ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ೩೦ ಏಪ್ರಿಲ್ ೨೦೧೮ ರಂದು ವೇದ, ಶಾಸ್ತ್ರ, ಇತ್ಯಾದಿಗಳನ್ನು ಅಧ್ಯಯನ ಮಾಡುವ ಕ್ಷಮತೆಯಿರುವವರಿಗಾಗಿ ‘ಸನಾತನ ಪುರೋಹಿತ ಪಾಠಶಾಲೆಯನ್ನು ಸ್ಥಾಪಿಸಲಾಯಿತು. ಈ ಶಿಕ್ಷಣ ಪಡೆದುಕೊಳ್ಳುವವರಿಗೆ ಪರಾತ್ಪರ ಗುರು ಡಾಕ್ಟರರು ‘ಪ್ರತಿಯೊಂದು ಧಾರ್ಮಿಕ ವಿಧಿಯ ಹಿಂದಿನ ಶಾಸ್ತ್ರವನ್ನು ಅರಿತುಕೊಂಡು ‘ಸಾಧನೆ ಎಂದು ಹೇಗೆ ಮಾಡುವುದು, ಎಂಬ ವಿಷಯದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಿವಿಧ ಯಜ್ಞಗಳಾಗುತ್ತಿರುತ್ತವೆ. ಅನಾರೋಗ್ಯದಿಂದ ಅತ್ಯಂತ ಆಯಾಸವಿದ್ದರೂ ಕೆಲವು ಯಜ್ಞಗಳಿಗೆ ಪರಾತ್ಪರ ಗುರು ಡಾಕ್ಟರರು ಉಪಸ್ಥಿತರಿರುತ್ತಾರೆ. ಆಗ ಸನಾತನದ ಪುರೋಹಿತರು ಮಾಡುವ ವಿವಿಧ ಕೃತಿಗಳ ಕಾರಣ ಅರಿತು ಭಾವಪೂರ್ಣ ಹಾಗೂ ಪರಿಪೂರ್ಣ ಮಾಡಬೇಕು, ಎಂಬುದು ಗುರುದೇವರ ತಳಮಳವಿರುತ್ತದೆ.
೧. ಆಶ್ರಮಕ್ಕೆ ಬಂದ ಪುರೋಹಿತರೊಬ್ಬರು ಸಾಯಂಕಾಲ ಗೋತ್ರವನ್ನು ಉಚ್ಚರಿಸಿ ನಮಸ್ಕರಿಸಿದ ಮೇಲೆ ಪ. ಪೂ. ಡಾಕ್ಟರರು ಆ ರೀತಿ ನಮಸ್ಕಾರ ಮಾಡುವುದರ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳುವುದು
‘ಒಮ್ಮೆ ಆಶ್ರಮಕ್ಕೆ ಪುರೋಹಿತರೊಬ್ಬರು ಬಂದಿದ್ದರು. ಅವರಿಗೆ ನಮಸ್ಕರಿಸುವಾಗ ನಾವು ಸಂಧ್ಯಾವಂದನೆಯಲ್ಲಿ ಗೋತ್ರವನ್ನು ಉಚ್ಛರಿಸಿ ನಮಸ್ಕಾರ ಮಾಡುವಂತೆ ಮಾಡಿದರು. ಆಗ ಪ.ಪೂ. ಡಾಕ್ಟರರು ಆ ವಿಷಯದಲ್ಲಿ ‘ಆ ರೀತಿ ನಮಸ್ಕಾರ ಮಾಡುವುದರ ಹಿಂದಿನ ಶಾಸ್ತ್ರವೇನು? ಅದೇ ರೀತಿ ಕೇವಲ ಪುರೋಹಿತರು ನಮಸ್ಕರಿಸುತ್ತಾರೆಯೇ ಅಥವಾ ಬೇರೆ ಸಮಯದಲ್ಲಿ ಕೂಡ ಅದೇ ರೀತಿ ಮಾಡಬೇಕೆ ?, ಎಂಬ ವಿಷಯದ ಬಗ್ಗೆ ನಮ್ಮನ್ನು ವಿಚಾರಿಸಿ ತಿಳಿದುಕೊಂಡರು. ಆ ಪ್ರಸಂಗದಲ್ಲಿ ನಮಗೆ ವಿಜ್ಞಾನಿಯೊಬ್ಬರ ನೆನಪಾಯಿತು. ಆ ವೈಜ್ಞಾನಿಕನ ಜ್ಞಾನದ ವಿಷಯದಲ್ಲಿ ವ್ಯಕ್ತಿಯೊಬ್ಬರು ಅವರನ್ನು ಪ್ರಶಂಸಿಸಿದಾಗ ಆ ವಿಜ್ಞಾನಿಯವರು ನುಡಿದರು, “ಈಗ ನನ್ನ ಬಳಿ ಯಾವ ಜ್ಞಾನವಿದೆಯೋ, ಅದು ಕೇವಲ ಸಮುದ್ರದ ದಡದಲ್ಲಿ ಅಗಾಧವಾಗಿರುವ ಮರಳಿನ ಒಂದು ಕಣದಷ್ಟು ಕೂಡ ಇಲ್ಲ ಎಂಬಂತೆ ಪ.ಪೂ. ಗುರುದೇವರು ಸರ್ವಜ್ಞರಾಗಿದ್ದರೂ ಸತತ ಕಲಿಯುವ ಸ್ಥಿತಿಯಲ್ಲಿರುವುದರಿಂದ ಅವರು ಸಮಷ್ಟಿಯ ಮುಂದೆ ಆದರ್ಶರಾಗಿದ್ದಾರೆ.
೨. ತೀರ್ಥ ತೆಗೆದುಕೊಳ್ಳುವಾಗ ಕೈಯಲ್ಲಿನ ಮುದ್ರೆಯ ಹಿಂದಿನ ಶಾಸ್ತ್ರದ ವಿಷಯದಲ್ಲಿ ಅಭ್ಯಾಸ ಮಾಡಿ ಆ ವಿಷಯವನ್ನು ದೈನಿಕದಲ್ಲಿ ಚೌಕಟ್ಟನ್ನು ತಯಾರಿಸಿ ಪ್ರಸಿದ್ಧಿ ಪಡಿಸಲು ಹೇಳುವುದು
ಪ್ರತಿದಿನ ಮಂತ್ರಪಠಣ ಮಾಡಿ ಪ.ಪೂ. ಡಾಕ್ಟರರಿಗೆ ತೀರ್ಥ ನೀಡಲಾಗುತ್ತದೆ. ಆಗ ‘ಕೈಯಲ್ಲಿನ ಮುದ್ರೆ ಹೇಗಿರಬೇಕು ?, ಎಂಬ ವಿಷಯದಲ್ಲಿ ಅವರು ಒಂದು ಮಾಸಿಕದಲ್ಲಿ ಮಾಹಿತಿಯನ್ನು ಓದಿ ‘ಆ ಮುದ್ರೆಯ ಶಾಸ್ತ್ರವೇನು ?, ಎಂದು ನಮಗೆ ಅಭ್ಯಾಸ ಮಾಡಲು ಹೇಳಿದರು, ಅದೇ ರೀತಿ ‘ಆ ರೀತಿಯ ಮುದ್ರೆ ಎಲ್ಲರಿಗೂ ತಿಳಿಯಲಿ, ಎಂಬುದಕ್ಕಾಗಿ ಒಂದು ಚೌಕಟ್ಟನ್ನು ತಯಾರಿಸಿ ಅದನ್ನು ದೈನಿಕದಲ್ಲಿ ಪ್ರಸಿದ್ಧಿ ಪಡಿಸಲು ಹೇಳಿದರು. ತೀರ್ಥ ತೆಗೆದುಕೊಳ್ಳುವ ಮುನ್ನ ಅವರು ಪ್ರಾರ್ಥನೆ ಮಾಡುತ್ತಿದ್ದರು. ಅನಂತರ ನಾವು ಒಂದು ಮಂತ್ರವನ್ನು ಹೇಳುತ್ತಿದ್ದೆವು.
೨ ಅ. ತೀರ್ಥವನ್ನು ತೆಗೆದುಕೊಳ್ಳುವಾಗ ಹೇಳುವ ಮಂತ್ರದ ಅರ್ಥವನ್ನು ತಿಳಿದುಕೊಳ್ಳುವುದು ಹಾಗೂ ಅದರ ಅರ್ಥವೇ ಪ್ರಾರ್ಥನಾ ಸ್ವರೂಪವಾಗಿರುವುದರಿಂದ ಬೇರೆ ಪ್ರಾರ್ಥನೆ ಮಾಡುವುದರ ಅಗತ್ಯವಿಲ್ಲವೆಂದು ಹೇಳುವುದು :
ಕೆಲವು ದಿನಗಳಲ್ಲಿಯೇ ಅವರು ಆ ಮಂತ್ರದ ಅರ್ಥವನ್ನು ತಿಳಿದುಕೊಂಡರು. ‘ಮಂತ್ರದ ಅರ್ಥವು ಪ್ರಾರ್ಥನಾ ಸ್ವರೂಪವಾಗಿರುವುದರಿಂದ ಪ್ರತ್ಯೇಕವಾಗಿ ಪ್ರಾರ್ಥನೆಯ ಅಗತ್ಯವಿಲ್ಲ, ಎಂಬುದನ್ನು ನಮ್ಮ ಗಮನಕ್ಕೆ ತಂದು ಕೊಟ್ಟರು. ಈ ಪ್ರಸಂಗದಿಂದ ‘ಪ.ಪೂ. ಗುರುದೇವರು ಪ್ರತಿಯೊಂದು ಅಂಶವನ್ನು ಎಷ್ಟು ಜಿಜ್ಞಾಸೆಯಿಂದ ಅರಿತುಕೊಳ್ಳುತ್ತಾರೆ ಹಾಗೂ ಬೇರೆಯವರಲ್ಲಿಯೂ ಕೂಡ ಅದೇ ರೀತಿ ಜಿಜ್ಞಾಸೆ ನಿರ್ಮಾಣವಾಗುವ ಪ್ರೇರಣೆ ಸಿಗುತ್ತದೆ, ಎಂದು ನಮಗೆ ತಿಳಿಯಿತು. – ಸನಾತನ ಪುರೋಹಿತ ಪಾಠಶಾಲೆಯ ಎಲ್ಲ ವಿದ್ಯಾರ್ಥಿಗಳು, ಸನಾತನ ಆಶ್ರಮ, ರಾಮನಾಥಿ, ಗೋವಾ.
ವಿಧಿಯ ಸಮಯದಲ್ಲಿ ಜಿಜ್ಞಾಸುವೃತ್ತಿಯ ದರ್ಶನ
‘ಪರಮ ಪೂಜ್ಯರ ಪಾದಪೂಜೆಯ ವಿಧಿ ನಡೆಯುತ್ತಿರುವಾಗ ಪರಮ ಪೂಜ್ಯರು ವಿಧಿಯಲ್ಲಿನ ಪ್ರತಿಯೊಂದು ಕೃತಿಯನ್ನೂ ಕೂಡ ಜಿಜ್ಞಾಸೆಯಿಂದ ತಿಳಿದುಕೊಳ್ಳುತ್ತಿದ್ದರು. ಆ ಕೃತಿ ಸರಿಯಾಗಿ ಆಗದೆ ಇದ್ದರೆ, ಅದನ್ನು ತಕ್ಷಣ ಹೇಳುತ್ತಿದ್ದರು. ‘ವಿಧಿಯಲ್ಲಿನ ಪ್ರತಿಯೊಂದು ಕೃತಿಯೂ ಶಾಸ್ತ್ರಾನುಸಾರ ನಡೆದರೆ, ಮಾತ್ರವೇ ಆ ವಿಧಿಯ ಪರಿಪೂರ್ಣ ಫಲ ಸಿಗುತ್ತದೆ, ಎಂಬುದಕ್ಕಾಗಿ ಪ್ರತಿಯೊಂದು ಕೃತಿ ಕೂಡ ಸರಿಯಾಗಿ ಆಗಲಿ, ಎಂಬುದಕ್ಕಾಗಿ ಅವರ ತಳಮಳ ಕಂಡು ಬರುತ್ತಿತ್ತು.
ಜ್ಞಾನಾರ್ಜನೆಯ ತಳಮಳ
‘ಪರಮ ಪೂಜ್ಯರ ಹುಟ್ಟುದಿನದ ನಿಮಿತ್ತ ವಿಧಿ ನಡೆಯುತ್ತಿರುವಾಗ ಒಮ್ಮೆ ಸಾಮವೇದೀ ಶ್ರೀ ಕಾಳೇಗುರುಜೀ ಹಾಗೂ ಅವರ ಸಹಯೋಗಿ ಗುರುಜೀಯವರು ಸಾಮವೇದ ಗಾಯನ ಮಾಡಿದರು. ಆಗ ಅವರು ಒಂದು ನಿರ್ದಿಷ್ಟ ಮುದ್ರೆಯನ್ನು ಮಾಡಿದರು. ಗ್ರಂಥದಲ್ಲಿ ಆ ಮುದ್ರೆಯನ್ನು ತೆಗೆದುಕೊಳ್ಳಬೇಕೆಂದು ಪರಮ ಪೂಜ್ಯರು ಆ ಮುದ್ರೆಯ ಬಗ್ಗೆ ತತ್ಪರತೆಯಿಂದ ಬರೆದಿಡಲು ಹೇಳಿದರು. – ಪೂ. ಶ್ರೀ. ಸಂದೀಪ ಆಳಶಿ (೨೯.೫.೨೦೧೬)