ತಪ್ಪುಗಳ ಮೇಲೆ ಜಯಸಾಧಿಸಿ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಏನು ಮಾಡಬೇಕು ?
ಅ. ‘ಯಾರೂ ಪರಿಪೂರ್ಣರಾಗಿರುವುದಿಲ್ಲ. ಪರಿಪೂರ್ಣರಾಗಬೇಕೆಂದು ಪ್ರತಿಯೊಬ್ಬರು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಮನುಷ್ಯನಿಂದ ತಪ್ಪುಗಳು ಆಗಿಯೇ ಆಗುತ್ತವೆ; ಆದರೆ ತಪ್ಪುಗಳಾದರೂ, ಅವುಗಳ ಬಗ್ಗೆ ಒತ್ತಡವನ್ನು ಮಾಡಿಕೊಳ್ಳದೇ, ಅವುಗಳಿಂದ ಕಲಿತು ‘ಅವು ಪುನಃ ಆಗಬಾರದು’, ಎಂಬ ಅರಿವಿನಿಂದ ಕರ್ಮಗಳನ್ನು ಮಾಡುತ್ತಿದ್ದರೆ, ಈಶ್ವರನೂ ನಮಗೆ ಸಹಾಯ ಮಾಡುತ್ತಾನೆ.
ಆ. ಪ್ರತಿಯೊಂದು ತಪ್ಪನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು ಮತ್ತು ಅದಕ್ಕಾಗಿ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು, ಅಂದರೆ ತಪ್ಪು ಕರ್ಮದಿಂದ ನಿರ್ಮಾಣವಾದ ಪಾಪವು ನಾಶವಾಗಲು ಸಹಾಯವಾಗುತ್ತದೆ.
ಇ. ಪ್ರತಿಯೊಂದು ಕರ್ಮಕ್ಕೆ ದೇವರ ಆಶೀರ್ವಾದ ಬೇಕೇಬೇಕು ! ದೇವರ ಆಶೀರ್ವಾದದಿಂದಾಗುವ ಕರ್ಮವು ಮಾನವನ ಪ್ರಾರಬ್ಧದಲ್ಲಿ ಎಣಿಕೆಯಾಗುವುದಿಲ್ಲ, ಅದು ದೈವೀ ಪ್ರಾರಬ್ಧದಲ್ಲಿ ಎಣಿಕೆಯಾಗುತ್ತದೆ. ದೈವೀ ಪ್ರಾರಬ್ಧದಿಂದ ಘಟಿಸುವ ಘಟನೆಗಳಲ್ಲಿ ಪ್ರಾರಬ್ಧವನ್ನು ಭೋಗಿಸುವ ಶಕ್ತಿ ಸಿಗುತ್ತದೆ ಅಥವಾ ಪ್ರಾರಬ್ಧವನ್ನು ಜಯಿಸಲೂ ಸಾಧ್ಯವಾಗುತ್ತದೆ.
ಈ. ದೈವೀ ಪ್ರಾರಬ್ಧದಿಂದ ಘಟನೆಗಳು ಘಟಿಸಲು ಗುರುಕೃಪೆಯೇಬೇಕಾಗುತ್ತದೆ. ಆದುದರಿಂದ ಸಾಧನೆಯಲ್ಲಿ ಎಷ್ಟೇ ಅಡಚಣೆಗಳು ಬಂದರೂ ಅಥವಾ ತೊಂದರೆಗಳಾದರೂ, ಗುರುಗಳ ಆಶ್ರಯವನ್ನು ಬಿಡಬಾರದು. ಅವರ ಚರಣಗಳನ್ನು ಅಖಂಡವಾಗಿ ಹಿಡಿದುಕೊಂಡಿರಬೇಕು.
ಉ. ಗುರುಗಳು ಸಾಧಕನ ಜೀವನದಲ್ಲಿ ಅವನ ಆಧ್ಯಾತ್ಮಿಕ ಉನ್ನತಿಗಾಗಿ ಆವಶ್ಯಕವಿರುವ ಕರ್ಮಗಳನ್ನೇ ಘಟಿಸುತ್ತಾರೆ.
ಊ. ಸಂತರ ಆಶ್ರಯದಲ್ಲಿರುವ ಸಾಧಕರಿಗೆ ಮತ್ತು ಅವರ ಮೇಲೆ ಶ್ರದ್ಧೆಯಿರುವ ಸಾಧಕರಿಗೆ ಪ್ರಾರಬ್ಧ ಭೋಗಗಳ ಬಿಸಿ ಕಡಿಮೆ ಪ್ರಮಾಣದಲ್ಲಿ ತಟ್ಟುತ್ತದೆ.
ಎ. ನಿಜ ಹೇಳಬೇಕೆಂದರೆ, ದೈವೀ ಕರ್ಮಗಳು ಮಾಯೆಯ ಆಚೆಗೆ ಕರೆದೊಯ್ಯವುದರಿಂದ ಮಾನವನ ಪ್ರಾರಬ್ಧದ ನಿಯಮವು ಅವುಗಳಿಗೆ ಅನ್ವಯಿಸುವುದಿಲ್ಲ. ಆದುದರಿಂದ ದೈವಿ ಕೃಪೆಯ ಅಥವಾ ಗುರುಕೃಪೆಯ ಬಲದಲ್ಲಿ ಸಾಧಕನು ಜನ್ಮ-ಮೃತ್ಯುವಿನ ಚಕ್ರದಿಂದ ಬೇಗನೆ ಮುಕ್ತನಾಗುತ್ತಾನೆ.’ – ಸದ್ಗುರು (ಸೌ.) ಅಂಜಲಿ ಗಾಡಗೀಳ
(ಸಂಗ್ರಹಕಾರರು : ಶ್ರೀ. ದಿವಾಕರ ಆಗವಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೩.೨೦೨೦)
(ಈ ಲೇಖನವು ಈ ಮೊದಲು ಬರೆದಿರುವುದರಿಂದ ಇಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಎಂಬ ಉಲ್ಲೇಖವಿದೆ. – ಸಂಕಲನಕಾರರು)