ಗೆದ್ದಲು ಹಿಡಿದ ನೋಟುಗಳು

ಕೊಲಕಾತಾ (ಬಂಗಾಳ) – ಇಲ್ಲಿನ ಸುರೇಂದ್ರನಾಥ್ ಕಾಲೇಜಿನಲ್ಲಿರುವ ತೃಣಮೂಲ ಕಾಂಗ್ರೆಸ್ ಛಾತ್ರ ಪರಿಷತ್ತಿನ ಕಚೇರಿಯಿಂದ ಲಕ್ಷಾಂತರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ನೋಟುಗಳ ಬಹುದೊಡ್ಡ ಭಾಗವು ಗೆದ್ದಲು ಮತ್ತು ಕೀಟಗಳಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಬಹಳ ದಿನಗಳಿಂದ ಮುಚ್ಚಲ್ಪಟ್ಟಿದ್ದ ಈ ಕಚೇರಿಯನ್ನು ಆಡಳಿತಾತ್ಮಕ ಸೂಚನೆಗಳ ಮೇರೆಗೆ ತೆರೆದಾಗ ಈ ವಿಷಯ ಬೆಳಕಿಗೆ ಬಂದಿದೆ.
೧. ವಿದ್ಯಾರ್ಥಿ ಚುನಾವಣೆಗಳು ನಡೆಯದ ಕಾರಣ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಾಲೇಜಿನ ಈ ಕಚೇರಿಯನ್ನು ಹಲವು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಸ್ವಚ್ಛತೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಅಧಿಕಾರಿಗಳು ಕೊಠಡಿಯಲ್ಲಿದ್ದ ಕಪಾಟು ಒಂದನ್ನು ತೆರೆದರು. ಕಪಾಟಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಬ್ಯಾನರ್‌ಗಳು ಮತ್ತು ಭಿತ್ತಿಚಿತ್ರಗಳು, ಹಾಗೂ ಎರಡು ‘ಟ್ರಾಲಿ ಬ್ಯಾಗ್’ಗಳು ಸಹ ಪತ್ತೆಯಾದವು. ಅವುಗಳನ್ನು ತೆರೆದಾಗ ೫೦೦ ಮತ್ತು ೧೦೦ ರೂಪಾಯಿ ನೋಟುಗಳ ಕಂತೆಗಳು ತುಂಬಿದ್ದವು. ದೀರ್ಘಕಾಲದವರೆಗೆ ಕಪಾಟಿನಲ್ಲಿಟ್ಟಿದ್ದರಿಂದ ಬಹುತೇಕ ನೋಟುಗಳು ಗೆದ್ದಲಿಗೆ ಹಾಳಾಗಿದ್ದವು.
೨. ಭಾಜಪ ಶಾಸಕ ಸಜಲ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸುತ್ತಾ, ಈ ಜನ್ಮದಲ್ಲಿ ನಾನು ಇನ್ನೂ ಏನೇನನ್ನು ನೋಡುವುದು ಬಾಕಿ ಇದೆ? ನಾವು ತೃಣಮೂಲ ನಾಯಕರ ಮನೆಯಲ್ಲಿ ಹಣದ ರಾಶಿಗಳನ್ನು ನೋಡಿದ್ದೇವೆ. ತೃಣಮೂಲ ನಾಯಕರ ಸೆಣಬಿನ ಗದ್ದೆಯಲ್ಲಿ ಹಣದ ಕಂತೆ ನೋಡಿದ್ದೇವೆ. ಇಂದು ತೃಣಮೂಲದ ವಿದ್ಯಾರ್ಥಿ ನಾಯಕರು ಕಪಾಟುಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ ಮತ್ತು ಆ ಹಣವೂ ಹಾಳಾಗಿದೆ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!