ಭವರೋಗಕ್ಕೆ ಏಕೈಕ ಸಂಜೀವನಿ ‘ಗುರುಕೃಪಾಯೋಗ !

ವಿವಿಧ ಯೋಗ ಸಾಧನೆಗಳಿಂದ ಜೀವದ ಸಾತ್ತ್ವಿಕತೆಯು ಹೆಚ್ಚಾಗಿ ಜೀವದ ಸಪ್ತದೇಹಗಳು ಶುದ್ಧವಾಗುತ್ತವೆ. ಅದರಲ್ಲಿ ಶಕ್ತಿ, ಜ್ಞಾನ, ಆನಂದವು ಹೆಚ್ಚಾಗಿ ಜೀವಕ್ಕೆ ಪರಿಪೂರ್ಣತೆಯು ಬರತೊಡಗುತ್ತದೆ. ಅವನಿಂದಾಗುವ ತಪ್ಪುಗಳು ಕಡಿಮೆಯಾಗುತ್ತದೆ. ಅವನಲ್ಲಿನ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ.

ಧರ್ಮಸಂಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡಿ !

ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.

‘ಆಪತ್ಕಾಲದಲ್ಲಿ ಮಾರ್ಗ ತೋರಲು ಈಶ್ವರ ಸ್ವರೂಪ ಮೂವರು ಗುರುಗಳು ಲಭಿಸಿರುವುದು, ಸನಾತನದ ಸಾಧಕರ ಪರಮಭಾಗ್ಯ

ಸಾಧಕರು ಮೂವರೂ ಗುರುಗಳು ಏನು ಹೇಳುತ್ತಾರೆಯೋ, ಅದನ್ನು ಪಾಲಿಸುವುದು, ಎಲ್ಲ ಕಾರ್ಯಪದ್ಧತಿಯ, ಜವಾಬ್ದಾರ ಸಾಧಕರಿಂದ ಮತ್ತು ‘ಸನಾತನ ಪ್ರಭಾತದಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ, ಮೂವರೂ ಗುರುಗಳು ಸಾಧಕರನ್ನು ಆಪತ್ಕಾಲದಿಂದ ಸುಖರೂಪವಾಗಿ ಪಾರು ಮಾಡುತ್ತಾರೆ.

ಪ.ಪೂ. ಭಕ್ತರಾಜ ಮಹಾರಾಜರಿಗೆ ಗುರುಗಳಲ್ಲಿದ್ದ ಅಚಲ ಶ್ರದ್ಧೆ !

ಸ್ವಲ್ಪದರಲ್ಲಿ ಹೇಳುವುದಾದರೆ ಸಂತರು, ಗುರುಗಳು ಗದರಿಸುತ್ತಿದ್ದರೆ, ಅವರ ಗದರಿಸುವುದರ ವಿಶ್ಲೇಷಣೆಯನ್ನು ಮಾಡದೇ ನಾಮಸ್ಮರಣೆ ಮತ್ತು ಸೇವೆಯನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ನಮ್ಮ ಕ್ಷಮತೆಗೆ ಮೀರಿದ ಸಂಗತಿಯಾಗಿದೆ !

‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

‘ನಮ್ಮ ವೈಯಕ್ತಿಕ ಸಾಧನೆ ಉತ್ತಮ ರೀತಿಯಲ್ಲಾದರೆ, ಸಮಷ್ಟಿಯಲ್ಲಿ ಅದರಿಂದ ಹೇಗೆ ಪರಿಣಾಮವಾಗುತ್ತದೆ  ? ಸಮಷ್ಟಿಯಲ್ಲಿ ಹೋಗುವಾಗ ನಾವು ಹೇಗೆ ಆದರ್ಶರಾಗಿ ಹೋಗಬೇಕು ? ನಾವು ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಎಂಬ ಅರಿವನ್ನು ಸತತವಾಗಿ ಇಟ್ಟುಕೊಳ್ಳುವುದು ಹೇಗೆ ?, ಇದರ ಬಗ್ಗೆ ಎಲ್ಲರಿಗೂ ಹೇಳಲಾಯಿತು.

ಶ್ರೇಷ್ಠವಾದ ‘ಗುರು-ಶಿಷ್ಯ ಪರಂಪರೆ !

ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !

ಗುರುಗಳ ಋಣವನ್ನು ತೀರಿಸಲು ಎಂದಿಗೂ ಆಗವುದಿಲ್ಲ; ಹಾಗಾಗಿ ಅವರಲ್ಲಿ ಕೇವಲ ಪ್ರಾರ್ಥನೆಯನ್ನು ಮಾಡಿರಿ !

ವ್ಯಷ್ಟಿ ಅಥವಾ ಸಮಷ್ಟಿಯಾಗಿರಲಿ ಯಾವುದೇ ಮಾರ್ಗದಿಂದ ಹೋದರೂ ಶ್ರೀಗುರುಗಳ ಮಾರ್ಗದರ್ಶನ ಮತ್ತು ಅನುಗ್ರಹವು ಪಡೆಯವುದು ಅತ್ಯಂತ ಅವಶ್ಯಕವಿದೆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.

ಗುರುಗಳು ಶಿಷ್ಯರಿಗೆ ಕಲಿಸುವುದು

ಸಂತರು ಅಥವಾ ಗುರುಗಳು ಸಾಧಕರಿಗೆ ಅಥವಾ ಶಿಷ್ಯರಿಗೆ ವಿವಿಧ ರೀತಿಯಲ್ಲಿ ಕಲಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಕಲಿಸುವಿಕೆಯು ಪ್ರತ್ಯಕ್ಷವಾಗಿದ್ದರೆ, ಇನ್ನೂ ಕೆಲವೊಮ್ಮೆ ಅದು ಪರೋಕ್ಷ (ವರ್ತನೆಯಿಂದ) ವಾಗಿರುತ್ತದೆ. ಕೆಲವೊಮ್ಮೆ ಅವರು ವಿನೋದದಿಂದ ಕಲಿಸಿದರೆ, ಇನ್ನೂ ಕೆಲವೊಮ್ಮೆ ಅವರು ಅನುಭೂತಿಗಳನ್ನು ಕೊಟ್ಟು ಕಲಿಸುತ್ತಾರೆ.

ಗುರುಗಳಿಲ್ಲದೇ ಈಶ್ವರನ ದರ್ಶನವಾಗುವುದು ಅಸಾಧ್ಯ !

ಬೀದಿದೀಪವು ಬರುವ-ಹೋಗುವ ಜನರಿಗೆ ಬೆಳಕು ತೋರಿಸುತ್ತದೆ, ಆದರೆ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನರೂಪಿ ಬೆಳಕನ್ನು ತೋರಿಸಲು ಗುರುಗಳು ಪರಿಶ್ರಮಪಡುತ್ತಿರುತ್ತಾರೆ.

ಗುರುಗಳ ಮಹತ್ವ

ಭಗವಂತನ ತತ್ತ್ವಕ್ಕನುಸಾರ ನ್ಯಾಯವ್ಯವಸ್ಥೆ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು.