ಮಾಸ್ಕನ್ನು ಧರಿಸದೆ ತಿರುಗಾಡುವವರು ಸಾಮಾಜಿಕ ಅಪರಾಧಿಗಳಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಅಲಾಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ನ್ಯಾಯಾಲಯಕ್ಕೆ ಇದನ್ನು ಏಕೆ ಹೇಳಬೇಕಾಗುತ್ತದೆ ? ಸರ್ಕಾರ ಸ್ವತಃ ಏಕೆ ಮಾಡುವುದಿಲ್ಲ ? ‘ಮಾಸ್ಕ್ ಹಾಕದೇ ತಿರುಗಾಡುತ್ತಿರುವ ಅಶಿಸ್ತಿನ ನಾಗರಿಕರಿಗೆ ಕರೋನಾ ತಗಲಿದರೆ, ಅವರ ಮೇಲೆ ಚಿಕಿತ್ಸೆ ನೀಡಬಾರದು’, ಎಂದು ಒತ್ತಾಯಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !

ಪ್ರಯಾಗರಾಜ (ಉತ್ತರ ಪ್ರದೇಶ) – ರಾಜ್ಯದಲ್ಲಿ ಕರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯವು ಇದನ್ನು ಗಮನಿಸಿ ‘ಮನೆಯಿಂದ ಹೊರಡುವಾಗ ಮಾಸ್ಕ ಧರಿಸದೇ ಇರುವುದು ಕಂಡುಬಂದರೆ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ’ ಪೊಲೀಸರಿಗೆ ಆದೇಶಿಸಿದೆ. ರಾಜ್ಯದದಲ್ಲಿಯ ‘ಕ್ವಾರಂಟೈನ್ ಸೆಂಟರ‍್ಸ್’ನ ಪರಿಸ್ಥಿತಿ ಮತ್ತು ‘ಕೋವಿಡ್-೧೯’ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿತು.

೧. ನ್ಯಾಯಾಲಯವು, ಒಬ್ಬ ವ್ಯಕ್ತಿಯು ಮಾಸ್ಕ್ ಧರಿಸದಿದ್ದರೆ, ಅವನು ಇಡೀ ಸಮಾಜದ ಅಪರಾಧಿಯಾಗಿದ್ದಾನೆ. ಉತ್ತರ ಪ್ರದೇಶದ ಪ್ರತಿ ಪೊಲೀಸ್ ಠಾಣೆಯಲ್ಲಿ ಮಾಸ್ಕ್‌ಗಳನ್ನು ಧರಿಸದೆ ಅಲೆದಾಡುವವರ ವಿರುದ್ಧ ಪೊಲೀಸ್ ಕೃತಿ ಪಡೆಯು ದಂಡ ವಿಧಿಸಬೇಕು ಎಂದು ಹೆಳಿದೆ.

೨. ಮನೆಯಲ್ಲಿ ಪ್ರತ್ಯೇಕಿಕರಣವಾಗಿ ವಾಸಿಸುವ ರೋಗಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನ್ಯಾಯಾಲಯ ಆದೇಶಿಸಿದೆ. ಅಂತಹ ರೋಗಿಗಳಿಗೆ ಪ್ರತಿ ಜಿಲ್ಲೆಯಲ್ಲೂ ‘ಎಕ್ಸ-ರೆ’ ಮತ್ತು ‘ಸಿಟಿ ಸ್ಕ್ಯಾನ್’ಗೆ ಪ್ರತ್ಯೇಕ ಆಸ್ಪತ್ರೆಗಳು ಇರಬೇಕು, ಎಂದು ನ್ಯಾಯಾಲಯ ಹೇಳಿದೆ.