ಗುರುಗ್ರಾಮ (ಹರಿಯಾಣ) ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪೊಲೀಸರ ಅನುಮತಿ

‘ಕೆಲವು ಮುಸಲ್ಮಾನರು ಮೊದಲು ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪ್ರಾರಂಭಿಸುತ್ತಾರೆ ಹಾಗೂ ನಿಧಾನವಾಗಿ ಆ ಸ್ಥಳದ ಮೇಲೆ ನಿಯಂತ್ರಣ ಪಡೆದುಕೊಂಡು ಅಲ್ಲಿ ಅಕ್ರಮವಾಗಿ ಮಸೀದಿಯನ್ನೋ ಅಥವಾ ದರ್ಗಾ ಕಟ್ಟುತ್ತಾರೆ’, ಎಂಬುದು ದೇಶದ ಎಲ್ಲೆಡೆಗಳಲ್ಲಿನ ಅನುಭವವಾಗಿದೆ.

ಮೈಸೂರು (ಕರ್ನಾಟಕ) ಇಲ್ಲಿನ ಮಹಾದೇವಿಯ ದೇವಾಲಯವನ್ನು ಕೆಡವಿದ ಬಗ್ಗೆ ವಿಹಂಪ ಹಾಗೂ ಬಜರಂಗದ ದಳದವರಿಂದ ಸರಕಾರದ ವಿರುದ್ಧ ಆಂದೋಲನ!

ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.

ಹಿಂದುತ್ವ ಮತ್ತು ವಿರೋಧ !

ಛತ್ತೀಸಗಡನಲ್ಲಿನ ಸರಕಾರಿ ಶಾಲೆಯಲ್ಲಿ ಓರ್ವ ಸಾಮ್ಯವಾದಿ ಶಿಕ್ಷಕರು ವಿದ್ಯಾರ್ಥಿಗಳಿಗೆ, “ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿಮ್ಮ ಪೈಕಿ ಎಷ್ಟು ಜನರು ಉಪವಾಸ ಮಾಡುವಿರಿ ? ಎಂದು ಕೇಳಿದರು. ಇದಕ್ಕೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೈ ಮೇಲೆತ್ತಿದರು. ಕೈಯನ್ನು ಮೇಲೆತ್ತಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಳ ಥಳಿಸಿದರು.

ಬ್ರಿಸ್ಬೆನ್ (ಆಸ್ಟ್ರೇಲಿಯಾ)ದಲ್ಲಿ 12 ವರ್ಷದ ಹಿಂದೂ ಹುಡುಗನು ತುಳಸಿಯ ಮಾಲೆ ಧರಿಸಿದ್ದನೆಂದು ಫುಟ್ಬಾಲ್ ಪಂದ್ಯವನ್ನು ಆಡದಂತೆ ತಡೆದ ಘಟನೆ !

ಮಾಲೆ ತೆಗೆದರೆ ಆಟವಾಡಲು ಅನುಮತಿಸಲಾಗುವುದು ಎಂಬ ವಿನಾಯತಿಯನ್ನು ನಿರಾಕರಿಸಿದ ಧರ್ಮಾಭಿಮಾನಿ ಹಿಂದೂ ಹುಡುಗ!

ಮಲ್ಲಾಪುರಮ್ (ತಮಿಳುನಾಡು) ಇಲ್ಲಿಯ ಶ್ರೀತಲಸಾಯಾನಾ ಪೆರುಮಲ ಈ ಪುರಾತನ ದೇವಾಲಯದ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆ !

ದೇವಾಲಯದ ಸರಕಾರಿಕರಣ ಮಾಡಿ ಮನಬಂದಂತೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತಮಿಳುನಾಡಿನ ದ್ರಮುಕ ಸರಕಾರಕ್ಕೆ ನಿಷೇಧ !

ಸ್ವಾತಂತ್ರ್ಯದಿನ ನಿಮಿತ್ತ ‘ಸ್ವಾತಂತ್ರ್ಯ ರಥ’ದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರ ಹಾಕಿದ್ದಕ್ಕೆ ಎಸ್‌ಡಿಪಿಐ ಪಕ್ಷದ ವಿರೋಧ !

ಕಾರ್ಯಕರ್ತರು ಸಾವರಕರರ ಫೋಟೋ ಹರಿದು ಅಲ್ಲಿ ಟಿಪ್ಪು ಸುಲ್ತಾನನ ಫೋಟೋ ಹಾಕುವಂತೆ ಪಟ್ಟು ಹಿಡಿದಿದ್ದರು.

ಕರಾಚಿ (ಪಾಕಿಸ್ತಾನ)ಯಲ್ಲಿ ಶ್ರೀ ಗಣಪತಿ ದೇವಾಲಯದ ಧ್ವಂಸದ ವಿರುದ್ಧ ಹಿಂದೂಗಳ ಪ್ರತಿಭಟನೆ !

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಅವರು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹದೇವ್’ ಘೋಷಣೆಯನ್ನೂ ಕೂಗಿದರು.

ದೆಹಲಿಯಲ್ಲಿ ‘ಹಜ್ ಹೌಸ್’ ವಿರುದ್ಧ ಹಿಂದುತ್ವನಿಷ್ಠರ ಹಾಗೂ ಸ್ಥಳೀಯರ ಆಂದೋಲನ !

ಆಗಸ್ಟ್ 6ರಂದು ದ್ವಾರಕಾ ಭಾಗದಲ್ಲಿರುವ ಭರಥಲ ಚೌಕನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ 32 ಸ್ಥಳೀಯರು ಪ್ರಸ್ತಾವಿತ ‘ಹಜ್ ಹೌಸ್’ನ ವಿರುದ್ಧ ಆಂದೋಲನ ನಡೆಸಿದರು. ಈ ಸಮಯದಲ್ಲಿ 350 ಕ್ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಸಹ ಭಾಗಿಯಾಗಿದ್ದರು.