ನವರಾತ್ರಿಯ ಏಳನೇ ದಿನ

ಕಾಲರಾತ್ರಿ

ಏಕವೇಣಿ ಜಪಾಕರ್ಣಪೂರಾ ನಗ್ನಾ ಖರಸ್ಥಿತಾ |

ಲಂಬೋಷ್ಠಿ ಕರ್ಣಿಕಾಕರ್ಣಿ ತೈಲಾಭ್ಯಕ್ತಶರೀರಿಣಿ ||

ವಾಮಪಾದೋಲ್ಲಸಲ್ಲೋಹ ಲತಾಕಂಟಕಭೂಷಣಾ |

ವರ್ಧನಮೂರ್ಧಧ್ವಜಾ ಕೃಷ್ಣ ಕಾಲರಾತ್ರಿರ್ಭಯಂಕರಿ ||

ಅರ್ಥ : ಕೂದಲುಗಳನ್ನು ಸ್ವಚ್ಛಂದವಾಗಿ ಬಿಟ್ಟಿರುವ, ಕಿವಿಗಳಲ್ಲಿ ಆಭರಣಗಳನ್ನು ಧರಿಸಿರುವ, ನಗ್ನಳಾಗಿರುವ, ಕತ್ತೆಯ ಮೇಲೆ ಆರೂಢಳಾಗಿರುವ, ಉದ್ದನೆಯ ನಾಲಿಗೆ ಮತ್ತು ಕಿವಿಗಳಿರುವ, ಎಣ್ಣೆಯನ್ನು ತೀಡಿ ಹೊಳೆಯುತ್ತಿರುವ ಶರೀರವಿರುವ, ಎಡಗಾಲಿನಲ್ಲಿ ವಿದ್ಯುತ್ತಿನಂತೆ(ಮಿಂಚುಗಳ) ಮುಳ್ಳುಗಳ ಆಭರಣವನ್ನು ಧರಿಸಿರುವ ಕೈಯಲ್ಲಿ ಧ್ವಜ(ಅಭಯಮುದ್ರೆ)ವನ್ನು ಹಿಡಿದಿರುವ, ಭಯಂಕರ ಕಾಲ ರಾತ್ರಿಯಂತೆ ಕಪ್ಪುಬಣ್ಣವಿರುವ ದೇವಿಯು ಕಾಲರಾತ್ರಿಯ ರೂಪವಾಗಿದ್ದಾಳೆ.

ಆಶ್ವಯುಜ ಶುಕ್ಲ ಸಪ್ತಮಿಯು ನವರಾತ್ರಿಯ ಏಳನೇಯ ದಿನ. ಈ ದಿನ ದುರ್ಗೆಯ ಏಳನೇಯ ರೂಪದ ಅಂದರೆ ಕಾಲರಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಶುಭಫಲವನ್ನು ನೀಡುತ್ತಾಳೆ ಮತ್ತು ಅನಿಷ್ಟ ಗ್ರಹಪೀಡೆ ಯನ್ನು ದೂರ ಮಾಡುತ್ತಾಳೆ.