸ್‌ ನಡುವೆ ಹೋರಾಟ ಪ್ರಾರಂಭವಾಗಿದೆ ಮತ್ತು ಅದರಲ್ಲಿ ಅರಬ್‌ ದೇಶಗಳಿರದೇ ಕೇವಲ ಪ್ಯಾಲೇಸ್ಟೈನಿಯನ್‌ರಿದ್ದಾರೆ. ಯಾವ ದೇಶವೂ ಅವರ ಹಿಂದೆ ದೃಢವಾಗಿ ನಿಲ್ಲಲು ತಯಾರಿಲ್ಲ. ಕತಾರ ಅವರಿಗೆ ಸಹಾಯ ಮಾಡುತ್ತಿದೆ; ಆದರೆ ಲೆಬನಾನ್‌ ಮತ್ತು ಸಿರಿಯಾ ಈ ದೇಶಗಳನ್ನು ಬಿಟ್ಟರೆ, ಇರಾನ ಅವರಿಗೆ ಸಹಾಯ ಮಾಡುತ್ತಿದೆ. ಅದನ್ನು ಬಿಟ್ಟರೆ ಇತರ ಮುಸ್ಲಿಂ ದೇಶಗಳು ಸಾಧ್ಯವಾದಷ್ಟು ಮೌನ ತಾಳಿವೆ. ಅಮೇರಿಕ, ಯುರೋಪ್, ಕೆನಡಾ ಇಂತಹ ಭಾಗಗಳಲ್ಲಿ ಆಶ್ರಯ ಪಡೆಯಲು ಹೋದ ಪ್ಯಾಲೇಸ್ಟೈನಿಗಳು ರಸ್ತೆಗೆ ಇಳಿದರು. ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಇಸ್ರೈಲ್‌ನ ಸಾವಿರಾರು ಬೆಂಬಲಿಗರು ರಸ್ತೆಗೆ ಇಳಿದರು. ಮೊದಲ ಬಾರಿಗೆ ಜಗತ್ತಿನ ಎಲ್ಲ ಮುಸ್ಲಿಂ ದೇಶಗಳು ಹಮಾಸ್‌ ಅಥವಾ ಪ್ಯಾಲೇಸ್ಟೈನಿಯರ ಬೆಂಬಲಕ್ಕೆ ದೃಢವಾಗಿ ನಿಂತಿಲ್ಲ. ತದ್ವಿರುದ್ಧ ವಿಚಿತ್ರವೆಂದರೆ ತಮ್ಮನ್ನು ‘ಪ್ರಗತಿಪರರು’, ‘ಲಿಬರಲ್’ (ಉದಾರವಾದಿ), ‘ಮಾನವತಾವಾದಿ’ ಎಂದು ಹೇಳಿಕೊಳ್ಳುವವರು; ಆದರೆ ಮುಸಲ್ಮಾನರಲ್ಲದ ಮತ್ತು ಅರಬಿಗಳಲ್ಲದವರು ಹಮಾಸ್‌ನ ಹಿಂದೆ ದೃಢವಾಗಿ ನಿಂತಿದ್ದಾರೆ.

೩. ಅರಬ್‌ ದೇಶಗಳು ಹಮಾಸ್‌ನ ಬೆಂಬಲಿಸದಿರಲು ಕಾರಣ !

ಇದೆಲ್ಲವೂ ತಾನಾಗಿಯೇ ನಡೆಯುತ್ತಿದೆ, ಎಂದು ಹೇಳುವುದು ಸರಿಯೆನಿಸುವುದಿಲ್ಲ. ‘ಇದು ಯಾವ ಪದ್ಧತಿಯಲ್ಲಿ ಘಟಿಸುತ್ತಿದೆಯೋ, ಅದು ವಿಕೋಪಕ್ಕೆ ಹೋಗಬೇಕು ಎಂಬ ‘ಜಿಯೋ ಪಾಲಿಟಿಕ್ಸ್‌’ (ಭೂ ರಾಜಕಾರಣ) ನಡೆದಿದೆ’, ಎಂದು ನನಗೆ ಅನಿಸುತ್ತದೆ. ಯಾವ ಅರಬ್‌ ದೇಶಗಳು ಊರ್ಜಿತ ಸ್ಥಿತಿಗೆ ಹೋಗಿವೆಯೋ, ಈಗ ಅವುಗಳಿಗೆ ಜಿಹಾದ್‌ ಬೇಡವಾಗಿದೆ. ಆದುದರಿಂದ ಅವು ಹಮಾಸ್‌ನ ಬೆಂಬಲಕ್ಕೆ ನಿಲ್ಲಲು ಪೂರ್ಣವಾಗಿ ನಿರಾಕರಿಸಿವೆ. ಹಮಾಸ್‌-ಇಸ್ರೈಲ್‌ ಯುದ್ಧವು ಆರಂಭವಾದಾಗ ಬಹರೀನ್‌ನಂತಹ ಅರಬ್‌ ದೇಶವು ಸಿರಿಯಾಕ್ಕೆ, ‘ನೀವು ಹಮಾಸ್‌-ಇಸ್ರೈಲ್‌ ಯುದ್ಧದಲ್ಲಿ ಮೂಗು ತೂರಿಸಬೇಡಿ, ಇಲ್ಲದಿದ್ದರೆ ನಿಮಗೆ ದುಬಾರಿ ಬೆಲೆ ತೆರ್ತಬೇಕಾಗುತ್ತದೆ’ ಎಂಬ ಬೆದರಿಕೆ ನೀಡಿತ್ತು. ದುಬೈ ಸಹ ಇದರಿಂದ ಕೈಚೆಲ್ಲಿದೆ. ಪ್ಯಾಲೇಸ್ಟೈನಿಯನ್‌ ಅಥವಾ ಹಮಾಸ್‌ಗಿಂತ ಇಸ್ರೈಲ್ನ್ನು ಸಮರ್ಥಿಸಿದ ಸೌದಿ ಅರೇಬಿಯಾ ಮೌನ ತಾಳಿದೆ. ಇದು ತಾನಾಗಿಯೇ ಘಟಿಸಿರಬಹುದೇ ? ಕಾಕತಾಳೀಯವೆಂದರೆ, ‘ಜಿ-೨೦’ಯ ಸಮ್ಮೇಳನದ ನಂತರ ಇದು ಭುಗಿಲೆದ್ದಿದೆ. (ಜಿ-೨೦ ಅಂದರೆ ೧೯ ದೇಶಗಳು ಮತ್ತು ಯುರೋಪಿಯನ್‌ ಒಕ್ಕೂಟ (ಇದರಲ್ಲಿ ೨೭ ದೇಶಗಳಿವೆ) ಇವುಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ ಗವರ್ನರ್‌ಗಳ ಸಂಘ.)

೪. ಕೆನಡಾದ ಖಲಿಸ್ತಾನಿ ಮತ್ತು ಪಾಕ್‌ಭಯೋತ್ಪಾದಕರ ಹತ್ಯೆಗೂ ಹಮಾಸ್‌ ಪ್ರಕರಣದ ಸಂಬಂಧ !

ನರೇಂದ್ರ ಮೋದಿ ಇವರು ಒಂಬತ್ತುವರೆ ವರ್ಷಗಳ ಹಿಂದೆ ಭಾರತದ ಪ್ರಧಾನಿಯಾದರು. ಅಂದಿನಿಂದ ಅವರು ಜಾಗತಿಕ ವೇದಿಕೆಯ ಮೇಲೆ ಭಯೋತ್ಪಾದನಾ ವಿರೋಧಿ ಅಂಶಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಪ್ರತಿಯೊಂದು ಜಾಗತಿಕ ಸಮ್ಮೇಳನಗಳಲ್ಲಿ ಪ್ರಧಾನಿ ಮೋದಿಯವರು ‘ಈ ಜಗತ್ತನ್ನು ಭಯೋತ್ಪಾದನೆಯಿಂದ ಮುಕ್ತ ಮಾಡುವುದು, ಇದು ಜಗತ್ತಿನ ಕಾರ್ಯಕ್ರಮವಾಗಿರಬೇಕು. ಯಾವುದೇ ಜಾತಿಯ, ಧರ್ಮದ, ವಂಶದ ವಿಚಾರಗಳ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಬೇರುಸಮೇತ ನಾಶ ಮಾಡಬೇಕು ಮತ್ತು ಅದಕ್ಕಾಗಿ ಜಗತ್ತು ಒಟ್ಟುಗೂಡಬೇಕು. ಇದಕ್ಕಾಗಿ ವಿಶ್ವ ಸಂಸ್ಥೆ, ಹಾಗೆಯೇ ವಿವಿಧ ಜಾಗತಿಕ ಸಂಘಟನೆಗಳು ನೇತೃತ್ವ ವಹಿಸಬೇಕು’, ಎಂಬ ತಮ್ಮ ನಿಲುವನ್ನು ಮಂಡಿಸುತ್ತಿದ್ದಾರೆ. ಹಮಾಸ್‌ನಿಂದಾಗಿ ಅದಕ್ಕೆ ಮೊದಲ ಚಾಲನೆ ಸಿಕ್ಕಿದೆ. ವಿವಿಧ ವೇದಿಕೆಗಳ ಮೇಲೆ ಈ ರೀತಿ ಮಾತನಾಡುವುದು ಸರಿ ಇದೆ; ಆದರೆ ಎಲ್ಲಿಯವರೆಗೆ ಅದರ ಪರಿಣಾಮ ಕಂಡುಬರುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಭಾಷಣಗಳಿಗೆ ಯಾವುದೇ ಅರ್ಥವಿಲ್ಲ. ಈಗ ನಿಧಾನವಾಗಿ ಅದರ ಪರಿಣಾಮ ಕಂಡು ಬರುತ್ತಿದೆ. ಇದು ಹಮಾಸ್‌ನ ಮಟ್ಟಿಗೆ ಸೀಮಿತವಿದೆ ಎಂದು ತಿಳಿದುಕೊಳ್ಳಬೇಡಿ. ‘ಜಿ-೨೦ ಮುಗಿದ ನಂತರ ಕೆನಡಾದ ಪ್ರಧಾನಿ ಸ್ವದೇಶಕ್ಕೆ ತಲುಪುತ್ತಲೇ ಅವರು ಇದ್ದಕ್ಕಿದ್ದಂತೆಯೇ ‘ಕೆನಡಾದಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನಿ ನಿಜ್ಜರನು ಭಾರತಿಯ ಗುಪ್ತಚರರಿಂದ ಕೊಲ್ಲಲ್ಪಟ್ಟನು’, ಎಂದು ಆರೋಪಿಸಿದರು. ಆಗ ಭಾರತ ಕೆನಡಾದೊಂದಿಗೆ ಸಂಬಂಧ ಕೆಟ್ಟರೂ ಸರಿ; ಆದರೆ ‘ಆರೋಪವನ್ನು ಸಹಿಸುವುದಿಲ್ಲ’, ಎಂಬ ದೃಢ ನಿಲುವನ್ನು ತೆಗೆದುಕೊಂಡಿತು. ಆ ಸಮಯದಲ್ಲಿ ಭಾರತ ಏಕಾಂಗಿಯಾಗಿರಲಿಲ್ಲ. ಪಾಶ್ಚಾತ್ಯ ಗುಂಪಿನ ಎಂದು ತಿಳಿಯಲಾಗುವ ಕೆನಡಾವು ಭಾರತವನ್ನು ಗುರಿಪಡಿಸಿರುವಾಗ, ಅಮೇರಿಕ, ಬ್ರಿಟನ್, ಫ್ರಾನ್ಸ್ ಮುಂತಾದ ದೇಶಗಳು ‘ಭಯೋತ್ಪಾದನೆ ಕೊನೆಗಾಣಬೇಕು’ ಎಂದು ಭಾರತದ ಬೆನ್ನಿಗೆ ದೃಢವಾಗಿ ನಿಂತಿದ್ದವು. ಅದರಲ್ಲಿ ಹೇಳದೇ ಇರುವ ಭಾಗವೆಂದರೆ, ‘ಎಲ್ಲಿ ಸಿಕ್ಕರೂ ಅಲ್ಲಿ ಮುಗಿಸಬೇಕು’, ‘ಸಿಕ್ಕಲ್ಲಿ ತಲುಪಿ ಕೊನೆಗಾಣಿಸಬೇಕು’, ‘ಬಿಲಗಳಿಂದಲೂ ಹೊರತೆಗೆದು ಕೊಲ್ಲಬೇಕು’, ಈ ವಾಕ್ಯಗಳನ್ನು ಮೋದಿ ಹೇಳುವುದಿಲ್ಲ;

ಆದರೆ ಅದರ ಒಳ ಅರ್ಥ ಅದೇ ಆಗಿರುತ್ತದೆ. ‘ಕೆನಡಾದಲ್ಲಿ ನಿಜ್ಜರ ಅಥವಾ ಇತರರು ಕೊಲ್ಲಲ್ಪಟ್ಟಿದ್ದರೆ, ಹಾಗೆಯೇ ಪಾಕಿಸ್ತಾನದಲ್ಲಿ ಇದೇ ರೀತಿ ೨-೪ ತೊಯಬಾ ಅಥವಾ ಮುಜಾಹಿದಿನ ಕೊಲ್ಲಲ್ಪಟ್ಟಿದ್ದರೆ, ಭಾರತದ ವಿರುದ್ಧದ ಹೇಳಿಕೆಯನ್ನು ಭಾರತ ಸಹಿಸುವುದಿಲ್ಲ’, ಎಂಬ ದೃಢ ನಿಲುವನ್ನು ಮೋದಿಯವರು ತೆಗೆದುಕೊಂಡರು. ಅನಂತರ ಹಮಾಸ್‌ ಪ್ರಕರಣ ಉದ್ಭವಿಸಿದೆ. ಆದುದರಿಂದ ಕೆನಡಾದ ಖಲಿಸ್ತಾನಿಗಳ ಹತ್ಯೆ ಅಥವಾ ಪಾಕ್‌ನ ಭಯೋತ್ಪಾದಕರ ಸಂದೇಹಾಸ್ಪದ ಹತ್ಯೆಯೊಂದಿಗೆ ಹಮಾಸ್‌ ಪ್ರಕರಣವನ್ನು ಜೋಡಿಸಬೇಕಾಗುತ್ತದೆ.

೫. ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಗತ್ತನ್ನು ಎರಡು ಗುಂಪುಗಳಾಗಿ ವಿಭಜಿಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾದರು !

ಈ ಪ್ರಕರಣದ ನಂತರ ಜಗತ್ತು ಎರಡು ಭಾಗ ಗಳಾಗಿರುವುದನ್ನು ನಾವು ನೋಡಿದ್ದೇವೆ. ೨೬ ನವೆಂಬರ್‌ ೨೦೦೮, ಹಾಗೆಯೇ ಪುಲವಾಮಾ ಆಕ್ರಮಣದ ಪ್ರಕರಣದ ವರೆಗೆ ಜಗತ್ತಿನ ಎಲ್ಲ ದೇಶಗಳು ಭಾರತದ ಬೆಂಬಲಕ್ಕೆ ನಿಂತಿರಲಿಲ್ಲ. ಕಳೆದ ೨-೩ ವರ್ಷಗಳಲ್ಲಿ ಇದು ಎಲ್ಲಕ್ಕಿಂತ ದೊಡ್ಡ ವ್ಯತ್ಯಾಸವಾಗಿದೆ. ‘ಭಯೋತ್ಪಾದನೆಯನ್ನು ಬೆಂಬಲಿಸುವ ಅಥವಾ ಆ ಬಗ್ಗೆ ಮೌನವನ್ನು ತಾಳುವ ಒಂದು ಗುಂಪು ಮತ್ತು ‘ಭಯೋತ್ಪಾದನೆಯನ್ನು ತೊಡೆದುಹಾಕಬೇಕು’, ಎಂದು ಮೋದಿಯವರ ಅಭಿಪ್ರಾಯದಂತೆ ಅದರ ವಿರುದ್ಧ ಮಾತನಾಡುವ ಇನ್ನೊಂದು ಗುಂಪು, ಈ ರೀತಿ ಜಗತ್ತಿನ ಎರಡು ಭಾಗಗಳಾಗಿವೆ. ಮೇಲ್ನೋಟಕ್ಕೆ ಹಮಾಸ್‌-ಇಸ್ರೈಲ್‌ ಯುದ್ಧವು ನಡೆದಿದೆ. ‘ಕೆನಡಾದಲ್ಲಿ ನಿಜ್ಜರ್‌ನ ಹತ್ಯೆ ಮತ್ತು ಪಾಕ್‌ ನಲ್ಲಿ ಭಯೋತ್ಪಾದಕರ ಹತ್ಯೆಯಲ್ಲಿ ಇಸ್ರೈಲ್‌ನ ಬೇಹುಗಾರಿಕಾ ಸಂಸ್ಥೆ ‘ಮೊಸಾದ್’ ಮತ್ತು ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ ಒಟ್ಟಾಗಿ ಸೇರಿ ಈ ಕಾರ್ಯಾಚರಣೆ ಮಾಡುತ್ತಿವೆ ಎಂದು ಆರೋಪಿಸಲಾಗಿತ್ತು.

ಇಂದು ಹಮಾಸ್‌-ಇಸ್ರೈಲ್‌ ಯುದ್ಧವು ನಡೆದಿರುವ ರೀತಿ ನೋಡಿದರೆ ಇದರಲ್ಲಿ ಮೋಸಾದ ದೊಡ್ಡ ಪಾತ್ರವನ್ನು ವಹಿಸಿದೆ, ಭಾರತ ಇಸ್ರೈಲ್‌ ಪರವಾಗಿ ದೃಢವಾಗಿ ನಿಂತಿದೆ. ಭಾರತ ‘ಪ್ಯಾಲೇಸ್ಟೈನ್’ ಬಗ್ಗೆ ಸಹಾನುಭೂತಿ ಹೊಂದಿದೆ; ಆದರೆ ಹಮಾಸ್‌ನ ಬಗ್ಗೆ ಕಿಂಚಿತ್ತೂ ಸಹಾನುಭೂತಿ ಅಥವಾ ಕರುಣೆ ಇಲ್ಲ’, ಎಂಬಂತಹ ಅತ್ಯಂತ ಶುದ್ಧ ನಿಲುವನ್ನು ಭಾರತ ತೆಗೆದುಕೊಂಡಿದೆ. ಆದುದರಿಂದ ಹಮಾಸ್‌-ಇಸ್ರೈಲ್‌ ಯುದ್ಧದ ಹಿನ್ನೆಲೆಯ ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹೊರಬೀಳುತ್ತಿದ್ದು, ಮೋದಿಯವರು ಕಳೆದ ೯ ವರ್ಷಗಳ ನಂತರ ಜಾಗತಿಕ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಬೆಳೆಸುತ್ತಿರುವ ಸಂದರ್ಭದಲ್ಲಿ ‘ಭಾರತ ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಂತಿದೆ, ಹಾಗೆಯೇ ಯಾವ ದೇಶವು ಭಯೋತ್ಪಾದನೆಯನ್ನು ನಾಶ ಮಾಡುವುದಿಲ್ಲವೋ, ಭಾರತವು ಅದರ ವಿರುದ್ಧ ನಿಲ್ಲಲಿದೆ, ಎಂದು ದೃಢವಾಗಿ ಹೇಳಿದರು. ‘ಯಾರು ದೇಶವನ್ನು ವಕ್ರದೃಷ್ಟಿಯಿಂದ ನೋಡುವರೋ, ಅವರನ್ನೂ ನೆಟ್ಟಗೆ ಮಾಡಲಾಗುವುದು’, ಎಂಬ ದೃಢ ನಿಲುವನ್ನು ಭಾರತವು ತೆಗೆದುಕೊಂಡಿದೆ. ಆದುದರಿಂದ ಕ್ರಮೇಣ ಜಗತ್ತಿನ ನೂರಾರು ಸಣ್ಣ ದೊಡ್ಡ ದೇಶಗಳ ಪರಿವರ್ತನೆ ಆರಂಭವಾಗಿದೆ.

ಹಮಾಸ್‌-ಇಸ್ರೈಲ್‌ ಯುದ್ಧದ ನಿಮಿತ್ತ ಮೋದಿಯವರು ಎಲ್ಲಕ್ಕಿಂತ ದೊಡ್ಡ ತಂತ್ರವನ್ನು ರಚಿಸಿ, ಜಗತ್ತನ್ನು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಂದು ಬದಿಗೆ ಅತ್ಯಂತ ಸುಲಭ ಯಾವುದೇ ಸ್ವರೂಪದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಉತ್ಸುಕರಿರುವ ಮತ್ತು ಅದನ್ನು ಸಮರ್ಥಿಸುವ ದೇಶಗಳಿವೆ ಮತ್ತು ಇನ್ನೊಂದೆಡೆ ಭಯೋತ್ಪಾದನೆಯನ್ನು ಸಮರ್ಥಿಸುವ ಮತ್ತು ಬೆಂಬಲ ನೀಡುವ ಅಥವಾ ಆ ಬಗ್ಗೆ ಮೌನ ವಹಿಸುವವರು ಒಬ್ಬಂಟಿಯಾಗಿದ್ದಾರೆ. ಅದನ್ನು ನಾನು ‘ಮೋದಿಯವರ ತಂತ್ರ’, ಎಂದು ಕರೆಯುತ್ತೇನೆ. ‘ಯಾವುದೇ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು’, ಎಂದು ಸತತ ೯ ವರ್ಷಗಳಿಂದ ಹೇಳುತ್ತಿರುವ ಮೋದಿಯವರು ಮಹಾನ ರಾಷ್ಟ್ರಪುರುಷರಾಗಿದ್ದಾರೆ. ಈಗ ಹಮಾಸ್‌ಗೆ ಸಂಬಂಧಿಸಿದಂತೆ ಯಾವ ದೊಡ್ಡ ಜ್ವಾಲೆ ಭುಗಿಲೆದ್ದಿದೆಯೋ, ಇಂತಹ ಸಮಯದಲ್ಲಿ ಹೆಚ್ಚಿನ ಮುಸ್ಲಿಂ ದೇಶಗಳೂ ಇಸ್ರೈಲ್‌ಗೆ ಬೆಂಬಲ ನೀಡದಿದ್ದರೂ, ಇಸ್ರೈಲ್‌ನ ವಿರುದ್ಧವೂ ಮಾತನಾಡುವುದಿಲ್ಲ’, ಇದು ಮೋದಿ ಆಟದ ದೊಡ್ಡ ಯಶಸ್ಸಾಗಿದೆ ಎಂದು ಹೇಳಬಹುದು. ಈ ವಿಷಯ ಸುಲಭವಲ್ಲ. ಅರಬ್‌ ಯುದ್ಧಗಳ ಸಮಯದಲ್ಲಿ, ಭಾರತ ಎಲ್ಲಕ್ಕಿಂತ ದೊಡ್ಡ ಜನಸಂಖ್ಯೆಯಿರುವ ದೇಶ ವಾಗಿದ್ದರೂ ಮುಸಲ್ಮಾನ ದೇಶಗಳ ಸಂಘಟನೆಗಳು ಅವಮಾನಿಸಿದ್ದವು. ಈ ಸಂಘಟನೆಗಳನ್ನೂ ನಿಧಾನವಾಗಿ ಭಾರತದ ಮಡಿಲಲ್ಲಿ ಕರೆತರುವ ಮುಂದಿನ ಹಂತಕ್ಕೆ ಮೋದಿಯವರು ಹೋಗಿದ್ದಾರೆ. ಆದುದರಿಂದ ಇಸ್ರೈಲ್‌ ಮತ್ತು ಹಮಾಸ್‌ ನಡುವಿನ ಯುದ್ಧದಲ್ಲಿ ಮುಸ್ಲಿಂ ದೇಶಗಳ ಸಂಘಟನೆಯಾಗಿರುವ ‘ಆರ್ಗನೈಸೇಶನ್‌ ಆಫ್‌ ಇಸ್ಲಾಮಿಕ್‌ ಕೊ-ಆಪರೇಶನ್’ (ಇಸ್ಲಾಮಿಕ್‌ ಸಹಕಾರ ಸಂಘಟನೆಯು) ಇದು ಇಸ್ರೈಲ್‌ನ ವಿರುದ್ಧ ಅಥವಾ ಹಮಾಸ್ನ್ನು ಬೆಂಬಲಿಸಿ ಸಹ ಮಾತನಾಡುತ್ತಿಲ್ಲ. ಆದುದರಿಂದ ಈ ಆಟದಲ್ಲಿನ ಎಲ್ಲಕ್ಕಿಂತ ಮೊದಲ ತಂತ್ರವೆಂದರೆ ‘ಪ್ಯಾಲೆಸ್ಟೈನ್‌ ಮತ್ತು ಹಮಾಸ್‌ ಇವುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು’, ಎಂಬುದನ್ನು ಪ್ರಧಾನಿ ಮೋದಿಯವರು ಯಶಸ್ವಿಯಾಗಿ ತೋರಿಸಿದ್ದಾರೆ. ಇಸ್ರೈಲ್‌ ಅದರ ಮೇಲೆ ಕಾರ್ಯಾಚರಣೆ ಮಾಡುತ್ತಿದೆ; ಆದರೆ ಈಗ ನಾವು ಮೋದಿಯವರು ಸತತವಾಗಿ ಮಂಡಿಸಿದ ನಿಲುವಿನ ಫಲಶ್ರುತಿಯನ್ನು ನೋಡುತ್ತಿದ್ದೇವೆ.’

– ಶ್ರೀ. ಭಾವೂ ತೊರಸೆಕರ, ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು

(ಆಧಾರ : ಶ್ರೀ. ಭಾವೂ ತೊರಸೆಕರ ಇವರ ‘ಪ್ರತಿಪಕ್ಷ’ ಯುಟ್ಯೂಬ್‌ ವಾಹಿನಿ)