
ಆದ್ದರಿಂದ ಪರಾತ್ಪರ ಗುರುದೇವರು ಆಧ್ಯಾತ್ಮಿಕ ಸಂಶೋಧನೆ ಮಾಡುವಾಗ ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್), ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರ್‌ಫೆರೆನ್ಸ್ ಫೊಟೋಗ್ರಾಫಿ), ‘ಥರ್ಮಲ್ ಇಮೇಜಿಂಗ್ ಇತ್ಯಾದಿ ಆಧುನಿಕ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನಾತ್ಮಕ ಪ್ರಯೋಗಗಳನ್ನು ಮಾಡಿಸಿಕೊಂಡಿದ್ದಾರೆ.
ಪುರುಷರು ಧೋತರ-ಅಂಗಿ ಮತ್ತು ಸ್ತ್ರೀಯರು ಸೀರೆಯನ್ನು ಉಡುವಂತಹ ಹಿಂದೂ ಧರ್ಮದಲ್ಲಿನ ಆಚಾರಗಳು, ನಮಸ್ಕಾರ ಮಾಡುವಂತಹ ಧಾರ್ಮಿಕ ಕೃತಿಗಳು, ದೀಪಪ್ರಜ್ವಲನೆಯಂತಹ ಸಾಮಾಜಿಕ ಕೃತಿಗಳು ಇತ್ಯಾದಿಗಳಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಒಳ್ಳೆಯ ಪರಿಣಾಮಗಳಾಗುತ್ತವೆ ? ಯಜ್ಞ, ಮಂತ್ರ ಪಠಣ ಇತ್ಯಾದಿಗಳಿಂದ ಹೇಗೆ ಚೈತನ್ಯ ಪ್ರಾಪ್ತವಾಗುತ್ತದೆ ? ಇತ್ಯಾದಿಗಳ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಉಪಕರಣಗಳ ಮೂಲಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಲಾಗಿದೆ.- ಪೂ. ಡಾ. ಬಾಳಾಜಿ ಆಠವಲೆ.