‘ವಿವಿಧ ಧಾರ್ಮಿಕ ಕೃತಿಗಳ ಸೂಕ್ಷ್ಮ ಪರೀಕ್ಷಣೆ, ಇದು ಹಿಂದೂ ಧರ್ಮಕಾರ್ಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಕೊಡುಗೆ !

ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ

‘ಪ.ಪೂ. ಡಾಕ್ಟರರು ಸತತವಾಗಿ ‘ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಸ್ತರದಲ್ಲಿ ಏನು ಅರಿವಾಗುತ್ತದೆಯೋ, ಅದಕ್ಕಿಂತ ಸೂಕ್ಷ್ಮದಲ್ಲಿ ಏನು ಅರಿವಾಗುತ್ತದೆಯೋ, ಅದು ಹೆಚ್ಚು ಮಹತ್ವದ್ದಾಗಿರುತ್ತದೆ, ಎಂದು ಹೇಳುತ್ತಾರೆ. ಅನೇಕ ಸಾಧಕರಿಗೆ ಅವರ ಪ್ರೇರಣೆಯಿಂದ ಮತ್ತು ಕೃಪೆಯಿಂದ ಸೂಕ್ಷ್ಮ ಸ್ತರದಲ್ಲಿನ ಘಟನೆಗಳು ತಿಳಿಯತೊಡಗಿದವು. ಇದನ್ನು ಅವರು ಪ್ರಸಿದ್ಧ ಪಡಿಸಿದರು. ಇದರಿಂದ ಸಮಾಜಕ್ಕೆ ಹಿಂದೂ ಧರ್ಮದಲ್ಲಿನ ಧಾರ್ಮಿಕ ವಿಧಿಗಳನ್ನು ನೋಡುವ ಒಂದು ಹೊಸ ದೃಷ್ಟಿಕೋನ ಸಿಕ್ಕಿತು. ಇದರಿಂದ ‘ಧಾರ್ಮಿಕ ವಿಧಿಗಳನ್ನು ಗಾಂಭೀರ್ಯದಿಂದ ಏಕೆ ಮಾಡಬೇಕು ?, ಎಂಬುದು ಸಮಾಜಕ್ಕೆ ತಿಳಿಯಿತು. ಇದಕ್ಕೂ ಮೊದಲು ಧಾರ್ಮಿಕ ವಿಧಿಗಳ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನವನ್ನು ಇಷ್ಟು ವಿಸ್ತಾರವಾಗಿ ಯಾರೂ ಮಂಡಿಸಿರಲಿಲ್ಲ. – ಡಾ. ದುರ್ಗೇಶ ಸಾಮಂತ, ಸನಾತನ ಆಶ್ರಮ, ರಾಮನಾಥಿ ಗೋವಾ. (೧.೫.೨೦೧೬)