
ನವದೆಹಲಿ: ಸರಕಾರಿ ಶಾಲೆಗಳು ಮತ್ತು ಸರಕಾರಿ ಅನುದಾನಿತ ಮದರಸಾಗಳಲ್ಲಿ ಬೆಳಗಿನ ಪ್ರಾರ್ಥನೆಯಲ್ಲಿ ‘ವಂದೇ ಮಾತರಂ’ನ ಎಲ್ಲಾ ಚರಣಗಳನ್ನು ಹಾಡುವುದನ್ನು ಬಂಗಾಳ ಸರಕಾರ ಕಡ್ಡಾಯಗೊಳಿಸಿದೆ. ಇದನ್ನು ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ (AIMPLB) ವಿರೋಧಿಸಿದೆ. ಈ ನಿರ್ಧಾರವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಅಥವಾ ಕನಿಷ್ಠ ಮುಸ್ಲಿಂ ವಿದ್ಯಾರ್ಥಿಗಳಿಗೆ ಇದರಿಂದ ವಿನಾಯಿತಿ ನೀಡಬೇಕೆಂದು ಬೋರ್ಡ್ ಹೇಳಿದೆ.
🚨 All India Muslim Personal Law Board objects to making Vande Mataram compulsory in madrasas in Bengal.
❓If an organization opposes the singing of Vande Mataram, should its registration continue to enjoy official recognition?
Even after they were given Pakistan on the basis… pic.twitter.com/pr17MECLFi
— Sanatan Prabhat (@SanatanPrabhat) June 4, 2026
ಬೋರ್ಡ್‌ನ ವಕ್ತಾರರಾದ ಎಸ್.ಕ್ಯೂ.ಆರ್. ಇಲ್ಯಾಸ್ ಅವರು ತಮ್ಮ ಹೇಳಿಕೆಯಲ್ಲಿ ಹೀಗೆ ತಿಳಿಸಿದ್ದಾರೆ:
೧. ಈ ನಿರ್ಧಾರವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಭಾರತದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಗೆ ಅಡ್ಡಿಪಡಿಸುವಂತದ್ದಾಗಿದೆ. (ಸಂವಿಧಾನದ ಹೆಸರಿನಲ್ಲಿ ತಮ್ಮದೇ ಮತಾಂಧತೆಯನ್ನು ಪೋಷಿಸುವ ಪ್ರಯತ್ನ ಇದಾಗಿದೆ. ಆದ್ದರಿಂದ ಸಂವಿಧಾನದ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದೇ ಇದಕ್ಕೆ ಸರಿಯಾದ ಪರಿಹಾರವಾಗಿದೆ! – ಸಂಪಾದಕ)
೨. ವಿದ್ಯಾರ್ಥಿಗೆ ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ಪಠ್ಯ ಅಥವಾ ಗೀತೆಯನ್ನು ಹಾಡಲು ಬಲವಂತ ಮಾಡುವುದು ಸಂವಿಧಾನದ ೧೯, ೨೫ ಮತ್ತು ೨೮(೩) ರಂತಹ ಹಕ್ಕುಗಳ ಉಲ್ಲಂಘನೆಯಾಗಿದೆ.
೩. ಯಾವುದೇ ನಾಗರಿಕನನ್ನು ಅವರ ಧಾರ್ಮಿಕ ಅಥವಾ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿ ಯಾವುದೇ ರಾಷ್ಟ್ರೀಯ ಅಥವಾ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ.
೪. ಹಲವು ಮುಸ್ಲಿಮರ ಪ್ರಕಾರ ‘ವಂದೇ ಮಾತರಂ’ನ ಕೆಲವು ಚರಣಗಳು ಇಸ್ಲಾಂನ ‘ತೌಹೀದ್’ (ಏಕದೇವೋಪಾಸನೆ) ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ ಮತ್ತು ಅದನ್ನು ಬಲವಂತವಾಗಿ ಹಾಡಿಸುವುದು ಧಾರ್ಮಿಕ ಗುರುತು ಹಾಗೂ ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ.
೫. ಒಂದು ಜಾತ್ಯತೀತ ರಾಷ್ಟ್ರವು ಒಂದು ಸಮುದಾಯದ ಧಾರ್ಮಿಕ ಅಥವಾ ಸಾಂಸ್ಕೃತಿಕ ಪದ್ಧತಿಗಳನ್ನು ಮತ್ತೊಂದರ ಮೇಲೆ ಹೇರಬಾರದು. ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರ ಸರಕಾರವು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿಲ್ಲ, ಅದನ್ನು ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಷಯವೆಂದು ಪರಿಗಣಿಸಿದೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ