ಇಸ್ರೇಲ್ ಮತ್ತು ಸೌದಿ ಅರೇಬಿಯಾ ಇವರಲ್ಲಿ ಆದಷ್ಟು ಬೇಗನೆ ರಾಜಿ ಆಗುವುದಿತ್ತು !
ರಿಯಾಧ (ಸೌದಿ ಅರೇಬಿಯಾ) – ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ನಡೆಸಿರುವ ದಾಳಿಯ ನಂತರ ಜಗತ್ತಿನಲ್ಲಿ ಇಸ್ಲಾಮಿ ದೇಶಗಳು ಮತ್ತು ಕ್ರೈಸ್ತ ದೇಶಗಳು ಹೀಗೆ ಎರಡು ಗುಂಪುಗಳಾಗಿವೆ. ಅದರಲ್ಲಿ ಕೂಡ ಒಂದು ಕಡೆ ಸಂಯುಕ್ತ ಅರಬ್ ಅಮೀರಾತ ಮತ್ತು ಬಹಾರಿನ್ ಇವರು ಇಸ್ರಾಯಿಲಿನ ಮತ್ತು ಇನ್ನೊಂದು ಕಡೆ ಸೌದಿ ಅರೇಬಿಯಾದಿಂದ ಪ್ಯಾಲೇಸಟೈನ್ಅನ್ನು ಬೆಂಬಲಿಸಿದೆ. ಸೌದಿಯ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಇವರು, ನಾವು ಈ ಸಂಘರ್ಷ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶಾಂತಿಗಾಗಿ ನಾವು ಪ್ಯಾಲೇಸಟೈನ್ ನ ಪರವಾಗಿ ನಿಂತಿದ್ದೇವೆ ಎಂದು ಹೇಳಿದರು.
ವಿಶೇಷ ಎಂದರೆ ಇಸ್ರೇಲ್ ಮತ್ತು ಸೌದಿ ಅರೇಬಿಯಾ ಇವರಲ್ಲಿನ ಅನೇಕ ದಶಕಗಳ ಶತ್ರುತ್ವ ಮುಗಿದು ರಾಜಿಯಾಗುವಂತೆ ಅಮೆರಿಕ ಪ್ರಯತ್ನ ಮಾಡಿದ್ದರಿಂದ ಅವರು ಬೇಗನೆ ಒಪ್ಪಿಗೆ ಸೂಚಿಸುವರು. ಈ ಹಿಂದೆ ಹಮಾಸದಿಂದ ಇಸ್ರೇಲ್ ಮೇಲೆ ದಾಳಿ ಮಾಡಿರುವುದರಿಂದ ಈ ಪ್ರಕ್ರಿಯೆ ಈಗ ನಿಂತಿದೆ.