ಪೂ. ಭಾರ್ಗವರಾಮ ಪ್ರಭು ಇವರ ಜನ್ಮದಿನ ವೈಶಾಖ ಶುಕ್ಲ ಪಕ್ಷ ದಶಮಿ (೩.೫.೨೦೨೦)

ಪೂ. ಭಾರ್ಗವರಾಮ ಇವರ ಹುಟ್ಟುಹಬ್ಬದ ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಪೂ. ಭಾರ್ಗವರಾಮ ಇವರ ಬಾಲಕೃಷ್ಣನ ರೂಪದಲ್ಲಿರುವ ಚಿತ್ರವನ್ನು ಬಿಡಿಸುವಾಗ ಚಿತ್ರದಲ್ಲಿ ಶ್ರೀಕೃಷ್ಣನ ಚರಣಗಳು, ಕೊಳಲು ಮತ್ತು ಶಂಖ ಇವುಗಳೊಂದಿಗೆ ಸರಿಯಾದ ಹಿನ್ನೆಲೆಯನ್ನೂ ಚಿತ್ರಿಸುವ ಎಸ್.ಎಸ್.ಆರ್.ಎಫ್.ನ ಯುನೈಟೆಡ್ ಸಾಧಕಿ ಕು. ಆಲಿಸ್ !

ಪೂ. ಭಾರ್ಗವರಾಮ

೧. ಪೂ. ಭಾರ್ಗವರಾಮ ಇವರ ಚಿತ್ರ ಬಿಡಿಸಲು ದೊರೆತ ಸ್ಫೂರ್ತಿ (ಪ್ರೇರಣೆ) !

‘೪.೧೧.೨೦೧೮ ರಂದು ಮಂಗಳೂರಿನ ಚಿ. ಭಾರ್ಗವರಾಮ ಪ್ರಭು (೨ ವರ್ಷ ೯ ತಿಂಗಳು) ಇವರನ್ನು ‘ಸಂತರು ಎಂದು ಘೋಷಿಸಲಾಯಿತು. ಅದಕ್ಕಿಂತ ಮೊದಲು ಅವರ ಅಲೌಕಿಕತೆಯನ್ನು ತೋರಿಸುವ ಅವರ ದಿನಪೂರ್ತಿ ನಡೆಯುವ ವೈಶಿಷ್ಟ್ಯಪೂರ್ಣ ಕೃತಿಗಳ ಬಗ್ಗೆ ಒಂದು ಧ್ವನಿಚಿತ್ರ ಮುದ್ರಿಕೆಯನ್ನು (ವಿಡಿಯೋ) ತೋರಿಸಲಾಯಿತು. ಅದನ್ನು ನೋಡಿ ನನಗೆ ಅವರ ಚಿತ್ರವನ್ನು ಬಿಡಿಸುವ ಸ್ಫೂರ್ತಿ ಸಿಕ್ಕಿತು. ನಾನು ಅವರ ಛಾಯಾಚಿತ್ರದಿಂದ ಅವರ ಒಂದು ಚಿತ್ರವನ್ನು ಬಿಡಿಸಿದೆನು.

೨. ಶ್ರೀಕೃಷ್ಣನು ಸೂಚಿಸಿದಂತೆ ಪೂ. ಭಾರ್ಗವರಾಮ ಇವರ ಚಿತ್ರವನ್ನು ಬಿಡಿಸಿದ ನಂತರ ಅದು ಪರಿಪೂರ್ಣವಾದ ಆ ಚಿತ್ರವನ್ನೂ ನೋಡುತ್ತಾ ಇರೋಣ ಅನಿಸುವುದು

‘ಪೂ. ಭಾರ್ಗವರಾಮ ಎಲ್ಲೆಲ್ಲಿ ಹೋಗುತ್ತಾರೋ, ಅಲ್ಲಲ್ಲಿ ಶ್ರೀಕೃಷ್ಣನೂ ಹೋಗುತ್ತಾನೆ, ಎಂಬ ಅರಿವಾಗುವುದರಿಂದ ನಾನು ಚಿತ್ರದಲ್ಲಿ ಶ್ರೀಕೃಷ್ಣನ ಚರಣಗಳನ್ನು ಬಿಡಿಸಿದೆನು. ಚಿತ್ರವನ್ನು ನೋಡುತ್ತಿದ್ದಾಗ ನನಗೆ ಸೂಕ್ಷ್ಮದಿಂದ ‘ಶ್ರೀಕೃಷ್ಣನ ಕೈಯಲ್ಲಿರುವ ಅವನ ಕೊಳಲು ಮತ್ತು ಪಾಂಚಜನ್ಯ ಶಂಖ ಕೆಳಗೆ ಬೀಳುತ್ತಿದೆ, ಎಂದು ಕಾಣಿಸಿತು ಮತ್ತು ‘ಶ್ರೀಕೃಷ್ಣನು ಅದನ್ನು ಪೂ. ಭಾರ್ಗವರಾಮರವರಿಗೆ ಆಟವಾಡಲು ಕೊಟ್ಟಿರುವನು, ಎಂಬ ಅರಿವಾಯಿತು. ಆದುದರಿಂದ ನಾನು ಚಿತ್ರದಲ್ಲಿ ಕೊಳಲು ಮತ್ತು ಶಂಖವನ್ನೂ ಬಿಡಿಸಿದೆನು. ನಂತರ ಶ್ರೀಕೃಷ್ಣನ ಚಿತ್ರದ ಹಿನ್ನೆಲೆಯಲ್ಲಿ ನನಗೆ ನವಿಲು, ಯಮುನಾ ನದಿ ಮತ್ತು ವೃಂದಾವನದಲ್ಲಿನ ಮನೆಗಳು ಬಿಡಿಸಲು ಹೊಳೆಯಿತು. ಅದಕ್ಕನುಸಾರ ನಾನು ಬಿಡಿಸಿದೆನು. ನಾನು ಚಿತ್ರದ ಹಿನ್ನೆಲೆಯನ್ನು ಮೊದಲ ಬಾರಿ ಬಿಡಿಸಿದೆನು ಮತ್ತು ನನಗೆ ಅದರ ಬಗ್ಗೆ ಆಶ್ಚರ್ಯವೆನಿಸಿತು; ಏಕೆಂದರೆ ಇದರ ಮೊದಲು ನನ್ನ ಎಲ್ಲ ಚಿತ್ರಗಳಲ್ಲಿ ನಾನು ಇಂತಹುದೇನೂ ಬಿಡಿಸಿರಲಿಲ್ಲ. ಚಿತ್ರದಲ್ಲಿನ ಪೂ. ಭಾರ್ಗವರಾಮರವರು ಶ್ರೀಕೃಷ್ಣನಂತೆ ತುಂಬಾ ತುಂಟನಾಗಿ ಕಾಣಿಸುತ್ತಿದ್ದು ಅವರ ನೇತ್ರಗಳು ಮತ್ತು ಸುಂದರ ಅವಯವಗಳ ಮೇಲೆ ನಮ್ಮ ದೃಷ್ಟಿ ನೆಡುವುದು. ಶ್ರೀಕೃಷ್ಣನಂತೆಯೇ ಪೂ. ಭಾರ್ಗವರಾಮರವರ ಜೀವನವು ಒಂದು ಲೀಲೆಯೇ ಆಗಿದೆ. ನಮ್ಮೆಲ್ಲ ಸಾಧಕರಿಗೆ ‘ಅವರ ಬಗ್ಗೆ ಕೇಳಬೇಕು, ಅವರೆಡೆಗೆ ನೋಡಬೇಕು ಮತ್ತು ಅವರೊಡನೆ ಆಟವಾಡಬೇಕು, ಎಂಬ ತೀವ್ರ ಇಚ್ಛೆಯಾಗುತ್ತದೆ. ಪೂ. ಭಾರ್ಗವರಾಮ, ನಾವು ಯಾವ ರೀತಿ ನಿಮ್ಮಲ್ಲಿ ಶ್ರೀಕೃಷ್ಣನಿಗೆ ನೋಡುತ್ತೇವೆಯೋ, ಅದರಂತೆ ‘ಇತರರಲ್ಲಿಯೂ ಶ್ರೀಕೃಷ್ಣನಿಗೆ ಹೇಗೆ ನೋಡುವುದು ?, ಎಂಬುದನ್ನು ದಯವಿಟ್ಟು ನಮಗೆ ಕಲಿಸಿರಿ. – ಕು. ಆಲಿಸ್, ಯುನೈಟೆಡ್ ಕಿಂಗ್ಡಮ್ (೨೫.೧೧.೨೦೧೮)