ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗದ ಆಯೋಜನೆ ಮಾಡಲಾಗುತ್ತಿದೆ. ಇತ್ತೀಚೆಗೆ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಜಾಗತಿಕ ಸಂಕಟಗಳು : ಧರ್ಮದ ಕುರಿತು ದೃಷ್ಟಿಕೋನ ಮತ್ತು ಉಪಾಯ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು. ಅವರು ಮಾಡಿದ ಮಾರ್ಗದರ್ಶನದ ಆಯ್ದ ಭಾಗವನ್ನು ಇಲ್ಲಿ ಕ್ರಮಶಃ ಮುದ್ರಿಸುತ್ತಿದ್ದೇವೆ.
೩. ಆಪತ್ಕಾಲದಲ್ಲಿ ಉಂಟಾಗುವ ದೊಡ್ಡ ಹಾನಿ
ಆಪತ್ಕಾಲದಿಂದಾಗುವ ಹಾನಿಯ ಕಲ್ಪನೆ ಮಾಡಲು ನಾವು ಕೆಲವು ಉದಾಹರಣೆಗಳನ್ನು ನೋಡಬಹುದು.
೩ ಅ. ಮೇ ೨೦೦೪ ಹಿಂದೂ ಮಹಾಸಾಗರದಲ್ಲಿ ೯.೩ ರಿಕ್ಟರ್ ಮಾಪನದ ತೀವ್ರ ಭೂಕಂಪ ಬಂದಿತ್ತು. ಇದು ಇಂದಿನವರೆಗಿನ ಇತಿಹಾಸದ ೨ ನೇ ಅತಿದೊಡ್ಡ ಭೂಕಂಪವಾಗಿದೆ. ಈ ಭೂಕಂಪದಿಂದಾಗಿ ಬಂದಂತಹ ತ್ಸುನಾಮಿಯಿಂದ ೨,೨೯,೦೦೦ ಜನರು ಜೀವ ಕಳೆದುಕೊಂಡಿದ್ದರು.
೩ ಆ. ಮೇ ೧೯೩೧ ‘ಹುವಾಂಗ್ ಹೆ (ಪಿಲಿ ನದಿ) ನದಿಯಲ್ಲಿ ಬಂದ ಬರಗಾಲದಿಂದಾಗಿ ೪,೨೨,೦೦೦ ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
೩ ಇ. ೧೯೦೦ ರಲ್ಲಿ ಬಂದ ಬರಗಾಲದಿಂದ ಭಾರತದಲ್ಲಿ ೨,೫೦,೦೦೦ ರಿಂದ ೩,೨೫,೦೦೦ ಜನರು ಮೃತಪಟ್ಟಿದ್ದರು.
೩ ಈ. ೧೯೧೮ ರಲ್ಲಿ ವಿಶ್ವಮಾರಿಯಾದ ಸ್ಪ್ಯಾನಿಶ್ ಫ್ಲೂನಿಂದಾಗಿ ಜಗತ್ತಿನಲ್ಲಿ ಸುಮಾರು ೫ ಕೋಟಿ ಜನರು ಮೃತಪಟ್ಟಿರುವ ಅಂದಾಜಿದೆ.
೩ ಉ. ೧೯೫೭ ರ ವಿಶ್ವಮಾರಿಯಾದ ಏಶಿಯನ್ ಫ್ಲೂನಿಂದಾಗಿ ಜಗತ್ತಿನಲ್ಲಿ ಅಂದಾಜು ೧೦ ಲಕ್ಷ ಜನರು ಮೃತಪಟ್ಟಿದ್ದಾರೆ.
೪. ಸದ್ಯದ ಕಾಲದಲ್ಲಿರುವ ಆಪತ್ತುಗಳು
೪ ಅ. ‘ಗ್ಲೋಬಲ್ ವಾರ್ಮಿಂಗ್ನಿಂದಾಗಿ ವಿಶ್ವದಲ್ಲಿ ಸಮುದ್ರದ ಜಲಮಟ್ಟವು ಹೆಚ್ಚಾಗುವುದು : ಸುಲಭ ಶಬ್ದಗಳಲ್ಲಿ ಹೇಳುವುದಾದರೆ ‘ಗ್ಲೋಬಲ್ ವಾರ್ಮಿಂಗ್ ಅಂದರೆ ‘ಪೃಥ್ವಿಯ ತಾಪಮಾನದಲ್ಲಿ ವೃದ್ಧಿ ಹಾಗೂ ಇದರಿಂದಾಗಿ ವಾತಾವರಣದಲ್ಲಿ ಆಗುವ ಬದಲಾವಣೆಗಳಾಗಿವೆ. ಪೃಥ್ವಿಯ ತಾಪಮಾನದಲ್ಲಿ ಆಗುತ್ತಿರುವ ಈ ಹೆಚ್ಚಳದ (೧೦೦ ವರ್ಷಗಳ ಸರಾಸರಿ ತಾಪಮಾನದಲ್ಲಿ ೧ ಡಿಗ್ರಿ ಫ್ಯಾರೆನ್‌ಹಿಟ್ ಹೆಚ್ಚಳವಾಗಿದೆ.) ಪರಿಣಾಮವಾಗಿ ಮಳೆ ಬೀಳುವ ದಿನಾಂಕ(ಸಮಯ)ದಲ್ಲಿ ಬದಲಾವಣೆ, ಹಿಮಖಂಡಗಳು ಹಾಗೂ ಗ್ಲೇಶಿಯರ್‌ಗಳು ಕರಗುವುದು, ಸಮುದ್ರದ ಜಲಮಟ್ಟದಲ್ಲಿ ವೃದ್ಧಿಯಾಗುವುದು ಹಾಗೂ ವನಸ್ಪತಿ ಮತ್ತು ಪ್ರಾಣಿ ಜಗತ್ತಿನ ಮೇಲಿನ ಪ್ರಭಾವಗಳ ರೂಪದಲ್ಲಿ ಕಂಡುಬರುತ್ತಿವೆ. ‘ಗ್ರೀನ್‌ಹೌಸ್ ಗ್ಯಾಸ್ ಪೃಥ್ವಿಯ ವಾತಾವರಣದಲ್ಲಿ ಪ್ರವೇಶಿಸಿ ಪೃಥ್ವಿಯ ತಾಪಮಾನವನ್ನು ಹೆಚ್ಚಿಸುತ್ತವೆ. ವಿಜ್ಞಾನಿಗಳಿಗನುಸಾರ ಈ ಗ್ಯಾಸ್‌ನ ಹೊರಸೂಸುವಿಕೆಯು ಇದೇ ರೀತಿ ಮುಂದುವರಿದರೆ ೨೧ ನೇ ಶತಮಾನದಲ್ಲಿ ಪೃಥ್ವಿಯ ತಾಪಮಾನವು ೩ ಡಿಗ್ರಿಯಿಂದ ೮ ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಹೀಗಾದರೆ ಇದರಿಂದ ಪರಿಣಾಮಗಳು ಭಯಂಕರವಾಗಿರುವವು. ಜಗತ್ತಿನ ಅನೇಕ ಕಡೆಗಳಲ್ಲಿ ಆಚ್ಛಾದಿತವಾದ ಹಿಮದ ಹೊದಿಕೆಗಳು ಕರಗುವವು, ಸಮುದ್ರದ ಜಲಮಟ್ಟವು ಅನೇಕ ಅಡಿಗಳಷ್ಟು ಹೆಚ್ಚಾಗುವುದು. ಸಮುದ್ರದ ಈ ವರ್ತನೆಯಿಂದ ಜಗತ್ತಿನ ಅನೇಕ ಪ್ರದೇಶಗಳು ಜಲಾವೃತಗೊಳ್ಳುವವು, ಭಾರೀ ವಿನಾಶವಾಗುವುದು. ಈ ವಿನಾಶವು ಯಾವುದಾದರೊಂದು ಕ್ಷುದ್ರಗ್ರಹವು ಭೂಮಿಗೆ ಬಂದು ಅಪ್ಪಳಿಸುವುದರಿಂದಾಗುವ ವಿನಾಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದು. ನಮ್ಮ ಪೃಥ್ವಿಗೂ ಈ ಸ್ಥಿತಿಯು ಅತ್ಯಂತ ಹಾನಿಕರವಾಗಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಇಂಡೋನೇಶಿಯಾದ ರಾಷ್ಟ್ರಪತಿಗಳಾದ ಜೊಕೊ ವಿದೊದೊನೆ ೨೦೧೯ ರಂದು ‘ಸದ್ಯದ ರಾಜಧಾನಿಯಾದ ಜಕಾರ್ತಾ ನಗರದ ನೀರಿನ ಮಟ್ಟವು ಕುಸಿಯುವ ಸಾಧ್ಯತೆಗಳಿರುವುದರಿಂದ ನಮ್ಮ ದೇಶದ ರಾಜಧಾನಿಯನ್ನು ಬೊರ್ನಿಯಾ ದ್ವೀಪಕ್ಕೆ ಸ್ಥಳಾಂತರಿಸಲಾಗುವುದು, ಎಂದು ಟ್ವೀಟ್ ಮಾಡಿದ್ದರು. ಒಂದು ದೇಶಕ್ಕೆ ತನ್ನ ರಾಜಧಾನಿಯನ್ನು ಬದಲಾಯಿಸಬೇಕಾಗುತ್ತಿದೆ, ಇದರಿಂದ ನಾವು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಯಬಹುದು.
೪ ಆ. ಕೊರೋನಾ ಗುಂಪಿನ ‘ಕೋವಿಡ್-೧೯ ವೈರಸಿನ ವಿಶ್ವಮಾರಿ : ಪ್ರಸ್ತುತ ಕಾಲದಲ್ಲಿ ನಾವು ಈ ಮಹಾಮಾರಿಯ ಕಾಲದಲ್ಲಿದ್ದೇವೆ. ಚೀನಾದಲ್ಲಿ ಆರಂಭವಾದ ಈ ಮಹಾಮಾರಿಯನ್ನು ೨ ತಿಂಗಳಿನಲ್ಲೇ ವಿಶ್ವಮಾರಿಯಾಗಿ ಘೋಷಿಸಲಾಗಿದೆ. ಇಲ್ಲಿಯವರೆಗೆ ಇದರ ಪ್ರಕೋಪದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಹಾಗೂ ಲಕ್ಷಾಂತರ ಜನರು ಇದರ ಹಿಡಿತದಲ್ಲಿ ಸಿಲುಕಿದ್ದಾರೆ. ಈಗ ಇದರ ಸಂಖ್ಯೆಯು ಎಷ್ಟರ ವರೆಗೆ ತಲುಪುವುದು ಎಂಬುದನ್ನು ನಾವು ಭವಿಷ್ಯದಲ್ಲಿ ನೋಡಲಿದ್ದೇವೆ, ಆದರೆ ಇಲ್ಲಿಯವರೆಗೂ ಈ ಮಹಾಮಾರಿಗೆ ಯಾವುದೇ ಔಷಧಿಗಳು ಲಭ್ಯವಿಲ್ಲ. – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ. (ಮುಂದುವರಿಯುವುದು)