ಕಾತ್ಯಾಯನಿ
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನಿ ಶುಭಂ ದ್ಯಾದೇವಿ ದಾನವಘಾತಿನಿ ||
ಅರ್ಥ : ಚಂದ್ರನಂತೆ ತೇಜಸ್ವಿ, ಸಿಂಹದ ಮೇಲೆ ಆರೂಢಳಾಗಿರುವ ಮತ್ತು ದಾನವರನ್ನು ನಾಶಮಾಡುವ ದೇವಿ ಕಾತ್ಯಾಯನಿಯು ನಮ್ಮ ಕಲ್ಯಾಣವನ್ನು ಮಾಡಲಿ ಆಶ್ವಯುಜ ಶುಕ್ಲ ಷಷ್ಠಿಯು ನವರಾತ್ರಿಯ ಆರನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಆರನೇಯ ರೂಪದ ಅಂದರೆ ಕಾತ್ಯಾಯನಿ ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಈ ದೇವಿಯ ಉಪಾಸಕನಿಗೆ ತಕ್ಷಣವೇ ಫಲ ಸಿಗುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳು ಇವಳ ಸಾಧನೆಯಿಂದ ಪ್ರಾಪ್ತಿ ಆಗುತ್ತವೆ. ಮಹರ್ಷಿ ಕಾತ್ಯಾಯನರ ಕನ್ಯೆಯಾಗಿರುವುದರಿಂದ ಕಾತ್ಯಾಯನಿ. ಇವಳು ಆಶ್ವಯುಜ ಶುಕ್ಲ ದಶಮಿಯಂದು ಮಹಿಷಾಸುರನನ್ನು ವಧಿಸಿದಳು. ಸುವರ್ಣದಂತಹ ತೇಜಸ್ವಿ ಕಾಂತಿಯಿರುವ ಈ ದೇವಿಯು ಚತುರ್ಭುಜಳಾಗಿದ್ದು, ಇವಳ ಕೈಯಲ್ಲಿ ಖಡ್ಗ ಮತ್ತು ಕಮಲ, ಇನ್ನುಳಿದ ಎರಡು ಕೈಗಳು ಅಭಯಮುದ್ರೆ ಮತ್ತು ವರವನ್ನು ನೀಡುವ ಮುದ್ರೆಯಲ್ಲಿವೆ.