ಫಾಸ್ಪರಸ್ ಬಾಂಬ್ ಗಾಳಿಯಲ್ಲಿನ ಆಮ್ಲಜನಕ ಮುಗಿಸಿ ಮೂಳೆಗಳ ಕರಗಿಸುತ್ತದೆ !
ಜೆರುಸಲೇಮ – ಇಸ್ರೇಲ್ ಗಾಳಿಯಲ್ಲಿನ ಆಕ್ಸಿಜನ್ ಮುಗಿಸಿ ಮೂಳೆ ಕರಗಿಸುವ ‘ಫಾಸ್ಪರಸ್ ಬಾಂಬ್’ ಬಳಕೆ ಮಾಡಿರುವದೆಂದು ಪ್ಯಾಲೆಸ್ಚನ್ ಆರೋಪಿಸಿದೆ. ಇಸ್ರೇಲ್ ನ ಈ ಕೃತಿ ಯುದ್ಧ ಅಪರಾಧವಾಗಿರುವುದೆಂದು ಕೂಡ ಪ್ಯಾಲೆಸ್ಟೈನ್ ಹೇಳಿದೆ.
ಎಷ್ಟು ಅಪಾಯಕಾರಿ ಇದೆ ಫಾಸ್ಫರಸ್ ಬಾಂಬ್ ?
ವೈಟ್ ಫಾಸ್ಫರಸ್ ಬಾಂಬ್ ತಯಾರಿಸುವಾಗ ರಬ್ಬರ್ ಮತ್ತು ವೈಟ್ ಫಾಸ್ಫರಸ್ ಇದನ್ನು ಬಳಸಲಾಗುತ್ತದೆ. ಫಾಸ್ಫರಸ್ ಮೇಣದ ಹಾಗೆ ರಸಾಯನವಾಗಿದೆ. ಈ ಬಾಂಬ್ ಕಾಣಲು ತಿಳಿ ಹಳದಿ ಅಥವಾ ಬಣ್ಣ ರಹಿತವಾಗಿರುತ್ತದೆ. ಇದರಿಂದ ಕೊಳೆತಿರುವ ಬೆಳ್ಳುಳ್ಳಿಯ ಹಾಗೆ ವಾಸನೆ ಬರುತ್ತದೆ. ಆಕ್ಸಿಜನ್ ಸಂಪರ್ಕಕ್ಕೆ ಬಂದರೆ ಅದು ಹೊತ್ತಿಕೊಳ್ಳುತ್ತದೆ. ಈ ಬೆಂಕಿ ನೀರಿನಿಂದ ಆರಿಸಲಾಗುವುದಿಲ್ಲ. ಫಾಸ್ಫರಸ್ ಬಾಂಬ್ ಸಿಡಿದನಂತರ ಆ ಭಾಗದಲ್ಲಿನ ಆಕ್ಸಿಜನ್ ವೇಗವಾಗಿ ಮುಗಿಯುತ್ತದೆ. ಆದ್ದರಿಂದ ಯಾವ ಮನುಷ್ಯರು ಬಾಂಬ್ ನಿಂದ ಹತ್ತಿರುವ ಬೆಂಕಿಯಿಂದ ಬದುಕುತ್ತಾರೆ ಅವರ ಜೀವ ಉಸಿರು ಕಟ್ಟೆ ಹೋಗುತ್ತದೆ. ನೀರು ಹಾಕಿದ ನಂತರ ಭುಗಿಲೇಳುವ ಹೋಗೆ ನಿರ್ಮಾಣವಾಗುತ್ತ ಎಲ್ಲಾ ಕಡೆಗೆ ಹರಡುತ್ತದೆ. ಫಾಸ್ಫರಸ್ ಬಾಂಬ್ ೧೩೦೦ ಡಿಗ್ರಿ ಸೆಲ್ಸಿಯಸ್ ವರೆಗೆ ಹೊತ್ತಬಹುದು. ಆದ್ದರಿಂದ ಮೂಳೆಗಳು ಕೂಡ ಕರಗುತ್ತವೆ. ಈ ಬಾಂಬ್ ಸಂಪರ್ಕದಲ್ಲಿ ಬಂದಿರುವ ವ್ಯಕ್ತಿ ಬದಕಿ ಉಳಿದರೂ ಕೂಡ ಅವನು ಜೀವನಪರ್ಯಂತ ಮಾರಣಾಂತಿಕ ವೇದನೆ ಸಹಿಸಬೇಕಾಗುತ್ತದೆ. ಅವನು ಸತತವಾಗಿ ಗಂಭೀರ ಸಂಕ್ರಮಣವನ್ನು ಎದುರಿಸಬೇಕಾಗುತ್ತದೆ. ಚರ್ಮದ ಮೇಲಿನ ಸಂಕ್ರಮಣ ಬಹಳಷ್ಟು ಬಾರಿ ರಕ್ತದವರೆಗೆ ತಲುಪುತ್ತದೆ. ಆದ್ದರಿಂದ ಹೃದಯ, ಯಕೃತ ಮತ್ತು ಮೂತ್ರಪಿಂಡಗಳಿಗೆ ಹಾನಿ ಆಗುತ್ತದೆ. ಇದರಿಂದ ಶರೀರದಲ್ಲಿನ ಅನೇಕ ಅವಯವಗಳು ನಿಷ್ಕ್ರಿಯವಾಗುವ ಸಾಧ್ಯತೆ ಹೆಚ್ಚುತ್ತದೆ. ಇದು ಅತ್ಯಂತ ಅಪಾಯಕಾರಿ ಬಾಂಬ್ ಎಂದು ಹೇಳಲಾಗಿದೆ.