ತೆಲಂಗಾಣ ಉಚ್ಚ ನ್ಯಾಯಾಲಯವು ಮೊಹರಮ್‌ನ ಮೆರವಣಿಗೆಗೆ ಅನುಮತಿ ನಿರಾಕರಿಸಿದ ನಂತರ ಪೊಲೀಸರಿಂದ ದೊರಕಿತ್ತು ಅನುಮತಿ !

ಪೊಲೀಸರು ಶ್ರೀ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಮಾತ್ರ ನಿರ್ಬಂಧ ಹೇರಿದ್ದರು

  • ಪೊಲೀಸರಿಂದಲೇ ಕಾನೂನುದ್ರೋಹ ! ಇಂತಹ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡುವರು ?
  • ಅಲ್ಪಸಂಖ್ಯಾತರ ಓಲೈಕೆಯನ್ನು ಮಾಡುವ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರವಿರುವ ತೆಲಂಗಾಣದ ಪೊಲೀಸರಿಂದ ಇದಕ್ಕಿಂತ ಇನ್ನೇನು ಬಯಸಬಹುದು ? ಭಾಗ್ಯನಗರ ಪೊಲೀಸರ ವಿರುದ್ಧ ನ್ಯಾಯಾಲಯದ ಆದೇಶದ ಅವಮಾನ ಮಾಡಿರುವ ಬಗ್ಗೆ ಅರ್ಜಿ ಸಲ್ಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕಾನೂನುಪ್ರೇಮಿ ನಾಗರಿಕರು ಪ್ರಯತ್ನಿಸಬೇಕಿದೆ !

ಭಾಗ್ಯನಗರ (ತೆಲಂಗಾಣ) – ಕಳೆದ ವಾರ ಇಲ್ಲಿಯ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ನೂರಾರು ಜನರು ಮೊಹರಮ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಅನೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ, ಅದೇರೀತಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ. ಅವರು ಹಳೆ ಭಾಗ್ಯನಗರದಲ್ಲಿ ‘ಬಾಬಿ ಕಾ ಆಲಮ್’ ಮೆರವಣಿಗೆಯನ್ನು ಮಾಡಿದರು. ಈ ಮೆರವಣಿಗೆಯು ಮುಸಲ್ಮಾನ ಬಹುಸಂಖ್ಯಾತವಿರುವ ಚಾರಮಿನಾರ, ಗುಲಜಾರ ಹುಜ್, ಪುರಾನಿ ಹವೇಲಿ ಹಾಗೂ ದಾರುಶಿಫಾದಿಂದ ಸಾಗಿ ಚರ್ಮಘಾಟನಲ್ಲಿ ಮುಕ್ತಾಯವಾಯಿತು. ತೆಲಂಗಾಣ ಉಚ್ಚ ನ್ಯಾಯಾಲಯವು ಕೊರೋನಾ ವಿಪತ್ತಿನಿಂದಾಗಿ ಮೊಹರಮ್‌ನ ದಿನ ಹಳೆಯ ಭಾಗ್ಯನಗರದಲ್ಲಿ ಮೆರವಣಿಗೆಯನ್ನು ತೆಗೆಯುವ ಅನುಮತಿಯನ್ನು ನೀಡಿರಲಿಲ್ಲ. ಅದೇರೀತಿ ‘ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಇದರ ಬಗ್ಗೆ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಹೇಳಲಾಗಿತ್ತು. ಆದರೆ ಪ್ರತ್ಯಕ್ಷದಲ್ಲಿ ಪೊಲೀಸ್ ಆಯುಕ್ತರೇ ಈ ಮೆರವಣಿಗೆಗೆ ಅನುಮತಿಯನ್ನು ನೀಡಿದರು ಹಾಗೂ ಅದಕ್ಕೆ ಭದ್ರತೆಯನ್ನೂ ಪೂರೈಸಿದ್ದರು.

೧. ತೆಲಂಗಾಣದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರವು ಈ ವರ್ಷ ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ, ಅದೇ ರೀತಿ ಮೊಹರಮ್ ಸಮಯದಲ್ಲಿ ಮೆರವಣಿಗೆ ನಡೆಸುವುದನ್ನು ನಿಷೇಧಿಸಿತ್ತು.

೨. ಸರ್ವೋಚ್ಚ ನ್ಯಾಯಾಲಯವೂ ಮೊಹರಮ್ ಮೆರವಣಿಗೆಯನ್ನು ತೆಗೆಯುವ ಅನುಮತಿಯನ್ನು ಕೋರಿದ ಅರ್ಜಿಯನ್ನು ವಜಾ ಮಾಡಿತ್ತು. ‘ಒಂದು ವೇಳೆ ಮೆರವಣಿಗೆಗೆ ಅನುಮತಿಯನ್ನು ನೀಡಿದರೆ, ಅರಾಜಕತೆ ಸೃಷ್ಟಿಯಾಗಬಹುದು ಹಾಗೂ ಒಂದು ವಿಶಿಷ್ಟ ಸಮಾಜಕ್ಕೆ ಕೊರೋನಾ ಸೋಂಕು ಹಬ್ಬಿಸಿದ್ದಾರೆಂದು ಹೇಳಲಾಗುವುದು, ಅದು ನಮಗೆ ಅಪೇಕ್ಷಿತವಿಲ್ಲ’ ಎಂದು ನ್ಯಾಯಾಲಯವು ಹೇಳಿತ್ತು.