ರಾಜಸ್ಥಾನ ಉಚ್ಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಗೆ ಭದ್ರತೆಯನ್ನು ನೀಡಿ ! – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಲ್ಲಿ ಬೇಡಿಕೆ

ಜಯಪೂರ (ರಾಜಸ್ಥಾನ) – ಇಲ್ಲಿಯ ಹಿಂದುಳಿದವರ್ಗದವರಿಂದ ರಾಜಸ್ಥಾನ ಉಚ್ಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಯನ್ನು ಧ್ವಂಸ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ‘ಯುಥ್ ಫಾರ್ ಇಕ್ವಲಿಟಿ’ಯು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಇಂದ್ರಜಿತ ಮಹಂತಿಯವರಲ್ಲಿ ಈ ಪ್ರತಿಮೆಗೆ ಭದ್ರತೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಭಯ ಕಾಂತ ಮಿಶ್ರಾ ಇವರು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕರಲ್ಲಿ ಈ ಪ್ರತಿಮೆಯನ್ನು ಧ್ವಂಸ ಮಾಡುವಂತೆ ಆಗ್ರಹಿಸಿದವರ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ. ಭೀಮ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಇವರೂ ‘ಪ್ರತಿಮೆಯನ್ನು ಧ್ವಂಸ ಮಾಡುತ್ತೇವೆ’, ಎಂದು ಬೆದರಿಕೆಯೊಡಿದ್ದರು.