ನವರಾತ್ರಿಯಲ್ಲಿ ೯ ದಿನ ದೇವಿಯ, ಎಂದರೆ ಶಕ್ತಿಯ ಉಪಾಸನೆ ಮಾಡಲಾಗುತ್ತದೆ. ಈ ಶಕ್ತಿಯಿಂದಲೇ ಸಂಪೂರ್ಣ ಬ್ರಹ್ಮಾಂಡದ ಉತ್ಪತ್ತಿಯಾಗಿದೆ. ಇದೇ ಚೈತನ್ಯದಾಯಕ ಶಕ್ತಿಯಿಂದಲೇ ತ್ರಿದೇವರ ಉತ್ಪತ್ತಿಯಾಗಿದೆ. ನಮಗೆ ಜನ್ಮ ನೀಡುವ, ಹಾಗೂ ಶಕ್ತಿಯೇ ನಮ್ಮ ಪಾಲನೆ ಪೋಷಣೆ ಮಾಡುವವಳಾಗಿದ್ದಾಳೆ. ಶಕ್ತಿ ಇಲ್ಲದೆ ನಾವು ಏನೂ ಇಲ್ಲ. ಶಕ್ತಿ ಇಲ್ಲದೆ ನಾವು ಶವವಾಗುತ್ತೇವೆ. ಈ ಸೃಷ್ಟಿಯಲ್ಲಿ ಅಸುರರಿಗೆ ಮದವೇರಿದ ಸಮಯ ದಲ್ಲೆಲ್ಲ್ಲ ಈ ಆದಿಶಕ್ತಿ ಭಗವತಿಯು ಭಕ್ತರ ರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಎತ್ತಿಕೊಂಡಿದ್ದಾಳೆ ಮತ್ತು ಅಧರ್ಮೀ ದೈತ್ಯರ ನಾಶ ಮಾಡಿದ್ದಾಳೆ. ಕಷ್ಟದ ಸಮಯದಲ್ಲಿ ದೇವಿಗೆ ಶರಣಾಗುವುದೊಂದೇ ಪರ್ಯಾಯವಾಗಿದೆ. ಈ ಸೃಷ್ಟಿಯ ಚರಾಚಾರದಲ್ಲಿ ವಾಸ ಮಾಡುವ ಶಕ್ತಿಗೆ ನಾವು ಶರಣಾಗಬೇಕು ಮತ್ತು ಆಕೆಯಿಂದ ನಮ್ಮನ್ನು ದೂರಗೊಳಿಸುವ ನಮ್ಮಲ್ಲಿನ ದೋಷಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಾವು ಆ ದೇವಿಯಲ್ಲಿ ಬೇಡಬೇಕು.
ನವರಾತ್ರಿಯಲ್ಲಿ ೯ ದಿನ ಉಪಾಸಕರ(ಭಕ್ತರ) ದೇಹ, ಮನಸ್ಸು, ಬುದ್ಧಿ ಇವುಗಳ ಮೇಲೆ ಚೈತನ್ಯದ ಪ್ರಭಾವ ಬೀರುತ್ತದೆ. ಮೊದಲು ದಿನ ಶೈಲಪುತ್ರಿ ದೇವಿಯ ಉಪಾಸನೆಯಿಂದ ಸಾಧನೆಯ ಹಂತದಲ್ಲಿ ದೇಹದ ಮೊದಲ ಸೂಕ್ಷ್ಮ ಚಕ್ರ ಎಂದರೆ ಮೂಲಾಧಾರದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ಎಂದರೆ ಸ್ವಾದಿಷ್ಟಾನ ಚಕ್ರದ ಮೇಲೆ ಗಮನ ಕೇಂದ್ರಿತ ಮಾಡಲಾಗುತ್ತದೆ. ಮೂರನೆಯ ದಿನ ನಮ್ಮ ಸಾಧನೆ ಮಣಿಪುರ ಚಕ್ರದ ಕಡೆಗೆ ಪ್ರವಾಹಿತವಾಗಿ ಆ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡಲಾಗುತ್ತದೆ. ನಾಲ್ಕನೆಯ ದಿನ ಕೂಷ್ಮಾಂಡಾದೇವಿಯ ಪೂಜೆ ಮಾಡಿದಾಗ ಉಪಾಸಕನ ಉರ್ಜೆ ಅನಾಹತ ಚಕ್ರದ ಕಡೆಗೆ ಪ್ರವಾಹಿತವಾಗುತ್ತದೆ. ಐದನೆಯ ದಿನ ಸ್ಕಂದಮಾತೆಯ ಉಪಾಸನೆಯಿಂದ ಮನಸ್ಸಿನ ಊರ್ಜೆ ವಿಶುದ್ಧ ಚಕ್ರದ ಕಡೆಗೆ ಪ್ರವಾಹಿತವಾಗುತ್ತದೆ. ಆರನೆಯ ದಿನ ಕಾತ್ಯಾಯಿನಿ ದೇವಿಯ ಉಪಾಸನೆಯಿಂದ ಉಪಾಸಕನ ಊರ್ಜೆ ಆಜ್ಞಾಚಕ್ರದೆಡೆಗೆ ಬರುತ್ತದೆ. ಸಪ್ತಮಿಯಂದು ಕಾಲರಾತ್ರಿ ದೇವಿಯ ಉಪಾಸನೆಯಿಂದ ಮನಸ್ಸಿನ ಊರ್ಜೆ ಸಹಸ್ರಾರ ಚಕ್ರದ ಕಡೆಗೆ ಬರುತ್ತದೆ. ಎಂಟನೆಯ ದಿನ ಮಹಾಗೌರಿ ದೇವಿಯ ಉಪಾಸನೆಯಿಂದ, ದೇವಿಯು ತನ್ನ ಉಪಾಸಕರ ಸಂಪೂರ್ಣ ಅಂತರ್ಬಾಹ್ಯ ಶುದ್ಧಿ ಮಾಡಿಸಿ ಕೊಳ್ಳುತ್ತಾಳೆ. ಒಂಬತ್ತನೆಯ ದಿನ ಸಿದ್ದಿಧಾತ್ರಿ ದೇವಿಯ ಉಪಾಸನೆಯಿಂದ ದೇವಿಯು ಭಕ್ತರ ಎಲ್ಲಾ ಇಚ್ಛೆಗಳನ್ನು ಪೂರ್ಣಗೊಳಿಸಿ, ಅವರ ಮನಸ್ಸಿನ ಸಂದೇಹ ನಿವಾರಿಸಿ ಅವರಿಗೆ ಸಾಧನೆಗೆ ಶಕ್ತಿ ನೀಡುತ್ತಾಳೆ. ಉಪಾಸಕನ ೯ ದಿನಗಳ ಭಾವಪೂರ್ಣ ಸಾಧನೆಯಿಂದ ಪ್ರಸನ್ನಳಾಗಿ, ದೇವಿ ಭಕ್ತರಿಗೆ ಶಕ್ತಿ ನೀಡುತ್ತಾಳೆ. ಉಪಾಸನೆ ಅಥವಾ ಸಾಧನೆ ಮಾಡಲು ದೋಷ ಮತ್ತು ಅಹಂ ನಿವಾರಣೆಗೆ ಪ್ರೇರಣೆ ನೀಡುವ ವಿಜಯದಶಮಿಯ ಹಬ್ಬ ಕೊನೆಗೆ ಬರುತ್ತದೆ. ನವರಾತ್ರಿಯ ಈ ಆಧ್ಯಾತ್ಮಿಕ ಮಹತ್ವ ತಿಳಿದುಕೊಂಡರೆ ದೇವಿಯ ಕುರಿತಾದ ಭಾವ ಹೆಚ್ಚಾಗಿ ನಾವು ಆಕೆಯನ್ನು ಹೆಚ್ಚು ಶ್ರದ್ಧೆಯಿಂದ ಉಪಾಸನೆ ಮಾಡಬಹುದು.
– ಶ್ರೀ. ಜಯೇಶ ಬೋರಸೆ, ಪುಣೆ