ದಸರಾ ಬರುವ ಮೊದಲು ನಾವು ನವರಾತ್ರಿ ಉತ್ಸವವನ್ನು ಆಚರಿಸುತ್ತೇವೆ. ನವರಾತ್ರಿಯಲ್ಲಿ ಶಕ್ತಿಯ ಉಪಾಸನೆ ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ಮಹಾಭಾರತದ ಮಹಾಯುದ್ಧ ಆರಂಭವಾಗುವ ಮೊದಲು ಶ್ರೀ ದುರ್ಗಾದೇವಿಯ ಉಪಾಸನೆ ಮಾಡಲು ಹೇಳಿದ್ದನು. ಶಕ್ತಿಯ ಉಪಾಸನೆ ಮಾಡದ ಹೊರತು ನಮಗೆ ಸಮಾಜದಲ್ಲಿನ ರಾಕ್ಷಸ ಪ್ರವೃತ್ತಿಗಳನ್ನು ನಾಶಮಾಡಲು ಸಾಧ್ಯವಾಗುವುದಿಲ್ಲ. ಮಹಿಷಾಸುರನನ್ನು ಕೊಲ್ಲಲು ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಆದಿದೇವತೆಗಳ ಶಕ್ತಿಯು ದುರ್ಗಾಮಾತೆಯ ರೂಪದಲ್ಲಿ ಅವತರಿಸಿತು. ಅಸುರಿ ವೃತ್ತಿಯ ಮೇಲೆ ವಿಜಯಗೊಳಿಸಲು ದೈವೀ ಶಕ್ತಿಯ ಕೃಪೆಯನ್ನು ಪಡೆಯಬೇಕಾಗುತ್ತದೆ. ಈ ಕೃಪೆಯನ್ನು ಸಂಪಾದಿಸಲು ಭಕ್ತಿ ಉಪಯುಕ್ತವಾಗಿದೆ. ಈ ರೀತಿ ಶಕ್ತಿ ದೊರಕಲು ಭಕ್ತಿಭಾವದಿಂದ ೯ ದಿನಗಳವರೆಗೆ ಮಾಡಿದ ಆರಾಧನೆಯ ಫಲಶೃತಿ ಎಂದು ೧೦ ನೇ ದಿನದ ‘ವಿಜಯದಶಮಿ’. ಅರ್ಥಾತ್ ಈ ಶಕ್ತಿ ಉಪಾಸನೆಯು ಕೇವಲ ೯ ದಿನಗಳಿಗೆ ಸೀಮಿತವಿಲ್ಲ, ಎಂಬುದು ಅಷ್ಟೇ ಸತ್ಯವಾಗಿದೆ. ಅದಕ್ಕಾಗಿ ೯ ದಿನಗಳ ಅಸಂಖ್ಯ ನವರಾತ್ರಿಗಳ ಜಾಗರಣೆ ಮಾಡಬೇಕಾಗುತ್ತದೆ. ಇಂತಹ ಅನಂತ ನವರಾತ್ರಿಗಳಲ್ಲಿ ಮಾನವಿ ಸಮಾಜದಲ್ಲಿ ಸಂಸ್ಕೃತಿ ಮತ್ತು ರಾಷ್ಟ್ರದ ಬಗೆಗಿನ ನಿಷ್ಠೆಯನ್ನು ನಿರ್ಮಾಣಮಾಡಲು ನಿದ್ರಿಸ್ತ ಸಮಾಜವನ್ನು ಎಚ್ಚರಗೊಳಿಸಬೇಕು.
೧. ದುರ್ಗುಣಗಳ ನಾಶಕ್ಕಾಗಿ ಭಕ್ತಿ ಮತ್ತು ಶಕ್ತಿಯ ಉಪಾಸನೆ !
ಮಾನವಿ ಸಮಾಜಕ್ಕೆ ಉಪದ್ರವನ್ನು ಕೊಡುವ ಅಸುರಿ ಸಮಾಜವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಕಾಲಕಾಲಕ್ಕೆ ಇಂತಹ ಅಸುರಿ ವೃತ್ತಿಯ ಸಮಾಜವು ಮಾನವೀ ಸಮಾಜಕ್ಕೆ ತುಂಬಾ ತೊಂದರೆಗಳನ್ನು ಕೊಟ್ಟಿದೆ. ಅಸುರರಲ್ಲಿ ಪ್ರಚಂಡ ಶಕ್ತಿ ಇರುತ್ತದೆ, ಅಷ್ಟೊಂದು ಶಕ್ತಿ ಮಾನವೀ ಸಮಾಜದಲ್ಲಿ ಕಂಡುಬರುವುದಿಲ್ಲ; ಆದ್ದರಿಂದ ಮನುಷ್ಯನಿಗೆ ಈ ಅಸುರಿ ವೃತ್ತಿಯನ್ನು ನಾಶಮಾಡಲು ದೈವೀ ಶಕ್ತಿಯ ಸಹಾಯವನ್ನು ಪಡೆಯಬೇಕಾಗುತ್ತದೆ. ಶೌರ್ಯ, ಪೌರುಷತ್ವ ಮತ್ತು ಪರಾಕ್ರಮದ ಆವಶ್ಯಕತೆ ಇದೆ. ಕೇವಲ ಸದ್ವಿಚಾರಗಳಿಂದ ಅಸುರಿ ವೃತ್ತಿಗಳು ನಾಶವಾಗುವುದಿಲ್ಲ ಮತ್ತು ನಾಶಗೊಳಿಸಲು ಸಾಧ್ಯವೂ ಇಲ್ಲ. ಆದ್ದರಿಂದ ಯಾವಾಗ ಅಸುರರ ಪ್ರಾಬಲ್ಯ ಹೆಚ್ಚಾಗುತ್ತದೆಯೋ, ಆಗ ಆಲಸ್ಯವನ್ನು ದೂರಗೊಳಿಸಿ ನಮ್ಮಲ್ಲಿನ ದುರ್ಗುಣಗಳನ್ನು ನಾಶಮಾಡಿ ಶಕ್ತಿಯುತರಾಗಬೇಕಾಗುತ್ತದೆ. ಅದಕ್ಕಾಗಿ ಅಸಂಖ್ಯ ನವರಾತ್ರಿಗಳಲ್ಲಿ ಜಾಗರಣೆ ಮಾಡಬೇಕಾಗುತ್ತದೆ. ಭಕ್ತಿ ಮತ್ತು ಶಕ್ತಿಯ ಅವಿರತ ಉಪಾಸನೆಯನ್ನು ಮಾಡಬೇಕಾಗುತ್ತದೆ, ಆಗ ಸಂಘಶಕ್ತಿ ನಿರ್ಮಾಣವಾಗುತ್ತದೆ. ಇಂತಹ ಸಂಘಶಕ್ತಿಯು ನಿರ್ಮಾಣ ಆಗದಹೊರತು ಕ್ರೌರ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಶಾಂತಿ, ಸುವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ.
೨. ಸಜ್ಜನರ ರಕ್ಷಣೆ ಮತ್ತು ದುಷ್ಟ ಪ್ರವೃತ್ತಿಗಳ ಉಪದ್ರವವನ್ನು ತಡೆಗಟ್ಟಲು ಶಕ್ತಿಯ ಉಪಾಸನೆ !
ಪುರಾಣ ಕಾಲದಲ್ಲಿನ ಎಲ್ಲ ಘಟನೆಗಳ ಕಡೆಗೆ ನಾವು ಗಮನ ಹರಿಸಿದರೆ ನಮಗೆ ನಿರ್ದಿಷ್ಟವಾಗಿ ಒಂದು ವಿಷಯ ಅರಿವಾಗುತ್ತದೆ ಅದೇನೆಂದರೆ, ಸಜ್ಜನ ಸಮಾಜವು ಸತತವಾಗಿ ದುಷ್ಟ ಶಕ್ತಿಗಳೊಂದಿಗೆ ಹೋರಾಡಬೇಕಾಗುತ್ತದೆ ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ. ನಮಗೆ ಇದೊಂದು ಸೃಷ್ಟಿಯ ಕ್ರಮವೇ ಆಗಿರುವುದು ಅರಿವಾಗುತ್ತದೆ. ಯಾವಾಗ ಮಾನವನ ಸಮಾಜವು ದುರ್ಬಲವಾಗುತ್ತದೆಯೋ, ಆ ಸಮಯದಲ್ಲಿ ದುಷ್ಟ ಶಕ್ತಿಗಳು ದುರ್ಬಲವಾಗಿರುವ ಮಾನವೀ ಸಮಾಜವನ್ನು ನಾಶಗೊಳಿಸಲು ಮುಂದಾಗುತ್ತವೆ. ಆದ್ದರಿಂದ ಮಾನವೀ ಸಮಾಜದ ಅಂದರೆ ಸಜ್ಜನರ ರಕ್ಷಣೆಗಾಗಿ ಶಕ್ತಿ ಉಪಾಸನೆಯನ್ನು ಮಾಡಲೇ ಬೇಕಾಗುತ್ತದೆ ಮತ್ತು ಅವಳ ಸಹಾಯವನ್ನು ಪಡೆಯಲೇಬೇಕಾಗುತ್ತದೆ.
ಈಗಲೂ ನಮಗೆ ದುಷ್ಟ, ದುರ್ಜನ ಪ್ರವೃತ್ತಿಗಳಿಂದ ಉಪದ್ರವ ಆಗುತ್ತಿದೆ. ಅವುಗಳನ್ನು ಪರಿಹರಿಸಲು, ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ನಮಗೆ ವೈಚಾರಿಕ, ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಹೀಗೆ ಎಲ್ಲ ರೀತಿಯ ಬಲ ಮತ್ತು ಶಕ್ತಿಯನ್ನು ಪಡೆದುಕೊಳ್ಳಬೇಕಾಗುವುದು. ರಾಷ್ಟ್ರರಕ್ಷಣೆಗಾಗಿ ಮತ್ತು ದುಷ್ಟಪ್ರವೃತ್ತಿಗಳನ್ನು ನಾಶಮಾಡಲು ಈ ಶಕ್ತಿಗಳನ್ನು ಬಳಸಬೇಕಾಗಿದೆ.
೩. ನವರಾತ್ರಿ ಮತ್ತು ವಿಜಯದಶಮಿ ಈ ಎರಡು ಮಹಾನ ಹಬ್ಬಗಳ ಮಹತ್ವ !
ಹಿಂದೂ ಸಂಸ್ಕೃತಿಯು ಈ ಎಲ್ಲ ವಿಷಯಗಳ ಅರಿವು ಮಾಡಿಕೊಡಲು ನವರಾತ್ರಿ ಉತ್ಸವ ಮತ್ತು ನಂತರ ಬರುವ ದಸರಾ ಈ ಎರಡು ಮಹಾನ ಹಬ್ಬಗಳ ಮಹತ್ವವನ್ನು ತಿಳಿಸಿ ಹೇಳುತ್ತಿದೆ. ಎಲ್ಲಿ ಯೋಗೇಶ್ವರ ಶ್ರೀಕೃಷ್ಣ ಮತ್ತು ಧನುರ್ಧಾರಿ ಪಾರ್ಥನಿರುವನೋ, ಅಲ್ಲಿ ವಿಜಯ, ಲಕ್ಷ್ಮಿ, ಕಲ್ಯಾಣ ಮತ್ತು ಶಾಶ್ವತ ಶಾಂತಿಯ ಲಾಭವಾಗುತ್ತದೆ. ಯೋಗೇಶ್ವರ ಶ್ರೀಕೃಷ್ಣನೆಂದರೆ ಭಗವಂತನ ಕೃಪೆ ಮತ್ತು ಧನುರ್ಧರ ಪಾರ್ಥನೆಂದರೆ ಮಾನವನ ಪ್ರಯತ್ನಗಳು ! ಈಶ್ವರನ ಕೃಪೆಯ ಹೊರತು ಮಾನವನ ಪ್ರಯತ್ನಗಳಿಗೆ ಯಶಸ್ಸು ದೊರಕುವುದಿಲ್ಲ. ಈ ಸಿದ್ಧಾಂತವನ್ನು ಹಿಂದೂ ಸಂಸ್ಕೃತಿಯು ನಮ್ಮ ಮನಸ್ಸು ಮತ್ತು ಚಿತ್ತದ ಮೇಲೆ ಮೂಡಿಸಲೆಂದೇ ನವರಾತ್ರಿ ಮತ್ತು ವಿಜಯದಶಮಿ ಈ ಎರಡು ಉತ್ಸವಗಳು ಒಟ್ಟಿಗೆ ಬರುತ್ತವೆ.
೪. ಆಡಳಿತಾರೂಢರು ಶಸ್ತ್ರಾಚಾರದ ಆಧಾರ ತೆಗೆದುಕೊಳ್ಳುವುದು ಆವಶ್ಯಕ !
ಹಿಂದೂ ಸಂಸ್ಕೃತಿಯು ವೀರತ್ವವನ್ನು ಶ್ರೇಷ್ಠವೆಂದು ಪರಿಗಣಿಸಿದೆ. ಈ ವೀರತ್ವವನ್ನು, ಈ ಶೌರ್ಯವನ್ನು ಉನ್ನತ ಮತ್ತು ಉದಾತ್ತ ಮೌಲ್ಯವನ್ನು ಉಳಿಸಿಕೊಳ್ಳಲು ಮಾತ್ರ ಬಳಸಬೇಕಾಗಿದೆ. ನ್ಯಾಯ, ನೈತಿಕತೆ ಮತ್ತು ಸತ್ಯವನ್ನು ರಕ್ಷಣೆ ಮಾಡಲೆಂದೇ ಶಸ್ತ್ರಾಚಾರಕ್ಕೆ ಅನುಮತಿಯನ್ನು ನೀಡಲಾಗಿದೆ. ನಮ್ಮ ಇತಿಹಾಸದಲ್ಲಿ ಸಮಾಜದಲ್ಲಿನ ಅರಾಜಕತೆಯನ್ನು ನಾಶಗೊಳಿಸಿ ಶಾಂತಿ ಮತ್ತು ಸಮೃದ್ಧಿಯನ್ನು ನಿರ್ಮಾಣಗೊಳಿಸಲು ದುಷ್ಟರನ್ನು ನಿರ್ಮೂಲನೆಗೊಳಿಸಲು ರಾಜ್ಯಕರ್ತರು ಶಸ್ತ್ರಾಸ್ತ್ರಗಳ ಸಹಾಯವನ್ನು ಪಡೆದಿರುವ ಸಾಕ್ಷಿಗಳಿವೆ. ಪ್ರತಿಯೊಂದು ರಾಷ್ಟ್ರವೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಶಸ್ತ್ರ ಪಡೆಯನ್ನು ತಯಾರಿಸುತ್ತದೆ. ನಿಸರ್ಗವು ಪ್ರಾಣಿಗಳಿಗೂ ಅವುಗಳ ರಕ್ಷಣೆಗಾಗಿ ವಿವಿಧ ರೀತಿಯಲ್ಲಿ ದೈಹಿಕ ಸಾಮರ್ಥ್ಯಗಳನ್ನು ನೀಡಿದೆ. ಆತ್ಮರಕ್ಷಣೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮನುಷ್ಯನ ಸಹಜ ಹಕ್ಕು ಇದೆ. ಈ ಅಧಿಕಾರವನ್ನು ನಡೆಸಲು ಹಿಂದೂ ಸಂಸ್ಕೃತಿಯು ಶಕ್ತಿಯ ಉಪಾಸನೆಯ ಸಂಸ್ಕಾರ ಮಾಡಿದೆ.
೫. ಶಕ್ತಿ ಸಾಧನೆಯನ್ನು ನಿರಂತರವಾಗಿ ಮುಂದುವರಿಸುವ ಹಿಂದಿನ ಕಾರಣ
ನಮಗೆ ಶಕ್ತಿ ದೊರಕಿದ ನಂತರ ಬುದ್ಧಿ ಭ್ರಷ್ಟವಾಗುವ ಸಾಧ್ಯತೆ ಇರುತ್ತದೆ. ನಮ್ಮ ಬುದ್ಧಿ ಭ್ರಷ್ಟವಾಗಬಾರದು ಎಂದು ಭಗವಂತನ ಬಳಿ ಸದ್ಬುದ್ಧಿಯನ್ನು ಬೇಡಬೇಕು. ಆತ್ಮೀಯತೆ, ವಾತ್ಸಲ್ಯ, ಮಾನವೀಯತೆ, ಶ್ರದ್ಧೆ, ಗೌರವ, ಸದ್ಭಾವನೆ ಮತ್ತು ಇಂತಹ ಅನಂತ ವಿಷಯಗಳನ್ನು ಅಂಗೀಕರಿಸಬೇಕಾಗುತ್ತದೆ. ಇಲ್ಲದಿದ್ದರೆ ದ್ವೇಷ, ಮತ್ಸರ ಹೆಚ್ಚಾಗಿ ಎಲ್ಲ ಸುಟ್ಟು ಬೂದಿಯಾಗಬಹದು, ಇದರ ಅರಿವನ್ನಿಟ್ಟುಕೊಂಡು ನಾವು ಇರುವುದು ಆವಶ್ಯಕ.
ನಮ್ಮ ರಾಜ್ಯದಲ್ಲಿ ಶತ್ರು ನುಗ್ಗಿ ದಾಳಿಮಾಡಿದ ನಂತರ ಯುದ್ಧದ ಸಿದ್ಧತೆಯನ್ನು ಮಾಡಲು ಹಿಂದೂ ಸಂಸ್ಕೃತಿಯು ಹೇಳುವುದಿಲ್ಲ. ನಮ್ಮ ಸಂಸ್ಕೃತಿಯು ಶತ್ರುವಿನ ವರ್ತನೆ, ಅವನ ವೃತ್ತಿ, ಅವನ ಕೆಟ್ಟಕೆಲಸಗಳು ಗಮನದಲ್ಲಿ ಬಂದ ತಕ್ಷಣ ಅವನ ಮೇಲೆ ಒಮ್ಮಿಂದೊಮ್ಮೆಲೆ ದಾಳಿ ಮಾಡಿ ಅವನನ್ನು ತನ್ನ ಹಿಡಿತದಲ್ಲಿಡುವ ಸಂಸ್ಕಾರವನ್ನು ನಮ್ಮ ಮೇಲೆ ಮಾಡಿದೆ. ಸಮಯಕ್ಕೆ ಶತ್ರುವನ್ನು ನಮ್ಮ ಪಾದದ ಕೆಳಗೆ ಹತ್ತಿಕ್ಕದೆ, ನಾವು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಮತ್ತು ನಮ್ಮದೇ ಆದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರದಲ್ಲಿ ದುಷ್ಪ್ರವೃತ್ತಿ ನೆಲೆಸಿರುವಾಗ ದುಷ್ಟರನ್ನು ತೊಡೆದುಹಾಕಲು ತುಂಬಾ ಶ್ರಮಪಡಬೇಕಾಗುತ್ತದೆ. ಶಕ್ತಿ, ಧನ ಮತ್ತು ಸಮಯ ವ್ಯರ್ಥವಾಗುತ್ತದೆ. ಈ ಪರಿಸ್ಥಿತಿಯಿಂದ ರಾಷ್ಟ್ರವನ್ನು ಪಾರು ಮಾಡಲು ಶಕ್ತಿ ಸಾಧನೆಯನ್ನು ಮುಂದುವರಿಸಿರಿ’, ಎಂಬ ಸಂದೇಶವನ್ನು ಹಿಂದೂ ಸಂಸ್ಕೃತಿಯು ನಿರಂತರವಾಗಿ ನಮಗೆ ನೀಡುತ್ತಿದೆ. ಅದಕ್ಕಾಗಿಯೇ ಪ್ರತಿವರ್ಷ ನವರಾತ್ರಿ ಉತ್ಸವ, ಶಾರದಾ ಉತ್ಸವವನ್ನು ಆಚರಿಸುವ ಪರಂಪರೆ ನಮ್ಮಲ್ಲಿದೆ.
೬. ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಗಾಗಿ ರಾಷ್ಟ್ರವು ಜೀವಂತವಾಗಿರಬೇಕು !
ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ, ಆರ್ಯ ಚಾಣಕ್ಯ, ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ತಮ್ಮ ಕಾಲದಲ್ಲಿನ ದುಷ್ಪ್ರವೃತ್ತಿಗಳನ್ನು ನಾಶಗೊಳಿಸಿದರು. ನಾವೂ ನಮ್ಮ ಕಾಲದ ದುಷ್ಪ್ರವೃತ್ತಿಗಳನ್ನು ನ್ಯಾಯಸಮ್ಮತ ಮಾರ್ಗದಿಂದ ಪರಿಹರಿಸಬೇಕು. ಅದನ್ನು ಜಯಿಸಬೇಕು. ನಮ್ಮ ಅಸ್ತಿತ್ವ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಸ್ವಾತಂತ್ರ್ಯ ಮತ್ತು ಅಸ್ತಿತ್ವವು ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ರಾಷ್ಟ್ರವು ಜೀವಂತವಾಗಿರುವುದು. ಜೀವಂತ ರಾಷ್ಟ್ರವೇ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆ ಮಾಡಬಲ್ಲದು. ಮೇಲೆ ಹೇಳಿದಂತೆ ಎಲ್ಲ ಮಹಾಪುರುಷರು ಮತ್ತು ಅವತಾರೀ ಪುರುಷರು ತಮ್ಮ ಕೃತಿಯಿಂದ ಈ ಬೋಧನೆಯನ್ನು ನಮಗೆ ನೀಡಿದ್ದಾರೆ.
೭. ಸಾಹಸದ / ಶೌರ್ಯದ ಪೂಜೆಯನ್ನು ಮಾಡಿ ರಾಷ್ಟ್ರ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದು, ಇದೇ ಜೀವನದ ಧ್ಯೇಯ !
ಶಕ್ತಿಯ ಉಪಾಸನೆಯನ್ನು ಮಾಡಿ ಪಡೆದಿರುವ ಸಾಮರ್ಥ್ಯ, ವೈಭವವನ್ನು ನಾವೊಬ್ಬರೇ ಉಪಭೋಗಿಸದೇ, ಅದರಿಂದ ಎಲ್ಲರಿಗೂ ಉಪಯೋಗ ಆಗಬೇಕು. ಸಮಾಜದಲ್ಲಿನ ದೀನತೆ, ಹೀನತೆ, ಅಸಹಾಯಕತೆ, ಭೋಗವೃತ್ತಿಯನ್ನು ನಾಶಗೊಳಿಸುವುದಕ್ಕಾಗಿ ನಾವು ಕಟಿಬದ್ಧರಾಗಬೇಕು. ಮನುಷ್ಯ ಮನುಷ್ಯರಲ್ಲಿನ ಭೇದವನ್ನು ನಾಶಗೊಳಿಸಬೇಕು. ಭೋಗವೃತ್ತಿಯನ್ನು ಸಂಹರಿಸಿ ಕರ್ತವ್ಯವೃತ್ತಿಯನ್ನು ಬದುಕಿಸಬೇಕು. ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಮತ್ತು ಅಹಂಕಾರ ಇವುಗಳ ಮೇಲೆಯೂ ಜಯ ಪಡೆಯಬೇಕು. ಅದಕ್ಕಾಗಿ ನಾವು ಕಟಿಬದ್ಧರಾಗಬೇಕು. ಶೌರ್ಯದ ಶೃಂಗಾರ / ಅಲಂಕಾರ ಮತ್ತು ಪರಾಕ್ರಮದ ಪೂಜೆಯನ್ನು ಮಾಡಿ ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆ ಇದೇ ಜೀವನದ ಧ್ಯೇಯವನ್ನು ಹಿಂದೂ ಸಂಸ್ಕೃತಿಯು ನಮ್ಮೆದುರಿಗೆ ಇಟ್ಟಿದೆ. ಅದರ ಪ್ರತೀಕವೆಂದು ಭಕ್ತಿ ಮತ್ತು ಶಕ್ತಿಯ ಹಬ್ಬವೆಂದರೆ ದಸರಾ ಹಬ್ಬವಾಗಿದೆ !
– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದೂ ಧರ್ಮದ ಉಪನ್ಯಾಸಕರು ಮತ್ತು ಲೇಖಕರು, ಡೊಂಬಿವಲಿ. (೨.೧೦.೨೦೨೩)