ಧರ್ಮದ ಮರುಸ್ಥಾಪನೆಯಿಂದ ಮಾತ್ರ ಜಗತ್ತು ಮತ್ತು ಮಾನವೀಯತೆಯನ್ನು ಉಳಿಸಬಹುದು ! – ಮಾತಾ ಅಮೃತಾನಂದಮಯಿ ದೇವಿ

ಬ್ಯಾಂಕಾಕ (ಥಾಯ್ಲೆಂಡ್) – ಜಗತ್ತಿನ ಎಲ್ಲೆಡೆ ‘ಅಮ್ಮ’ ಎಂದು ಭಕ್ತಿಯಿಂದ ಕರೆಯಲ್ಪಡುವ ಮಾತಾ ಅಮೃತಾನಂದಮಯಿ ದೇವಿ ಅವರು ನವೆಂಬರ್ 26 ರಂದು ‘ವರ್ಲ್ಡ ಹಿಂದು ಕಾಂಗ್ರೆಸ್’ನ ಕೊನೆಯ ದಿನದಂದು ಬೆಳಗಿನ ಅಧಿವೇಶನದಲ್ಲಿ ಮಾರ್ಗದರ್ಶನ ಮಾಡಿದರು. ಈ ಸಮಯದಲ್ಲಿ ಅವರು, “ನಾವು ಇಂದು ಇಲ್ಲಿ ‘ವಿಶ್ವದ ಅತ್ಯಂತ ಪುರಾತನ ಮತ್ತು ಉದಾತ್ತ ಸಂಸ್ಕೃತಿ’ಯ ಹೆಸರಿನಲ್ಲಿ ಒಟ್ಟುಗೂಡಿದ್ದೇವೆ. ಹಿಂದೂ ಶ್ರದ್ಧೆಯು ವಿವಿಧ ತತ್ವಗಳು ಮತ್ತು ಮೌಲ್ಯಗಳ ಸಂಗಮವಾಗಿದ್ದು, ಅದರಲ್ಲಿ ಜಗತ್ತಿನ ಕಲ್ಯಾಣ ಮತ್ತು ಸಮೃದ್ಧಿಯನ್ನು ಸಾಧಿಸುವ ಸಾಮರ್ಥ್ಯವಿದೆ. ಸನಾತನ ಧರ್ಮಕ್ಕೆ ಮನುಷ್ಯ ಮತ್ತು ಪ್ರಕೃತಿಯ ನಡುವೆ ಆಳವಾದ ಸಂಬಂಧವಿದೆಯೆಂದು ಮೊದಲಿನಿಂದಲೂ ತಿಳಿದಿದೆ. ಹಿಂದೂ ಧರ್ಮವೇ ಜಗತ್ತಿಗೆ ಧರ್ಮ ಮತ್ತು ಯಜ್ಞ, ಗುಣ ಮತ್ತು `ಸ್ವ.’ ತ್ಯಾಗದ ಪಾಠವನ್ನು ನೀಡಿದೆ. ಇಂದು ಜಗತ್ತಿನಲ್ಲಿ ‘ಪ್ರೀತಿ’ ಮತ್ತು ‘ನಿಸ್ವಾರ್ಥ ಭಾವದಿಂದ ಸೇವೆ’ ಮರೆಯಾಗುತ್ತಿದೆ. ಧರ್ಮದ ಮರುಸ್ಥಾಪನೆಯಿಂದ ಮಾತ್ರ ಜಗತ್ತು ಮತ್ತು ಮಾನವೀಯತೆಯನ್ನು ಉಳಿಸಬಹುದು. ಶರಣಾಗತ ಭಾವದಿಂದ ಇಂತಹ ಕಾರ್ಯಕ್ರಮವನ್ನು ಮೇಲಿಂದ ಮೇಲೆ ಆಯೋಜಿಸುವುದು ಕಾಲದ ಆವಶ್ಯಕತೆಯಿದೆ!’’ ಎಂದು ಹೇಳಿದರು.

(ಸೌಜನ್ಯ – WHC)

ಧರ್ಮವನ್ನು ನಿರ್ಲಕ್ಷಿಸಿದ್ದರಿಂದಲೇ ಆಧುನಿಕ ಜಗತ್ತಿನಲ್ಲಿ ಉದ್ವಿಗ್ನತೆಗೆ ಕಾರಣ !

ಅಮ್ಮ ಮಾತನ್ನು ಮುಂದುವರೆಸುತ್ತಾ, ಆಧುನಿಕ ಜಗತ್ತಿನಲ್ಲಿರುವ ಎಲ್ಲ ಒತ್ತಡಗಳಿಗೆ ಧರ್ಮವನ್ನು ನಿರ್ಲಕ್ಷಿಸಿರುವುದರಿಂದ ಮತ್ತು ಅದರ ಆಚರಣೆ ಮಾಡದೇ ಇರುವುದರಿಂದ ನಿರ್ಮಾಣವಾಗಿದೆ. ನಾವು ಮಾನವ ನಿರ್ಮಿತ ಕಾನೂನುಗಳನ್ನು ಒಪ್ಪಿಕೊಳ್ಳುತ್ತೇವೆ; ಆದರೆ ಇವೆಲ್ಲವುಗಳ ಮೇಲೆ ದೈವಿ ಕಾನೂನು ಇದೆ. ಇದರಿಂದಾಗಿಯೇ ನಾವು ಒಂದೇ ದಾರದಲ್ಲಿ ಪೋಣಿಸಲ್ಪಟ್ಟಿದ್ದೇವೆ. ಇದನ್ನೇ ‘ಧರ್ಮ’ ಎನ್ನುತ್ತಾರೆ. ಮಾನವ ನಿರ್ಮಿತ ಕಾನೂನುಗಳ ಭಯದಿಂದ ನಾವು ತಪ್ಪು ಕೃತ್ಯವನ್ನು ಮಾಡಲು ಹಿಂಜರಿಯುತ್ತೇವೆ. ಅದೇ ರೀತಿ ಧರ್ಮದ ನಿಯಮಗಳನ್ನು ಮುರಿಯುವುದರ ಪರಿಣಾಮವನ್ನು ಜಗತ್ತು ಅನುಭವಿಸಬೇಕಾಗುತ್ತದೆ. ಗುರುತ್ವಾಕರ್ಷಣೆಯು ಪ್ರಕೃತಿಯ ನಿಯಮವಾಗಿದೆ. ಹಾಗೆ ಧರ್ಮವು ಇಡೀ ಬ್ರಹ್ಮಾಂಡದ ನಿಯಮವಾಗಿದೆ. ರಾಷ್ಟ್ರದ ಸಂವಿಧಾನ ಮತ್ತು ಕಾನೂನುಗಳನ್ನು ಸರಕಾರ ಬದಲಾಯಿಸಬಹುದು; ಆದರೆ ಬ್ರಹ್ಮಾಂಡದ ನಿಯಮವನ್ನು ಅಂದರೆ ಧರ್ಮವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಯಾವಾಗ ಮಾನವನು ಧರ್ಮದಿಂದ ದೂರ ಹೋಗುತ್ತಾನೆಯೋ, ಆಗ ಸಮಾಜದಲ್ಲಿನ ಎಲ್ಲ ಸಮಸ್ಯೆಗಳು ತಲೆ ಮೇಲೆತ್ತಿ ಎದ್ದು ನಿಲ್ಲುತ್ತವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯನು ಧರ್ಮಾಚರಣೆ ಮಾಡಬೇಕು !

ಈ ಸಮಯದಲ್ಲಿ ಅಮ್ಮಾ ಅವರು ರಾಮಾಯಣದ ಜಟಾಯುವಿನ ಉದಾಹರಣೆಯನ್ನು ಹೇಳಿ, ಅಧರ್ಮವನ್ನು ತಡೆಯುವ ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಯಾವಾಗ ನಾವು ನಮ್ಮ ಕ್ಷಮತೆಯನುಸಾರ ಧರ್ಮವನ್ನು ರಕ್ಷಿಸಲು ಪ್ರಯತ್ನಿಸುತ್ತೇವೆಯೋ, ಆಗ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಋಷಿಗಳು ‘ಧರ್ಮ’ ಎಂಬ ಹೆಸರನ್ನು ನೀಡಿದ್ದು, ಮಾನವಕುಲ, ಪ್ರಕೃತಿ ಮತ್ತು ಭಗವಂತ ಇವರನ್ನು ಅದೇ ಸುಂದರ ಮತ್ತು ಪರಿಪೂರ್ಣತೆಯ ಮೂಲಕ ಜೋಡಿಸುವ ಕೆಲಸ ಮಾಡುತ್ತದೆ. ಪ್ರತಿಯೊಬ್ಬ ಮನುಷ್ಯನು ಧರ್ಮವನ್ನು ಪಾಲಿಸಬೇಕು ಎಂದು ಹೇಳಿದರು.