
ಸದ್ಯದ ತಾಪಮಾನದಲ್ಲಿನ ಏರಿಕೆ ಮತ್ತು ಇನ್ನೊಂದೆಡೆ ಅಂದಮಾನ್ ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪಿರುವ ಮಾನ್ಸೂನ್ ನೋಡಿದರೆ, ನಾವು ಸದ್ಯ ಒಂದು ಅತ್ಯಂತ ಮಹತ್ವದ ಹೊಸ್ತಿಲಿನ ಮೇಲೆ ನಿಂತಿದ್ದೇವೆ. ಹವಾಮಾನದ ಈ ಮಿಶ್ರ ಕಾಲಾವನ್ನು ಆಯುರ್ವೇದದಲ್ಲಿ ಋತುಸಂಧಿ ಎಂದು ಕರೆಯಲಾಗುತ್ತದೆ. ಒಂದು ಋತುವಿನ ಅಂತ್ಯ ಮತ್ತು ಇನ್ನೊಂದು ಋತುವಿನ ಆರಂಭದ ನಡುವಿನ ಈ ಮಧ್ಯಂತರ ಕಾಲವು, ಪ್ರಕೃತಿಯ ಜೊತೆಗೆ ಸ್ವತಃ ನಮ್ಮ ಶರೀರದಲ್ಲೂ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಸದ್ಯ ಗ್ರೀ? ಅಂದರೆ ಬೇಸಿಗೆ ಮುಗಿದು ವ? ಅಂದರೆ ಮಳೆಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ವಾತಾವರಣದಲ್ಲಿ ದಿಢೀರ್ ಬದಲಾವಣೆಗಳಾಗುತ್ತವೆ. ಒಂದು ಕಡೆ ಕಡು ಬಿಸಿಲಿದ್ದರೆ, ಇನ್ನೊಂದೆಡೆ ಮೋಡ ಕವಿದ ವಾತಾವರಣ ಮತ್ತು ಗಾಳಿಯಲ್ಲಿ ತೇವಾಂಶ ಹೆಚ್ಚಾಗತೊಡಗುತ್ತದೆ. ಈ ಬದಲಾವಣೆಯ ನೇರ ಪರಿಣಾಮ ನಮ್ಮ ಶರೀರದ ಮೇಲಾಗುತ್ತದೆ. ಈ ದಿನಗಳಲ್ಲಿ ಶರೀರದಲ್ಲಿನ ವಾತ ದೋ?ವು ಹೆಚ್ಚಾಗತೊಡಗುತ್ತದೆ ಮತ್ತು ಜೀರ್ಣಶಕ್ತಿ ಅಂದರೆ ಜಠರಾಗ್ನಿಯು ತೀವ್ರವಾಗಿ ಮಂದವಾಗುತ್ತದೆ. ಇದೇ ಕಾರಣದಿಂದಾಗಿ ಸದ್ಯ ನಮ್ಮ ಬಳಿಗೆ ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು ಮತ್ತು ಹೊಟ್ಟೆಯ ಕಾಯಿಲೆಗಳನ್ನು ಹೇಳುತ್ತಾ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಋತುಸಂಧಿಯ ಕಾಲದಲ್ಲಿ ಕಾಯಿಲೆಗಳಿಂದ ದೂರವಿರಲು ಆಯುರ್ವೇದವು ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ವಿಶೇ? ಬದಲಾವಣೆಗಳನ್ನು ಮಾಡಿಕೊಳ್ಳಲು ಹೇಳಿದೆ.
ಯಾವ ಮುಂಜಾಗ್ರತೆ ವಹಿಸಬೇಕು?

೧. ಈ ಕಾಲದಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ಆಹಾರದ ಮುಂಜಾಗ್ರತೆ ವಹಿಸಬೇಕು. ಜೀರ್ಣಶಕ್ತಿಯು ದುರ್ಬಲಗೊಳ್ಳುವುದರಿಂದ ಜೀರ್ಣಿಸಿಕೊಳ್ಳಲು ಜಡವಾಗಿರುವ ಪದಾರ್ಥಗಳನ್ನು ಸಂಪೂರ್ಣ ತ್ಯಜಿಸಬೇಕು. ಬದಲಿಗೆ ತಾಜಾ, ಬಿಸಿ ಮತ್ತು ಮೃದುವಾದ ಆಹಾರವನ್ನು ಸೇವಿಸಬೇಕು. ಹೆಸರುಬೇಳೆಯ ಕಟ್ಟು, ಖಿಚಡಿ, ಮೃದುವಾದ ಅನ್ನ ಅಥವಾ ಅರಳಿನ ನೀರು (ಲಾಜಾ ಮಂಡ) ಈ ದಿನಗಳಲ್ಲಿ ಶರೀರಕ್ಕೆ ಶಕ್ತಿಯನ್ನು ನೀಡಲು ಮತ್ತು ಹೊಟ್ಟೆಗೆ ವಿಶ್ರಾಂತಿ ನೀಡಲು ಉತ್ತಮವೆಂದು ಸಾಬೀತಾಗಿದೆ.
೨. ಶೀತಕಪಾಟಿನಲ್ಲಿನ (ಫ್ರಿಡ್ಜ ನಲ್ಲಿನ) ಅತಿಯಾದ ತಣ್ಣಗಿನ ನೀರು, ಮಂಜುಗಡ್ಡೆ ಅಥವಾ ತಂಪು ಪಾನೀಯಗಳನ್ನು (ಕೋಲ್ಡ್ ಡ್ರಿಂಕ್ಸ್) ಕುಡಿಯುವುದನ್ನು ಸಂಪೂರ್ಣ ನಿಲ್ಲಿಸಬೇಕು; ಏಕೆಂದರೆ ಇದರಿಂದ ಜೀರ್ಣಶಕ್ತಿಯು ಇನ್ನ? ಕಡಿಮೆ ಆಗುತ್ತದೆ ಮತ್ತು ಕಫವು ಹೆಚ್ಚಾಗುತ್ತದೆ.
೩. ಈ ಋತು ಬದಲಾವಣೆಯ ಕಾಲದಲ್ಲಿ ಶರೀರದಲ್ಲಿ ಹೆಚ್ಚಾಗುವ ವಾತವನ್ನು ಶಾಂತಗೊಳಿಸಲು ಆಹಾರದಲ್ಲಿ ದೇಶಿ ಹಸುವಿನ ಶುದ್ಧ ತುಪ್ಪದ ಬಳಕೆಯನ್ನು ಕೊಂಚ ಹೆಚ್ಚಿಸಬೇಕು; ಅತಿಯಾದ ಖಾರ ಮತ್ತು ಕರಿದ ಪದಾರ್ಥಗಳನ್ನು ತಿನ್ನುವುದನ್ನು (ವಿಶೇ?ವಾಗಿ ಮಾಂಸಾಹಾರ) ತ್ಯಜಿಸಬೇಕು.
೪. ಆಹಾರದ ಜೊತೆಗೆ ದಿನನಿತ್ಯದ ಅಭ್ಯಾಸಗಳಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಬೇಸಿಗೆಯಲ್ಲಿ ಮಧ್ಯಾಹ್ನದ ನಿದ್ರೆಗೆ ರಿಯಾಯಿತಿ ಇದ್ದರೂ, ಋತುಸಂಧಿ ಮತ್ತು ಮಳೆಗಾಲ ಹತ್ತಿರ ಬರುತ್ತಿರುವಾಗ ಮಧ್ಯಾಹ್ನ ಮಲಗುವುದನ್ನು ತಪ್ಪಿಸಬೇಕು. ಮಧ್ಯಾಹ್ನದ ನಿದ್ರೆಯಿಂದಾಗಿ ಶರೀರದಲ್ಲಿ ಕಫ ಮತ್ತು ಪಿತ್ತ ಹೆಚ್ಚಾಗುತ್ತದೆ, ಇದರಿಂದಾಗಿ ಅಪಚನದ ತೊಂದರೆ ಆರಂಭವಾಗುತ್ತದೆ. ಹಾಗೆಯೇ ರಾತ್ರಿ ತಡವಾಗಿ ಮಲಗುವುದರಿಂದ ಶರೀರದಲ್ಲಿ ಶು?ತೆ ಹೆಚ್ಚಾಗಿ ವಾತ ದೋ?ವು ಏರುಪೇರಾಗುತ್ತದೆ; ಆದ್ದರಿಂದ ಸಮಯಕ್ಕೆ ಸರಿಯಾಗಿ ಮಲಗುವುದು ಹಿತಕರವಾಗಿದೆ.
೫. ಸದ್ಯ ಸುರಿಯುತ್ತಿರುವ ಮುಂಗಾರು ಪೂರ್ವ ಅಥವಾ ಆರಂಭದ ಮಳೆಯಲ್ಲಿ ನೆನೆಯುವ ಮೋಹವನ್ನು ತಡೆದುಕೊಳ್ಳಬೇಕು; ಏಕೆಂದರೆ ಈ ಹವಾಮಾನದಲ್ಲಿ ಸೋಂಕು ಹರಡುವ ಜೀವಾಣುಗಳ ಪ್ರಮಾಣವು ಹೆಚ್ಚಾಗಿರುತ್ತದೆ ಮತ್ತು ನೆನೆಯುವುದರಿಂದ ತಕ್ಷಣವೇ ಜ್ವರ ಅಥವಾ ನೆಗಡಿ ಬರಬಹುದು. ಮಳೆ ಆರಂಭವಾದ ಮೇಲೆ ಸಾಯಂಕಾಲದ ಸಮಯದಲ್ಲಿ ಮನೆಯಲ್ಲಿ ಗುಗ್ಗುಳ, ಓಮಕಾಳು (ಅಜವಾಯಿನ) ಅಥವಾ ಬೇವಿನ ಎಲೆಗಳ ಧೂಪವನ್ನು ಹಾಕಬೇಕು. ಇದರಿಂದ ಗಾಳಿಯಲ್ಲಿನ ತೇವಾಂಶದಿಂದಾಗಿ ಹೆಚ್ಚಾಗುವ ಸೊಳ್ಳೆಗಳು ಮತ್ತು ಕೀಟಾಣುಗಳು ನಾಶವಾಗುತ್ತವೆ.

ಪ್ರಕೃತಿಯ ಈ ಬದಲಾಗುತ್ತಿರುವ ಸ್ವರೂಪದೊಂದಿಗೆ ಹೊಂದಿಕೊಳ್ಳಲು ಶರೀರವನ್ನು ಸಜ್ಜುಗೊಳಿಸುವುದು ಮತ್ತು ಹಳೆಯ ಅಭ್ಯಾಸಗಳನ್ನು ಹಂತಹಂತವಾಗಿ ಬದಲಾಯಿಸಿ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸ್ವೀಕರಿಸುವುದು, ಇದೇ ಋತುಸಂಧಿಯ ನಿಜವಾದ ನಿಯಮವಾಗಿದೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ‘ಆರೋಗ್ಯವಾಗಿರಿ!
– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೨೪.೫.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಆರ್ಥಿಕ ಶಿಸ್ತು
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ