‘ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ಶ್ರೀಮಹಾವಿಷ್ಣುವಿನ ಅವತಾರರಾಗಿದ್ದಾರೆ, ಎಂಬುದನ್ನು ಸಪ್ತರ್ಷಿ, ಭೃಗು ಋಷಿಗಳು ಮತ್ತು ಅತ್ರಿ ಋಷಿಗಳು ನಾಡಿಪಟ್ಟಿಗಳಲ್ಲಿ ಬರೆದಿದ್ದಾರೆ. ಅನೇಕ ಸಂತರು ಪರಾತ್ಪರ ಗುರು ಡಾಕ್ಟರರ ಅವತಾರದ ಬಗ್ಗೆ ಹೇಳಿದ್ದಾರೆ. ಸಪ್ತರ್ಷಿಗಳು ಪರಾತ್ಪರ ಗುರುದೇವರಿಗೆ ಶ್ರೀವಿಷ್ಣುವಿನ ‘ಶ್ರೀಜಯಂತಾವತಾರ ಎಂದು ಹೇಳಿದ್ದಾರೆ. ಇಂತಹ ಜಯಂತಾವತಾರದ ವೈಶಿಷ್ಟ್ಯಗಳು ಮತ್ತು ಅವರ ಕಾರ್ಯವನ್ನು ತಿಳಿದುಕೊಳ್ಳೋಣ.
ಅವತಾರದ ಉತ್ಪತ್ತಿ
ಭಗವಾನ ಶ್ರೀಮಹಾವಿಷ್ಣು ಪಂಚಮಹಾಭೂತಗಳ ನಿರ್ಮಾಣವನ್ನು ಮಾಡುತ್ತಾನೆ. ಅವನು ತ್ರಿಗುಣಗಳ ನಿರ್ಮಾಣವನ್ನು ಮಾಡುತ್ತಾನೆ. ಪಂಚಮಹಾಭೂತಗಳು ಮತ್ತು ತ್ರಿಗುಣಗಳನ್ನು ಒಟ್ಟು ಸೇರಿಸಿ ಅದರಿಂದ ಸೃಷ್ಟಿಯ ನಿರ್ಮಾಣವನ್ನು ಮಾಡುತ್ತಾನೆ. ಸೃಷ್ಟಿಯ ನಿರ್ಮಾಣವಾದ ನಂತರ ಅವನು ಅದರ ಪಾಲನೆ, ಪೋಷಣೆ ಮತ್ತು ಸಮತೋಲನ ಮಾಡುತ್ತಿರುತ್ತಾನೆ. ಸೃಷ್ಟಿಯೆಂದರೆ ಅನಂತಕೋಟಿ ಬ್ರಹ್ಮಾಂಡಗಳು, ಸಪ್ತಲೋಕ, ಸಪ್ತಪಾತಾಳ, ದೇವತೆಗಳು, ಋಷಿ, ಮಾನವ, ಜೀವರಾಶಿ, ಕೃಷ್ಣವಿವರ, ಆಕಾಶಗಂಗೆ, ಸೌರಮಂಡಲ, ಪರ್ವತ, ಅರಣ್ಯ, ನದಿ, ಸಮುದ್ರ, ಭೂಮಿ ಇತ್ಯಾದಿಗಳನ್ನು ಅವನು ಈ ಸೃಷ್ಟಿಗೆ ಕಾಲಚಕ್ರದಲ್ಲಿ ಕಟ್ಟಿಡುತ್ತಾನೆ. ಅವನು ಭೂಮಿಯ ಮೇಲೆ ನಿಸರ್ಗದ ಮೂಲಕ ಜೀವರಾಶಿಗಳ ಪಾಲನೆಯನ್ನು ಮಾಡುತ್ತಾನೆ. ಶ್ರೀಮಹಾವಿಷ್ಣುವು ದೇವತೆ ಮತ್ತು ಋಷಿ ಇವರ ಮಾಧ್ಯಮದಿಂದ ನಿಸರ್ಗದ ನಿಯಮಗಳನ್ನು ಹಾಕಿ ಕೊಡುತ್ತಾನೆ. ಶ್ರೀಮಹಾವಿಷ್ಣು ಅವನಿಂದ ಉತ್ಪನ್ನವಾಗಿರುವ ಮಾನವನಿಗೆ ಪುನಃ ಅವನ ಬಳಿಗೆ ಬರುವ ಮಾರ್ಗವನ್ನು ತೋರಿಸುತ್ತಾನೆ ಮತ್ತು ಈ ಮಾರ್ಗಕ್ಕೇ ‘ಧರ್ಮ ಎನ್ನುತ್ತಾರೆ. ಯಾವಾಗ ‘ಧರ್ಮವು ಕುಸಿಯುತ್ತದೆ ಮತ್ತು ‘ಅಧರ್ಮವು ಬಲವಾಗುತ್ತದೋ, ಆಗ ಶ್ರೀವಿಷ್ಣು ವೈಕುಂಠ ಲೋಕದಿಂದ ಪೃಥ್ವಿಯ ಮೇಲೆ ಬರುತ್ತಾನೆ. ಇದಕ್ಕೆ ‘ಅವತಾರ ಎನ್ನುತ್ತಾರೆ.
ಅವತಾರದ ಕಾರ್ಯ
ಪೂರ್ಣಾವತಾರ ಶ್ರೀಕೃಷ್ಣನಲ್ಲಿ ಶ್ರೀವಿಷ್ಣುವಿನ ತತ್ತ್ವವು ಶೇ. ೧೦೦ ರಷ್ಟಿತ್ತು. ಆ ಕೃಷ್ಣನು ಅರ್ಜುನನಿಗೆ ಹೇಳಿದನು,
‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮ್ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭಾವಾಮಿ ಯುಗೇ ಯುಗೇ ||
ಭಗವಂತನು, ‘ನಾನು ಪ್ರತಿಯೊಂದು ಯುಗದಲ್ಲಿ ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಜನ್ಮ ತಾಳುತ್ತೇನೆ. ಎಂದು ಹೇಳುತ್ತಾನೆ. ಈಗ ಕಲಿಯುಗಾಂತರ್ಗತ ಕಲಿಯುಗದ ಚಕ್ರದಿಂದ ಕಲಿಯುಗಾಂತರ್ಗತ ಸತ್ಯಯುಗದೆಡೆಗೆ ಹೋಗುತ್ತಿರುವಾಗ ಆ ಸಂಧಿಕಾಲದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಅವತರಿಸಿದ್ದಾರೆ. ಭಗವಂತನ ಈ ಅವತಾರವು ‘ಧರ್ಮಸಂಸ್ಥಾಪನೆಗಾಗಿಯೇ ಇದೆ, ಎಂದು ಮಹರ್ಷಿಯವರು ಹೇಳುತ್ತಾರೆ.
೩. ಕಲಿಯುಗದಲ್ಲಿನ ಶ್ರೀವಿಷ್ಣುವಿನ ಶ್ರೀಜಯಂತಾವತಾರ
೩ ಅ. ಮಾನವನ ಅಹಂಕಾರವನ್ನು ನಾಶಗೊಳಿಸುವುದು ಮತ್ತು ‘ಈಶ್ವರನೇ ಎಲ್ಲವನ್ನು ಮಾಡುತ್ತಾನೆ ಎಂಬುದನ್ನು ಕಲಿಸಲು ಶ್ರೀವಿಷ್ಣುವಿನ ಶ್ರೀಜಯಂತಾವತಾರ ಆಗಿರುವುದು !
ಕಳೆದ ೨ ಸಾವಿರ ವರ್ಷಗಳಲ್ಲಿ ಮಾನವನ ಅಹಂಕಾರವು ತುಂಬಾ ಹೆಚ್ಚಾಗಿದೆ. ಅವನು ತನ್ನ ಸುಖಕ್ಕಾಗಿ ಧರ್ಮದ ಎಲ್ಲ ನಿಯಮಗಳನ್ನು ಮುರಿದನು. ಅವನು ಲೋಭದಿಂದ ಭ್ರಷ್ಟಾಚಾರವನ್ನು ಮಾಡಿದನು, ತನ್ನ ಸುಖಕ್ಕಾಗಿ ಇತರರಲ್ಲಿ ಕಲಹವನ್ನುಂಟು ಮಾಡಿದನು, ಸ್ವಾರ್ಥಕ್ಕಾಗಿ ನಿಸರ್ಗವನ್ನು ನಾಶಗೊಳಿಸಿದನು. ಮಾನವನು ಲೊಕೇಷಣೆಯಾಗಿರುವುದರಿಂದ ಅವನು ತನ್ನ ಸುಳ್ಳು ಪ್ರತಿಷ್ಠೆಯನ್ನು ತಯಾರಿಸಿದನು. ಅವನಲ್ಲಿ ‘ವಿಜ್ಞಾನದ ಸಹಾಯದಿಂದಾಗಿ ನಾನು ಏನೆಲ್ಲ ಮಾಡಬಹುದು, ಎಂಬ ಅಹಂಕಾರವು ಹೆಚ್ಚಿರುವುದರಿಂದ ಮಾನವನು ಈಶ್ವರನ ಅಸ್ತಿತ್ವವನ್ನೇ ಧಿಕ್ಕರಿಸಿದನು.
ಹಿಟ್ಲರ್‌ನಂತಹ ರಾಕ್ಷಸನು ಲಕ್ಷಗಟ್ಟಲೆ ಜನರ ಭಯಂಕರ ಮೃತ್ಯುವಾಗುವಂತೆ ಮಾಡಿದನು. ಅಮೇರಿಕಾ ಮುಂತಾದ ರಾಷ್ಟ್ರಗಳು ಯುದ್ಧ ಮಾಡಿದವು ಮತ್ತು ಮಾನವ ಹಾಗೆಯೇ ಭೂಮಿ ಇವುಗಳನ್ನು ನಾಶ ಮಾಡುವಂತಹ ಪರಮಾಣು ಶಸ್ತ್ರಗಳನ್ನು ಸಿದ್ಧಗೊಳಿಸಿದನು. ಅನೇಕ ರಾಷ್ಟ್ರಗಳ ಮೇಲೆ ಸಂಕಟಗಳು ಎರಗಿದವು, ಸಾಮಾನ್ಯ ಮನುಷ್ಯನಿಗೆ ಕೋಪ ಬರುವಂತಾಯಿತು ಮತ್ತು ಭೂದೇವಿಯ ಕಣ್ಣುಗಳಲ್ಲಿ ನೀರು ಬಂದವು.
ಆಗ ದೇವತೆಗಳು ಶ್ರೀವಿಷ್ಣುವಿನ ಬಳಿ ಪ್ರಾರ್ಥನೆ ಮಾಡಿದರು. ೧೯೪೧ ರ ವೈಶಾಖ ಪೂರ್ಣಿಮೆಯ ದಿನದಂದು ಕಾಶ್ಮೀರ ಪ್ರದೇಶದಲ್ಲಿನ ‘ಶಿವಖೋರಿ ಗುಹೆಯಲ್ಲಿ ಶ್ರೀವಿಷ್ಣುವಿನ ಜಯಂತಾವತಾರದ ಆಕಾಶವಾಣಿಯಾಯಿತು ಮತ್ತು ೧೯೪೨ ರ ವೈಶಾಖ ಕೃಷ್ಣ ಪಕ್ಷ ಸಪ್ತಮಿಯಂದು ಶ್ರೀವಿಷ್ಣುವು ‘ಜಯಂತ ಎಂಬ ಹೆಸರಿನಿಂದ ಅವತಾರ ಧಾರಣೆಯಾಯಿತು ಎಂದು ಸಪ್ತರ್ಷಿಗಳು ಹೇಳಿದ್ದಾರೆ. ೧೩.೫.೨೦೨೦ ಈ ದಿನದಂದು ಗುರುದೇವರಿಗೆ ೭೮ ವರ್ಷಗಳು ಪೂರ್ಣವಾಗಿ ಅವರು ೭೯ ನೇ ವರ್ಷದಲ್ಲಿ ಪಾದಾರ್ಪಣೆಯನ್ನು ಮಾಡಿದರು.
ಇಷ್ಟು ವರ್ಷಗಳಲ್ಲಿ ಅವರು ‘ಮಾನವನು ಸಾಧನೆಯನ್ನು ಮಾಡಿ ಅಹಂಕಾರವನ್ನು ನಾಶಗೊಳಿಸುವುದು ಇದಕ್ಕೆ ಆದ್ಯತೆ ನೀಡಿರುವರು ಮತ್ತು ‘ಈಶ್ವರನೇ ಎಲ್ಲವನ್ನು ಮಾಡುತ್ತಾನೆ ಎಂಬ ಬೋಧನೆಯನ್ನು ತಮ್ಮ ಕೃತಿಗಳಿಂದ ತೋರಿಸಿ ನೀಡಿರುವರು. ಅವರು ಸನಾತನದ ಸಾಧಕರಿಗೆ ಅಹಂಭಾವವನ್ನು ದೂರಗೊಳಿಸಲು ‘ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದ್ದಾರೆ.
೩ ಆ. ಅವತಾರಿಗಳಾಗಿದ್ದರೂ ‘ಈಶ್ವರನೇ ಎಲ್ಲವನ್ನು ಮಾಡುತ್ತಾನೆ, ಎಂಬ ಭಾವದಿಂದ ಜೀವನ ನಡೆಸುವುದು
ಪರಾತ್ಪರ ಗುರು ಡಾ. ಆಠವಲೆಯವರಿಗೆ ಯಾವುದೇ ಕೊರತೆ (ಸ್ಥೂಲ ಅಥವಾ ಸೂಕ್ಷ್ಮ) ಇಲ್ಲದಿದ್ದರೂ, ಅವರ ವೈಯಕ್ತಿಕ ಜೀವನವು ಒಬ್ಬ ಸನ್ಯಾಸಿಗಿಂತಲೂ ಸರಳ ಮತ್ತು ಸಾಮಾನ್ಯವಾಗಿದೆ. ‘ಸಾಧಕರಿಗಾಗಿ ಏನೆಲ್ಲವನ್ನೂ ಮಾಡಿಯೂ ತಾನು ಮಾತ್ರ ಏನೂ ಮಾಡದಂತೆ ಇರುವುದು, ಇದು ಅವರ ಜೀವನಶೈಲಿಯಾಗಿದೆ. ‘ಏನೂ ಮಾಡದೆ ಇರುವಂತೆ ಇರುವುದರಲ್ಲಿ ಈಶ್ವರೀ ಶಕ್ತಿಯ ಎಲ್ಲ ರಹಸ್ಯವು ಅಡಗಿದೆ, ಎಂಬ ಅರಿವು ಮಾಡಿಕೊಡಲು ಭಗವಂತನು ಗುರುದೇವರ ರೂಪದಲ್ಲಿ ಸಾಧಕರ ಜೊತೆಗಿರಲು ಬಂದಿರುವನು. ‘ಸಾಧಕರೊಂದಿಗೆ ಇರುವಾಗ ಅವನು ಸಾಧಕರಿಗೆ ಎಂದು ಅವನಂತೆಯೇ ಮತ್ತು ಎಂದು ತಯಾರಿಸಿದನು ?, ಎಂಬುದು ತಿಳಿಯಲೇ ಇಲ್ಲ. ‘ಅಹಂಶೂನ್ಯತೆ ಮತ್ತು ‘ಪ್ರೀತಿ ಎಲ್ಲಕ್ಕಿಂತ ದೊಡ್ಡ ಗುಣರೂಪದ ಅಸ್ತ್ರಗಳನ್ನು ಅವನು ಯಾವಾಗ ಮತ್ತು ಹೇಗೆ ಉಪಯೋಗಿಸಿದನು ?, ಎಂಬುದು ಕೂಡ ತಿಳಿಯಲಿಲ್ಲ.
೩ ಇ. ಗುರುದೇವರ ಸಾಮಾನ್ಯ ಜೀವನಶೈಲಿ ಬಗ್ಗೆ ಅರಿವಾದ ಕೆಲವು ವೈಶಿಷ್ಟ್ಯಗಳು
ಕಡಿಮೆ ಅವಶ್ಯಕತೆ ಇರುವುದು ಮತ್ತು ಎಂದಿಗೂ ಇತರರಿಗೆ ಅವಲಂಬಿಸದಿರುವುದು
೧. ಜೀವನ ಪೂರ್ತಿ ಇತರರ ಆನಂದದ ಬಗ್ಗೆ ವಿಚಾರ ಮಾಡುವುದು ಮತ್ತು ಅದಕ್ಕಾಗಿ ತನ್ನ ಶರೀರವನ್ನು ಸವೆಸುವುದು.
೨. ಸಾಧಕರಲ್ಲಿ ಈಶ್ವರೀ ಗುಣಗಳನ್ನು ನಿರ್ಮಾಣವಾಗಲು ಅವರನ್ನು ಕ್ಷಣಕ್ಷಣಕ್ಕೂ ಸಿದ್ಧಪಡಿಸುವುದು ಮತ್ತು ಅವರಿಗೆ ಕಠಿಣ ಪರಿಸ್ಥಿತಿಯಿಂದ ನಿಧಾನವಾಗಿ ಹೊರಗೆ ತೆಗೆಯುವುದು
೩. ಪರಾತ್ಪರ ಗುರುಪದವಿಯಲ್ಲಿದ್ದರೂ ಸತತವಾಗಿ ಶಿಷ್ಯಭಾವದಲ್ಲಿರುವುದು ಮತ್ತು ಸಾಧಕರಿಗೆ ಸಹಜವಾಗಿ ಆಧ್ಯಾತ್ಮಿಕ ಅಧಿಕಾರವನ್ನು ಪ್ರಾಪ್ತ ಮಾಡಿಸುವುದು
೪. ಜೀವನವೆಲ್ಲ ‘ಇದು ನನ್ನಿಂದ ಆಯಿತು; ಆದರೆ ನಾನು ಮಾಡಲಿಲ್ಲ. ಎಂಬ ಸ್ಥಿತಿಯಲ್ಲಿರುವುದು.
೪. ಶ್ರಿವಿಷ್ಣುವಿನ ಶಕ್ತಿ, ಎಂದರೆ ಶ್ರೀಮಹಾಲಕ್ಷ್ಮೀ ಇವಳೆ ಯೋಗಮಾಯೆ ಮತ್ತು ಪ್ರಕೃತಿಯಾಗಿರುವುದು
೪ ಅ. ಅವತಾರರೊಂದಿಗೆ ಇರುವ ಭಕ್ತನಿಗೆ ಶ್ರೀವಿಷ್ಣುವಿನ ತತ್ತ್ವರೂಪದ ಅನುಭೂತಿಯು ಏಕೆ ಬರುವುದಿಲ್ಲ ?
ಶ್ರೀವಿಷ್ಣುವು ಆನಂದ ಸ್ವರೂಪನಾಗಿರುವನು. ಅವನ ಮೂಲ ಸ್ವರೂಪದ ಅನುಭೂತಿಯು ಬಂದ ನಂತರ ನಾವು ಕರ್ಮವನ್ನು ಮಾಡುವುದನ್ನು ಬಿಟ್ಟುಕೊಡುವೆವು. ಹೀಗೆ ಆಗಬಾರದೆಂದು ಶ್ರೀವಿಷ್ಣು ವಿನ ಮಾಯೆಯು ಅವನ ಆಜ್ಞೆಯಿಂದ ಭಕ್ತರಿಗಾಗಿ ಕಾರ್ಯನಿರತ ವಾಗಿರುತ್ತದೆ. ಆದುದರಿಂದ ಭಕ್ತನು ಮಾಯೆಯಲ್ಲಿರುತ್ತಾನೆ ಮತ್ತು ಅವನಿಗೆ ಮಾಯೆಯಲ್ಲಿದ್ದು ಸಾಧನೆ ಮಾಡಬೇಕಾಗುತ್ತದೆ. ಅವತಾರ ಕಾರ್ಯವು ಪೂರ್ಣಗೊಳಿಸಿದ ನಂತರ ಶ್ರೀವಿಷ್ಣುವಿನ ಮಾಯೆಯು ದೂರವಾಗುತ್ತದೆ ಮತ್ತು ಶ್ರೀವಿಷ್ಣುವಿನ ಭಕ್ತರಿಗೆ ಅವನ ಮೂಲ ಸಚ್ಚಿದಾನಂದ ಸ್ವರೂಪದ ಅನುಭೂತಿಯು ಬರುತ್ತದೆ. ಶ್ರೀವಿಷ್ಣುಮಾಮೆ, ಎಂದರೆ ‘ಶ್ರೀಮಹಾಲಕ್ಷ್ಮೀಯಾಗಿದೆ !
೫. ಅವತಾರವು ಪೃಥ್ವಿಯ ಮೇಲೆ ಜನ್ಮತಾಳಿದ ನಂತರ ಅವರ ಸೇವೆಗಾಗಿ ಜೀವಗಳು ಒಟ್ಟಿಗೆ ಹೇಗೆ ಬರುತ್ತವೆ ?
‘ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮವು ಭಾರತದಲ್ಲಿನ ಮಹಾರಾಷ್ಟ್ರ ರಾಜ್ಯದಲ್ಲಿನ ನಾಗೊಠಣೆ ಎಂಬ ಗ್ರಾಮದಲ್ಲಿ ಆಯಿತು. ಅವರು ಮುಂಬೈಯಲ್ಲಿದ್ದಾಗ ಕೆಲವು ಜೀವಗಳು ಅವರ ಸಂಪರ್ಕಕ್ಕೆ ಬಂದವು. ಮುಂದೆ ಗುರುದೇವರು ಗೋವಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಅನೇಕ ಸ್ಥಳಗಳಲ್ಲಿ ಹೋಗಲು ಆರಂಭಿಸಿದ ನಂತರ ಗೋವಾದಲ್ಲಿನ ಮತ್ತು ಮಹಾರಾಷ್ಟ್ರದಲ್ಲಿನ ಕೆಲವು ಜೀವಗಳು ಅವರ ಸಂಪರ್ಕಕ್ಕೆ ಬಂದವು. ಮುಂದೆ ಆ ಸಾಧಕರ ಮೂಲಕ ಇತರ ರಾಜ್ಯಗಳಲ್ಲಿನ ಕೆಲವು ಜೀವಗಳು ಜೋಡಿಸಲ್ಪಟ್ಟವು. ಇದೆಲ್ಲವೂ ಹೇಗೆ ಘಟಿಸಿತು ?, ಇದರ ರಹಸ್ಯವೇನು ?, ಈ ಕುರಿತು ಆದ್ಯ ಶಂಕರಾಚಾರ್ಯರ ‘ಶ್ರೀವಿಷ್ಣುಪಾದಾದಿಕೇಶಾನ್ತಸ್ತೋತ್ರದಲ್ಲಿ ಹೇಳಲಾಗಿದೆ. ಅವರು, ‘ಸತ್ವ, ರಜ ಮತ್ತು ತಮ ಈ ತ್ರಿಗುಣವೆಂದರೆ ಪ್ರಕೃತಿ ಮತ್ತು ಆ ಪ್ರಕೃತಿ, ಅಂದರೆ ಶ್ರೀವಿಷ್ಣುವಿನ ಶಕ್ತಿಯು ಶ್ರೀಮಹಾಲಕ್ಷ್ಮೀ ಹೌದು. ತ್ರಿಗುಣಗಳ ಸಹಾಯದಿಂದಾಗಿ ಶ್ರೀ ಮಹಾಲಕ್ಷ್ಮೀಯು ಸಹಜವಾಗಿ ಮಾಡುತ್ತಾಳೆ. ಇದರಿಂದಾಗಿ ಜೀವಗಳು ಶ್ರೀವಿಷ್ಣುವಿನ ಬಳಿಗೆ ಬರುತ್ತವೆ ಅಥವಾ ದೂರ ಹೋಗುತ್ತವೆ. ಸತ್ತ್ವ ಗುಣಗಳ ಸಹಾಯದಿಂದಾಗಿ ಶ್ರೀ ಮಹಾಲಕ್ಷ್ಮೀಯು ಎಲ್ಲ ನಿರ್ಜೀವ ಮತ್ತು ಸಜೀವ ಪ್ರಾಣಿಜೀವಿಗಳ ಪಾಲನೆ-ಪೋಷಣೆಯನ್ನು ಮಾಡುತ್ತಾಳೆ. ಶ್ರೀವಿಷ್ಣುವಿನ ಆಜ್ಞೆಯಂತೆ ಶ್ರೀಮಹಾಲಕ್ಷ್ಮಿಯು ಯಾವಾಗ ಯಾರಾದರೊಬ್ಬ ಭಕ್ತನ ಮೇಲೆ ಕೃಪೆ ಮಾಡುತ್ತಾಳೆಯೋ, ಆಗ ಆ ಭಕ್ತನ ಜೀವನದಲ್ಲಿ ಸುಖ-ಸಮೃದ್ಧಿಯು ನಿರ್ಮಾಣವಾಗುತ್ತದೆ. ಇಂತಹ ಆ ಶ್ರೀ ಮಹಾಲಕ್ಷ್ಮೀಗೆ ನನ್ನ ತ್ರಿಕಾಲ ವಂದನೆಗಳು, ಎಂದು ಹೇಳಿದರು. ಶ್ರೀ ಮಹಾಲಕ್ಷ್ಮೀಯ ಕೃಪೆಯಿಂದಾಗಿ ಎಲ್ಲ ಸಾಧಕರ ಜೀವನದಲ್ಲಿ ಹೇಗೆ ಪ್ರಸಂಗಗಳು ಘಟಿಸಿದವು ಎಂದರೆ, ಅವರು ಬುದ್ಧಿಯಿಂದ ಸಾಧನೆ ಮಾಡುವ ನಿರ್ಣಯವನ್ನು ತೆಗೆದುಕೊಂಡರು ಮತ್ತು ಸಾಧಕರು ಶ್ರೀವಿಷ್ಣುಸ್ವರೂಪ ಗುರುದೇವರ ಸಂಪರ್ಕಕ್ಕೆ ಬಂದರು.
೬. ಶ್ರೀವಿಷ್ಣುವಿನ ಅಭಯ ಹಸ್ತದ ಮಹತ್ವ !
ಶ್ರೀವಿಷ್ಣುವಿನ ಅಭಯ ಹಸ್ತದ ಕುರಿತು ನಾವೆಲ್ಲರೂ ಕೇಳಿದ್ದೇವೆ. ಸದ್ಯ ಸಂಪೂರ್ಣ ಪೃಥ್ವಿಯ ಮೇಲೆ ‘ಕೊರೋನಾ ವಿಷಾಣುರೂಪದ ಜಾಗತಿಕಕ ಸಂಕಟವಿದೆ. ಇದು ಆಪತ್ಕಾಲವೇ ಆಗಿದೆ. ಸಮಾಜದಲ್ಲಿನ ಜನರು, ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳಲ್ಲಿ ಭಯ, ಚಿಂತೆ ಮತ್ತು ಒತ್ತಡ ಇವುಗಳು ಹಬ್ಬಿವೆ. ಅನೇಕ ಕೋಟಿ ಜನರು ಕೇವಲ ಒಂದು ವೇಳೆ ಊಟವನ್ನು ಮಾಡುತ್ತಿದ್ದರೆ, ಅನೇಕ ಜನರಿಗೆ ಮನೆಗಳು ಉಳಿದಿಲ್ಲ. ‘ಭವಿಷ್ಯವು ಹೇಗಿರಬಹುದು ?, ಎಂಬ ಚಿಂತೆಯಿಂದ ಅನೇಕ ಜನರು ಮಾನಸಿಕ ರೋಗಿಗಳಾಗುತ್ತಿದ್ದಾರೆ. ತದ್ವಿರುದ್ಧ ಸನಾತನದ ಸಾಧಕರು ಸಾಧನೆ ಮಾಡುತ್ತಿರುವುದರಿಂದ ಶ್ರೀವಿಷ್ಣುವಿನ ಅವತಾರರಾದ ಪರಾತ್ಪರ ಗುರು ಡಾ. ಆಠವಲೆಯವರ ಅಭಯ ಹಸ್ತದ ಕೆಳಗೆ ಸುರಕ್ಷಿತವಾಗಿದ್ದಾರೆ. ಆಪತ್ಕಾಲದಲ್ಲಿಯೇ ಶ್ರೀವಿಷ್ಣುವಿನ ‘ಅಭಯ ಹಸ್ತದ ಮಹತ್ವವು ಗಮನಕ್ಕೆ ಬರುತ್ತದೆ. ಈ ಮುಂದೆಯೂ ಕೊರೋನಾದಂತಹ ಅನೇಕ ಆಪತ್ಕಾಲವು ಬರಬಹುದು; ಆದರೆ ಗುರುದೇವರು ಸಾಧಕರ ಕೈ ಹಿಡಿದು ಅವರನ್ನು ಹೂವಿನಂತೆ ಕಾಪಾಡಿ ಕರೆದೊಯ್ಯುವರು. ‘ಶ್ರೀವಿಷ್ಣುವಿನ ಅಭಯ ಹಸ್ತವು ನಿರಂತರ ಎಲ್ಲ ಸಾಧಕರ ತಲೆಯ ಮೇಲಿರಲಿ ಮತ್ತು ಅವನ ಕೃಪಾಛತ್ರದ ಕೆಳಗೆ ಎಲ್ಲ ಸಾಧಕರು ಆನಂದದಿಂದ ಆಪತ್ಕಾಲಕ್ಕೆ ಎದುರಿಸುವಂತಾಗಲಿ, ಎಂಬುದೇ ಶ್ರೀವಿಷ್ಣುವಿನ ಅವತಾರರಾಗಿರುವ ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.
– ಶ್ರಿ. ವಿನಾಯಕ ಶಾನಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೫.೨೦೨೦)