‘ಹಿಂದುತ್ವ’ ಪದಕ್ಕಾಗಿ ‘ಹಿಂದುಯಿಝಮ್’ ಈ ಪದಬಳಕೆ ನಿಲ್ಲಿಸುವರು !

‘ವರ್ಲ್ಡ್ ಹಿಂದೂ ಕಾಂಗ್ರೆಸ್’ ನಲ್ಲಿ ಪ್ರಸ್ತಾವ ಅಂಗೀಕಾರ !

‘ಹಿಂದೂನೆಸ’ ಎಂದು ಪದ ಬಳಕೆ !

ಬ್ಯಾಂಕಾಕ್ (ಥೈಲ್ಯಾಂಡ್) – ‘ಹಿಂದುತ್ವ’ ಪದಕ್ಕೆ ಇಂಗ್ಲೀಷಲ್ಲಿ ‘ಹಿಂದೂಯಿಜಮ್’ ಎಂದು ಬಳಕೆ ಮಾಡುವುದು, ಇದು ಹಿಂದುತ್ವದ ಒಳ್ಳೆಯತನದ ಮೇಲೆ ಆಘಾತ ಮಾಡುವ ಹಾಗೆ ಇದೆ. ‘ಹಿಂದುತ್ವ’ಕ್ಕೆ ‘ಹಿಂದೂನೆಸ’ ಹೀಗೂ ಕೂಡ ಹೇಳಬಹುದು, ಎಂದು ಇಲ್ಲಿ ಆಯೋಜಿಸಲಾಗಿರುವ ‘ವರ್ಲ್ಡ್ ಹಿಂದು ಕಾಂಗ್ರೆಸ್’ನಲ್ಲಿ ಈ ಪ್ರಸ್ತಾವ ಅಂಗೀಕರಿಸಲಾಯಿತು.

ಈ ಪ್ರಸ್ತಾವದಲ್ಲಿ,

೧. ‘ಹಿಂದೂ’ ಪದ ‘ಸನಾತನ’ದ ಶಾಶ್ವತ ತೋರಿಸುತ್ತದೆ. ಧರ್ಮದ ಅರ್ಥ ಇರುವುದು, ‘ಯಾವುದು ಶಾಶ್ವತವಾಗಿರುತ್ತದೆ.’ ಯಾವುದು ಶಾಶ್ವತ ರೂಪದಲ್ಲಿ ಎಲ್ಲವೂ ಸ್ವೀಕರಿಸುತ್ತದೆ, ಇದರಲ್ಲಿ ಒಬ್ಬ ವ್ಯಕ್ತಿ, ಪರಿವಾರ, ಸಮಾಜ ಮತ್ತು ನಿಸರ್ಗ ಇರುವುದು. ಅದು ಹಿಂದೂ ಧರ್ಮದ ಪ್ರತೀಕವಾಗಿದೆ. ‘ಹಿಂದುಯಿಝಮ್’ ಸಂಪೂರ್ಣವಾಗಿ ಬೇರೆಯೇ ಆಗಿದೆ; ಏಕೆಂದರೆ ಇದರಲ್ಲಿ ‘ಇಝಮ್’ ಪದ ಸೇರಿಸಲಾಗಿದೆ, ಅದು ದಬ್ಬಾಳಿಕೆ ಮತ್ತು ಬೇಧ ಭಾವದ ಪ್ರತಿಕವಾಗಿದೆ.

೨. ೧೯ ನೆ ಶತಮಾನದ ಮಧ್ಯದಲ್ಲಿ ಅಮೆರಿಕಾದಲ್ಲಿ ‘ಇಝಮ್’ ಪದದ ಬಳಕೆ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಆಂದೋಲನದಲ್ಲಿ ಅವಮಾನಕಾರಕ ರೀತಿಯಲ್ಲಿ ತೋರಿಸುವದಕ್ಕಾಗಿ ಮಾಡಲಾಗಿತ್ತು. ೧೮೭೭ ರಲ್ಲಿ ಕ್ರೈಸ್ತ ಸೊಸೈಟಿಯಿಂದ ಅದರ ಪುಸ್ತಕದಲ್ಲಿ ಮೊದಲ ಬಾರಿಗೆ ಈ ಪದ ಬಳಕೆ ಮಾಡಲಾಯಿತು. ಇದು ಬೌದ್ಧಿಕ ದೃಷ್ಟಿಯಿಂದ ತಪ್ಪಾಗಿದೆ. ಕಳೆದ ೧೫೦ ವರ್ಷಗಳಲ್ಲಿ ಹಿಂದೂ ವಿರೋಧಿ ವಿಷಯದ ಹಿಂದೆ ಈ ಪದ ಕೂಡ ಒಂದು ಕಾರಣವಾಗಿದೆ.

೩. ನಮ್ಮ ಹಿಂದಿನ ಪೀಳಿಗೆ ‘ಹಿಂದೂಯಿಝಮ್’ ನ ತುಲನೆಯಲ್ಲಿ ‘ಹಿಂದುತ್ವ’ ಪದ ಬಳಕೆಗೆ ಪ್ರಾಧಾನ್ಯತೆ ನೀಡಿದರು; ಕಾರಣ ‘ಹಿಂದುತ್ವ’ ಪದ ಹೆಚ್ಚು ಸಮರ್ಥಿಸುತ್ತದೆ ಮತ್ತು ‘ಹಿಂದೂ’ ಶಬ್ದದ ಅರ್ಥ ಕೂಡ ಇದರಲ್ಲಿ ಅಡಕವಾಗಿದೆ. ಹಿಂದುತ್ವದ ಇಂಗ್ಲೀಷ್ ಅರ್ಥ ‘ಹಿಂದೂನೆಸ’ ಹೀಗೆ ಇದೆ.

೪. ಸಾರ್ವಜನಿಕ ಚರ್ಚೆಯಲ್ಲಿ ಕೆಲವು ಶಿಕ್ಷಣ ತಜ್ಞರು ಮತ್ತು ಬುದ್ಧಿವಾದಿ ಹಿಂದುತ್ವಕ್ಕೆ ಹಿಂದೂ ಧರ್ಮದ ವಿರುದ್ಧ ಮತ್ತು ನಕಾರಾತ್ಮಕ ಮಟ್ಟದಲ್ಲಿ ಚಿತ್ರಿಸುತ್ತಾರೆ. ಇದರಲ್ಲಿನ ಕೆಲವರು ‘ಅಜ್ಞಾನದಿಂದ ಮಾಡಿದೆ’, ಎಂದು ಹೇಳುತ್ತಾರೆ; ಆದರೆ ಬಹಳಷ್ಟು ಜನರು ಹಿಂದೂ ಧರ್ಮದ ಬಗ್ಗೆ ಅವರ ದ್ವೇಷ ಮತ್ತು ಪೂರ್ವಗ್ರಹ ಇದರಿಂದ ಹಿಂದುತ್ವ ವಿರೋಧಿ ಆಗಿರುತ್ತಾರೆ.

೫. ರಾಜಕೀಯ ನೀತಿ ಮತ್ತು ವೈಯಕ್ತಿಕ ಪೂರ್ವಗ್ರಹ ಇದರಿಂದ ಪ್ರೇರಿತ ರಾಜಕೀಯ ಮುಖಂಡರು ಸನಾತನ ಧರ್ಮವನ್ನು ಸತತವಾಗಿ ವಿರೋಧಿಸುವ ಗುಂಪಿನಲ್ಲಿ ಸೇರಿರುತ್ತಾರೆ.