ಪರಾತ್ಪರ ಗುರು ಡಾ. ಆಠಲೆಯವರ ಮನಸ್ಸಿನಲ್ಲಿ ಬರುವ ಒಂದು ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯ ಮಾಡುತ್ತಿರಬೇಕು !

‘ಎಲ್ಲ ಕಡೆಗೆ ನನ್ನ ಹೆಸರು ಬರಬೇಕು ಅಥವಾ ಪ್ರಸಿದ್ಧಿ ಸಿಗಬೇಕು, ಎಂಬಂತಹ ವಿಚಾರಗಳೇ ನನ್ನ ಮನಸ್ಸಿನಲ್ಲಿ ಬರುವುದಿಲ್ಲ. ಹೀಗಿರುವಾಗ, ‘ಈಗ ಉಳಿದಿರುವುದು ಪರೋಪಕಾರಕ್ಕಾಗಿ’, ಎಂಬ ಸಂತ ತುಕಾರಾಮ ಮಹಾರಾಜರ ವಚನದಂತೆ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾರೆಲ್ಲ ನನಗೆ ಸಹಾಯ ಮಾಡಿರುವರೋ, ಅದರ ಅಂಶದಷ್ಟಾದರೂ ಆಗಲಿ, ಆ ಋಣವನ್ನು ತೀರಿಸಲು ನಾನು ಬಾಧ್ಯನಾಗಿದ್ದೇನೆ. ಇದಕ್ಕಾಗಿ ಕೆಲವು ವರ್ಷಗಳಿಂದ ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಯಾವ ಕಾರ್ಯವನ್ನು ನಾನು ಕೈಗೆತ್ತಿಕೊಂಡಿರುವೆನೋ, ಅದನ್ನು ಇಂದಿಗೂ ಮಾಡುತ್ತಿದ್ದೇನೆ ಹಾಗೂ ಕೊನೆಯ ಶ್ವಾಸದವರೆಗೂ ಮಾಡುವೆನು; ಆದರೆ ಕಾರ್ಯದ ಭವಿಷ್ಯದ ಬಗ್ಗೆ ನನಗೆ ಕಾಳಜಿಯಾಗುವುದಿಲ್ಲ; ಏಕೆಂದರೆ ‘ಅದು ಈಶ್ವರೇಚ್ಛೆಯಿಂದ ಆಗಲಿಕ್ಕೇ ಇದೆ’, ಎಂದು ನನ್ನ ಶ್ರದ್ಧೆಯಾಗಿದೆ.’ – (ಪರಾತ್ಪರ ಗುರು) ಡಾ. ಆಠವಲೆ