ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಇಂದಿನ ವೇಗದ ಜೀವನಶೈಲಿಯಲ್ಲಿ ದೇಹದ ನೋವು ಸಾಮಾನ್ಯ ಸಮಸ್ಯೆಯಾಗಿದೆ. ಕುತ್ತಿಗೆ ನೋವು, ಬೆನ್ನು ನೋವು, ಸಂಧಿ ನೋವು, ಸ್ನಾಯು ನೋವು ಇವುಗಳಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇಂದಿನ ವೇಗದ ಜೀವನಶೈಲಿಯಲ್ಲಿ ದೇಹದ ನೋವು ಸಾಮಾನ್ಯ ಸಮಸ್ಯೆಯಾಗಿದೆ. ಕುತ್ತಿಗೆ ನೋವು, ಬೆನ್ನು ನೋವು, ಸಂಧಿ ನೋವು, ಸ್ನಾಯು ನೋವು ಇವುಗಳಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮಾನಸಿಕ ಒತ್ತಡ, ಚಿಂತೆ ಮತ್ತು ಸತತ ಮಾನಸಿಕ ಒತ್ತಡ, ಚಿಂತೆ, ಇವುಗಳು ‘ಪಿ.ಸಿ.ಓ.ಡಿ.’ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಧ್ಯಾನ, ಪ್ರಾಣಾಯಾಮ ಮತ್ತು ಯೋಗದ ನಿಯಮಿತ ಅಭ್ಯಾಸವು ಹಾರ್ಮೋನ್ ಸಮತೋಲನಕ್ಕೆ ಸಹಕಾರಿಯಾಗಿದೆ.
ಶರೀರದ ಸಮತೋಲನ ಕಾಯ್ದುಕೊಳ್ಳುವುದು, ಕಸ ಗುಡಿಸುವುದರಿಂದ ಹಿಡಿದು ವಾಹನ ಓಡಿಸುವವರೆಗೆ ಎಲ್ಲಾ ಕೆಲಸಗಳನ್ನು ಮಾಡಲು ಮೆದುಳು ಶೇ. ೧೦೦ ರಷ್ಟು ಕಾರ್ಯನಿರತವಾಗಿರಲೇಬೇಕು. ಕೇವಲ ಜಾಗೃತಾವಸ್ಥೆಯಲ್ಲಿ ಮಾತ್ರವಲ್ಲದೆ, ಸುಪ್ತಾವಸ್ಥೆಯಲ್ಲೂ ಮೆದುಳು ಕೆಲಸ ಮಾಡುತ್ತಿರುತ್ತದೆ.
ನಾವು ಅನಾರೋಗ್ಯವಾಗಿದ್ದೇವೆ ಎಂದು ನಿರಾಶರಾಗುವ ಅಗತ್ಯವಿಲ್ಲ. ನಮ್ಮ ದೇಹದಲ್ಲಿ ಸದಾ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ಸರಿಯಾದ ಪಥ್ಯವನ್ನು ಪಾಲಿಸಿದರೆ ಮತ್ತು ಚಿಕಿತ್ಸೆ ಪಡೆದರೆ ಕಾಲಕ್ರಮೇಣ ಆರೋಗ್ಯ ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು.
ಆಯುರ್ವೇದದ ದೃಷ್ಟಿಯಲ್ಲಿ ‘ಹಾರ್ಮೋನಲ್’ ಅಸಮತೋಲನ ಎಂದರೆ ಕೇವಲ ಯಾವುದಾದರೂ ಗ್ರಂಥಿಯ ಕಾಯಿಲೆಯಲ್ಲ, ಬದಲಾಗಿ ದೋಷ, ಧಾತು ಮತ್ತು ಅಗ್ನಿಯ ಸಮತೋಲನವು ತಪ್ಪಿರುವುದು.
ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.
ಶೀತಕಪಾಟಿನಲ್ಲಿನ (ಫ್ರಿಡ್ಜ ನಲ್ಲಿನ) ಅತಿಯಾದ ತಣ್ಣಗಿನ ನೀರು, ಮಂಜುಗಡ್ಡೆ ಅಥವಾ ತಂಪು ಪಾನೀಯಗಳನ್ನು (ಕೋಲ್ಡ್ ಡ್ರಿಂಕ್ಸ್) ಕುಡಿಯುವುದನ್ನು ಸಂಪೂರ್ಣ ನಿಲ್ಲಿಸಬೇಕು; ಏಕೆಂದರೆ ಇದರಿಂದ ಜೀರ್ಣಶಕ್ತಿಯು ಇನ್ನ? ಕಡಿಮೆ ಆಗುತ್ತದೆ ಮತ್ತು ಕಫವು ಹೆಚ್ಚಾಗುತ್ತದೆ.
ಆಯುರ್ವೇದದಲ್ಲಿ ಬಿಳಿ ಸೆರಗಿನ ಸಮಸ್ಯೆಗೆ ‘ಶ್ವೇತಪದರ’ ಎನ್ನಲಾಗುತ್ತದೆ. ಈ ಸ್ಥಿತಿಯು ಪ್ರಮುಖವಾಗಿ ಕಫದೋಷವು ಹೆಚ್ಚಾಗುವುದರಿಂದ ಉಂಟಾಗುತ್ತದೆ. ಕಫದೋಷದ ಸ್ವಭಾವವು ಜಡ, ಸ್ನಿಗ್ಧ ಮತ್ತು ಶೀತವಾಗಿರುವುದರಿಂದ ಅದರ ಪರಿಣಾಮವು ಯೋನಿಮಾರ್ಗದ ಸ್ರಾವದ ಮೇಲಾಗುತ್ತದೆ.
ವ್ಯಾಯಾಮದಲ್ಲಿ ಪ್ರಗತಿಪರ ಬದಲಾವಣೆಗಳನ್ನು ಮಾಡುತ್ತಾ ಹೋದರೆ ದೈಹಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಶರೀರ ಮತ್ತು ಮನಸ್ಸಿನ ಮಟ್ಟದಲ್ಲಿ ಒಂದು ಹೊಸ ಚೈತನ್ಯ ಬಂದಂತಾಗುತ್ತದೆ ಮತ್ತು ವ್ಯಾಯಾಮದ ಮೇಲೆ ಹೆಚ್ಚು ಆಸಕ್ತಿ ಮೂಡುತ್ತದೆ.
ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳ ‘ಸ್ಕ್ರೀನಟೈಮ್ಸ್’ಕಡೆಗೆ (ಮೊಬೈಲ್ ನೋಡುವುದರ ಕಡೆಗೆ) ಗಮನ ಕೊಡಬೇಕು. ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅವರಿಗೆ ಮೈದಾನದ ಆಟಗಳನ್ನು ಆಡಲು ಹೇಳಬೇಕು.