ಬ್ರಿಸ್ಬೆನ್ (ಆಸ್ಟ್ರೇಲಿಯಾ)ದಲ್ಲಿ 12 ವರ್ಷದ ಹಿಂದೂ ಹುಡುಗನು ತುಳಸಿಯ ಮಾಲೆ ಧರಿಸಿದ್ದನೆಂದು ಫುಟ್ಬಾಲ್ ಪಂದ್ಯವನ್ನು ಆಡದಂತೆ ತಡೆದ ಘಟನೆ !

ಮಾಲೆ ತೆಗೆದರೆ ಆಟವಾಡಲು ಅನುಮತಿಸಲಾಗುವುದು ಎಂಬ ವಿನಾಯತಿಯನ್ನು ನಿರಾಕರಿಸಿದ ಧರ್ಮಾಭಿಮಾನಿ ಹಿಂದೂ ಹುಡುಗ!

ವಿದೇಶಗಳಲ್ಲಿ ಇಂತಹ ಧರ್ಮಪ್ರೇಮಿ ಹಿಂದೂ ಮಕ್ಕಳಿದ್ದಾರೆ, ಆತನನ್ನು ಎಷ್ಟು ಶ್ಲಾಘನೆ ನೀಡಿದರೂ ಕಡಿಮೆಯೇ; ಆದರೆ ಭಾರತದಲ್ಲಿ ಇಂತಹ ಮಕ್ಕಳು ಅಪರೂಪಕ್ಕೆ ಕಂಡುಬರುತ್ತಾರೆ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ ! – ಸಂಪಾದಕರು 

ಕು. ಶುಭ ಪಟೇಲ

ಬ್ರಿಸ್ಬೆನ್ (ಆಸ್ಟ್ರೇಲಿಯಾ)12 ವರ್ಷದ ಭಾರತೀಯ ಮೂಲದ ಫುಟ್ಬಾಲ್ ಆಟಗಾರ ಕು. ಶುಭ ಪಟೇಲನು ಕೊರಳಲ್ಲಿ ತುಳಸಿ ಮಾಲೆ ಧರಿಸಿದ್ದರಿಂದ ಫುಟ್ ಬಾಲ್ ಪಂದ್ಯದಲ್ಲಿ ಆಡುವುದರಿಂದ ತಡೆಯಲಾಯಿತು. `ದ ಆಸ್ಟ್ರೇಲಿಯಾ ಟುಡೇ’ಯಲ್ಲಿ ಈ ಬಗ್ಗೆ ವಾರ್ತೆಯು ಬಂದಿದೆ. ಶುಭ ಇವನು 5 ವರ್ಷದಿಂದ ಕೊರಳಿನಲ್ಲಿ ಮಾಲೆ ಧರಿಸುತ್ತಿದ್ದು ನಿರ್ಣಾಯಕರು(ಅಂಪೈರ್) ಆತನಿಗೆ ಮಾಲೆಯನ್ನು ತೆಗೆಯಲು ಹೇಳಿದಾಗ ಅದನ್ನು ನಿರಾಕರಿಸಿದನು. ‘ಕೇವಲ ಒಂದು ಪಂದ್ಯಕ್ಕಾಗಿ ಮಾಲೆ ತೆಗೆಯುವುದಕ್ಕಿಂತ ನನ್ನ ಧರ್ಮವನ್ನು ಪಾಲನೆ ಮಾಡಲು ಹೆಚ್ಚು ಇಷ್ಟಪಡುತ್ತೇನೆ’, ಎಂದು ಆತನು ಹೇಳಿದನು. ಈ ಮೊದಲು 15 ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡುವಾಗ ಯಾವತ್ತೂ ಮಾಲೆಯನ್ನು ತೆಗೆಯಲು ಹೇಳಿರಲಿಲ್ಲ.

ತುಳಸಿ ಮಾಲೆಯು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನನಗೆ ಸುರಕ್ಷಿತವೆನಿಸುತ್ತದೆ !

‘ಟುವಾನಗ ಸಾಕ್ ಕ್ಲಬ್’ ನ ಪರವಾಗಿ ಆಡುವ ಕು. ಶುಭ ಪಟೇಲನು, ‘ಮಾಲೆಯನ್ನು ತೆಗೆಯುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಸನಾತನ ಪರಂಪರೆಯಲ್ಲಿ ಪೂಜೆಯಲ್ಲಿ ಪ್ರಸಾದವಾಗಿ ಬಳಸುವ ಮಾಲೆಯನ್ನು ಧರಿಸುವುದು ಮತ್ತು ಅದರ ಮೂಲಕ ಜಪಿಸುವುದು ಅತ್ಯಂತ ಮಂಗಳಕರವಾಗಿದೆ. ನಾನು ಮಾಲೆಯನ್ನು ತೆಗೆದರೆ, ಆತ ನನ್ನನ್ನು ನಂಬುವುದಿಲ್ಲ ಎಂದು ದೇವರು ಯೋಚಿಸಬಹುದು. ಈ ಮಾಲೆಯು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನನಗೆ ಸುರಕ್ಷಿತ ಅನಿಸುತ್ತದೆ.’ ಎಂದು ಹೇಳಿದನು.

‘ಫುಟ್ಬಾಲ್ ಕ್ವೀನ್ಸ್‍ಲ್ಯಾಂಡ್’ ಈ ಸರಕಾರಿ ಸಂಸ್ಥೆಯಿಂದ ಕ್ಷಮಾಯಾಚನೆ !

ಫುಟ್ಬಾಲ್ ಕ್ವೀನ್ಸ್‍ಲ್ಯಾಂಡ್’ ಇದು ಆಸ್ಟ್ರೇಲಿಯಾದಲ್ಲಿ ಫುಟ್‍ಬಾಲ್‍ನ ಸರಕಾರಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಶುಭ ಪಟೇಲನ ಪ್ರಕರಣವನ್ನು ವಿಚಾರಣೆಯನ್ನು ಮಾಡಿದ ನಂತರ ‘ಟುವಾನ್ಗ ಸಾಕರ್ ಕ್ಲಬ್’ನ ವತಿಯಿಂದ ಕ್ಷಮೆಯಾಚಿಸಿದೆ. `ಫುಟ್ಬಾಲ್ ಕ್ವೀನ್ಸ್‍ಲ್ಯಾಂಡ್, ಕ್ವೀನ್ಸ್‍ಲ್ಯಾಂಡ್‍ನಲ್ಲಿ ಫುಟ್‍ಬಾಲ್ ಇದು ಎಲ್ಲರನ್ನು ಒಳಗೊಂಡ ಕ್ರೀಡೆಯಾಗಿದೆ’ ಅದು ಎಲ್ಲಾ ಸಂಸ್ಕೃತಿ ಮತ್ತು ಧರ್ಮಗಳನ್ನು ಗೌರವಿಸುತ್ತದೆ ಎಂದು ಹೇಳಿದೆ.