ದೆಹಲಿಯಲ್ಲಿ ‘ಹಜ್ ಹೌಸ್’ ವಿರುದ್ಧ ಹಿಂದುತ್ವನಿಷ್ಠರ ಹಾಗೂ ಸ್ಥಳೀಯರ ಆಂದೋಲನ !

ಆಮ್ ಆದ್ಮಿ ಪಕ್ಷದಿಂದ ಹಜ್ ಹೌಸ್ ನಿರ್ಮಾಣಕ್ಕಾಗಿ ಅನುಮತಿ ಹಾಗೂ ಒಂದು ನೂರು ಕೋಟಿ ರೂಪಾಯಿಗಳ ಏರ್ಪಾಡು !

  • ಉತ್ತರ ಭಾರತದಲ್ಲಿ ಅನೇಕ ತೀರ್ಥಕ್ಷೇತ್ರಗಳಿಗೆ ಹೋಗಲು ದೇಶದಾದ್ಯಂತ ಹಿಂದೂಗಳಿಗಾಗಿ ದೆಹಲಿಯು ಒಂದು ಮಧ್ಯವರ್ತಿ ಜಾಗವಾಗಿರುವಾಗ ‘ತೀರ್ಥಯಾತ್ರೆಯನ್ನು ಮಾಡುವ ಹಿಂದೂಗಳಿಗಾಗಿ ಏನಾದರೂ ಮಾಡಬೇಕು’ ಎಂದು ಆಮ್ ಆದ್ಮಿ ಪಕ್ಷಕ್ಕೆ ಏಕೆ ಅನಿಸುವುದಿಲ್ಲ ? – ಸಂಪಾದಕರು
  • ದೇಶದಲ್ಲಿ ಅನೇಕ ಕಡೆಗಳಲ್ಲಿ ಹಜ್ ಹೌಸ್ ಕಟ್ಟಲಾಗಿರುವಾಗ ಮತ್ತು ಈಗ ಹಜ್ ಗಾಗಿ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾಗಿರುವಾಗ ಹಜ್ ಹೌಸ್ ನ ಆವಶ್ಯಕತೆಯೇನಿದೆ ? – ಸಂಪಾದಕರು

ದೆಹಲಿ, 7 ಅಗಸ್ಟ್ (ವಾರ್ತೆ) – ಆಗಸ್ಟ್ 6ರಂದು ದ್ವಾರಕಾ ಭಾಗದಲ್ಲಿರುವ ಭರಥಲ ಚೌಕನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ 32 ಸ್ಥಳೀಯರು ಪ್ರಸ್ತಾವಿತ ‘ಹಜ್ ಹೌಸ್’ನ ವಿರುದ್ಧ ಆಂದೋಲನ ನಡೆಸಿದರು. ಈ ಸಮಯದಲ್ಲಿ 350 ಕ್ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಸಹ ಭಾಗಿಯಾಗಿದ್ದರು. ವಿಶ್ವ ಹಿಂದೂ ಪರಿಷತ್, ಹಿಂದೂ ಶಕ್ತಿ ಸಂಘಟನಾ, ಸಕಲ ಪಂಚಾಯತ್ ಪಾಲಂ 360, ದೆಹಲಿ ಪ್ರದೇಶ ಗ್ರಾಮ ಪಂಚಾಯತ್ ಪರಿಷತ್, ‘ಆಲ್ ದ್ವಾರಕಾ ರೆಸಿಡೆಂಟ್ಸ್ ಫೆಡರೇಷನ್’, ಸರ್ವ ರಹಿವಾಶಿ ಸಂಘ, ಮುಂತಾದ ಸಂಘಟನೆಗಳೊಂದಿಗೆ ತಿಹಾರ್ ಕ್ಷೇತ್ರದಲ್ಲಿ ನೆಲೆಸಿರುವ ನಾಗರಿಕರು ಹಾಗೆಯೇ ಹಿಂದೂ ಜನಜಾಗೃತಿ ಸಮಿತಿ ಮತ್ತು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

1. ಆಮ್ ಆದ್ಮಿ ಪಕ್ಷದ ಸರಕಾರದಿಂದ ಹಜ್ ಹೌಸ್ ಗಾಗಿ 7000 ಚದರ ಮೀಟರ್ ಭೂಮಿಯನ್ನು ನೀಡಲಾಗಿದೆ. ಇಲ್ಲಿನ ಭೂಮಿಯ ದರವು ಪ್ರತಿ ಚದರ ಮೀಟರಿಗೆ ಎರಡೂವರೆಯಿಂದ ಮೂರು ಲಕ್ಷದಷ್ಟಿದೆ.

2. ಈ ಭಾಗದಲ್ಲಿ ಮುಸಲ್ಮಾನರು ವಾಸಿಸುವುದಿಲ್ಲ, ಹಾಗೆಯೇ ದೆಹಲಿಯಲ್ಲಿ ವಕ್ಫ್ ಬೋರ್ಡ್ ಬಳಿ ದೊಡ್ಡ ಪ್ರಮಾಣದಲ್ಲಿ ಭೂಮಿ ಇರುವಾಗ ಹಜ್ ಹೌಸನ್ನು ಹೇಗೆ ಕಟ್ಟಲಾಗುತ್ತಿದೆ? ಈ ಜಾಗದಲ್ಲಿ ಶಾಲೆ ಮಹಾವಿದ್ಯಾಲಯ ಅಥವಾ ಆಸ್ಪತ್ರೆಯನ್ನು ಏಕೆ ಕಟ್ಟಲಾಗುತ್ತಿಲ್ಲ ? ಎಂಬ ಪ್ರಶ್ನೆಯನ್ನು ಸ್ಥಳೀಯರು ಆಂದೋಲನದ ಮಾಧ್ಯಮದಿಂದ ಕೇಳಿದ್ದಾರೆ.

3. ದೆಹಲಿಯ ವಿಕಾಸಕ್ಕಾಗಿ, ಹಾಗೂ ಜನರ ಸೌಲಭ್ಯದ ಉದ್ದೇಶದಿಂದ ಸ್ಥಳೀಯರು ತಮ್ಮ ಭೂಮಿಯನ್ನು ಸರಕಾರಕ್ಕೆ ನೀಡಿದ್ದರು. ಅದರಂತೆಯೇ ಅಲ್ಲಿ ದೊಡ್ಡ ವಸಾಹತು ನಿರ್ಮಾಣವಾಯಿತು. ಆದರೆ ಈಗ ರಾಜ್ಯದ ಆಮ್ ಆದ್ಮಿ ಪಕ್ಷದ ಸರಕಾರವು ಹಜ್ ಹೌಸ್ ನಿರ್ಮಿಸಲು ಅನುಮತಿ ನೀಡಿ ಅದರ ಮೇಲೆ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ. ಈ ಹಜ್ ಹೌಸ್ ಗೆ ಆಗಿನ ಮುಖ್ಯಮಂತ್ರಿಯಾದ ಶೀಲಾ ದೀಕ್ಷಿತರು ಅನುಮತಿ ನೀಡಿದ್ದರು; ಆದರೆ ಅದಕ್ಕೆ ವಿರೋಧವಾಗಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಈಗ ಆಮ್ ಆದ್ಮಿ ಪಕ್ಷದ ಸರಕಾರದಿಂದ ಇದಕ್ಕೆ ಮಾನ್ಯತೆಯನ್ನು ನೀಡಲಾಗಿದೆ. ಆದುದರಿಂದ ಹಿಂದುತ್ವನಿಷ್ಠರು ಹಾಗೂ ಸ್ಥಳೀಯರಿಂದ ಆಂದೋಲನ ನಡೆಯುತ್ತಿದೆ.