ಜಿಹಾದಿ ಭಯೋತ್ಪಾದಕ ಹಫೀಜ್ ಸಯೀದ್ ಮನೆಯ ಹತ್ತಿರ ನಡೆದ ಸ್ಪೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್‍ನ ಆರೋಪ !

ಇದನ್ನೆ ‘ಕಳ್ಳನಿಗೊಂದು ಪಿಳ್ಳೆನೆವ’ ಎನ್ನುತ್ತಾರೆ ! ತಲೆನೋವಾಗಿ ಪರಿಣಮಿಸಿದ ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನವೇ ಸ್ಪೋಟವನ್ನು ನಡೆಸಿ ಅದನ್ನು ಭಾರತ ಮಾಡಿದೆ ಎಂದು ಆರೋಪ ಹೊರಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಇದು ಎಲ್ಲರಿಗೆ ತಿಳಿದ ವಿಷಯವಾಗಿದೆ !

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಕಂಡು ಬಂದ ಡ್ರೋನ್

‘ಭಯೋತ್ಪಾದಕರಿಂದ ಡ್ರೋನ ಬಳಕೆಯಾಗುತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಕೊಳ್ಳದಿದ್ದರೆ ಭಯೋತ್ಪಾದಕ ವಿರುದ್ಧದ ಹೋರಾಟದಲ್ಲಿ ಗೆಲ್ಲುವುದು ಅತ್ಯಂತ ಕಠಿಣವಾಗಲಿದೆ’ ಎಂದು ಭಾರತವು ತಿಳಿಸಿದೆ.

ದರಭಂಗಾ ರೈಲು ನಿಲ್ದಾಣದಲ್ಲಿ ಆಗಿದ್ದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರ ಬಂಧನ

ಬಿಹಾರದ ದರಭಂಗಾ ರೈಲು ನಿಲ್ದಾಣದಲ್ಲಿ ಜೂನ್ ೧೭ ರಂದು ಪಾರ್ಸಲ್ ಬಾಂಬ್ ಸ್ಪೋಟಗೊಳಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಲಷ್ಕರ-ಎ-ತೊಯ್ಬಾದ ಇಮ್ರಾನ್ ಮಲ್ಲಿಕ್ ಮತ್ತು ಮಹಮದ್ ನಾಸೀರ್ ಈ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಡ್ರೋನ್‍ಅನ್ನು ಬಳಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟುವುದು ಅವಶ್ಯಕ !

ಭಯೋತ್ಪಾದಕ ಚಟುವಟಿಕೆಗಳಿಗಾಗಿ ಡ್ರೋನ್‍ಅನ್ನು ಉಪಯೋಗಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಅದರ ಮೇಲೆ ಹಿಡಿತ ಸಾಧಿಸಲು ಕಠಿಣವಾಗಬಹುದು, ಎಂದ್ಲು ಭಾರತವು ಇಲ್ಲಿಯ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಅಂಶವನ್ನು ಮಂಡಿಸಿತು.

ಜಮ್ಮುವಿನಲ್ಲಿ ಮೂರನೇಯ ಬಾರಿ ಕಂಡುಬಂದ ಡ್ರೋನ್ !

ಈ ಹಿಂದೆ ಭಾರತೀಯ ವಾಯುದಳದ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಡ್ರೋನ್ ಮೂಲಕ ಬಾಂಬ್ ಸ್ಪೋಟ ಮಾಡಿದ್ದರು ಮತ್ತು ಮಾರನೇಯ ದಿನ ಅಲ್ಲಿಯ ಸೈನ್ಯ ದಳದ ನೆಲೆಯ ಮೇಲೆ ಕಂಡು ಬಂದಿದ್ದ ಡ್ರೋನ್ ಮೇಲೆ ಸೈನಿಕರು ಗುಂಡು ಹಾರಾಟ ಮಾಡಿ ಓಡಿಸಿದ್ದರು.

ಪುಲವಾಮಾ(ಜಮ್ಮು-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಮಾಜಿ ಪೊಲೀಸ್ ಅಧಿಕಾರಿ ಸಹಿತ ಅವರ ಹೆಂಡತಿ ಮತ್ತು ಮಗಳ ಹತ್ಯೆ

ಜಮ್ಮುವಿನಲ್ಲಿ ಭಾರತೀಯ ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಿದ ೨೪ ಗಂಟೆಗಳಲ್ಲಿ ಜಿಹಾದಿ ಭಯೋತ್ಪಾದಕರು ಇಲ್ಲಿಯ ಅವಂತಿಪೊರಾ ಪ್ರದೇಶದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಫಯ್ಯಾಜ ಅಹಮದ ಇವರನ್ನು ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಅಹಮದರ ಮನೆಗೆ ನುಗ್ಗಿ ಅವರ ಮತ್ತು ಅವರ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ದೇಶವು ಅಪರಾಧಿ !

ಕಳೆದ ಕೆಲವು ದಶಕಗಳಿಂದ ಗಡಿಯಲ್ಲಾಗುತ್ತಿರುವ ಭಯೋತ್ಪಾದನೆಗೆ ಭಾರತವು ಬಲಿ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಅವರಿಗೆ ಆಶ್ರಯ ನೀಡುವ ದೇಶವು ಇದಕ್ಕೆ ಕಾರಣಕರ್ತವಾಗಿದೆ ಎಂದು ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕ್‍ನ ಹೆಸರನ್ನು ಹೇಳದೇ ಟೀಕಿಸಿದೆ.

ಉತ್ತರಪ್ರದೇಶದಲ್ಲಿ ಮತಾಂತರವು ಭಯೋತ್ಪಾದಕರೊಂದಿಗೆ ಸಂಬಂಧಿಸಿದೆ ಮತ್ತು ರಾಷ್ಟ್ರವ್ಯಾಪಿ ಇರುವುದರಿಂದ, ತನಿಖೆಯನ್ನು ‘ಎನ್‌ಐಎ’ಗೆ ಹಸ್ತಾಂತರಿಸಿ ! – ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ

ಇತ್ತೀಚೆಗೆ ಉತ್ತರಪ್ರದೇಶದ ಒಂದು ಸಾವಿರ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲ್ವಿಗಳನ್ನು ಬಂಧಿಸಿದ ನಂತರ, ಅವರಿಗೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಗೂಢಚಾರ ಸಂಘಟನೆಯಿಂದ ಹಣಕಾಸು ಒದಗಿಸಲಾಗುತ್ತಿದೆ ಎಂಬುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

ಪಾಕ್‍ನಲ್ಲಿ ಭಯೋತ್ಪಾದಕರಿಗೆ ಆಶ್ರಯ ಮತ್ತು ಪಿಂಚಣಿ ನೀಡಲಾಗುತ್ತದೆ !

ಪಾಕಿಸ್ತಾನದಲ್ಲಿ ಪ್ರತಿವರ್ಷ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ೧ ಸಾವಿರಕ್ಕೂ ಹೆಚ್ಚು ಯುವತಿಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ. ಹಿಂದು, ಕ್ರೈಸ್ತ, ಅಹಮದಿಯಾ, ಸಿಖ್ ಸಹಿತ ಇತರ ಅಲ್ಪಸಂಖ್ಯಾತರನ್ನು ಕಾನೂನುರೀತ್ಯಾ ನ್ಯಾಯಾಂಗ ವ್ಯವಸ್ಥೆಯ ಬದಲು ಸಮಾನ ನ್ಯಾಯವ್ಯವಸ್ಥೆಯ ಮಾಧ್ಯಮದಿಂದ ಹಿಂಸಿಸಲಾಗುತ್ತದೆ, ಇದು ಪಾಕಿಸ್ತಾನದಲ್ಲಿ ಸರ್ವೆ ಸಾಮಾನ್ಯ ಎಂದು ತಿಳಿಯಲಾಗುತ್ತದೆ.

ಫೇಸಬುಕ್‌ನ ವೈಚಾರಿಕ ಭಯೋತ್ಪಾದನೆ !

ಫೇಸಬುಕ್‌ನ ಸಂಸ್ಥಾಪಕ ಮಾರ್ಕ ಝುಕೆರಬರ್ಗ ಸ್ವತಃ ಜ್ಯೂ ಧರ್ಮದವರಾಗಿದ್ದಾರೆ. ಜ್ಯೂ ಧರ್ಮದವರು ತಮ್ಮ ಅಸ್ತಿತ್ವಕ್ಕಾಗಿ ಬಹಳ ಸಂಘರ್ಷ ಮಾಡಿದ್ದಾರೆ. ಜಗತ್ತಿನಲ್ಲಿ ಹಿಂದೂ ಧರ್ಮದ ಬಳಿಕ ಅತ್ಯಧಿಕ ನರಮೇಧಕ್ಕೊಳಗಾದವರೆಂದರೆ ಜ್ಯೂ ವಂಶದವರಾಗಿದ್ದಾರೆ. ಈಗಲೂ ಜ್ಯೂಗಳ ದೇಶವಾಗಿರುವ ಇಸ್ರೈಲ್ ತನ್ನ ಅಸ್ತಿತ್ವಕ್ಕಾಗಿ ಅಕ್ಕಪಕ್ಕದ ದೊಡ್ಡ ದೊಡ್ಡ ಅರಬ-ಮುಸ್ಲಿಂ ದೇಶಗಳೊಂದಿಗೆ ಹೋರಾಡುತ್ತಿದೆ.