ನವರಾತ್ರಿಯ ಒಂಭತ್ತನೇ ದಿನ

ಸಿದ್ಧಿದಾತ್ರಿ

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |

ಸೆವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನಿ ||

ಅರ್ಥ : ಸಿದ್ಧ, ಗಂಧರ್ವ, ಯಕ್ಷ, ಅಸುರ, ದೇವ ಮುಂತಾದ ಎಲ್ಲರಿಂದಲೂ ಯಾರ ಸೇವೆಯನ್ನು ಮಾಡಲಾಗುತ್ತದೆಯೋ, ಇಂತಹ ಈ ಸಿದ್ಧಿದಾತ್ರಿ ದೇವಿ, ನೀನು ನಮಗೆ ಯಾವಾಗಲೂ ಸಿದ್ಧಿಯನ್ನು ನೀಡುವವಳಾಗಿರು.

ಆಶ್ವಯುಜ ಶುಕ್ಲ ನವಮಿಯು ನವರಾತ್ರಿಯ ಒಂಭತ್ತನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಒಂಭತ್ತನೇಯ ರೂಪದ ಅಂದರೆ ಸಿದ್ಧಿದಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳ ಉಪಾಸನೆಯಿಂದ ಸಾಧಕರಿಗೆ ಅಷ್ಟಸಿದ್ದಿ ಪ್ರಾಪ್ತವಾಗುತ್ತವೆ. ಕಮಲದ ಮೇಲೆ ವಿರಾಜಮಾನಳಾಗಿರುವ  ಈ ದೇವಿಯು ಚತುರ್ಭುಜಳಾಗಿದ್ದಾಳೆ.