ಮನುಷ್ಯನು ಜೀವನದಲ್ಲಿ ನಿಜವಾದ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ‘ಸಾಧನೆಯನ್ನು ಮಾಡುವುದು’, ಏಕೈಕ ಪರ್ಯಾಯವಾಗಿದೆ !

ಸದ್ಗುರು (ಸೌ.) ಅಂಜಲಿ ಗಾಡಗೀಳ

೧. ಮನುಷ್ಯನು ತನ್ನ ಜೀವನದಲ್ಲಿನ ಅಡಚಣೆಗಳನ್ನು ದೂರಗೊಳಿಲು ಸಾಧನೆಯನ್ನು ಬಿಟ್ಟು ಇತರ ಮಾರ್ಗಗಳನ್ನು ಅವಲಂಬಿಸಲು ಚಡಪಡಿಸುವುದು

‘ಹೆಚ್ಚಿನ ಜನರು ‘ನಮಗೆ ಆನಂದಮಯ ಜೀವನ ಹೇಗೆ ಸಿಗುವುದು ?’, ಎಂಬುದಕ್ಕಾಗಿ ಜೀವನವಿಡಿ ಚಡಪಡಿಸುತ್ತಿರುತ್ತಾರೆ. ಅವರು ಅವರ ಜೀವನದಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ‘ನಾಡಿಪಟ್ಟಿ ವಾಚಕರ ಕಡೆಗೆ ಹೋಗುವುದು, ಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನ ಪಡೆಯುವುದು, ಕರ್ಮಕಾಂಡದಲ್ಲಿನ ನವಗ್ರಹಶಾಂತಿ, ನಾರಾಯಣ ನಾಗಬಲಿ ಅಥವಾ ಇತರ ಅನೇಕ ಪೂಜಾವಿಧಿಗಳ ಆಧಾರ ಪಡೆಯುವುದು’, ಈ ರೀತಿ ಮಾಡುತ್ತಿರುತ್ತಾರೆ. ಶಾಸ್ತ್ರವೆಂದು ಈ ಎಲ್ಲ ವಿಷಯಗಳು ಕಲಿಯಲು, ಮಾರ್ಗದರ್ಶಕ ಹಾಗೂ ಫಲದಾಯಕವೇ ಆಗಿವೆ; ಆದರೆ ಇವುಗಳೊಂದಿಗೆ ‘ನಿತ್ಯಜೀವನದಲ್ಲಿ ಅಖಂಡ ಸಾಧನೆ ಮಾಡುತ್ತಿರುವುದು’ ಮಹತ್ವದ್ದಾಗಿದೆ. ಸಾಧಕನಿಗೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಈ ಎಲ್ಲ ವಿಷಯಗಳಿಗಿಂತಲೂ ತುಂಬಾ ಮುಂದೆ ಹೋಗಬೇಕಾಗುತ್ತದೆ.

೨. ನಿಜವಾದ ಮಾರ್ಗದರ್ಶಕರು ಆಧ್ಯಾತ್ಮಿಕ ಗುರುಗಳಾಗಿದ್ದು ಅವರ ಉಪದೇಶದಲ್ಲಿ ಸಂಕಲ್ಪ ಕಾರ್ಯನಿರತವಾಗಿರುತ್ತದೆ

ನಾಡಿಪಟ್ಟಿಯಿರಲಿ, ಜ್ಯೋತಿಷ್ಯಶಾಸ್ತ್ರವಿರಲಿ ಅಥವಾ ಈ ರೀತಿಯ ಇತರ ಯಾವುದೇ ಶಾಸ್ತ್ರವಿರಲಿ, ಅವು ಒಂದು ಹಂತದವರೆಗೆ ಸಾಧನೆಯಲ್ಲಿ ಮಾರ್ಗದರ್ಶನ ಮಾಡಬಹುದು. ನಿಜವಾದ ಮಾರ್ಗದರ್ಶಕರು ನಮ್ಮ ಆಧ್ಯಾತ್ಮಿಕ ಗುರುಗಳೇ ಆಗಿರುತ್ತಾರೆ. ಯಾವುದನ್ನು ಗುರುಗಳು ಹೇಳುತ್ತಾರೆಯೋ, ಅದು ಶಾಶ್ವತವಾಗಿರುತ್ತದೆ ಮತ್ತು ಅದರೊಂದಿಗೆ ಅವರ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ. ಆದುದರಿಂದ ಸಾಧನೆಗೆ ಬಹಳ ಮಹತ್ವವಿದೆ. ಎಲ್ಲವೂ ನಮ್ಮ ಸಾಧನೆಯನ್ನೇ ಅವಲಂಬಿಸಿರುತ್ತದೆ. ತನು, ಮನ ಮತ್ತು ಧನದ ತ್ಯಾಗ ಮಾಡಿದರೆ ಮನುಷ್ಯನು ಚಿರಂತನ ಈಶ್ವರೀ ಆನಂದದ ಕಡೆಗೆ ಪ್ರವಾಸ ಮಾಡತೊಡಗುತ್ತಾನೆ. ಸಾಧನೆಯಲ್ಲಿ ತ್ಯಾಗಕ್ಕೆ ಮತ್ತು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗೆ ತುಂಬಾ ಮಹತ್ವವಿದೆ.

೩. ನಾಡಿಪಟ್ಟಿಯಲ್ಲಿ ‘ಒಬ್ಬನಿಗೆ ಮುಂದಿನ ಒಂದು ವರ್ಷದಲ್ಲಿ ನಿಮಗೆ ವಿವಾಹಯೋಗವಿದೆ’, ಎಂದು ಭವಿಷ್ಯಕಥನವಿರುವುದು ಮತ್ತು ಅನಂತರ ೧ ವರ್ಷದ ಬಳಿಕ ವಿವಾಹಯೋಗವಿಲ್ಲ ಎಂದು ಭವಿಷ್ಯ ಬರುವುದು

ಒಂದು ಸಲ ಓರ್ವ ಸಾಧಕರು ನಾಡಿಶಾಸ್ತ್ರವಾಚಕರಲ್ಲಿ ಭವಿಷ್ಯವನ್ನು ನೋಡಲು ಹೋಗಿದ್ದರು. ನಾಡಿಪಟ್ಟಿಯಲ್ಲಿ ‘ಮುಂದಿನ ಒಂದು ವರ್ಷದಲ್ಲಿ ನಿಮಗೆ ವಿವಾಹಯೋಗವಿದೆ’, ಎಂದು ಭವಿಷ್ಯಕಥನವಿತ್ತು. ಆ ಒಂದು ವರ್ಷ ದಲ್ಲಿ ಆ ಸಾಧಕರು ಸಾಧನೆಯ ತುಂಬಾ ಒಳ್ಳೆಯ ಪ್ರಯತ್ನಗಳನ್ನು ಮಾಡಿದರು; ಆದರೆ ಅವರ ವಿವಾಹ ಆಗಲಿಲ್ಲ. ಆ ಸಾಧಕರು ಪುನಃ ಅದೇ ನಾಡಿಪಟ್ಟಿವಾಚಕರ ಕಡೆಗೆ ಹೋದರು. ನಾಡಿಪಟ್ಟಿಯನ್ನು ನೋಡಿದಾಗ ‘ನಿಮ್ಮ ಜೀವನದಲ್ಲಿ ವಿವಾಹ ಯೋಗವಿಲ್ಲ’, ಎಂದು ಬಂದಿತು. ಒಂದೇ ನಾಡಿಪಟ್ಟಿಯಲ್ಲಿ ಒಬ್ಬನೇ ವ್ಯಕ್ತಿಯ ಬಗ್ಗೆ ಒಂದೇ ವಿಷಯದ ಮೇಲೆ ಕಾಲಾನುಸಾರ ಬೇರೆ ಬೇರೆ ಹೇಳಿಕೆ ಬಂದಿತ್ತು.

೩ ಅ. ಇದರ ಬಗ್ಗೆ ಸದ್ಗುರು (ಸೌ.) ಅಂಜಲಿ ಗಾಡಗೀಳರು ಹೇಳಿದ ಕಾರಣಗಳು : ಇದರ ಬಗ್ಗೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಕೇಳಿದಾಗ ಅವರು ಇದರ ಹಿಂದಿನ ಸುಂದರ ಶಾಸ್ತ್ರವನ್ನು ಹೇಳಿದರು. ಅವರು, “ಯಾವ ಸಮಯದಲ್ಲಿ ನಾವು ನಾಡಿಪಟ್ಟಿ ಜ್ಯೋತಿಷ್ಯರಲ್ಲಿಗೆ ಏನನ್ನಾದರೂ ಕೇಳುತ್ತೇವೆಯೋ, ಆ ಸಮಯದಲ್ಲಿ ನಮಗೆ ಸಿಗುವ ಉತ್ತರವು, ನಮಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಉದಾ. ನಾವು ಕೇಳಿದ ಪ್ರಶ್ನೆಗಳ ಸಮಯದಲ್ಲಿ ಸಂಬಂಧಿತ ವ್ಯಕ್ತಿಯ ಯಾವ ಗ್ರಹದಶೆ ಕಾರ್ಯನಿರತವಾಗಿದೆ ? ಆ ಗ್ರಹದಶೆಯ ಜೊತೆಗೆ ಆ ಸಮಯದಲ್ಲಿ ನಮ್ಮ ಯಾವ ಪೂರ್ವಜನ್ಮದ ಕರ್ಮವು ಕಾರ್ಯನಿರತವಾಗಿದೆ ಹಾಗೂ ಅದರ ನಮ್ಮ ಗ್ರಹದಶೆಯ ಮೇಲೆ ಆ ಕ್ಷಣ ಯಾವ ಪರಿಣಾಮವಾಗುತ್ತಿದೆ ? ಇವೆಲ್ಲವುಗಳೊಂದಿಗೆ ಸಾಧನೆ ಮಾಡುವ ವ್ಯಕ್ತಿಯಿದ್ದರೆ, ಪ್ರಶ್ನೆಯನ್ನು ಕೇಳುವ ಸಮಯದಲ್ಲಿ ಆ ಸಾಧಕನ ಸಾಧನೆಯ ಸ್ಥಿತಿ ಹೇಗಿದೆ ? ಈ ಎಲ್ಲವುಗಳ ಒಟ್ಟಾರೆ ಗಣಿತವೆಂದರೆ ಆ ಸಮಯದಲ್ಲಿ ನಮಗೆ ದೊರಕಿದ ಉತ್ತರ. ಆದುದರಿಂದ ಮೊದಲ ಬಾರಿಗೆ ಸಾಧಕನಿಗೆ ‘ಒಂದು ವರ್ಷದಲ್ಲಿ ವಿವಾಹವಾಗುವುದು’, ಎಂದು ಉತ್ತರ ಬಂದಿತು; ಆದರೆ ಮುಂದಿನ ಒಂದು ವರ್ಷದಲ್ಲಿ ಅವನ ಸಾಧನೆಯು ಉತ್ತಮವಾಗಿ ಆಗಿದ್ದರಿಂದ ಅವನ ಮೇಲಿನ ಗುರುಕೃಪೆಯು ಹೆಚ್ಚಾಯಿತು. ಸಾಧಕನ ಉನ್ನತಿಗಾಗಿ ಯಾವುದು ಆವಶ್ಯಕವಾಗಿದೆಯೋ, ಅದನ್ನು ಈಶ್ವರನು ಮಾಡಿದನು, ಅಂದರೆ ಅವನ ಜೀವನದಲ್ಲಿನ ವಿವಾಹಯೋಗವು ತಪ್ಪಿತು. ಸಾಧನೆಯನ್ನು ಮಾಡಿದ್ದರಿಂದ ದೇವರು ‘ಸಾಧಕನಿಗೆ ಅವನ ಆಧ್ಯಾತ್ಮಿಕ ಉನ್ನತಿಗಾಗಿ ಏನು ಆವಶ್ಯಕವಿತ್ತೋ’, ಅದನ್ನೇ ಮಾಡಿದನು, ಎಂದು ಹೇಳಿದರು.

೪. ಗುರುಕೃಪೆಯಿಂದಾಗಿ ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಯಾವುದು ಉಪಯುಕ್ತವಾಗಿದೆಯೋ ಅದೇ ಘಟಿಸುವುದು

ಇದರಿಂದ ನಮಗೆ, ನಮ್ಮ ಬಗ್ಗೆ ‘ಯಾವುದೇ ಶಾಸ್ತ್ರದಲ್ಲಿ ಏನೇ ಬರೆದಿದ್ದರೂ, ಅದರಿಂದ ಕಲಿತು ಅದರ ಆಧ್ಯಾತ್ಮಿಕ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ?’, ಎಂದು ನೋಡುವುದು ಮಹತ್ವದ್ದಾಗಿದೆ, ಎಂದು ಕಲಿಯಲು ಸಿಕ್ಕಿತು. ಹಾಗೆಯೇ ಆ ವ್ಯಕ್ತಿಯ ಸಾಧನೆ ಹಾಗೂ ಅವನ ಮೇಲಿನ ಗುರುಕೃಪೆ ಇವುಗಳಿಂದಾಗಿ ಅವನಿಗಾಗಿ ಯಾವುದು ಆವಶ್ಯಕವಾಗಿದೆಯೋ, ಅದೇ ಆಗುತ್ತದೆ. ಆದುದರಿಂದ ಸಾಧನೆಯ ಹೊರತು ನಮ್ಮ ಜೀವನದಲ್ಲಿ ಬೇರೆ ಪರ್ಯಾಯವಿಲ್ಲ. ಸಾಧನೆಯಿಂದಲೇ ನಿಜವಾದ ಆನಂದವು ಸಿಗುತ್ತದೆ. ಸಾಧನೆಯಿಂದಲೇ ನಮಗೆ ತೀವ್ರ ಪ್ರಾರಬ್ಧವನ್ನು ಎದುರಿಸಲು ಸಾಧ್ಯವಾಗುತ್ತದೆ. ವಿವಾಹ ಮಾಡಿಕೊಂಡು ಆ ಸಾಧಕನು ಮಾಯೆಯಲ್ಲಿ ಸಿಲುಕುವವನಿದ್ದರೆ ಹಾಗೂ ಅದರಿಂದ ಅವನು ಈಶ್ವರನಿಂದ ದೂರ ಹೋಗುವವನಿದ್ದರೆ, ಅವನ ವಿವಾಹವು ದೇವರ ಕೃಪೆಯಿಂದ ತಪ್ಪುತ್ತದೆ ಹಾಗೂ ಅವನ ಸಾಧನೆಯಲ್ಲಿನ ಅಡಚಣೆಯು ದೂರವಾಗುತ್ತವೆ. ಯಾರ ವಿವಾಹವು ಈಶ್ವರೇಚ್ಛೆಯಿಂದ ಆಗಿರುತ್ತದೆಯೋ, ಅವರು ವಿವಾಹವನ್ನು ಮಾಡಿಕೊಂಡರೂ ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾರೆ. ಸಾಧನೆಯ ಪ್ರಾಥಮಿಕ ಹಂತದಲ್ಲಿ ನಮಗೆ ಈಶ್ವರೇಚ್ಛೆಯು ತಿಳಿಯುವುದಿಲ್ಲ; ಆದರೆ ಸಾಧನೆಯ ಪ್ರಯತ್ನ ಹಾಗೂ ತಳಮಳವನ್ನು ಹೆಚ್ಚಿಸಿದರೆ ಮಾತ್ರ ಸಾಧಕನು ಸ್ವೇಚ್ಛೆಯ ಆಚೆಗೆ ಹೋಗಿ ಈಶ್ವರನ ವಿಚಾರಗಳನ್ನು ಗ್ರಹಿಸಬಹುದು. ಇಂತಹ ಸಮಯದಲ್ಲಿ ಕೆಲವೊಮ್ಮೆ ಉನ್ನತರು ಅವನ ಜೀವನದಲ್ಲಿ ಬಂದು ಆಯಾ ಪರಿಸ್ಥಿತಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನನೌಕೆಯನ್ನು ಭವಸಾಗರದಿಂದ ಪಾರು ಮಾಡುತ್ತಾರೆ.’

ಸಂಗ್ರಹಕಾರರು : ಶ್ರೀ. ದಿವಾಕರ ಆಗಾವಣೆ, ಬೆಂಗಳೂರು (೨೧.೧೧.೨೦೧೮)