ಅ. ಗಾಳಿಯು ಕಣ್ಣಿಗೆ ಕಾಣಿಸುವುದಿಲ್ಲ; ಆದರೆ ಯಾವಾಗ ಬೀಸಣಿಕೆ ಬೀಸಿದಾಗ ತ್ವಚೆಗೆ ಅದರ ಸ್ಪರ್ಶವಾಗುತ್ತದೆ.
ಆ. ಸೂಕ್ಷ್ಮವಾಗಿರುವಂತಹ ಅಣುವನ್ನು ನಾವು ಕಣ್ಣಿನಿಂದ ನೋಡಲು ಆಗುವುದಿಲ್ಲ; ಆದರೆ ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಅದನ್ನು ನೋಡಬಹುದು.
ಇ. ತೀವ್ರ ಅಜ್ಞಾನದಿಂದ ಮನುಷ್ಯನು ಕುರುಡನಾಗುತ್ತಾನೆ; ಆದರೆ ಗುರುಗಳು ಅಜ್ಞಾನವನ್ನು ದೂರ ಮಾಡಿ ಈಶ್ವರನ ದರ್ಶನವನ್ನು ಮಾಡಿಸುತ್ತಾರೆ.
ಈ. ಅದೇರೀತಿ ಶ್ರೇಷ್ಠವಾದ ಚೈತನ್ಯಶಕ್ತಿಯನ್ನು ನಾವು ಅನುಭವಿಸಲು ಸಾಧ್ಯವಿಲ್ಲ; ಮಾತ್ರ ಗುರುಗಳ ಸಹಾಯದಿಂದ ಅದನ್ನು ಅನುಭವಿಸಲು ಸಾಧ್ಯವಾಗುತ್ತದೆ.
ಉ. ಬೀದಿದೀಪವು ಬರುವ-ಹೋಗುವ ಜನರಿಗೆ ಬೆಳಕು ತೋರಿಸುತ್ತದೆ, ಆದರೆ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನರೂಪಿ ಬೆಳಕನ್ನು ತೋರಿಸಲು ಗುರುಗಳು ಪರಿಶ್ರಮಪಡುತ್ತಿರುತ್ತಾರೆ. (ಆಧಾರ : ಪೂ. ಬಾಳಾಜಿ ಆಠವಲೆಯವರ ವಿಚಾರಸಂಪತ್ತು : ಭಾಗ ೩ (ಸುಗಮ ಅಧ್ಯಾತ್ಮ)