ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ - ೩೮
ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ’, ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !

ಪ್ರಸ್ತುತ ಲೇಖನದಲ್ಲಿ ನಾವು ‘ಮೆದುಳಿನ ಕಾರ್ಯ ಮತ್ತು ಸಕಾರಾತ್ಮಕವಾಗಿದ್ದು ವ್ಯಾಯಾಮ ಮಾಡುವುದರಿಂದಾಗುವ ಲಾಭಗಳನ್ನು’ ತಿಳಿದುಕೊಳ್ಳೋಣ.
೧. ಮೆದುಳಿನ ಕಾರ್ಯ
೧ ಅ. ಶರೀರದಲ್ಲಿನ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುವುದು : ಮೆದುಳಿನ ಸಮ್ಮತಿಯಿಲ್ಲದೆ ಶರೀರದಲ್ಲಿ ಯಾವುದೇ ಕ್ರಿಯೆ ನಡೆಯುವುದಿಲ್ಲ ಅಥವಾ ನಿಲ್ಲುವುದಿಲ್ಲ. ‘ಉಸಿರಾಟ, ಜೀರ್ಣಕ್ರಿಯೆ ಮತ್ತು ಹೃದಯದ ಬಡಿತ’, ಈ ಎಲ್ಲಾ ಕ್ರಿಯೆಗಳು ಆಯಾ ಅಂಗಗಳಲ್ಲಿ ಮೆದುಳಿನ ಅನುಮತಿಯಿಂದಲೇ ನಡೆಯುತ್ತವೆ ಮತ್ತು ಅವುಗಳ ಮೇಲೆ ಮೆದುಳಿನ ನಿಯಂತ್ರಣವಿರುತ್ತದೆ. ದೈಹಿಕ ಚಲನವಲನಗಳನ್ನು ನಿಯಂತ್ರಿತವಾಗಿ ನಿರ್ವಹಿಸುವುದು, ಶರೀರದ ಸಮತೋಲನ ಕಾಯ್ದುಕೊಳ್ಳುವುದು, ಕಸ ಗುಡಿಸುವುದರಿಂದ ಹಿಡಿದು ವಾಹನ ಓಡಿಸುವವರೆಗೆ ಎಲ್ಲಾ ಕೆಲಸಗಳನ್ನು ಮಾಡಲು ಮೆದುಳು ಶೇ. ೧೦೦ ರಷ್ಟು ಕಾರ್ಯನಿರತವಾಗಿರಲೇಬೇಕು. ಕೇವಲ ಜಾಗೃತಾವಸ್ಥೆಯಲ್ಲಿ ಮಾತ್ರವಲ್ಲದೆ, ಸುಪ್ತಾವಸ್ಥೆಯಲ್ಲೂ ಮೆದುಳು ಕೆಲಸ ಮಾಡುತ್ತಿರುತ್ತದೆ.
೧ ಆ. ಮೆದುಳಿನಲ್ಲಿ ವಿವಿಧ ನರಗಳ ಜಾಲ ಇರುತ್ತದೆ ಮತ್ತು ವಿದ್ಯುತ್ ಪ್ರವಾಹದಂತಹ ಸೂಕ್ಷ್ಮ ಆವೇಗಗಳ ಮೂಲಕ ಮೆದುಳಿನ ಕಾರ್ಯ ನಡೆಯುತ್ತದೆ : ಮೆದುಳು ಕಂಪ್ಯೂಟರ್‌ನ ‘ಮದರ್‌ಬೋರ್ಡ್’ನಂತೆ ಶರೀರದಲ್ಲಿ ಕಾರ್ಯವನ್ನು ಮಾಡುತ್ತದೆ. ಕಂಪ್ಯೂಟರ್‌ನ ಭಾಗಗಳಲ್ಲಿ ಹೇಗೆ ‘ವೈರಿಂಗ್’ ಇರುತ್ತದೆಯೋ, ಹಾಗೆಯೇ ಮೆದುಳಿನಲ್ಲಿ ವಿವಿಧ ರೀತಿಯ ನರಗಳ ಜಾಲವಿರುತ್ತದೆ ಮತ್ತು ವಿದ್ಯುತ್ ಪ್ರವಾಹದಂತಹ ಸೂಕ್ಷ್ಮ ಆವೇಗಗಳ ಮೂಲಕ ಮೆದುಳಿನ ಕಾರ್ಯ ನಡೆಯುತ್ತದೆ. ಯಾವುದೇ ಕಂಪ್ಯೂಟರ್ ಯಂತ್ರದಂತೆ ಮೆದುಳು ಕೂಡ ‘ಪ್ರೋಗ್ರಾಮ್’ ಮಾಡುತ್ತದೆ. ನಮ್ಮ ಕೃತಿಗಳು, ವಿಚಾರ ಪ್ರಕ್ರಿಯೆ, ಅಭ್ಯಾಸಗಳು ಮತ್ತು ಪರಿಸ್ಥಿತಿ ಇತ್ಯಾದಿಗಳು ಮೆದುಳಿನ ‘ಪ್ರೋಗ್ರಾಮಿಂಗ್’ಗೆ ಕಾರಣವಾಗುತ್ತವೆ. ಯಾವುದೇ ಹೊಸ ಕೌಶಲ್ಯವನ್ನು ಕಲಿಯುವುದು ಎಂದರೆ ಈ ನರಗಳ ಜಾಲದ ‘ಪ್ರೋಗ್ರಾಮಿಂಗ್’ವೇ ಆಗಿರುತ್ತದೆ.

೧ ಇ. ಕೃತಿಗಿಂತ ಮನಸ್ಸಿನಲ್ಲಿನ ವಿಚಾರಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಮೆದುಳಿನ ಆವೇಗಗಳ ಮೇಲೆ ಅದರ ಪರಿಣಾಮವಾಗುತ್ತದೆ : ವಿಶೇಷವೆಂದರೆ ಇಡೀ ಶರೀರದ ವ್ಯವಹಾರವು ಕೇವಲ ಆವೇಗಗಳಿಂದಲೇ ( impulse ನಿಂದ) ನಡೆಯುತ್ತಿರುತ್ತದೆ. ಈ ಆವೇಗಗಳೇ ನಮ್ಮ ಶರೀರವನ್ನು ಚಾಲನೆಯಲ್ಲಿಡಲು ಸಾಕಾಗುತ್ತದೆ. ಈ ಆವೇಗಗಳಂತೆಯೇ ನಮ್ಮ ವಿಚಾರಗಳಿಗೂ ಮಹತ್ವವಿದೆ. ನಾವು ಯಾವುದೇ ಕೃತಿಯನ್ನು ಮಾಡುತ್ತಿದ್ದರೂ, ನಮ್ಮ ವೃತ್ತಿಯು ಕ್ರಮೇಣ ಮನಸ್ಸಿನ ವಿಚಾರಗಳಂತೆ ಆಗತೊಡಗುತ್ತದೆ ಮತ್ತು ಅದೇ ವೃತ್ತಿಯು ನಮ್ಮ ಕೃತಿಗಳ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ ಕೃತಿಗಿಂತ ವಿಚಾರಗಳ ಪ್ರಾಬಲ್ಯ ಹೆಚ್ಚಿರುತ್ತದೆ ಮತ್ತು ಅದರ ಪರಿಣಾಮ ಮೆದುಳಿನ ಆವೇಗಗಳ ಮೇಲೆ ಆಗುತ್ತದೆ. ಉದಾಹರಣೆಗೆ. ಸದಾ ನಿರಾಶೆಯಲ್ಲಿರುವ ವ್ಯಕ್ತಿಯು ಕಾಲಾಂತರದಲ್ಲಿ ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
೨. ಸಕಾರಾತ್ಮಕವಾಗಿದ್ದು ವ್ಯಾಯಾಮ ಮಾಡುವುದರಿಂದ ಆಗುವ ಲಾಭಗಳು
ನಾವು ವ್ಯಾಯಾಮ ಮಾಡುವಾಗ ನಮ್ಮ ಮನಸ್ಸಿನ ಸ್ಥಿತಿ ಮತ್ತು ಏಕಾಗ್ರತೆ ಬಹಳ ಮುಖ್ಯವಾಗಿರುತ್ತದೆ. ವ್ಯಾಯಾಮದ ಸಮಯದಲ್ಲಿ ‘ಇತರ ವಿಚಾರಗಳು, ಕೆಲಸದ ಒತ್ತಡ, ಕಚೇರಿಯ ಕಲಹಗಳು ಅಥವಾ ಮನೆಯ ಜಗಳಗಳ’ ಬಗ್ಗೆ ಯೋಚಿಸಿದರೆ, ವ್ಯಾಯಾಮದ ಫಲಿತಾಂಶವು ಕಡಿಮೆಯಾಗಿ ಶರೀರಕ್ಕೆ ಸಿಗಬೇಕಾದ ಲಾಭಗಳು ಕುಂಠಿತಗೊಳ್ಳುತ್ತವೆ.
ಇದಕ್ಕೆ ವಿರುದ್ಧ, ವ್ಯಾಯಾಮದ ಸಮಯದಲ್ಲಿ ಅನುಭವಕ್ಕೆ ಬರುವ ಆಹ್ಲಾದಕರ ಅನುಭೂತಿಗಳ ಕಡೆಗೆ ಸಕಾರಾತ್ಮಕವಾಗಿ ಗಮನ ಹರಿಸಿದರೆ, ವ್ಯಾಯಾಮವು ಹೆಚ್ಚು ಗುಣಾತ್ಮಕವಾಗುತ್ತದೆ. ಅಷ್ಟೇ ಅಲ್ಲದೆ, ‘ದೈಹಿಕ ಸಾಮರ್ಥ್ಯ ಹೆಚ್ಚುವುದು, ಕೆಲಸದ ವೇಗ ಹೆಚ್ಚುವುದು ಮತ್ತು ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುವುದು’ ಮುಂತಾದ ಅನೇಕ ಲಾಭಗಳು ಕಂಡುಬರುತ್ತವೆ. ಸಕಾರಾತ್ಮಕತೆಯಿಂದಾಗಿ ನಮ್ಮ ಶರೀರದ ಬಗ್ಗೆ ನಮಗಿರುವ ಗಾಂಭೀರ್ಯವು ಉಳಿಯುತ್ತದೆ. ನಾವು ಸಕಾರಾತ್ಮಕವಾಗಿ ಮತ್ತು ಪ್ರಯತ್ನಶೀಲರಾಗಿದ್ದರೆ, ತಾನಾಗಿಯೇ ತೊಂದರೆಗಳಿಂದ ದಾರಿ ಕಂಡುಕೊಂಡು ನಮ್ಮ ಕರ್ತವ್ಯಗಳನ್ನು ಪೂರೈಸುವುದು ಸುಲಭವಾಗುತ್ತದೆ.
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಸಿಯೋಥೆರಪಿಸ್ಟ್), ಫೋಂಡಾ, ಗೋವಾ. (೧೪.೧.೨೦೨೫)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !