‘ಹಿಂದೂ ಸೇವಾ ಕೇಂದ್ರ’ದ ಅರ್ಜಿಯ ಬಗ್ಗೆ ನಿರ್ಧಾರ
ನ್ಯಾಯಾಲಯವು ಇಂತಹ ಆದೇಶವನ್ನು ರದ್ದು ಪಡಿಸುವುದರ ಜೊತೆಗೆ ‘ಹಿಂದೂಗಳ ಭಾವನೆಗಳನ್ನು ನೋಯಿಸುವ ಆದೇಶವನ್ನು ನೀಡಿದವರಿಗೂ ಶಿಕ್ಷೆಯನ್ನು ನೀಡಬೇಕು’, ಎಂದು ಹಿಂದೂಗಳಿಗೆ ಅನಿಸುತ್ತದೆ !
ಕೊಚಿ (ಕೇರಳ) – ‘ದೇವಸ್ಥಾನದ ದೀಪ ಹಾಗೂ ಪಾತ್ರೆಗಳನ್ನು ಹರಾಜು ಮಾಡಬಾರದೆಂದು ಆದೇಶವನ್ನು ಕೇರಳದ ಉಚ್ಚ ನ್ಯಾಯಾಲಯಯು ಸರಕಾರಕ್ಕೆ ನೀಡಿದೆ. ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿದೆ ಅರ್ಜಿಯ ಮೇಲೆ ಈ ನಿರ್ಣಯವನ್ನು ನೀಡಿದೆ. (ಹಿಂದೂ ಧರ್ಮದ ಮೇಲಿನ ಆಘಾತಗಳ ವಿರುದ್ಧ ಧ್ವನಿ ಎತ್ತುವ ‘ಹಿಂದೂ ಸೇವಾ ಕೇಂದ್ರ’ದ ಅಭಿನಂದನೆಗಳು ! ಇತರ ಹಿಂದುತ್ವನಿಷ್ಠರೂ ಇದರಿಂದ ಪಾಠ ಕಲಿಯಬೇಕು ! – ಸಂಪಾದಕರು)
ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ನಮ್ಮ ದೇವಸ್ಥಾನವನ್ನು ಲೂಟಿ ಮಾಡುವ ಹೊಸ ಹೊಸ ಮಾರ್ಗವನ್ನು ಹುಡುಕುತ್ತಿದೆ. ಅದಕ್ಕೆ ನಾವು ದೇವಸ್ಥಾನವನ್ನು ಮುಟ್ಟಲೂ ಬಿಡುವುದಿಲ್ಲ’, ಎಂದು ‘ಹಿಂದೂ ಸೇವಾ ಕೇಂದ್ರ’ ಈ ಹಿಂದುತ್ವನಿಷ್ಠ ಸಂಘಟನೆಯ ನ್ಯಾಯವಾದಿ ಪ್ರಥಮೇಶ ವಿಶ್ವನಾಥ ಇವರು ಟ್ವೀಟ್ ಮಾಡಿ ಎಚ್ಚರಿಕೆಯನ್ನು ನೀಡಿದ್ದಾರೆ. ನ್ಯಾಯವಾದಿ ಪ್ರಥಮೇಶ ವಿಶ್ವನಾಥ ಇವರು ಕೇರಳದ ಖ್ಯಾತ ಹಿಂದುತ್ವನಿಷ್ಠ ನ್ಯಾಯವಾದಿಗಳಾಗಿದ್ದಾರೆ.
ಪ್ರತಿಯೊಂದು ದೇವಸ್ಥಾನದಿಂದ ೧ ಲಕ್ಷ ರೂಪಾಯಿ ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರಕ್ಕೂ ತಡೆ
ಕೇರಳದ ಉಚ್ಚ ನ್ಯಾಯಾಲಯವು ‘ಮಲಬಾರ ದೇವಸ್ವಮ್ ಬೋರ್ಡ್’ನ ಪ್ರತಿಯೊಂದು ದೇವಸ್ಥಾನದ ನಿಧಿಯಿಂದ ೧ ಲಕ್ಷ ರೂಪಾಯಿ ಹಾಗೂ ಸಿಬ್ಬಂದಿಗಳ ಸಂಬಳದ ಸ್ವಲ್ಪ ಹಣವನ್ನು ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರವನ್ನೂ ತಡೆಹಿಡಿಯಲಾಗಿದೆ. ಇದರ ಬಗೆಗಿನ ಅರ್ಜಿಯನ್ನು ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿತ್ತು.