ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ಕಾಮಗಾರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಸ್ಥಗಿತ

ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರು ಮೂರ್ತಿಗಾಗಿ ಅಕ್ರಮವಾಗಿ ಸರಕಾರಿ ಭೂಮಿಯನ್ನು ನೀಡಿದ್ದಾರೆ ಎಂಬ ಆರೋಪ

ಬೆಂಗಳೂರು (ಕರ್ನಾಟಕ) – ಕರ್ನಾಟಕ ಉಚ್ಚನ್ಯಾಯಾಲಯವು ಬೆಂಗಳೂರಿನಿಂದ ೮೦ ಕಿ.ಮೀ ಅಂತರದಲ್ಲಿರುವ ಕಪಾಲಿಬೆಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ನಿರ್ಮಿತಿಯ ಕಾರ್ಯಕ್ಕೆ ಸ್ಥಗಿತಿಯನ್ನು ನೀಡಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಈ ಗ್ರಾಮದಲ್ಲಿ ‘ಮೂರ್ತಿಯ ಕೆಲಸವನ್ನು ಪುನರಾರಂಭಿಸಬಾರದು’, ಎಂದೂ ನ್ಯಾಯಾಲಯವು ತಿಳಿಸಿದೆ. ಈ ಸಂಬಂಧಿಸಿದಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿ ನ್ಯಾಯಾಲಯವು ಈ ಆದೇಶವನ್ನು ಜಾರಿಗೊಳಿಸಿದೆ. ಕರ್ನಾಟಕದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದಾಗ ಈ ಮೂರ್ತಿಯನ್ನು ಸ್ಥಾಪಿಸಲು ೧೫ ಎಕರೆ ಸರಕಾರಿ ಭೂಮಿಯನ್ನು ನೀಡಿದ್ದರು.

ಈ ಅರ್ಜಿಯಲ್ಲಿ, ಯೇಸುವಿನ ಮೂರ್ತಿಯನ್ನು ಸ್ಥಾಪಿಸಲು ಅಕ್ರಮವಾಗಿ ಸ್ಥಳವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇದಕ್ಕಾಗಿ ಇಬ್ಬರು ದೊಡ್ಡ ವ್ಯಕ್ತಿಗಳು ಮತ್ತು ಅವರ ಬೆಂಬಲಿಗರು ಸರಕಾರಿ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದಾರೆ. ಕನಕಪುರದಲ್ಲಿ ಕ್ರೈಸ್ತರ ಸಂಖ್ಯೆ ಕೇವಲ ೨ ಸಾವಿರ ಇದೆ. ಅದರಲ್ಲಿ ಒಂದೂವರೆ ಸಾವಿರ ಕ್ರೈಸ್ತರು ಹಾರ್ಬೋಲ್ ಮತ್ತು ನಲ್ಲಹಳ್ಳಿ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಯೇಸುವಿನ ಮೂರ್ತಿಯ ಅವಶ್ಯಕತೆ ಏನು?, ಎಂದೂ ಈ ಅರ್ಜಿಯಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ.