ಉಚ್ಚಕೋಟಿಯ ಜಿಜ್ಞಾಸುವೃತ್ತಿಯಿಂದಾಗಿ ಸೂಕ್ಷ್ಮ ಜಗತ್ತಿನ ಬಗ್ಗೆ ಅಮೂಲ್ಯ ಜ್ಞಾನದ ಖಜಾನೆಯನ್ನು ಮನುಕುಲಕ್ಕೆ ನೀಡುವ ಜ್ಞಾನಗುರು ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ದಿವ್ಯ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಸನಾತನದ ಸಂತರು ಹಾಗೂ ಸಾಧಕರು !

ಪರಾತ್ಪರ ಗುರು ಡಾಕ್ಟರರಿಗೆ ಮೊದಲಿಗೆ ತಮ್ಮ ಧ್ಯಾನದಲ್ಲಿ ಸುಪ್ತ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿದ್ದವು. ಅನಂತರ ಸನಾತನದ ಸಾಧಕಿ ಸೌ. (ಈಗಿನ ಸದ್ಗುರು) ಅಂಜಲಿ ಗಾಡಗೀಳ ಇವರಿಗೆ ಅಧ್ಯಾತ್ಮದಲ್ಲಿನ ಕೆಲವು ವಿಷಯಗಳ ಬಗ್ಗೆ ತನ್ನಿಂದ ತಾನೆ ಜ್ಞಾನವು ಸ್ಫುರಿಸಿತು. ಪರಾತ್ಪರ ಗುರುದೇವರ ಇಚ್ಛೆಯನ್ನು ದೇವರು ಈ ರೀತಿ ಪೂರ್ಣಗೊಳಿಸಿದನು. ಕಾಲಾಂತರದಲ್ಲಿ ಶ್ರೀ. ರಾಮ ಹೊನಪ, ಶ್ರೀ. ನಿಷಾದ ದೇಶಮುಖ, ಕು. ಮಧುರಾ ಭೋಸಲೆ ಮುಂತಾದ ಸಾಧಕರಿಗೂ ಇಂತಹ ಜ್ಞಾನವು ಪ್ರಾಪ್ತವಾಗತೊಡಗಿತು.

ಗಾಜಿನ ಭರಣಿಯಲ್ಲಿನ ಕಂಚಿನ ಬಟ್ಟಲಲ್ಲಿ ತನ್ನಿಂದ ತಾನೆ ತಯಾರಾದ ಅತ್ತರ್‌ಗೆ ಸಂಬಂಧಿಸಿದ ಸೂಕ್ಷ್ಮದಲ್ಲಿನ ಪ್ರಕ್ರಿಯೆಯನ್ನು ಸೌ. (ಈಗಿನ ಸದ್ಗುರು) ಗಾಡಗೀಳ ಇವರಿಂದ ಜಿಜ್ಞಾಸೆಯಿಂದ ತಿಳಿದುಕೊಳ್ಳುತ್ತಿರುವ ಪರಾತ್ಪರ ಗುರು ಡಾಕ್ಟರ್

 

ಎಸ್.ಎಸ್.ಆರ್.ಎಫ್.ನ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮದಲ್ಲಿನ ವೈಶಿಷ್ಟ್ಯಗಳನ್ನು ದರ್ಶಿಸುವ ಚಿತ್ರದಲ್ಲಿನ ಸೂಕ್ಷ್ಮ-ಸ್ಪಂದನಗಳನ್ನು ಪರಿಶೀಲಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರುಗಳಿಗೆ ವಿವಿಧ ವಿಷಯಗಳ ಬಗ್ಗೆ ಜ್ಞಾನ ದೊರಕುವ ಪ್ರಕ್ರಿಯೆಯ ಹಿಂದಿನ ಶಾಸ್ತ್ರ

‘ಪರಾತ್ಪರ ಗುರುದೇವರ ಜಿಜ್ಞಾಸುವಾಚಕ ಧಾರಣ ಶಕ್ತಿಯು ಸಮಷ್ಟಿಗೆ ಅತ್ಯಂತ ಅಮೂಲ್ಯ ಜ್ಞಾನದ ಖಜಾನೆಯನ್ನು ಲಭ್ಯ ಮಾಡಿಕೊಡಲು ಇರುವುದರಿಂದ ಅವರಿಗೆ ದೇಹಾಸಕ್ತಿಯ ಆಚೆಗೆ ಹೋದ ಅವಸ್ಥೆಯಲ್ಲಿಯೂ ತಮ್ಮ ಪ್ರಾಣಜ್ಯೋತಿಗೆ ಸಂಬಂಧಿಸಿದ ತತ್ತ್ವಜ್ಞಾನದ ಸಂದರ್ಭದಲ್ಲಿ ತಿಳಿದುಕೊಳ್ಳಬೇಕೆಂದು ಅನಿಸುತ್ತದೆ. ಗುರುದೇವರ ಈ ಜಿಜ್ಞಾಸೆಯಿಂದಾಗಿಯೇ ಸಾಧಕರಿಗೆ ಮಾಯೆಯಲ್ಲಿನ ಅಧ್ಯಾತ್ಮಶಾಸ್ತ್ರದ ಈಶ್ವರಜನ್ಯ ಜ್ಞಾನ ರೂಪವು ಕಲಿಯಲು ಸಾಧ್ಯವಾಯಿತು.  – (ಸದ್ಗುರು) ಸೌ. ಅಂಜಲಿ ಗಾಡಗೀಳ

೧. ದೈನಂದಿನ ಜೀವನದಲ್ಲಿ ಘಟಿಸುವ ಪ್ರತಿಯೊಂದು ವಿಷಯದ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಅರಿತುಕೊಳ್ಳುವ ತಳಮಳವಿರುವ ಪರಾತ್ಪರ ಗುರು ಡಾಕ್ಟರರು !

‘ಪ್ರಾಣಶಕ್ತಿಯು ಬಹಳ ಕಡಿಮೆಯಿರುವಾಗಲೂ ಪರಾತ್ಪರ ಗುರು ಡಾಕ್ಟರರು ತಮ್ಮ ಸುತ್ತಲೂ ಘಟಿಸುತ್ತಿರುವ ಪ್ರತಿಯೊಂದು ವಿಷಯದ ನಿರೀಕ್ಷಣೆಯನ್ನು ಮಾಡುತ್ತಿರುತ್ತಾರೆ ಹಾಗೂ ಅದರ ನಿಯಮಿತ ನೋಂದಣಿಯನ್ನು ಮಾಡುತ್ತಿರುತ್ತಾರೆ. ಈ ಪ್ರತಿಯೊಂದು ನಿರೀಕ್ಷಣೆಯ ಬಗ್ಗೆ ಅವರು ಸಾಧಕರೊಂದಿಗೆ ಮಾತನಾಡಿ ಅದರಲ್ಲಿನ ಸೂಕ್ಷ್ಮತೆಯನ್ನೂ ತಿಳಿದುಕೊಳ್ಳುತ್ತಾರೆ ಹಾಗೂ ಈ ವಿಷಯದ ಬಗ್ಗೆ ಎಲ್ಲರಿಗೂ ತಿಳಿಯಬೇಕೆಂದು, ಅದಕ್ಕೆ ಸಂಬಂಧಿಸಿದ ಚಿಕ್ಕ ಚಿಕ್ಕ ಚೌಕಟ್ಟುಗಳನ್ನು ತಯಾರಿಸಿ ಅದನ್ನು ದೈನಿಕ ‘ಸನಾತನ ಪ್ರಭಾತದಲ್ಲಿ ಮುದ್ರಿಸಲು ತಕ್ಷಣ ಕೊಡುತ್ತಿರುತ್ತಾರೆ.

೨. ಪರಾತ್ಪರ ಗುರು ಡಾಕ್ಟರರ ನಿರೀಕ್ಷಣೆಯಿಂದ ಹಾಗೂ ಅವರು ತೆಗೆದ ಪ್ರಶ್ನೆಗಳಿಂದ ಒಂದು ದೊಡ್ಡ ಅಧ್ಯಾತ್ಮಶಾಸ್ತ್ರೀಯ ವಿವೇಚನೆಯೇ ರಹಸ್ಯದ ರೂಪದಲ್ಲಿ ಜಗತ್ತಿನೆದುರು ಬರುವುದು

ಕೋಣೆಯಲ್ಲಿ ಒಂದು ಹುಳ ಸತ್ತು ಬಿದ್ದಿದ್ದರೂ, ‘ಅದು ಎಷ್ಟು ಗಂಟೆ ಜೀವಂತವಿತ್ತು, ಅದರ ಮೃತ್ಯು ಯಾವಾಗ ಆಯಿತು, ಹಾಗೆಯೇ ಒಂದು ನೊಣವು ನೆಲದ ಮೇಲೆ ಪ್ರಜ್ಞೆಯಿಲ್ಲದೇ ಬಿದ್ದಿದ್ದರೆ ಹಾಗೂ ನಂತರ ಅದು ಅಲ್ಲಿಂದ ಹಾರಿ ಹೋದರೂ, ಆ ಬಗ್ಗೆ ಅವರ, ‘ಕೆಲವು ಹುಳಗಳು ತಕ್ಷಣ ಸಾಯುತ್ತವೆ, ಕೆಲವು ಹುಳಗಳು ಒದ್ದಾಡಿದ ನಂತರ ಪುನಃ ಹಾರಿ ಹೋಗುತ್ತವೆ ಮತ್ತು ಇನ್ನೂ ಕೆಲವು ಹುಳಗಳು ಈ ಸ್ಥಳದಲ್ಲಿ ಸತ್ತಂತೆ ಕಂಡು ಬರುತ್ತವೆ ಹಾಗೂ ಕೆಲವು ಸಮಯದ ನಂತರ ಅವು ಅಲ್ಲಿ ಇರುವುದಿಲ್ಲ, ಇವುಗಳ ಹಿಂದಿನ ಶಾಸ್ತ್ರವೇನು ?, ಎಂಬ ಪ್ರಶ್ನೆಗಳಿವೆ. ಇವುಗಳ ಬಗ್ಗೆ ಎಂತಹ ಪ್ರಶ್ನೆಗಳನ್ನು ಕೇಳುವುದು; ಎಂದು ಒಬ್ಬರಿಗೆ ಅನಿಸಬಹುದು; ಆದರೆ ಪರಾತ್ಪರ ಗುರು ಡಾಕ್ಟರರ ನಿರೀಕ್ಷಣೆಯಿಂದ ಹಾಗೂ ಅವರು ತೆಗೆದ ಪ್ರಶ್ನೆಗಳಿಂದ ಒಂದು ದೊಡ್ಡ ಅಧ್ಯಾತ್ಮಶಾಸ್ತ್ರೀಯ ವಿವೇಚನೆಯೇ ರಹಸ್ಯದ ರೂಪದಲ್ಲಿ ಒಂದು ಪ್ರಗಲ್ಭ ಶಾಸ್ತ್ರಯೋಗವು ಜಗತ್ತಿನೆದುರು ಬರುತ್ತದೆ ಹಾಗೂ ನಿಜವಾಗಿಯೂ, ಪ್ರತಿಯೊಂದು ವಿಷಯವು ಘಟಿಸುವ ಹಿಂದಿನ ಈಶ್ವರನ ಕಾರ್ಯಕಾರಣಭಾವವು ಎಷ್ಟು ಉದಾತ್ತವಿರುತ್ತದೆ, ಎಂಬುದರ ಜ್ಞಾನವೂ ಇದರಿಂದ ಆಗುತ್ತದೆ.

ಇಂತಹ ಅನೇಕ ರೀತಿಯ ನಿರೀಕ್ಷಣೆಗಳಿಂದ ಅವರು ಪ್ರಶ್ನೆಗಳನ್ನೂ ಬರೆದಿಡುತ್ತಾರೆ ಹಾಗೂ ಈ ಪ್ರಶ್ನೆಗಳ ಉತ್ತರಗಳನ್ನು ಅವರು ‘ಸೂಕ್ಷ್ಮ-ಜಗತ್ತಿನಲ್ಲಿನ ‘ಓರ್ವ ವಿದ್ವಾಂಸರಿಗೆ ಕೇಳಲೆಂದು ಬೆರಳಚ್ಚು ಮಾಡಿಸಿಕೊಳ್ಳುತ್ತಾರೆ. ಮುಂದಿನ ಪೀಳಿಗೆಗಾಗಿ ಈ ಪ್ರಶ್ನೆಗಳೂ ಒಂದು ಗ್ರಂಥದ ರೂಪದಲ್ಲಿ ಮನುಕುಲಕ್ಕೆ  ಸಂಗ್ರಹವಾಗುವವು, ಇಷ್ಟು ಅವು ಚೈತನ್ಯಮಯ ಹಾಗೂ ಸುಂದರವಿರುತ್ತವೆ.

೩. ಪ.ಪೂ. ಡಾಕ್ಟರರ ಜ್ಞಾನಾರ್ಜನೆಯ ತಳಮಳದಿಂದಲೇ ಸನಾತನದ ಬಳಿ ೮ ಸಾವಿರ ಗ್ರಂಥಗಳು ನಿರ್ಮಾಣವಾಗುವಷ್ಟು ಜ್ಞಾನರೂಪಿ ಮಾಹಿತಿಯು ಸಂಗ್ರಹವಿದೆ !

ಇಲ್ಲಿಯವರೆಗೆ ಅನೇಕ ವಿಧದ, ಅನೇಕ ವಿಷಯಗಳ ಬಗ್ಗೆ ಕೇಳಿದ ಪ್ರಶ್ನೆಗಳ ಪಟ್ಟಿಯನ್ನು ಅವರು ತಯಾರಿಸಿಟ್ಟುಕೊಂಡಿದ್ದಾರೆ. ಪ್ರತಿಯೊಂದು ಪ್ರಶ್ನೆಯ ಉತ್ತರ ‘ಸೂಕ್ಷ್ಮ ಜಗತ್ತಿನಿಂದ ಬಂದ ನಂತರ ಅವರು ಆ ಬಗ್ಗೆ ಮರುಪ್ರಶ್ನೆ ಕೇಳುತ್ತಾರೆ. ವಿಷಯವು ಸಮಾಧಾನಕರವಾಗಿ ಪೂರ್ಣವಾಗದ ತನಕ ಅವರು ಪ್ರಶ್ನೆ ಕೇಳುತ್ತಿರುತ್ತಾರೆ. ಸಾಮಾನ್ಯ ಮನುಷ್ಯನಿದ್ದರೆ, ಅವನಿಗೆ ಈ ವಿಷಯದ ಬಗ್ಗೆ ಎಂದಾದರೂ ಅತ್ಯಂತ ಬೇಸರ ಬರಬಹುದಿತ್ತು. ಆದರೆ ಪರಾತ್ಪರ ಗುರು ಡಾಕ್ಟರರಂತಹ ಗುರುದೇವರು ಇಡೀ ಸಮಷ್ಟಿಗೆ ಚಿಕ್ಕ ಚಿಕ್ಕ ವಿಷಯಗಳ ಹಿಂದಿನ ಶಾಸ್ತ್ರವು ತಿಳಿಯಬೇಕೆಂದು, ಅಹೋರಾತ್ರಿ ಪರಿಶ್ರಮಪಡುತ್ತಿರುತ್ತಾರೆ.

ಮಧ್ಯಂತರದಲ್ಲಿ ಕೆಲವೊಮ್ಮೆ ದಣಿವಿನಿಂದಾಗಿ ಮಂಚದ ಮೇಲೆ ಮಲಗುವಂತಾದರೆ ಅವರ ಕೈಯಲ್ಲಿ ಯಾವುದಾದರೂ ನಿಯತಕಾಲಿಕೆ/ಗ್ರಂಥವಿರುತ್ತದೆ. ಅದರ ಮೇಲೆ ಗುರುತು ಹಾಕುತ್ತಿರುತ್ತಾರೆ ಹಾಗೂ ಆ ಮಾಹಿತಿಯಿಂದಲೂ ಸಮಷ್ಟಿಗೆ ಜ್ಞಾನ ಸಿಗಬೇಕೆಂದು, ಬೆರಳಚ್ಚು ಮಾಡಲು ಕೊಡುತ್ತಾರೆ. ಎಷ್ಟು ಈ ಜ್ಞಾನಾರ್ಜನೆಯ ತಳಮಳ. ಅವರ ಈ ನಿರಂತರವಾಗಿ ನಡೆದಿರುವ ಜ್ಞಾನಾರ್ಜನೆಯ ತಳಮಳದಿಂದಲೇ ಸನಾತನದ ಬಳಿ ೮ ಸಾವಿರ ಗ್ರಂಥಗಳು ನಿರ್ಮಾಣವಾಗುವಷ್ಟು, ಜ್ಞಾನರೂಪಿ ಮಾಹಿತಿಯು ಸಂಗ್ರಹಗೊಂಡಿದೆ. ಇಲ್ಲಿಯವರೆಗಿನ ಕಾರ್ಯವು ಗ್ರಂಥರೂಪದಲ್ಲಿ ಪೂರ್ಣಗೊಳ್ಳಲು ಮುಂದಿನ ಮೂರು-ನಾಲ್ಕು ಪೀಳಿಗೆಗಳು ಬೇಕಾಗುವುದು.

ಅವರ ಆಶ್ರಯದಲ್ಲಿದ್ದು ಅವರ ಆಧ್ಯಾತ್ಮಿಕ ಸ್ತರದಲ್ಲಿ ನಾವು ಹೆಚ್ಚೆಚ್ಚು ಲಾಭ ಮಾಡಿಕೊಳ್ಳೋಣ ಹಾಗೂ ‘ಅವರಂತಹ ಸಮಷ್ಟಿ ಸೇವೆಯ ಪ್ರಯತ್ನ ಹಾಗೂ ತಳಮಳ ನಮ್ಮಲ್ಲಿಯೂ ನಿರ್ಮಾಣವಾಗಲಿ, ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡೋಣ !

– (ಪೂ.) ಸೌ. ಅಂಜಲಿ ಗಾಡಗೀಳ (ಈಗಿನ ಸದ್ಗುರು (ಸೌ.) ಅಂಜಲಿ ಗಾಡಗೀಳ), ಸನಾತನ ಆಶ್ರಮ, ರಾಮನಾಥಿ, ಗೋವಾ (೨.೫.೨೦೧೪)

ಜಿಜ್ಞಾಸೆಯಿಂದ ಕರ್ಮದ ಹಿಂದಿನ ಧರ್ಮಶಾಸ್ತ್ರವು ತಿಳಿಯುವುದರಿಂದ ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಲು ಸಾಧ್ಯವಾಗುವುದು

‘ಆಜ್ಞಾಪಾಲನೆಯೊಂದಿಗೆ ಜಿಜ್ಞಾಸೆಯೂ ಬೇಕು, ಎಂದು ಪರಾತ್ಪರ ಗುರುಗಳ ಬೋಧನೆಯಾಗಿದೆ. ಆಜ್ಞಾಪಾಲನೆಯಿಂದ ವ್ಯಷ್ಟಿ ಸಾಧನೆಯಾಗುತ್ತದೆ; ಆದರೆ ಒಂದು ವೇಳೆ, ಅದರೊಂದಿಗೆ ಜಿಜ್ಞಾಸೆಯೂ ಇದ್ದರೆ, ಯೋಗ್ಯಾಯೋಗ್ಯ ವಿಚಾರವನ್ನು ಮಾಡುವಂತಹ ಬುದ್ಧಿಯೂ ನಿರ್ಮಾಣವಾದುದರಿಂದ ಕರ್ಮಕ್ಕೆ ಅರ್ಥವು ಪ್ರಾಪ್ತವಾಗುತ್ತದೆ. ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದರಲ್ಲಿನ ಶಾಸ್ತ್ರವು ತಿಳಿಯುವುದರಿಂದ ಸಮಾಜವನ್ನು ಆ ಬಗ್ಗೆ ಜಾಗೃತ ಮಾಡಿ ಧರ್ಮಶಾಸ್ತ್ರದ ಕಡೆಗೆ ತಿರುಗಿಸುವುದು ಸುಲಭವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸಾಧನೆಯಾಗುವುದರಿಂದ ನಮ್ಮಲ್ಲಿಯೂ ವ್ಯಾಪಕತೆ ಬರುತ್ತದೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ

ಸನಾತನದ ಬಹಳಷ್ಟು ಗ್ರಂಥಗಳಲ್ಲಿನ ಶೇ. ೩೦ ರಷ್ಟು ಜ್ಞಾನವು ಇಲ್ಲಿಯವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲ ಎಂಬಂತಿದೆ !