ನವರಾತ್ರ್ಯುತ್ಸವದಲ್ಲಿನ ಅಯೋಗ್ಯ ಪದ್ಧತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯತೆಯನ್ನು ಕಾಪಾಡಿ !

ಹಿಂದೆ ‘ಗರಬಾ ನೃತ್ಯದ ಸಮಯದಲ್ಲಿ ದೇವಿಯ, ಕೃಷ್ಣಲೀಲೆಯ ಮತ್ತು ಸಂತರು ರಚಿಸಿದ ಗೀತೆಗಳನ್ನು ಹೇಳಲಾಗುತ್ತಿತ್ತು. ಇಂದು ಭಗವಂತನ ಈ ಸಾಮೂಹಿಕ ನೃತ್ಯೋಪಾಸನೆಗೆ ವಿಕೃತ ಸ್ವರೂಪವು ಬಂದಿದೆ. ಚಲನಚಿತ್ರಗಳಲ್ಲಿನ ಹಾಡುಗಳ ತಾಳದಲ್ಲಿ ಅಶ್ಲೀಲ ಹಾವಭಾವ ಮಾಡಿ ಗರಬಾವನ್ನು ಆಡಲಾಗುತ್ತದೆ. ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸುವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಸನಾತನವು ಕೆಲವು ವರ್ಷಗಳಿಂದ ಈ ಅಯೋಗ್ಯ ಪದ್ಧತಿಗಳ ವಿರುದ್ಧ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿದೆ. ಇದರಲ್ಲಿ ನೀವೂ ಸಹಭಾಗಿಯಾಗಿ !

ಕವಚಪಠಣ

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರು ತ್ತವೆ. ಸ್ಥೂಲ ಕವಚಗಳು ತುಪಾಕಿಯ (ಬಂದೂಕಿನ)ಗುಂಡುಗಳಂತಹ ಸ್ಥೂಲ ಆಯುಧಗಳಿಂದ ರಕ್ಷಿಸುತ್ತವೆ, ಆದರೆ ಸೂಕ್ಷ್ಮ ಕವಚಗಳು ಸ್ಥೂಲ ಹಾಗೂ ಭೂತ, ಮಾಟದಂತಹ ಸೂಕ್ಷ್ಮ ಕೆಟ್ಟ ಶಕ್ತಿಗಳಿಂದ ರಕ್ಷಿಸು ತ್ತವೆ. ದುರ್ಗಾಕವಚ, ಲಕ್ಷ್ಮೀಕವಚ, ಮಹಾಕಾಲಿಕವಚ ಮುಂತಾದವುಗಳ ಪಠಣದಿಂದ ಶತ್ರು ಹಾಗೂ ಭೂತಬಾಧೆ, ಮಾಟದಂತಹ ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ.

 

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.