ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ದೈವೀ ಪ್ರಾರಬ್ಧದಿಂದ ಘಟನೆಗಳು ಘಟಿಸಲು ಗುರುಕೃಪೆಯೇಬೇಕಾಗುತ್ತದೆ. ಆದುದರಿಂದ ಸಾಧನೆಯಲ್ಲಿ ಎಷ್ಟೇ ಅಡಚಣೆಗಳು ಬಂದರೂ ಅಥವಾ ತೊಂದರೆಗಳಾದರೂ, ಗುರುಗಳ ಆಶ್ರಯವನ್ನು ಬಿಡಬಾರದು. ಅವರ ಚರಣಗಳನ್ನು ಅಖಂಡವಾಗಿ ಹಿಡಿದುಕೊಂಡಿರಬೇಕು.

ಪರಾತ್ಪರ ಗುರು ಡಾ. ಆಠಲೆಯವರ ಮನಸ್ಸಿನಲ್ಲಿ ಬರುವ ಒಂದು ವಿಚಾರ

‘ಎಲ್ಲ ಕಡೆಗೆ ನನ್ನ ಹೆಸರು ಬರಬೇಕು ಅಥವಾ ಪ್ರಸಿದ್ಧಿ ಸಿಗಬೇಕು, ಎಂಬಂತಹ ವಿಚಾರಗಳೇ ನನ್ನ ಮನಸ್ಸಿನಲ್ಲಿ ಬರುವುದಿಲ್ಲ. ಹೀಗಿರುವಾಗ, ‘ಈಗ ಉಳಿದಿರುವುದು ಪರೋಪಕಾರಕ್ಕಾಗಿ’, ಎಂಬ ಸಂತ ತುಕಾರಾಮ ಮಹಾರಾಜರ ವಚನದಂತೆ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾರೆಲ್ಲ ನನಗೆ ಸಹಾಯ ಮಾಡಿರುವರೋ, ಅದರ ಅಂಶದಷ್ಟಾದರೂ ಆಗಲಿ, ಆ ಋಣವನ್ನು ತೀರಿಸಲು ನಾನು ಬಾಧ್ಯನಾಗಿದ್ದೇನೆ.

ಸರ್ವಜ್ಞರಾಗಿದ್ದರೂ ಪ್ರತಿಯೊಂದು ಕೃತಿ ಮಾಡುವುದರ ಹಿಂದಿನ ಶಾಸ್ತ್ರವನ್ನು ಜಿಜ್ಞಾಸೆಯಿಂದ ತಿಳಿದುಕೊಳ್ಳುವ ಗುರುದೇವರು !

ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಿವಿಧ ಯಜ್ಞಗಳಾಗುತ್ತಿರುತ್ತವೆ. ಅನಾರೋಗ್ಯದಿಂದ ಅತ್ಯಂತ ಆಯಾಸವಿದ್ದರೂ ಕೆಲವು ಯಜ್ಞಗಳಿಗೆ ಪರಾತ್ಪರ ಗುರು ಡಾಕ್ಟರರು ಉಪಸ್ಥಿತರಿರುತ್ತಾರೆ.  ಆಗ ಸನಾತನದ ಪುರೋಹಿತರು ಮಾಡುವ ವಿವಿಧ ಕೃತಿಗಳ ಕಾರಣ ಅರಿತು ಭಾವಪೂರ್ಣ ಹಾಗೂ ಪರಿಪೂರ್ಣ ಮಾಡಬೇಕು, ಎಂಬುದು ಗುರುದೇವರ ತಳಮಳವಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ನಿರಂತರ ಪ್ರಯತ್ನಗಳಿಂದಾಗಿ ಹಿಂದೂ ರಾಷ್ಟ್ರವನ್ನು ನಡೆಸಲು ಸನಾತನದ ಸಾಧಕರು ‘ಆದರ್ಶರೆಂದು ಸಿದ್ಧರಾಗುವರು !

ನನಗೆ ಹಾಗೂ ಸನಾತನದ ಇತರ ಸಾಧಕರಿಗೂ ಅನೇಕ ಬಾರಿ ಇಂತಹ ಪ್ರಸಂಗಗಳು ಅನುಭವಿಸಲು ಸಿಗುತ್ತವೆ. ‘ಸಾಧನೆಗೆ ಬಂದ ನಂತರ ಪ್ರತಿಯೊಂದು ಚಿಕ್ಕಪುಟ್ಟ ಕೃತಿಗಳನ್ನು ಆದರ್ಶವಾಗಿ ಮಾಡುವುದು ಹೇಗೆ ?, ಎಂಬ ಬೋಧನೆಯನ್ನು ನೀಡಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಸಾಧನೆಯ ಸಂಸ್ಕಾರವನ್ನು ಮಾಡಿದ್ದಾರೆ.

ಉಚ್ಚಕೋಟಿಯ ಜಿಜ್ಞಾಸುವೃತ್ತಿಯಿಂದಾಗಿ ಸೂಕ್ಷ್ಮ ಜಗತ್ತಿನ ಬಗ್ಗೆ ಅಮೂಲ್ಯ ಜ್ಞಾನದ ಖಜಾನೆಯನ್ನು ಮನುಕುಲಕ್ಕೆ ನೀಡುವ ಜ್ಞಾನಗುರು ಪರಾತ್ಪರ ಗುರು ಡಾ. ಆಠವಲೆ !

ಸಾಮಾನ್ಯ ಮನುಷ್ಯನಿದ್ದರೆ, ಅವನಿಗೆ ಈ ವಿಷಯದ ಬಗ್ಗೆ ಎಂದಾದರೂ ಅತ್ಯಂತ ಬೇಸರ ಬರಬಹುದಿತ್ತು. ಆದರೆ ಪರಾತ್ಪರ ಗುರು ಡಾಕ್ಟರರಂತಹ ಗುರುದೇವರು ಇಡೀ ಸಮಷ್ಟಿಗೆ ಚಿಕ್ಕ ಚಿಕ್ಕ ವಿಷಯಗಳ ಹಿಂದಿನ ಶಾಸ್ತ್ರವು ತಿಳಿಯಬೇಕೆಂದು, ಅಹೋರಾತ್ರಿ ಪರಿಶ್ರಮಪಡುತ್ತಿರುತ್ತಾರೆ.

ಶ್ರೀವಿಷ್ಣುವಿನ ‘ಶ್ರೀಜಯಂತಾವತಾರದ ಕಾರ್ಯ ಮತ್ತು ವೈಶಿಷ್ಟ್ಯಗಳು

ಪರಾತ್ಪರ ಗುರು ಡಾ. ಆಠವಲೆಯವರಿಗೆ ಯಾವುದೇ ಕೊರತೆ (ಸ್ಥೂಲ ಅಥವಾ ಸೂಕ್ಷ್ಮ) ಇಲ್ಲದಿದ್ದರೂ, ಅವರ ವೈಯಕ್ತಿಕ ಜೀವನವು ಒಬ್ಬ ಸನ್ಯಾಸಿಗಿಂತಲೂ ಸರಳ ಮತ್ತು ಸಾಮಾನ್ಯವಾಗಿದೆ. ‘ಸಾಧಕರಿಗಾಗಿ ಏನೆಲ್ಲವನ್ನೂ ಮಾಡಿಯೂ ತಾನು ಮಾತ್ರ ಏನೂ ಮಾಡದಂತೆ ಇರುವುದು, ಇದು ಅವರ ಜೀವನಶೈಲಿಯಾಗಿದೆ.

ವಿವಿಧ ಸಂತರ ಮಾರ್ಗದರ್ಶನಕ್ಕನುಸಾರ ಪ್ರತ್ಯಕ್ಷ ಕೃತಿ ಮಾಡಿ ಅಧ್ಯಾತ್ಮಶಾಸ್ತ್ರವನ್ನು ಅಧ್ಯಯನ ಮಾಡಿದ ಪರಾತ್ಪರ ಗುರು ಡಾ. ಆಠವಲೆ !

ಆ ಗಡಿಬಿಡಿಯಲ್ಲಿಯೂ ಪ.ಪೂ.ಗುರುದೇವರು ನಮಗೆಲ್ಲರಿಗೂ ಅವರ ದರ್ಶನ ಪಡೆಯಲು ಕಳುಹಿಸಿದರು ಹಾಗೂ ‘ಸಂತರು ದೇಹತ್ಯಾಗ ಮಾಡಿದಾಗ ಎಂತಹ ಸ್ಪಂದನಗಳ ಅರಿವಾಗುತ್ತದೆ ಹಾಗೂ ಸಾಮಾನ್ಯ ಜನರು ದೇಹತ್ಯಾಗ ಮಾಡಿದಾಗ ಅಲ್ಲಿನ ವಾತಾವರಣ ಹೇಗಿರುತ್ತದೆ, ಎನ್ನುವುದನ್ನು ಅಧ್ಯಯನ ಮಾಡಲು ಹೇಳಿದರು.

‘ವಿವಿಧ ಧಾರ್ಮಿಕ ಕೃತಿಗಳ ಸೂಕ್ಷ್ಮ ಪರೀಕ್ಷಣೆ, ಇದು ಹಿಂದೂ ಧರ್ಮಕಾರ್ಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಕೊಡುಗೆ !

‘ಪ.ಪೂ. ಡಾಕ್ಟರರು ಸತತವಾಗಿ ‘ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ಏನು ಅರಿವಾಗುತ್ತದೆಯೋ, ಅದಕ್ಕಿಂತ ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆಯೋ, ಅದು ಹೆಚ್ಚು ಮಹತ್ವದ್ದಾಗಿರುತ್ತದೆ, ಎಂದು ಹೇಳುತ್ತಾರೆ. ಅನೇಕ ಸಾಧಕರಿಗೆ ಅವರ ಪ್ರೇರಣೆಯಿಂದ ಮತ್ತು ಕೃಪೆಯಿಂದ ಸೂಕ್ಷ್ಮ ಸ್ತರದಲ್ಲಿನ ಘಟನೆಗಳು ತಿಳಿಯತೊಡಗಿದವು.

ಘೋರ ಆಪತ್ಕಾಲದಲ್ಲಿ ಹೊಸ ಹೊಸ ಆಧ್ಯಾತ್ಮಿಕ ಉಪಾಯ ಪದ್ಧತಿಗಳನ್ನು ಶೋಧಿಸಿ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಸಾಧನೆಯನ್ನು ಆರಂಭಿಸಿದ ನಂತರ ನನಗೆ ‘ಕಾಯಿಲೆಗಳ ಕಾರಣಗಳು ಕೇವಲ ಶಾರೀರಿಕ ಹಾಗೂ ಮಾನಸಿಕವಾಗಿರದೆ ಆಧ್ಯಾತ್ಮಿಕ ಕೂಡ ಆಗಿರುತ್ತವೆ, ಎಂಬುದು ಜಿಜ್ಞಾಸೆಯಿಂದಾಗಿ ತಿಳಿಯಿತು. ಆಗ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಮಹತ್ವ ತಿಳಿಯಿತು; ಏಕೆಂದರೆ ಅವುಗಳನ್ನು ನಿರ್ಮೂಲನೆ ಮಾಡುವುದರಿಂದ ವ್ಯಕ್ತಿ ಸಾತ್ತ್ವಿಕನಾಗುತ್ತಾನೆ ಮತ್ತು ಸಾತ್ತ್ವಿಕನಾದ ನಂತರ ಅವನ ಹೆಚ್ಚಿನ ಮಾನಸಿಕ ತೊಂದರೆಗಳು ದೂರವಾಗುತ್ತವೆ.

ವಿವಿಧ ವೈಜ್ಞಾನಿಕ ಉಪಕರಣಗಳ ಮೂಲಕ ಆಧ್ಯಾತ್ಮಿಕ ಸಂಶೋಧನೆ !

ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಉಚ್ಚಮಟ್ಟದ ಸಂತರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು ನಿಖರವಾಗಿ ಗುರುತಿಸಬಲ್ಲರು ಹಾಗೂ ಅವರು ಹೇಳಿರುವ ಜ್ಞಾನವು ‘ಪ್ರಮಾಣವೂ ಆಗಿರುತ್ತದೆ; ಆದರೆ ಇಂದು ಅನೇಕ ಜನರಿಗೆ ಆಧುನಿಕ ವೈಜ್ಞಾನಿಕ ಸತ್ತ್ವಪರೀಕ್ಷೆಯಲ್ಲಿ ಸಿದ್ಧಪಡಿಸಿದ ಜ್ಞಾನವೇ ಸತ್ಯವೆಂದು ಅನಿಸುತ್ತದೆ.