ನನಗೆ ಹಾಗೂ ಸನಾತನದ ಇತರ ಸಾಧಕರಿಗೂ ಅನೇಕ ಬಾರಿ ಇಂತಹ ಪ್ರಸಂಗಗಳು ಅನುಭವಿಸಲು ಸಿಗುತ್ತವೆ. ‘ಸಾಧನೆಗೆ ಬಂದ ನಂತರ ಪ್ರತಿಯೊಂದು ಚಿಕ್ಕಪುಟ್ಟ ಕೃತಿಗಳನ್ನು ಆದರ್ಶವಾಗಿ ಮಾಡುವುದು ಹೇಗೆ ?, ಎಂಬ ಬೋಧನೆಯನ್ನು ನೀಡಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಸಾಧನೆಯ ಸಂಸ್ಕಾರವನ್ನು ಮಾಡಿದ್ದಾರೆ. ಸಾಧಕರಿಂದ ಆದರ್ಶ ಕೃತಿಯಾಗುವುದರ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರ ನಿರಂತರ ಪರಿಶ್ರಮವಿದೆ. ಸಾಧನೆಯಲ್ಲಿ ಬಂದ ನಂತರ ವ್ಯಕ್ತಿಯ ಪ್ರತಿಯೊಂದು ಕೃತಿಯಲ್ಲಿ ಪರಿವರ್ತನೆಯಾಗುತ್ತದೆ. ಸಾಧನೆಗೆ ಬರುವ ಮುನ್ನ ಹಾಗೂ ಸಾಧನೆಗೆ ಬಂದ ನಂತರ ನಾವು ಸಾಧಕರು ಸ್ವತಃ ಏನು ಅನುಭವಿಸುತ್ತಿರುವೆವೋ, ಅಂತಹ ಪರಿವರ್ತನೆಯು ಪುನರ್ಜನ್ಮವೇ ಆಗಿದೆ.
ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಎಷ್ಟು ಕೃತಜ್ಞತೆ ವ್ಯಕ್ತ ಮಾಡಿದರೂ, ಅದು ಕಡಿಮೆಯೇ ಆಗುವುದು. ಪರಾತ್ಪರ ಗುರು ಡಾ. ಆಠವಲೆಯವರ ನಿರಂತರ ಪ್ರಯತ್ನಗಳಿಂದಾಗಿಯೇ ಹಿಂದೂ ರಾಷ್ಟ್ರವನ್ನು ನಡೆಸಲು ಸನಾತನದ ಸಾಧಕರು ಸರ್ವಾರ್ಥದಿಂದ ಆದರ್ಶರೆಂದು ತಯಾರಾಗುತ್ತಿದ್ದಾರೆ. – ಓರ್ವ ಸಾಧಕಿ