ನಾವು ‘ಧರ್ಮ ವಿಜಯ’ದ ಮೇಲೆ ವಿಶ್ವಾಸ ಇಡುತ್ತೇವೆ ! – ಪ. ಪೂ. ಸರಸಂಘಚಾಲಕ

ಬ್ಯಾಂಕಾಕ್ (ಥೈಲ್ಯಾಂಡ್) ಇಲ್ಲಿ ೩ ದಿನಗಳ ‘ವರ್ಲ್ಡ್ ಹಿಂದೂ ಕಾಂಗ್ರೆಸ್’ನ ಉದ್ಘಾಟನೆ !

ಬ್ಯಾಂಕಾಕ್ (ಥೈಲ್ಯಾಂಡ್) – ನಾವು ‘ಧನ ವಿಜಯ’ ಮತ್ತು ‘ಅಸುರ ವಿಜಯ’ ಅನುಭವಿಸಿದ್ದೇವೆ. ಹಣ ಗೆಲ್ಲುವುದು ಎಂದರೆ ವಸ್ತುವಿನಿಂದ ಸಿಗುವ ಆನಂದ; ಆದರೆ ಇದರಲ್ಲಿನ ಉದ್ದೇಶ ಯೋಗ್ಯವಾಗಿಲ್ಲ. ಅದು ಆತ್ಮಕ್ಕೆಂದ್ರಿತ ಇರುವ ಹಾಗೆ ಇದೆ. ಭಾರತವು ಬ್ರಿಟಿಷರ ೨೫೦ ವರ್ಷದ ಸಂಪತ್ತಿಯ ವಿಜಯ ನೋಡಿದೆ. ‘ಅಸುರ ವಿಜಯ’ ಎಂದರೆ ಇತರ ಧರ್ಮದ ಕುರಿತು ಆಕ್ರಮಕತೆಯ ಭಾವನೆ ಇರುವುದು. ಮುಸಲ್ಮಾನರು ೫೨೦ ವರ್ಷ ರಾಜ್ಯ ಆಳಿದರು. ಇದರಿಂದ ನಮ್ಮ ಭೂಮಿ ಮೇಲೆ ಸರ್ವನಾಶ ಆಗಿದೆ. ನಾವು ಎಂದರೆ ಹಿಂದೂಗಳು ‘ಧರ್ಮ ವಿಜಯ’ದ ಮೇಲೆ ವಿಶ್ವಾಸ ಇಡುತ್ತೇವೆ. ಇದರ ಮೇಲೆ ನಮ್ಮ ಧರ್ಮ ಅವಲಂಬಿತವಾಗಿದೆ. ಈ ಪ್ರಕ್ರಿಯೆ ಧರ್ಮದ ನಿಯಮದ ಮೇಲೆ ಆಧಾರಿತವಾಗಿದೆ ಮತ್ತು ಪರಿಣಾಮ ಧರ್ಮ ನಮಗಾಗಿ ಕರ್ತವ್ಯ ಆಗುತ್ತದೆ, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಮಾರ್ಗದರ್ಶನ ಮಾಡಿದರು. ಅವರು ಇಲ್ಲಿ ನವಂಬರ್ ೨೪ ರಿಂದ ನಡೆಯುತ್ತಿರುವ ಮೂರನೆಯ ‘ವರ್ಲ್ಡ್ ಹಿಂದೂ ಕಾಂಗ್ರೆಸ್’ನ ಉದ್ಘಾಟನಾ ಸತ್ರದಲ್ಲಿ ಮಾತನಾಡುತ್ತಿದ್ದರು.

ಸಂಪೂರ್ಣ ಜಗತ್ತಿನಲ್ಲಿ ಶ್ರೀರಾಮ ಮಂದಿರದ ಪ್ರತಿಧ್ವನಿ ಕೇಳಿಸಬೇಕು ! – ವರ್ಲ್ಡ್ ಹಿಂದು ಫೌಂಡೇಶನ್ ನ ಪ್ರಮುಖ ಸ್ವಾಮೀ ವಿಜ್ಞಾನಾನಂದ

‘ವರ್ಲ್ಡ್ ಹಿಂದೂ ಫೌಂಡೇಶನ್’ನ ಮುಖ್ಯಸ್ಥ ಮತ್ತು ‘ವರ್ಲ್ದ ಹಿಂದೂ ಕಾಂಗ್ರೆಸ್’ನ ಮುಖ್ಯ ಸಂಯೋಜಕ ಸ್ವಾಮಿ ವಿಜ್ಞಾನಾನಂದ ಇವರು ಮಾತನಾಡುತ್ತಾ, ನಾವು ಅಯೋಧ್ಯೆಯಿಂದ ಪ್ರಸಾದ ತರಿಸಿದ್ದೇವೆ. ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಶ್ರೀರಾಮ ಮಂದಿರದ ಪ್ರತಿಕೃತಿ ಇಲ್ಲಿ (ಬ್ಯಾಂಕಾಕ್) ಕಟ್ಟಲಾಗುತ್ತಿದೆ. ಶ್ರೀ ರಾಮಲಲ್ಲಾನ ಜನ್ಮ ಭೂಮಿಯ ಛಾಯಾಚಿತ್ರ ಕೂಡ ನಾವು ಅಯೋಧ್ಯೆಯಿಂದ ತರುವೆವು. ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಮೊದಲು ಶ್ರೀರಾಮ ಮಂದಿರದ ಪ್ರತಿಧ್ವನಿ ಸಂಪೂರ್ಣ ಜಗತ್ತಿಗೆ ಕೇಳಿಸಬೇಕು ಎಂದು ಹೇಳಿದರು.

”ಧರ್ಮ ವಿಜಯದ ಆಧಾರ’ ಈ ವಿಚಾರಗಳ ಮೇಲೆ ಸಭೆಯ ಪರಿಕಲ್ಪನೆ !

ಮೂರನೇ ವರ್ಲ್ಡ್ ಹಿಂದೂ ಕಾಂಗ್ರೆಸ್ ಸಭೆಯ ಪರಿಕಲ್ಪನೆ ‘ಧರ್ಮ ವಿಜಯದ ಆಧಾರ’ದಂತೆ ಇದೆ. ಇದರಲ್ಲಿ ಹಿಂದುಗಳ ಕರ್ತೃತ್ವದ ಜೊತೆಗೆ ಜಗತ್ತಿನಲ್ಲಿನ ಅನೇಕ ಪ್ರದೇಶಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಭೇದ ಭಾವ ಮತ್ತು ಅವುಗಳನ್ನು ಎದುರಿಸುವ ಮಾರ್ಗ, ಇವುಗಳ ಮೇಲೆ ಕೂಡ ಚರ್ಚೆ ನಡೆಯುವುದು. ೨೦೧೪ ರಲ್ಲಿ ಮೊಟ್ಟಮೊದಲು ವರ್ಲ್ಡ್ ಹಿಂದೂ ಕಾಂಗ್ರೆಸ್ ದೆಹಲಿಯಲ್ಲಿ ಆಯೋಜಿಸಲಾಗಿತ್ತು ಮತ್ತು ಎರಡನೆಯ ಪರಿಷತ್ತು ಅಮೆರಿಕದ ಶಿಕಾಗೋದಲ್ಲಿ ೨೦೧೮ ರಲ್ಲಿ ಆಯೋಜಿಸಲಾಗಿತ್ತು. ಕೊರೊನ ಕಾಲಾವಧಿಯಲ್ಲಿ ಮೂರನೇ ಸಭೆಗೆ ವಿಳಂಬ ಆಗಿರುವುದರಿಂದ ಈಗ ಆಯೋಜಿಸಲಾಯಿತು.

ಪ.ಪೂ. ಸರಸಂಘಚಾಲಕರು ಮಂಡಿಸಿರುವ ಸೂತ್ರಗಳು

ಭಾರತ ಆನಂದ ಮತ್ತು ಸಮಾಧಾನದ ಮಾರ್ಗ ತೋರಿಸಲಿದೆ !

‘ಭಾರತ ಆನಂದ ಮತ್ತು ಸಮಾಧಾನದ ಮಾರ್ಗ ತೋರಿಸಲಿದೆ’, ಇದು ಕೊರೊನಾ ಮಹಾಮಾರಿಯ ನಂತರ ಸಂಪೂರ್ಣ ಜಗತ್ತು ಒಪ್ಪಿಕೊಂಡಿದೆ ಮತ್ತು ಎಲ್ಲರ ಒಪ್ಪಿಗೆಯಿಂದ ಇದರ ಬಗ್ಗೆ ವಿಚಾರ ಕೂಡ ಮಾಡುತ್ತಿದೆ. ಇಂದಿನ ಜಗತ್ತು ಡೋಲಾಯಮಾನವಾಗಿದೆ. ಪರೀಕ್ಷಿಸುತ್ತಿದೆ. ಕಳೆದ ೨ ಸಾವಿರ ವರ್ಷ ಅವರು ಆನಂದ ಮತ್ತು ಶಾಂತತೆಗಾಗಿ ಭೌತಿಕವಾದ, ಕಮ್ಯುನಿಸ್ಟ್ ಮತ್ತು ಬಂಡವಾಳ ಶಾಹಿಯ ಪ್ರಯೋಗ ಮಾಡಿದ್ದಾರೆ. ಅವರು ಅನೇಕ ಧರ್ಮದ ಜೊತೆಗೆ ಸಂಬಂಧಿತ ಪ್ರಯೋಗ ಕೂಡ ಮಾಡಿದ್ದಾರೆ. ಅವರಿಗೆ ಭೌತಿಕ ಸಮೃದ್ಧಿ ದೊರೆತಿದೆ; ಆದರೆ ಸಮಾಧಾನ ದೊರೆತಿಲ್ಲ. ಈಗ ಕೊರೋನಾ ಮಹಾಮಾರಿಯ ನಂತರ ಅವರು ಇದರ ಬಗ್ಗೆ ಪುನರ್ವಿಚಾರ ಮಾಡಲು ಆರಂಭಿಸಿದ್ದಾರೆ. ಈಗ ಅವರಿಗೆ ಭಾರತವೇ ಮಾರ್ಗ ತೋರಿಸುತ್ತಿದೆ, ಇದರ ಬಗ್ಗೆ ಅವರ ಒಮ್ಮತ ಆಗಿದಂತೆ ಅನಿಸುತ್ತದೆ.

ಜಗತ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಕರೆದುಕೊಂಡು ಹೋಗುವುದು ಹಿಂದುಗಳ ರಾಷ್ಟ್ರೀಯ ಕರ್ತವ್ಯ ! – ಸರಸಂಘಚಾಲಕ

ಪ.ಪೂ. ಸರಸಂಘಚಾಲಕ ಇವರು ಮಾತು ಮುಂದುವರೆಸುತ್ತಾ, ಜಗತ್ತಿಗೆ ಸುಂಸ್ಕೃತಗೊಳಿಸಿ ನಾವು ಯಾವ ‘ಧರ್ಮ ವಿಷಯ’ ಸಾಧ್ಯಗೊಳಿಸಬಹುದು, ಅದು ಯಾರ ವಿರೋಧದಲ್ಲಿ ಕೂಡ ಇರಲಾರದು. ಆ ವಿಜಯ ಎಲ್ಲರದು ಆಗಿರುತ್ತದೆ. ನಮಗೆ ಸ್ಕೂಲ್ ಜಗತ್ತಿನಿಂದ ಆರಂಭಿಸುವುದಿದೆ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಹೋಗುವುದಿದೆ. ಇದೇ ನಮ್ಮ ರಾಷ್ಟ್ರೀಯ ಕಾರ್ಯವಾಗಿದೆ. ನಾವು, ಇದೆಲ್ಲವೂ ನಾವು ನಮ್ಮ ಈ ಜೀವನ ಕಾಲದಲ್ಲಿಯೇ ಮಾಡಬಹುದು ಇದನ್ನು ಸುನಿಶ್ಚಿತಗೊಳಿಸಬೇಕಾಗಿದೆ, ಎಂದು ಹೇಳಿದರು.

ಸನಾತನ ಧರ್ಮದ ವೈಭವ ಪಡೆಯುವುದಕ್ಕಾಗಿ ಧರ್ಮಚರಣೆ ಮಾಡೋಣ ! – ಪ. ಪೂ. ಮಾತಾ ಅಮೃತಾನಂದಮಯಿ

ಈ ಸಮಯದಲ್ಲಿ ಜಗತ್ತಿನಾದ್ಯಂತದ ಹಿಂದುತ್ವನಿಷ್ಠರನ್ನು ಉದ್ದೇಶಿಸಿ ಮಾತನಾಡುವಾಗ, ಪ.ಪೂ. ಮಾತಾ ಅಮೃತಾನಂದಮಯಿ ಇವರು, ”ವಿಶ್ವದಲ್ಲಿನ ಪ್ರತಿಯೊಂದು ಅಣುವಿನಲ್ಲಿ ನಮ್ಮ ಮಹಾನ ಋಷಿ ಮುನಿಗಳು ರಚಿಸಿರುವ ವೇದ, ಪುರಾಣ ಮತ್ತು ಸ್ತೋತ್ರ ಇದರ ಸಾತ್ವಿಕ ಶಕ್ತಿ ಇದೆ. ನಮ್ಮ ಧರ್ಮದ ಪಾಲನೆ ಮಾಡಿಕೊಂಡು ದೊರೆತಿರುವ ಶಾಂತಿ, ಪ್ರೀತಿ ಮತ್ತು ಸಮೃದ್ಧಿ ಇದರಿಂದ ಜಗತ್ತಿನ ಪ್ರಗತಿ ಆಗಬೇಕು. ಈ ಜಗತ್ತಿನಲ್ಲಿ ಎಲ್ಲವೂ ಕೂಡ ಪರಮಾತ್ಮನ ವರದಾನ ಆಗಿದೆ. ಸನಾತನ ಧರ್ಮದ ವೈಭವ ಪಡೆಯುವುದಕ್ಕಾಗಿ ಧರ್ಮಚರಣೆ ಮಾಡೋಣ !” ಎಂದು ಹೇಳಿದರು.

ಹಿಂದುಗಳ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಮತ್ತು ಚರ್ಚೆಗೆ ವ್ಯವಸ್ಥೆ ಇಲ್ಲ ! – ಬೋಧಿನಾಥ ವೆಲಾಂಶಸ್ವಾಮಿ

ಅಮೇರಿಕಾದ ಪ್ರಸಿದ್ಧ ನಿಯತಕಾಲಿಕೆ ‘ಹಿಂದೂಯಿಜಮ್ ಟುಡೆ’ ಯ ಸಂಪಾದಕ ಬೋಧಿನಾಥ ವೆಲಾಂಶಸ್ವಾಮಿ ಇವರು ಈ ಸಮಯದಲ್ಲಿ ಮಾತನಾಡುತ್ತಾ, ”ಹಿಂದೂಗಳ ಧ್ವನಿಗೆ ಮತ್ತು ಚರ್ಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥೆ ಇಲ್ಲ. ಜಗತ್ತಿನ ಇತರ ಪ್ರದೇಶಗಳಲ್ಲಿ ಏನು ನಡೆಯುತ್ತಿದೆ, ಅದರಿಂದ ಜಗತ್ತಿನಾದ್ಯಂತದ ಹಿಂದುಗಳು ವಂಚಿತರಾಗಿದ್ದಾರೆ. ‘ಹಿಂದೂಯಿಜಮ್ ಟುಡೆ’ ದೈನಿಕ ಜಗತ್ತಿನಾದ್ಯಂತದ ಹಿಂದುಗಳನ್ನು ಜೋಡಿಸುವ ಮಾಧ್ಯಮವಾಗಿದೆ ಎಂದು ಹೇಳಿದರು. ಭಾರತದಲ್ಲಿನ ನಿಯತಕಾಲಿಕೆ ಅವರ ಗುರುಗಳ ತತ್ವಜ್ಞಾನ , ತತ್ವಗಳು ಮತ್ತು ವಂಶ ಪರಂಪರೆಯ ಬಗ್ಗೆ ಗಮನ ಸೆಳೆಯುತ್ತವೆ, ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯು ಕೂಡ ಸಹಭಾಗಿ !

ವರ್ಲ್ಡ್ ಹಿಂದು ಕಾಂಗ್ರೆಸ್ ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನೀಲೇಶ್ ಸಿಂಗಬಾಳ ಮತ್ತು ಸಮಿತಿಯ ದೆಹಲಿ ಸಮನ್ವಯಕ ಶ್ರೀ. ಶ್ರೀರಾಮ ಲುಕತೂಕೆ ಸಹಭಾಗಿದ್ದಾರೆ.