ವಿವಿಧ ಸಂತರ ಮಾರ್ಗದರ್ಶನಕ್ಕನುಸಾರ ಪ್ರತ್ಯಕ್ಷ ಕೃತಿ ಮಾಡಿ ಅಧ್ಯಾತ್ಮಶಾಸ್ತ್ರವನ್ನು ಅಧ್ಯಯನ ಮಾಡಿದ ಪರಾತ್ಪರ ಗುರು ಡಾ. ಆಠವಲೆ !

ಪ.ಪೂ. ಅಣ್ಣಾ ಕರಂದೀಕರ್

೧. ಪ. ಪೂ. ಅಣ್ಣಾ ಕರಂದೀಕರ್ ಇವರಿಂದ ಸರಿಯಾದ ಮಾರ್ಗದರ್ಶನ ಸಿಗುವುದು ಎಂಬ ವಿಶ್ವಾಸ ಪ.ಪೂ. ಡಾಕ್ಟರರಿಗಿತ್ತು

‘ಡಹಾಣುವಿನ ಪ. ಪೂ. ಅಣ್ಣಾ ಕರಂದೀಕರ್ ಇವರು ಆಯುರ್ವೇದ ಚಿಕಿತ್ಸಾಲಯದಲ್ಲಿ ರೋಗಿಗಳನ್ನು ನೋಡಲು ಪ್ರತಿ ತಿಂಗಳಿನಲ್ಲಿ ೩ ದಿನ ದಾದರಗೆ (ಮುಂಬಯಿಗೆ) ಬರುತ್ತಿದ್ದರು. ಪ.ಪೂ. ಡಾಕ್ಟರರಿಗೆ ಅವರ ಓರ್ವ ಮಿತ್ರರು ಪ.ಪೂ. ಅಣ್ಣಾ ಕರಂದೀಕರವರ ಬಗ್ಗೆ ಮಾಹಿತಿಯನ್ನು ನೀಡಿದರು. ಪ.ಪೂ. ಅಣ್ಣಾರವರನ್ನು ಭೇಟಿಯಾದರೆ ಅವರಿಂದ ಯೋಗ್ಯ ಮಾರ್ಗದರ್ಶನ ಸಿಗುವುದು ಎಂದು ಪ.ಪೂ. (ಡಾ.) ಆಠವಲೆಯವರಿಗೆ ಖಚಿತವಿತ್ತು.

೨. ಪ.ಪೂ. ಅಣ್ಣಾ ಕರಂದೀಕರವರು ಪ.ಪೂ. ಡಾಕ್ಟರರಿಗೆ ಸೂಕ್ಷ್ಮದಲ್ಲಿನ ವಿಷಯಗಳ ಅಧ್ಯಯನ ಮಾಡಲು ಕಲಿಸಿದರು

ಪ.ಪೂ. ಡಾಕ್ಟರರು ಅಧ್ಯಾತ್ಮಶಾಸ್ತ್ರದ ವಿಷಯದಲ್ಲಿ ಸಂದೇಹಗಳ ನಿವಾರಣೆ ಮಾಡಿಕೊಳ್ಳಲು ಪ.ಪೂ. ಅಣ್ಣಾ ಕರಂದೀಕರರವರ ಕಡೆಗೆ ಹೋಗಲು ಆರಂಭಿಸಿದ ನಂತರ ಅವರು ಸೂಕ್ಷ್ಮದಲ್ಲಿನ ಜ್ಞಾನಪ್ರಾಪ್ತಿಯ ಸಂದರ್ಭದಲ್ಲಿ ಸ್ವತಃ ಪ್ರಯೋಗ ಮಾಡಲು ಪ್ರಾರಂಭಿಸಿದರು. ಪ. ಪೂ. ಅಣ್ಣಾರವರು ಕೂಡ ಪ.ಪೂ. ಡಾಕ್ಟರರಿಂದ ‘ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವುದು ಎಂಬ  ಪ್ರಾಯೋಗಿಕ ಅಂಗದ ಅಧ್ಯಯನವನ್ನು ಕೂಡ ಮಾಡಿಸಿಕೊಂಡರು. ಅವರು ಪ.ಪೂ. ಡಾಕ್ಟರರಿಗೆ ‘ಸೂಕ್ಷ್ಮದಿಂದ ನಿರೀಕ್ಷಣೆಯನ್ನು ಹೇಗೆ ಮಾಡಬೇಕು ?, ಈಶ್ವರನಿಗೆ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಹೇಗೆ ಪಡೆಯಬೇಕು ? ಮತ್ತು ಸೂಕ್ಷ್ಮದೇಹದಿಂದ ಹೇಗೆ ಪ್ರವಾಸ ಮಾಡಬೇಕು ?, ಆವಶ್ಯಕ ಜಾಗದಲ್ಲಿ ಹೇಗೆ ಪ್ರಕಟವಾಗಬೇಕು ಮತ್ತು ಸೂಕ್ಷ್ಮದಿಂದ ಬೇರೆಯವರಿಗೆ ಅನುಭೂತಿಯನ್ನು ಹೇಗೆ ಕೊಡಬೇಕು ?, ಈ ವಿಷಯಗಳನ್ನು ಕಲಿಸಿದರು.

೩. ಜಿಜ್ಞಾಸೆಯಿರುವುದರಿಂದ ಬೇರೆ ಸಂತರಿಂದಲೂ ಮಾರ್ಗದರ್ಶನ ಪಡೆಯುವುದು

ಪ.ಪೂ. ಡಾಕ್ಟರರಲ್ಲಿ ಜಿಜ್ಞಾಸೆಯಿರುವುದರಿಂದ ಅವರು ಮಲಂಗಶಾಹ ಬಾಬಾ, ಪೂ. ಕಾಣೆ ಮಹಾರಾಜರು, ಹರಿ ಬಾಗವೆ ಮತ್ತು ಪ.ಪೂ. ಹಿರಿಯ ಜೋಶಿಬಾಬಾರಂತಹ ಇತರ ಸಂತರಿಂದಲೂ ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದರು. – (ಪೂ.) ವೈದ್ಯ ವಿನಯ ಭಾವೆ, ಸನಾತನ ಆಶ್ರಮ ರಾಮನಾಥಿ ಗೋವಾ. (೨೦.೫.೨೦೨೦)

ತಂದೆಯವರ ದೇಹತ್ಯಾಗದ ಸಮಯದಲ್ಲೂ ಸಾಧಕರಿಗೆ ದೇಹತ್ಯಾಗದ ನಂತರದ ಸ್ಪಂದನಗಳ ಅಧ್ಯಯನ ಮಾಡಲು ಕಲಿಸುವುದು

೧೯೯೫ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವಕ್ಕೆ ಇಂದೂರಿಗೆ ಹೋಗಲು ನಾವೆಲ್ಲ ಸಾಧಕರು ಮುಂಬಯಿಯಲ್ಲಿನ ಸೇವಾಕೇಂದ್ರದಲ್ಲಿ ಸೇರಿದ್ದೆವು. ಆ ಸಮಯದಲ್ಲಿ ಪ.ಪೂ. ಗುರುದೇವರ ತಂದೆ (ಪೂ. ಡಾ. ಬಾಳಾಜಿ ಆಠವಲೆ) ಯವರು ದೇಹತ್ಯಾಗ ಮಾಡಿದರು. ಆ ಗಡಿಬಿಡಿಯಲ್ಲಿಯೂ ಪ.ಪೂ.ಗುರುದೇವರು ನಮಗೆಲ್ಲರಿಗೂ ಅವರ ದರ್ಶನ ಪಡೆಯಲು ಕಳುಹಿಸಿದರು ಹಾಗೂ ‘ಸಂತರು ದೇಹತ್ಯಾಗ ಮಾಡಿದಾಗ ಎಂತಹ ಸ್ಪಂದನಗಳ ಅರಿವಾಗುತ್ತದೆ ಹಾಗೂ ಸಾಮಾನ್ಯ ಜನರು ದೇಹತ್ಯಾಗ ಮಾಡಿದಾಗ ಅಲ್ಲಿನ ವಾತಾವರಣ ಹೇಗಿರುತ್ತದೆ, ಎನ್ನುವುದನ್ನು ಅಧ್ಯಯನ ಮಾಡಲು ಹೇಳಿದರು.  – ಸೌ. ಜ್ಯೋತಿ ದಾತೆ, ಪುಣೆ