(1 ಕೋಸು ಎಂದರೆ ಅಂದಾಜು 3 ಕಿಲೋಮೀಟರ್)

ಭರತ್ಪುರ (ರಾಜಸ್ಥಾನ) – ಒಂದು ಕಡೆ ಅತ್ತೆ-ಸೊಸೆಯರ ಸಂಬಂಧದಲ್ಲಿ ಹೆಚ್ಚಾಗಿ ಜಗಳ ಮತ್ತು ಕಹಿ ನೆನಪುಗಳನ್ನೇ ಕಾಣಲು ಸಿಗುತ್ತಿರುವಾಗ ಇನ್ನೊಂದೆಡೆ ರಾಜಸ್ಥಾನದ ಭರತಪುರದ ಬ್ರಜಭೂಮಿ ಪ್ರದೇಶದಲ್ಲಿ ಅತ್ಯಂತ ವಿಶಿಷ್ಟ ಮತ್ತು ಹೃದಯಸ್ಪರ್ಶಿ ದೃಶ್ಯವೊಂದು ಮುನ್ನಲೆಗೆ ಬಂದಿದೆ. ಇಲ್ಲಿ ಹರಿಯಾಣದ ಹತಾನಾ ಗ್ರಾಮದ ನಿವಾಸಿಯಾದ ಕಾಜಲ ಚೌಧರಿ ಎಂಬ ಸೊಸೆ, ತನ್ನ 90 ವರ್ಷದ ವಯೋವೃದ್ಧ ಅತ್ತೆಯನ್ನು ಪ್ಲಾಸ್ಟಿಕ್ ಟಬ್‌ನಲ್ಲಿ ಕುಳ್ಳಿರಿಸಿ, ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು, ಅತ್ಯಂತ ಕಠಿಣ ಮತ್ತು ದುರ್ಗಮವಾದ 84 ಕೋಸ್ (ಅಂದಾಜು 252 ಕಿಲೋಮೀಟರ್) ಪ್ರದಕ್ಷಿಣೆಯನ್ನು ಕಾಲ್ನಡಿಗೆಯಲ್ಲೇ ಪೂರ್ಣಗೊಳಿಸುತ್ತಿದ್ದಾರೆ. ಕಾಜಲ ಚೌಧರಿಯವರು ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಜಾನಪದ ಗಾಯಕಿಯಾಗಿದ್ದಾರೆ.
1.ಕಾಜಲರವರ ಅತ್ತೆ ಚಂದ್ರೀ ದೇವಿಯವರಿಗೆ ಬ್ರಜಭೂಮಿಯ ಪ್ರಸಿದ್ಧ 84 ಕೋಸ್ ಪ್ರದಕ್ಷಿಣೆ ಮಾಡಬೇಕೆಂಬ ಬಹುಕಾಲದ ಆಸೆಯಿತ್ತು; ಆದರೆ ದೈಹಿಕ ಮಿತಿಗಳ ಕಾರಣದಿಂದಾಗಿ ಅವರು ಅಸಹಾಯಕರಾಗಿದ್ದರು. ಇದನ್ನು ತಿಳಿದ ತಕ್ಷಣ, ಅತ್ತೆಯ ಈ ಕನಸನ್ನು ನನಸು ಮಾಡುವುದನ್ನೇ ಕಾಜಲ ತಮ್ಮ ಜೀವನದ ಮುಖ್ಯ ಗುರಿಯನ್ನಾಗಿ ಮಾಡಿಕೊಂಡರು.
2.ಕಾಜಲರವರು ತಮ್ಮ ಅತ್ತೆಯನ್ನು ದೊಡ್ಡ ಪ್ಲಾಸ್ಟಿಕ್ ಟಬ್‌ನಲ್ಲಿ ಕುಳ್ಳಿರಿಸಿ, ಆ ಟಬ್ ಅನ್ನು ತಲೆಯ ಮೇಲೆ ಹೊತ್ತುಕೊಂಡು, ಬನಾಚಾರಿ ಗ್ರಾಮದಿಂದ ಈ ಅತ್ಯಂತ ಕಠಿಣ ಕಾಲ್ನಡಿಗೆಯ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು.
3.ಕಾಜಲರವರು ಈ ಮಾರ್ಗವನ್ನು ಕ್ರಮಿಸುತ್ತಾ ಭರತಪುರದ ಗಡಿಯಿಂದ ಮುನ್ನಡೆಯುತ್ತಿದ್ದಂತೆ, ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ಈ ಆದರ್ಶ ಸೊಸೆಯನ್ನು ಹೂವು, ಹಾರ ಮತ್ತು ಆರತಿ ಬೆಳಗುವ ಮೂಲಕ ಭವ್ಯವಾಗಿ ಸ್ವಾಗತಿಸುತ್ತಿದ್ದಾರೆ. ಕಾಜಲ ರವರ ಈ ಯಾತ್ರೆ ಇನ್ನು ಕೂಡ ಮುಂದುವರಿಯುತ್ತಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ