ಘೋರ ಆಪತ್ಕಾಲದಲ್ಲಿ ಹೊಸ ಹೊಸ ಆಧ್ಯಾತ್ಮಿಕ ಉಪಾಯ ಪದ್ಧತಿಗಳನ್ನು ಶೋಧಿಸಿ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ನಾವಿನ್ಯಪೂರ್ಣ ಆಧ್ಯಾತ್ಮಿಕ ಉಪಾಯಪದ್ಧತಿಗಳ ಜನಕರಾದ ಪರಾತ್ಪರ ಗುರು ಡಾ. ಆಠವಲೆ !

ತಮ್ಮ ಸುತ್ತಮುತ್ತಲು ಅಥವಾ ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಹಿಂದಿನ ಕಾರ್ಯಕಾರಣಭಾವವನ್ನು ತಿಳಿದುಕೊಳ್ಳುವ ಬಗ್ಗೆ ಸಾಮಾನ್ಯ ಜನರಲ್ಲಿ ಜಿಜ್ಞಾಸೆಯಿರುತ್ತದೆ. ಮುಂದೆ ಸಾಧನೆಯ ಪ್ರವಾಸದಲ್ಲಿ ಸಾಧಕನಿಗೆ ‘ನಾನು ಎಲ್ಲಿಂದ ಬಂದಿದ್ದೇನೆ ?, ‘ನನ್ನ ಧ್ಯೇಯವೇನು ?, ‘ನನಗೆ ಎಲ್ಲಿಗೆ ಹೋಗಬೇಕಾಗಿದೆ ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಸಾಧನೆಯನ್ನು ಮಾಡುವಾಗ ‘ಜಿಜ್ಞಾಸು ಗುಣವಿರುವುದು ಆವಶ್ಯಕವಾಗಿದೆ; ಏಕೆಂದರೆ ಅದರಿಂದ ಸಾಧಕನು ಕಲಿಯುವ ಸ್ಥಿತಿಯಲ್ಲಿದ್ದು ಅದಕ್ಕನುಸಾರ ಕೃತಿಗಳನ್ನು ಮಾಡಲು ಪ್ರಯತ್ನಿಸುತ್ತಾನೆ. ಮಹರ್ಷಿಗಳು ಹೇಳಿದಂತೆ ಪರಾತ್ಪರ ಗುರುದೇವರ ಕಾರ್ಯವು ಅವತಾರಿ ಕಾರ್ಯವಾಗಿದೆ. ಆದುದರಿಂದ ಅವರ ಮನಸ್ಸಿನಲ್ಲಿ ಉತ್ಪನ್ನವಾಗುವ ಜಿಜ್ಞಾಸೆಯು ಸಮಷ್ಟಿಯ ಕಲ್ಯಾಣಕ್ಕಾಗಿಯೇ ಇರುತ್ತದೆ. ಸೂಕ್ಷ್ಮ ಜಗತ್ತಿನ ಬಗ್ಗೆ ಅವರು ಮಾಡಿದ ಅದ್ಭುತ ಸಂಶೋಧನೆಯ ಬೀಜವು ಅವರ ಜಿಜ್ಞಾಸುವೃತ್ತಿಯಲ್ಲಿದೆ. ಮಾನಸೋಪಚಾರತಜ್ಞರೆಂದು ಕಾರ್ಯವನ್ನು ಮಾಡುವಾಗ ಅವರ ಕಡೆಗೆ ಬರುವ ಶೇ. ೭೦ ರಷ್ಟು ರೋಗಿಗಳು ಗುಣಮುಖರಾಗುತ್ತಿದ್ದರು. ಉಳಿದ ಶೇ. ೩೦ ರಷ್ಟು ರೋಗಿಗಳು ಗುಣಮುಖರಾಗುವುದಿಲ್ಲ, ಎಂಬುದು ಅವರ ಗಮನಕ್ಕೆ ಬಂದಿತು. ಅವರು ಅಲ್ಲಿಯೇ ನಿಲ್ಲಲಿಲ್ಲ. ‘ಶೇ. ೩೦ ರಷ್ಟು ರೋಗಿಗಳು ಏಕೆ ಗುಣಮುಖರಾಗುವುದಿಲ್ಲ ?, ‘ಅವರು ಎಲ್ಲಿ ಹೋಗಿ ಗುಣಮುಖರಾಗುತ್ತಾರೆ ?, ಇದರ ಬಗ್ಗೆ ಅವರು ಜಿಜ್ಞಾಸೆಯಿಂದ ತಿಳಿದುಕೊಂಡರು. ಅವರು ಇಷ್ಟಕ್ಕೆ ನಿಲ್ಲಲಿಲ್ಲ ಅವರು ಈ ಸಮಸ್ಯೆಗಳಿಂದ ಪೀಡಿತರಾಗಿರುವ ಸಮಾಜದಲ್ಲಿನ ಜನರಿಗೆ ಸುಲಭ ಹಾಗೂ ಸಾಮಾನ್ಯ ಉಪಾಯಪದ್ಧತಿಗಳನ್ನು ಕಂಡುಹಿಡಿದು ಅವರಿಗೆ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಸ್ವಯಂಪೂರ್ಣಗೊಳಿಸುವ ಮಾರ್ಗವನ್ನು ಕೂಡ ತೋರಿಸಿದರು. ಆಧ್ಯಾತ್ಮಿಕ ತೊಂದರೆಗಳಿಂದ ಪೀಡಿತರಾಗಿರುವ ಕೆಲವರು ತೊಂದರೆಗಳ ನಿವಾರಣೆಗಾಗಿ ಡಾಂಭಿಕ ತಾಂತ್ರಿಕ-ಮಾಂತ್ರಿಕರ ಕಡೆಗೆ ಹೋಗಿ ಸಮಯ, ಶಕ್ತಿ ಹಾಗೂ ಹಣವನ್ನು ಖರ್ಚು ಮಾಡುತ್ತಾರೆ. ಪರಾತ್ಪರ ಗುರುದೇವರು ಕಂಡುಹಿಡಿದ ಉಪಾಯಪದ್ಧತಿಗಳು ಸುಲಭವಾಗಿವೆ ಮತ್ತು ಅವುಗಳಿಗೆ ಹಣ ಖರ್ಚು ಮಾಡುವ ಆವಶ್ಯಕತೆಯೂ ಇಲ್ಲ. ನೂರಾರು ಜನರು ಈ ಉಪಾಯಪದ್ಧತಿಗಳ ಲಾಭಪಡೆದು ಅವುಗಳ ಪರಿಣಾಮವನ್ನು ಅನುಭವಿಸಿದ್ದಾರೆ. ಈ ಉಪಾಯಪದ್ಧತಿಗಳನ್ನು ಶೋಧಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಗೊಳಿಸಿದರೂ ಅದು ಕಡಿಮೆಯೇ !

ಜಿಜ್ಞಾಸೆಯಿಂದ ಆಧ್ಯಾತ್ಮಿಕ ಉಪಾಯಗಳ ಮಾಹಿತಿ ಸಿಗುವುದು

ಸಾಧನೆಯನ್ನು ಆರಂಭಿಸಿದ ನಂತರ ನನಗೆ ‘ಕಾಯಿಲೆಗಳ ಕಾರಣಗಳು ಕೇವಲ ಶಾರೀರಿಕ ಹಾಗೂ ಮಾನಸಿಕವಾಗಿರದೆ ಆಧ್ಯಾತ್ಮಿಕ ಕೂಡ ಆಗಿರುತ್ತವೆ, ಎಂಬುದು ಜಿಜ್ಞಾಸೆಯಿಂದಾಗಿ ತಿಳಿಯಿತು. ಆಗ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಮಹತ್ವ ತಿಳಿಯಿತು; ಏಕೆಂದರೆ ಅವುಗಳನ್ನು ನಿರ್ಮೂಲನೆ ಮಾಡುವುದರಿಂದ ವ್ಯಕ್ತಿ ಸಾತ್ತ್ವಿಕನಾಗುತ್ತಾನೆ ಮತ್ತು ಸಾತ್ತ್ವಿಕನಾದ ನಂತರ ಅವನ ಹೆಚ್ಚಿನ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಒಂದು ವೇಳೆ ತೊಂದರೆಗಳು ದೂರವಾಗದಿದ್ದರೆ, ಅವು ಆಧ್ಯಾತ್ಮಿಕ ಕಾರಣಗಳಿಂದ, ಉದಾ. ‘ಕುಂಡಲಿನಿಚಕ್ರಗಳಲ್ಲಿನ ಅಡಚಣೆಗಳಿಂದಾಗಿ ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳಿಂದಾಗಿ ಆಗುತ್ತಿವೆ ಹಾಗೂ ಅದಕ್ಕಾಗಿ ಸಾಧನೆಯೇ ಮಾರ್ಗವಾಗಿದೆ ಎಂಬುದು ನನಗೆ ತಿಳಿಯಿತು. ಅದರಿಂದ ೪೪ ನೆಯ ವಯಸ್ಸಿನಲ್ಲಿ ಸಾಧನೆಗೆ ಬರುವುದರ ಮಹತ್ವವೂ ನನಗೆ ತಿಳಿಯಿತು ಹಾಗೂ ಸಮ್ಮೋಹನ ಉಪಚಾರತಜ್ಞನೆಂದು ಉಪಚಾರ ಮಾಡುವ ಬದಲು ನಾನು ಪೂರ್ಣವೇಳೆ ಗುರುಗಳ ಶಿಷ್ಯನಾದೆನು. ಮುಂದೆ ಸಾಧನೆ ಮಾಡಿದ ಮೇಲೆ ನನಗೆ ಕೆಟ್ಟಶಕ್ತಿಗಳ ಪ್ರಕಾರಗಳು, ಅವುಗಳ ಕಾರ್ಯ, ಮಾನವೀ ಜೀವನ ಮತ್ತು ವಾತಾವರಣದ ಮೇಲೆ ಆಗುವ ಅವುಗಳ ಪರಿಣಾಮ, ಅವು ಮಾನವರಿಗೆ ತೊಂದರೆಗಳನ್ನು ಕೊಡುವುದರ ಹಿಂದಿನ ಕಾರಣಗಳು ಮತ್ತು ಆ ತೊಂದರೆಗಳ ಲಕ್ಷಣಗಳು ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಲು ಸಾಧ್ಯವಾಯಿತು. ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯವೆಂದು ನನಗೆ ಆಧ್ಯಾತ್ಮಿಕ ಉಪಾಯಗಳ ಹೊಸ ಹೊಸ ಪದ್ಧತಿಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು, ಉದಾ. ‘ಒಂದರ ನಂತರ ಒಂದು ಎರಡು ನಾಮಜಪಗಳನ್ನು ಒಟ್ಟಿಗೆ ಮಾಡುವುದು, ಶರೀರದಲ್ಲಿನ ಕುಂಡಲಿನಿ ಚಕ್ರಗಳ ಸ್ಥಾನದಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಅಥವಾ ನಾಮಜಪ-ಪಟ್ಟಿಗಳನ್ನು ಹಚ್ಚುವುದು. ಮನುಷ್ಯನಿಗಾಗುವ ಶಾರೀರಿಕ ಹಾಗೂ ಮಾನಸಿಕ ರೋಗ ಹಾಗೆಯೇ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತವಾಗಿರುವ ವಿವಿಧ ಉಪಾಯಪದ್ಧತಿಗಳನ್ನು ಕೂಡ ಶೋಧಿಸಲು ನನಗೆ ಸಾಧ್ಯವಾಯಿತು, ಉದಾ. ಖಾಲಿ ಪೆಟ್ಟಿಗೆಗಳ ಉಪಾಯ, ಪ್ರಾಣಶಕ್ತಿ (ಚೇತನ) ವಹನ ಉಪಾಯ. ಈ ಉಪಾಯಪದ್ಧತಿಗಳ ಮೇಲಿನ ಗ್ರಂಥಗಳನ್ನೂ ಕೂಡ ಪ್ರಕಾಶಿಸಲಾಗಿದೆ. ಇದೆಲ್ಲವೂ ನನ್ನಲ್ಲಿರುವ ಜಿಜ್ಞಾಸೆಯಿಂದಲೆ ಸಾಧ್ಯವಾಯಿತು. – (ಪರಾತ್ಪರ ಗುರು) ಡಾ. ಆಠವಲೆ