‘ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ ಒಂದು ಪರಿಣಾಮಕಾರಿ ಉಪಾಯವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ತತ್ವ ಮತ್ತು ವ್ಯಾಧಿಗನುಗುಣವಾಗಿ ಯೋಗ್ಯ ವ್ಯಾಯಾಮ’, ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವ್ಯಾಯಾಮದ ಮಾಧ್ಯಮದಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಎಲ್ಲರಿಗೂ ಖಂಡಿತವಾಗಿಯೂ ಪ್ರೇರಣಾದಾಯಿಯಾಗಲಿದೆ !

ಈ ಲೇಖನದಲ್ಲಿ ‘ಶರೀರದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಮತ್ತು ಯೋಗ್ಯ ವ್ಯಾಯಾಮ ಮಾಡುವುದರಿಂದ ಹಾಗೂ ಕಾಳಜಿಯಿಂದ ಅನಾರೋಗ್ಯದಿಂದ ಹೊರಬರುವುದು ಹೇಗೆ ಸಾಧ್ಯವಾಗುತ್ತದೆ ?,’ ಎಂಬುದನ್ನು ತಿಳಿದುಕೊಳ್ಳೋಣ.

೧. ಸೃಷ್ಟಿಯು ಪರಿವರ್ತನಾಶೀಲವಾಗಿರುವುದು ಮತ್ತು ದೇಹದಲ್ಲೂ ಪರಿವರ್ತನೆಯಾಗುವುದು
‘ಹಗಲು-ರಾತ್ರಿ, ಬಿಸಿಲು-ಮಳೆ, ಚಳಿ-ಬಿಸಿಲು ಹೀಗೆ ಸೃಷ್ಟಿಯಲ್ಲಿ ಅನೇಕ ಬದಲಾವಣೆಗಳನ್ನು ನಾವು ಪ್ರತಿದಿನ ನೋಡುತ್ತೇವೆ. ‘ಪಿಂಡದಿಂದ ಬ್ರಹ್ಮಾಂಡ’ ಈ ನಿಯಮದಂತೆ ದೇಹದಲ್ಲೂ ಇಂತಹ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ‘ನಮ್ಮ ಪ್ರಕೃತಿ ಇಂದು ಹೇಗಿದೆಯೋ, ನಾಳೆಯೂ ಹಾಗೆಯೇ ಇರುತ್ತದೆ’, ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ‘ಈ ಸೃಷ್ಟಿಯಲ್ಲಿ ‘ಪರಿವರ್ತನೆ’ ನಿರಂತರ ನಡೆಯುತ್ತಿರುತ್ತದೆ.
೨. ಪ್ರತಿ ೪ ತಿಂಗಳಿಗೊಮ್ಮೆ ಶರೀರವು ಹೊಸ ರೂಪ ಪಡೆಯುವುದು
ನಮ್ಮ ಶರೀರವು ಎಂದಿನಂತೆಯೇ ಕಾಣುತ್ತಿದ್ದರೂ, ಕಣ್ಣಿಗೆ ಕಾಣದ ಬದಲಾವಣೆಗಳು ದೇಹದಲ್ಲಿ ಸದಾ ನಡೆಯುತ್ತಿರುತ್ತವೆ. ಕೆಲವು ದಿನಗಳಿಗೊಮ್ಮೆ ದೇಹದ ಕೆಲವು ಭಾಗಗಳು ಸಂಪೂರ್ಣವಾಗಿ ಹೊಸದಾಗುತ್ತವೆ ಎಂಬುದು ನಿಮಗೆ ಆಶ್ಚರ್ಯ ತರಬಹುದು. ಉದಾಹರಣೆಗೆ. ನಮ್ಮ ಚರ್ಮದ ಜೀವಕೋಶಗಳು ಪ್ರತಿ ೪ ವಾರಗಳಿಗೊಮ್ಮೆ ಬದಲಾಗುತ್ತವೆ. ಹೊಟ್ಟೆಯ ಜೀವಕೋಶಗಳು ಪ್ರತಿ ೫ ದಿನಗಳಿಗೊಮ್ಮೆ ಬದಲಾಗುತ್ತವೆ. ರಕ್ತದ ಕೆಲವು ಬಿಳಿ ರಕ್ತಕಣಗಳು ಪ್ರತಿ ೨ ದಿನಗಳಿಗೊಮ್ಮೆ ಹೊಸದಾಗಿ ನಿರ್ಮಾಣವಾಗುತ್ತವೆ. ಕೆಂಪು ರಕ್ತಕಣಗಳು ಗರಿಷ್ಠ ೧೨೦ ದಿನಗಳ ವರೆಗೆ ಇರುತ್ತವೆ ಮತ್ತು ನಂತರ ಹೊಸ ಜೀವಕೋಶಗಳು ಹುಟ್ಟುತ್ತವೆ. ಒಟ್ಟಾರೆ, ‘ನಮ್ಮ ಶರೀರವು ಪ್ರತಿ ೪ ತಿಂಗಳಿಗೊಮ್ಮೆ ಹೊಸ ರೂಪವನ್ನು ತಾಳುತ್ತದೆ.’
೩. ನಿತ್ಯದ ನಿಯಮಗಳನ್ನು ನಿರ್ಲಕ್ಷಿಸಿದರೆ ಆರೋಗ್ಯ ಕ್ಷೀಣಿಸುವುದು
ನಾವು ದೇಹವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಎಲ್ಲವೂ ಚೆನ್ನಾಗಿರುವಾಗ ನಾವು ನಿತ್ಯದ ನಿಯಮಗಳನ್ನು (ಸರಿಯಾದ ಸಮಯಕ್ಕೆ ಏಳುವುದು, ಹಲ್ಲುಜ್ಜುವುದು, ವ್ಯಾಯಾಮ ಮಾಡುವುದು, ಸ್ನಾನ ಮಾಡುವುದು, ಉತ್ತಮ ಆಹಾರ ಸೇವಿಸುವುದು ಇತ್ಯಾದಿ) ನಿರ್ಲಕ್ಷಿಸಿದರೆ, ಕ್ರಮೇಣ ಆರೋಗ್ಯವು ಕೆಡಲು ಪ್ರಾರಂಭವಾಗುತ್ತದೆ. ಒಮ್ಮೆ ಕಾಯಿಲೆ ಬಂದಮೇಲೆ ಅದರಿಂದ ಹೊರಬರಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ.
೪. ದೇಹದಲ್ಲಿ ಪರಿವರ್ತನೆಯಿಂದಲೇ ಅನೇಕ ರೋಗಿಗಳು ಗಂಭೀರ ಕಾಯಿಲೆಗಳಿಂದ ಹೊರ ಬರುವುದು
ನಾವು ಅನಾರೋಗ್ಯವಾಗಿದ್ದೇವೆ ಎಂದು ನಿರಾಶರಾಗುವ ಅಗತ್ಯವಿಲ್ಲ. ನಮ್ಮ ದೇಹದಲ್ಲಿ ಸದಾ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ಸರಿಯಾದ ಪಥ್ಯವನ್ನು ಪಾಲಿಸಿದರೆ ಮತ್ತು ಚಿಕಿತ್ಸೆ ಪಡೆದರೆ ಕಾಲಕ್ರಮೇಣ ಆರೋಗ್ಯ ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು. ಅನೇಕ ರೋಗಿಗಳು ಗಂಭೀರ ಕಾಯಿಲೆಗಳಿಂದ ಹೊರಬಂದಿರುವ ಉದಾಹರಣೆಗಳನ್ನು ನೀವು ಕೇಳಿರಬಹುದು, ಅದಕ್ಕೆ ದೇಹದಲ್ಲಿ ನಿರಂತರವಾಗಿ ನಡೆಯುವ ಈ ‘ಪರಿವರ್ತನೆ’ಯೇ ಕಾರಣವಾಗಿದೆ.
೫. ಶರೀರಕ್ಕೆ ಯೋಗ್ಯ ಪ್ರಮಾಣದ ಪೋಷಣೆ, ವಿಶ್ರಾಂತಿ ಮತ್ತು ಉತ್ತೇಜನ ನೀಡಿದರೆ, ರೋಗಿಯು ಗಣನೀಯ ಧ್ಯೇಯವನ್ನು ಸಾಧಿಸಲು ಸಾಧ್ಯ
‘ಹೃದಯಾಘಾತ, ಪಾರ್ಶ್ವವಾಯು, ಮೆದುಳಿನ ಅಥವಾ ಇತರ ಗಂಭೀರ ಕಾಯಿಲೆಗಳನ್ನು ಹೊರತುಪಡಿಸಿ, ಕುತ್ತಿಗೆ ನೋವು, ಸೊಂಟ ನೋವು, ಕೀಲು ನೋವು, ಸ್ನಾಯು-ನರಗಳ ಮೇಲಿನ ಒತ್ತಡ, ದೌರ್ಬಲ್ಯ, ಕೃಶತೆ ಮತ್ತು ಬೊಜ್ಜು ಇಂತಹ ಅನೇಕ ಕಾಯಿಲೆಗಳಿಂದ ಹೊರಬರುವುದು ನಮ್ಮ ಕೈಯಲ್ಲಿದೆ. ಶರೀರಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ, ವಿಶ್ರಾಂತಿ ಮತ್ತು ವ್ಯಾಯಾಮದ ಮೂಲಕ ಉತ್ತೇಜನ ನೀಡಿದರೆ, ನಾವು ಆರೋಗ್ಯದ ವಿಷಯದಲ್ಲಿ ಗುರಿಯನ್ನು ಸಾಧಿಸಬಹುದು.
೬. ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ ಪ್ರಗತಿಗಾಗಿ ಪ್ರಕೃತಿಯೇ ದಾರಿಗಳನ್ನು ರೂಪಿಸಿದೆ
ಅನೇಕ ಜನರು ಕೀಲು ನೋವು, ಸೊಂಟ ನೋವು ಅಥವಾ ಸ್ನಾಯು-ನರಗಳ ನೋವನ್ನು ವರ್ಷಾನುಗಟ್ಟಲೆ ಸಹಿಸಿಕೊಳ್ಳುತ್ತಾರೆ. ಔಷಧಿಗಳಿಂದ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ಹತಾಶರಾಗುತ್ತಾರೆ. ಆದರೆ ಈಗಿನ ಅನುಭವಗಳ ಪ್ರಕಾರ, ಕೀಲುನೋವಿನ ನಿವಾರಣೆಯು ೨ ರಿಂದ ೩ ತಿಂಗಳಲ್ಲಿ ಮತ್ತು ಸ್ನಾಯುಗಳ ಮೇಲಿನ ಒತ್ತಡವು ಕೆಲವೇ ವಾರಗಳಲ್ಲಿ ದೂರವಾಗುತ್ತದೆ. ನರಗಳ ತೊಂದರೆಗಳಲ್ಲಿಯೂ ೩ ರಿಂದ ೪ ತಿಂಗಳಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಮೂಳೆ ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯ ನಂತರ ಕೇವಲ ೨ ರಿಂದ ೩ ದಿನಗಳಲ್ಲಿ ರೋಗಿಯು ನಡೆಯಲು, ತಿರುಗಾಡಲು ಸಾಧ್ಯವಾಗುತ್ತದೆ ಮತ್ತು ಅವರು ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಮರಳಲು ಕೇವಲ ಎರಡರಿಂದ ಎರಡುವರೆ ತಿಂಗಳು ಸಾಕು. ಇದೆಲ್ಲವೂ ಯೋಗ್ಯ ಮಾರ್ಗದರ್ಶನದಲ್ಲಿ ವ್ಯಾಯಾಮ ಮಾಡುವುದರಿಂದ ಮಾತ್ರ ಸಾಧ್ಯವಾಗುತ್ತದೆ. ವ್ಯಕ್ತಿಯು ಸದೃಢನಿರಲಿ ಅಥವಾ ಅಶಕ್ತನಿರಲಿ, ಪ್ರತಿಯೊಬ್ಬರ ದೈಹಿಕ ಪ್ರಗತಿಗಾಗಿ ಪ್ರಕೃತಿಯು ದಾರಿಗಳನ್ನು ರೂಪಿಸಿದೆ. ಕೇವಲ ಸರಿಯಾದ ಮಾರ್ಗದರ್ಶನ ಪಡೆದು ಚಿಕಿತ್ಸೆಯನ್ನು ಜಿಗುಟುತನದಿಂದ ಪಾಲಿಸುವುದು ಮುಖ್ಯವಾಗಿದೆ.
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೪.೧.೨೦೨೫)
‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |