೧. ಚಿಕ್ಕಂದಿನಿಂದಲೇ ಅಸಾಮಾನ್ಯ ಪ್ರತಿಭೆ ಹೊಂದಿದ್ದ ಪರಾತ್ಪರ ಗುರು ಡಾಕ್ಟರ್ !
೧ ಅ. ಗಾಳಿಪಟ ಹಾರಿಸುವುದು : ‘ಪರಾತ್ಪರ ಗುರು ಡಾ. ಆಠವಲೆಯವರು ಬಾಲ್ಯದಿಂದಲೇ ನಮ್ಮೆಲ್ಲ ಸಹೋದರರಲ್ಲಿಯೇ ತುಂಬಾ ಭಿನ್ನರಾಗಿದ್ದರು. ನಾನು ಅವರ ಬಾಲ್ಯದ ವಿಷಯವನ್ನು ಹೇಳುತ್ತೇನೆ. ನಾವು ಐದು ಜನ ಸಹೋದರರಲ್ಲಿ ನಾಲ್ಕು ಜನರಿಗೂ ಗಾಳಿಪಟ ಹಾರಿಸಲು ಬರುತ್ತಿರಲಿಲ್ಲ: ಆದರೆ ಅವರಿಗೆ ಗಾಳಿಪಟ ಹಾರಿಸಲು ಬರುತ್ತಿತ್ತು. ತುಂಬಾ ಚಿಕ್ಕಂದಿನಿಂದಲೂ ಅವರಲ್ಲಿ ಒಂದು ಅಸಾಮಾನ್ಯ ಪ್ರತಿಭೆಯಿತ್ತು.
೧ ಆ. ತಿರುಗುವ ಗೂಡುದೀಪವನ್ನು ಮೊಟ್ಟಮೊದಲ ಬಾರಿಗೆ ಸಿದ್ಧ ಪಡಿಸುವುದು : ಅವರಲ್ಲಿ ಒಂದು ವಿಭಿನ್ನವಾದ ಆಂತರಿಕ ಸ್ಫೂರ್ತಿ ಇರುತ್ತಿತ್ತು. ದೀಪಾವಳಿಯಲ್ಲಿ ಮನೆಯಲ್ಲಿ ತೂಗಾಡಲು ಅವರು ಒಮ್ಮೆ ತಿರುಗುವ ಗೂಡುದೀಪವನ್ನು ತಯಾರಿಸಿದ್ದರು. ಅದರ ಒಳಗಡೆ ಒಂದು ‘ಸಿಲಿಂಡರ್ ಮತ್ತು ಹೊರಗಡೆಯೂ ಒಂದು ‘ಸಿಲಿಂಡರ್ ಇತ್ತು. ಅದರ ಮೇಲೆ ವಿವಿಧ ಚಿತ್ರಗಳು ಕಾಣಿಸುತ್ತಿದ್ದವು. ಆ ಚಿತ್ರಗಳು ನಿರಂತರವಾಗಿ ತಿರುಗುತ್ತಿತ್ತು. ಇದನ್ನು ಅವರೇ ಸ್ವತಃ ಮೊದಲ ಬಾರಿಗೆ ಮತ್ತು ಸ್ವಯಂಸ್ಫೂರ್ತಿಯಿಂದ ಮಾಡಿದ್ದರು. ನಮಗಂತೂ ಆಗ ‘ಈ ರೀತಿ ಏನಾದರೂ ಮಾಡಬಹುದು ಎಂದು ಗಮನಕ್ಕೂ ಬಂದಿರಲಿಲ್ಲ.
೨. ಅಸಾಮಾನ್ಯ ಬುದ್ಧಿಮತ್ತೆ
ಪ್ರತಿಯೊಂದು ವಿಷಯವನ್ನು ಅವರು ಬೇರೆ ರೀತಿಯಲ್ಲಿ ಮಾಡಿ ನೋಡಲು ಇಚ್ಛಿಸುತ್ತಿದ್ದರು. ಅವರು ನಿರಂತರವಾಗಿ ಬಹಳ ಉತ್ಸಾಹದಿಂದ ಇರುತ್ತಿದ್ದರು. ನಾವು ಐದು ಜನ ಸಹೋದರರಲ್ಲಿ ಅವರೇ ಎಲ್ಲರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದರು. ಅವರ ಬುದ್ಧಿಮತ್ತೆಯ ಪ್ರಮಾಣ (IQ) ನಮ್ಮೆಲ್ಲರಿಗಿಂತ ಹೆಚ್ಚಿತ್ತು. ಚಿಕ್ಕಂದಿನಿಂದಲೇ ಅವರು ಅಧ್ಯಯನದಲ್ಲಿ ಬಹಳ ಚುರುಕಾಗಿದ್ದರು. ಅವರಿಗೆ ಮುಂಬಯಿಯ ‘ಗ್ರ್ಯಾಂಟ್ ಮೆಡಿಕಲ್ ಕಾಲೇಜ್ನಲ್ಲಿ ಪ್ರವೇಶ ದೊರಕಿತು ಮತ್ತು ಅವರು ಆಧುನಿಕ ವೈದ್ಯರಾದರು. ಈ ವಿಷಯ ಸಾಮಾನ್ಯವೇನಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಇದನ್ನು ಸಾಧಿಸಲು ಆಗುವುದಿಲ್ಲ.
೩. ಜನ್ಮದಿಂದಲೇ ಇರುವ ಪ್ರೀತಿ !
ನಾನು ಹೆಚ್ಚಾಗಿ ಅವರ ಒಡನಾಟದಲ್ಲಿ ಇರಲಿಲ್ಲ; ಏಕೆಂದರೆ, ನಾನು ಸುಮಾರು ೧೭ – ೧೮ ವರ್ಷಗಳಿಂದ ಮೊದಲಿಗೆ ಶಿಕ್ಷಣದ ಕಾರಣದಿಂದ ಮತ್ತು ಬಳಿಕ ನೌಕರಿಯ ಕಾರಣದಿಂದ ಹೊರಗಡೆ ಇದ್ದೆನು. ಅವರು ನನಗಿಂತ ಚಿಕ್ಕವರಾಗಿದ್ದಾರೆ. ನಾನು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದೆನು. ಆಗ ಅವರಿಗೆ ಶಾಲೆಯಲ್ಲಿ ಯಾವುದೋ ಒಂದು ಬಹುಮಾನದ ಮೊತ್ತ ದೊರಕಿತ್ತು. ಅವರು ಅದರಿಂದ ನನಗಾಗಿ ಒಂದು ಗಡಿಯಾರವನ್ನು ಖರೀದಿಸಿ ನನಗೆ ಉಡುಗೊರೆಯೆಂದು ಕಳುಹಿಸಿದ್ದರು ! ಆಗ ನಾನು ೨೦ – ೨೧ ವರ್ಷದವನಾಗಿದ್ದೆನು ಮತ್ತು ಅವರು ನನಗಿಂತ ೭ ವರ್ಷ ಚಿಕ್ಕವರಾಗಿದ್ದರು. ಅಂದರೆ ೧೩ – ೧೪ ವರ್ಷದ ವಯಸ್ಸಿನಲ್ಲಿಯೇ ಅವರ ಮನಸ್ಸಿನಲ್ಲಿ ‘ನನ್ನ ಸಹೋದರ ದೂರದಲ್ಲಿರುತ್ತಾನೆ. ಅವನಿಗೆ ಏನಾದರೂ ಉಡುಗೊರೆಯನ್ನು ಕಳುಹಿಸೋಣ ಎಂದು ಅನಿಸಿತು. ಸಾಮಾನ್ಯವಾಗಿ ಜನರಿಗೆ ‘ತನಗೆ ಸಿಗಬೇಕು ಎಂದು ಅನಿಸುತ್ತದೆ. ‘ತನ್ನ ವಸ್ತುವನ್ನು ಯಾರಿಗಾದರೂ ಕೊಡಬೇಕು ಎನ್ನುವ ವೃತ್ತಿಯಿರುವುದಿಲ್ಲ; ಆದರೆ ಅವರಲ್ಲಿ ಚಿಕ್ಕಂದಿನಿಂದಲೇ ಯಾವುದೇ ಆಸಕ್ತಿಯಿರಲಿಲ್ಲ.
೪. ಅಹಂ ಇಲ್ಲದಿರುವುದು
ಎಲ್ಲಕ್ಕಿಂತ ದೊಡ್ಡ ವಿಷಯವೆಂದರೆ ‘ಇಷ್ಟು ದೊಡ್ಡ ಆಶ್ರಮವನ್ನು ಸ್ಥಾಪಿಸುವುದು ಮತ್ತು ಅದರಲ್ಲಿ ಇಷ್ಟು ಉಪಕ್ರಮಗಳನ್ನು ನಡೆಸುವುದು ಈ ವಿಷಯ ಸಾಮಾನ್ಯರ ಕ್ಷಮತೆಯನ್ನು ಮೀರಿದೆ. ನಮ್ಮಂತಹ ವ್ಯಕ್ತಿಗೆ ಒಂದು ಮನೆಯನ್ನು ಖರೀದಿಸಿದರೂ, ಅದರ ಬಗ್ಗೆ ಎಷ್ಟು ಅಭಿಮಾನವಿರುತ್ತದೆ! ನಾನು ಬೇರೆಯವರು ಕೆಲವು ದಿನ ಉಪಯೋಗಿಸಿದ್ದ ಒಂದು ಹಳೆಯ ಮನೆಯನ್ನು ಖರೀದಿಸಿದ್ದೆನು ಮತ್ತು ಅದರ ಮೇಲೆ ಮಹಡಿಯನ್ನು ಕಟ್ಟಿದೆನು ಆಗ ನನಗೆ ಒಳ್ಳೆಯದೆನಿಸಿತು. ಗರ್ವವೆನಿಸಲಿಲ್ಲ, ಅಹಂಕಾರವೂ ಬರಲಿಲ್ಲ; ಆದರೆ ಮನಸ್ಸಿನಲ್ಲಿ ‘ನನ್ನ ಮನೆಯಾಯಿತು ಎಂದು ಒಂದು ರೀತಿಯ ಸಂತೋಷವೆನಿಸಿತು. ಪರಾತ್ಪರ ಗುರು ಡಾಕ್ಟರರ ಪ್ರೇರಣೆಯಿಂದ ಇಷ್ಟು ದೊಡ್ಡ ದೊಡ್ಡ ಆಶ್ರಮಗಳು ಕಾರ್ಯನಿರ್ವಹಿಸುತ್ತಿವೆ; ಆದರೆ ಅವರ ಹೆಸರಿನಲ್ಲಿ ಒಂದೂ ಇಲ್ಲ. ಅವರಲ್ಲಿ ಅಹಂ ಇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
೫. ತಾವು ಮೋಕ್ಷಕ್ಕೆ ಹೋಗುವ ಬದಲು, ಇತರರಿಗೆ ಮೋಕ್ಷಮಾರ್ಗವನ್ನು ತೋರಿಸುವ ಇಚ್ಛೆಯನ್ನು ವ್ಯಕ್ತಪಡಿಸುವುದು
ಸುಮಾರು ೨೦ – ೨೫ ವರ್ಷಗಳ ಹಿಂದಿನ ವಿಷಯವಾಗಿದೆ. ಆಗ ನಾನು ಮುಂಬಯಿಯಲ್ಲಿ ವಾಸಿಸುತ್ತಿರಲಿಲ್ಲ. ರಜೆಯಲ್ಲಿ ಬೇರೆ ಊರಿನಿಂದ ಬರುತ್ತಿದ್ದೆನು. ಆಗ ನಮ್ಮಿಬ್ಬರಲ್ಲಿ (ನಾನು ಮತ್ತು ಪರಾತ್ಪರ ಗುರು ಡಾಕ್ಟರರಲ್ಲಿ) ಮಾತುಕತೆಯಾಗುತ್ತಿತ್ತು. ಒಮ್ಮೆ ಹೀಗೆಯೇ ಮಾತನಾಡುತ್ತಿರುವಾಗ ಅವರು “ನನಗೆ ಮೋಕ್ಷಕ್ಕೆ ಹೋಗುವ ಇಚ್ಛೆಯಿಲ್ಲ, ನನಗೆ ಮೋಕ್ಷ ಮಾರ್ಗದ ಮೈಲಿಗಲ್ಲು ಆಗಬೇಕಾಗಿದೆ. ನಾನು ಮೋಕ್ಷಕ್ಕೆ ಹೋಗಿ ಮುಕ್ತನಾಗುವುದಕ್ಕಿಂತ ಅನೇಕರಿಗೆ ಮೋಕ್ಷ ಮಾರ್ಗವನ್ನು ತೋರಿಸುವ ಇಚ್ಛೆಯಿದೆ ಎಂದು ಹೇಳಿದ್ದರು. ಇದು ಅಸಾಮಾನ್ಯ ವಿಷಯವಾಗಿದೆ. ಇದೇನು ಸಾಮಾನ್ಯ ವಿಷಯವಲ್ಲ. ಆ ವಯಸ್ಸಿನಲ್ಲಿ ಅವರಲ್ಲಿ, ನಾನು ಇಲ್ಲಿಯೇ ಉಳಿಯುತ್ತೇನೆ ಮತ್ತು ಎಲ್ಲರಿಗೂ ಮೋಕ್ಷದ ಮಾರ್ಗವನ್ನು ತೋರಿಸಿ ಅವರನ್ನು ಮೋಕ್ಷದವರೆಗೆ ತಲುಪಿಸುವೆನು ಎನ್ನುವ ಭಾವನೆಯಿತ್ತು. ನಾವು ಮಾತ್ರ ನಮ್ಮ ಉದ್ಧಾರವನ್ನು ಮಾಡಿಕೊಳ್ಳಲು ಚಡಪಡಿಸುತ್ತಿರುತ್ತೇವೆ ಮತ್ತು ಆದಾಗ್ಯೂ ನಮಗೆ ಮೋಕ್ಷಪ್ರಾಪ್ತಿಯಾಗುವುದಿಲ್ಲ.
೬. ‘ಸ್ವಭಾವದೋಷವನ್ನು ದೂರಗೊಳಿಸಿದ ಬಳಿಕವೇ ಆಧ್ಯಾತ್ಮಿಕ ಪ್ರಗತಿಯ ಮಾರ್ಗ ಸುಲಭವಾಗುತ್ತದೆ ಎನ್ನುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ತಿಳಿದುಕೊಳ್ಳುವುದು ಮತ್ತು ಅದಕ್ಕನುಸಾರ ತಾವೇ ಸ್ವತಃ ಪ್ರಯತ್ನಿಸಿ, ಬಳಿಕ ಸಾಧಕರಿಂದಲೂ ಅದೇ ರೀತಿ ಪ್ರಯತ್ನವನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪರಾತ್ಪರ ಗುರು ಡಾಕ್ಟರ್ ಆಠವಲೆ !
ಸಾಧಕರ ಸ್ವಭಾವದಲ್ಲಿ ಪರಾತ್ಪರ ಗುರು ಡಾಕ್ಟರರು ಮಾಡಿರುವ ಬದಲಾವಣೆಯು ಅಸಾಮಾನ್ಯವಾಗಿದೆ. ‘ಮನುಷ್ಯನ ಸ್ವಭಾವದೋಷ ದೂರವಾಗಬೇಕು ಇದುವೇ ಮೋಕ್ಷಪ್ರಾಪ್ತಿಗಾಗಿ ಎಲ್ಲಕ್ಕಿಂತ ಹೆಚ್ಚು ಆವಶ್ಯಕವಿರುವ ವಿಷಯವಾಗಿದೆ, ಎನ್ನುವುದನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ತಿಳಿದಿದ್ದರು. ನನಗೆ ಅದನ್ನು ತಿಳಿದುಕೊಳ್ಳಲು ಇಷ್ಟು ವರ್ಷಗಳು ಬೇಕಾದವು. ಅದನ್ನು ತಿಳಿದುಕೊಂಡು ಕೇವಲ ತಮ್ಮಲ್ಲಿಯೇ ಬದಲಾವಣೆಯನ್ನು ಮಾಡಿಕೊಂಡು ಅಲ್ಲಿಯೇ ನಿಲ್ಲದೇ, ಅವರು ಎಲ್ಲ ಸಾಧಕರಿಗೆ ಈ ವಿಷಯವನ್ನು ಹೇಳಿದರು. ಕೇವಲ ಹೇಳಲಿಲ್ಲ, ಅದೇ ರೀತಿ ಸಾಧಕರಿಂದಲೂ ಪ್ರಯತ್ನವನ್ನು ಮಾಡಿಸಿಕೊಂಡರು. ಇಷ್ಟು ಸಾಧಕರನ್ನು ಸಿದ್ಧಪಡಿಸುವ ಗುರು ಇಲ್ಲಿಯವರೆಗಂತೂ ನನ್ನ ಗಮನಕ್ಕೆ ಬಂದಿಲ್ಲ. ಇದು ಅಸಾಮಾನ್ಯ ಮತ್ತು ಆಶ್ಚರ್ಯದ ವಿಷಯವಾಗಿದೆ. ಸ್ವಭಾವದೋಷ-ನಿರ್ಮೂಲನೆಯಂತಹ ಅಸಾಮಾನ್ಯ ಮತ್ತು ವಿನೂತನ ಕಲ್ಪನೆಯನ್ನು ಕಂಡು ಹಿಡಿದು ಸಾಧಕರನ್ನು ಸಿದ್ಧಗೊಳಿಸಿರುವಂತಹ ಮತ್ತೊಂದು ಉದಾಹರಣೆ ಇರಲು ಸಾಧ್ಯವೇ ಇಲ್ಲ.
೭. ಅನೇಕ ಸಾಧಕರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವುದು
ಅನೇಕ ಹಿರಿಯ ಸಂತರ ಬಳಿಯೂ ಶಿಷ್ಯರು ಇರುತ್ತಾರೆ; ಆದರೆ ಅವರಿಗೆ ಒಬ್ಬರು, ಇಬ್ಬರು ಅಥವಾ ನಾಲ್ವರು ಇಷ್ಟೇ ಶಿಷ್ಯರನ್ನು ಸಿದ್ಧಗೊಳಿಸಲು ಸಾಧ್ಯವಾಗುತ್ತದೆ. ಪರಾತ್ಪರ ಗುರು ಡಾಕ್ಟರರು ಎಷ್ಟು ಸಾಧಕರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಂಡಿದ್ದಾರೆಂದರೆ, ನಮ್ಮ ಬುದ್ಧಿಗೆ ಆಶ್ಚರ್ಯವಾಗುತ್ತದೆ. ಫೆಬ್ರುವರಿ ೨೦೨೦ ರ ವರೆಗೆ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ೧೦೬ ಸಾಧಕರು ಸಂತರಾಗಿದ್ದಾರೆ ಮತ್ತು ೧ ಸಾವಿರ ೮೦ ಸಾಧಕರು ಶೇ. ೬೦ ಕ್ಕಿಂತ ಅಧಿಕ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದು, ಅವರು ಸಂತತ್ವದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಹೀಗೆ ಪರಾತ್ಪರ ಗುರು ಡಾಕ್ಟರರು ಮತ್ತು ಅವರ ಎಲ್ಲ ಸಾಧಕರಿಗೆ ನನ್ನ ನಮಸ್ಕಾರಗಳು!
೮. ಸಾಧಕರಿಂದ ಭಗವದ್ಗೀತೆಯಲ್ಲಿರುವ ಅಂಶಗಳನ್ನು ಕೃತಿಯಲ್ಲಿ ತರಿಸಿ ಅವರಿಂದ ಮಾಡಿಸಿಕೊಂಡು ಅವರನ್ನು ಬಂಧನದಿಂದ ಮುಕ್ತಗೊಳಿಸುವ ಪರಾತ್ಪರ ಗುರು ಡಾಕ್ಟರ !
ಪರಾತ್ಪರ ಗುರು ಡಾಕ್ಟರರು ನಿಮಗೆಲ್ಲ ಸಾಧಕರಿಗೆ ಒಂದು ಒಳ್ಳೆಯ ವಿಷಯವನ್ನು ಕಲಿಸಿದ್ದಾರೆ. ನೀವು ಪ್ರತಿಯೊಂದು ಕೃತಿಯನ್ನು ಈಶ್ವರನಿಗೆ ನಮಸ್ಕಾರ ಮಾಡಿ ಆರಂಭಿಸುತ್ತೀರಿ ಮತ್ತು ಪ್ರತಿಯೊಂದು ಕಾರ್ಯವು ಪೂರ್ಣಗೊಂಡ ಬಳಿಕ ಪುನಃ ನಮಸ್ಕರಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೀರಿ. ಗಣಕಯಂತ್ರದ ಸೇವೆಯು ಮುಗಿದ ಬಳಿಕ ನೀವು ಅದಕ್ಕೂ ನಮಸ್ಕಾರವನ್ನು ಮಾಡಿಯೇ ಬಂದ್ ಮಾಡುತ್ತೀರಿ.
ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ, ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್| ಯತ್ತಪಸ್ಯಸಿ ಕೌಂತೇಯ ತಕ್ತುರುಷ್ವ ಮದರ್ಪಣಮ್|| – ಶ್ರೀಮದ್ಭವದ್ಗೀತೆ, ಅಧ್ಯಾಯ ೯, ಶ್ಲೋಕ ೨೭.
ಅರ್ಥ : ಹೇ ಕೌಂತೇಯಾ, ನೀನು ಯಾವ ಕರ್ಮವನ್ನು ಮಾಡುತ್ತಿರುವೆಯೋ, ಏನು ಸ್ವೀಕರಿಸುತ್ತಿಯೋ, ಯಾವ ಹವನವನ್ನು ಮಾಡುತ್ತಿರುವೆಯೋ, ಯಾವ ದಾನವನ್ನು ಮಾಡುತ್ತಿರುವೆಯೋ ಮತ್ತು ಯಾವ ತಪಸ್ಸು ಮಾಡುತ್ತಿರುವೆಯೋ, ಅವೆಲ್ಲವನ್ನು ನನಗೆ ಅರ್ಪಿಸು.
ಭಗವದ್ಗೀತೆಯಲ್ಲಿ ಆ ರೀತಿ ಭಗವಂತನ ಆಜ್ಞೆಯಿದೆ. ‘ಹೀಗೆ ಮಾಡುವುದರಿಂದ ಏನಾಗುತ್ತದೆ ? ಎಂಬುದನ್ನು ಅವನು ಮುಂದಿನ ಶ್ಲೋಕದಲ್ಲಿ ಹೇಳಿದ್ದಾನೆ.
ಶುಭಾಶುಭಫಲೈರೇವಂ ಮೋಕ್ಷಸೆ ಕರ್ಮಬಂಧನೈಃ | ಸನ್ಯಾಸಯೋಗಯುಕ್ತಾತ್ಮಾ ವಿಮುಕ್ತೊ ಮಾಮುಪೈಷ್ಯಸಿ || – ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೨೮
ಅರ್ಥ : ಈ ರೀತಿಯಲ್ಲಿ ಯಾವುದರಿಂದ ಎಲ್ಲ ಕರ್ಮಗಳು ಭಗವಂತನಿಗೆ ಅರ್ಪಿಸಲ್ಪಡುತ್ತವೆಯೋ, ಇಂತಹ ಸನ್ಯಾಸಯೋಗದಿಂದ ಕೂಡಿರುವ ಚಿತ್ತವಿರುವ ನೀನು ಶುಭಾಶುಭಫಲರೂಪಿ ಕರ್ಮಬಂಧನದಿಂದ ಮುಕ್ತನಾಗುವೆ ಮತ್ತು ನನ್ನನ್ನು ಸೇರುವೆ.
ಪ್ರತಿಯೊಂದು ಕರ್ಮದ ಶುಭ ಮತ್ತು ಅಶುಭ ಫಲಗಳಿರುತ್ತವೆ. ಶುಭಾಶುಭ ಫಲವೆಂದರೆ ಪುಣ್ಯ ಮತ್ತು ಪಾಪ. ಆ ಪುಣ್ಯ ಮತ್ತು ಪಾಪಗಳಿಂದಲೇ ನಾವು ಜನ್ಮ – ಮೃತ್ಯುವಿನ ಬಂಧನದಲ್ಲಿ ಸಿಲುಕಿಕೊಳ್ಳುತ್ತೇವೆ ಇದರಿಂದ ಬಿಡುಗಡೆ ಹೊಂದಲು ನಾವು ಮಾಡುತ್ತಿರುವ ಪ್ರತಿಯೊಂದು ಕರ್ಮವನ್ನು ಭಗವಂತನಿಗೆ ಅರ್ಪಿಸುವುದರಿಂದ ಆ ಕರ್ಮದ ತ್ಯಾಗವಾಗುತ್ತದೆ. ಇದರಿಂದ ನಿಮ್ಮ ಸನ್ಯಾಸ-ಕರ್ಮಯೋಗದ ಆಚರಣೆಯಾಗುತ್ತದೆ; ಏಕೆಂದರೆ ಸನ್ಯಾಸದಲ್ಲಿ ತ್ಯಾಗವಿರುತ್ತದೆ. ಇದರಿಂದ ‘ಪಾಪ-ಪುಣ್ಯ ಮತ್ತು ಕರ್ಮಬಂಧನಗಳಾಚೆಗೆ ಹೋಗಿ ಆ ಬಂಧನದಿಂದ ನೀವು ಮುಕ್ತರಾಗುವಿರಿ ಮತ್ತು ನನ್ನನ್ನು ಪಡೆಯುವಿರಿ ಎಂದು ಭಗವಂತನು ಗೀತೆಯಲ್ಲಿ ಹೇಳಿದ್ದಾನೆ, ಅದನ್ನೇ ಪರಾತ್ಪರ ಗುರು ಡಾಕ್ಟರರು ನಿಮ್ಮೆಲ್ಲ ಸಾಧಕರಿಂದ ಪ್ರತ್ಯಕ್ಷದಲ್ಲಿ ಕೃತಿ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಭಗವಂತ ನಿಮಗೆ ಮುಕ್ತಿಯನ್ನು ನೀಡುವನು.
೯. ಸಾಧಕರನ್ನು ದೋಷಮುಕ್ತರನ್ನಾಗಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !
೯ ಅ. ಶ್ರೀಮದ್ ಶಂಕರಾಚಾರ್ಯರು ರಾಮನಾಥಿ ಆಶ್ರಮಕ್ಕೆ ಬಂದಾಗ, ‘ನಿರ್ದೋಷಂ ಹಿ ಸಮಂ ಬ್ರಹ್ಮ |ಎಂದು ಹೇಳುವುದು : ಕೆಲವು ವರ್ಷಗಳ ಹಿಂದೆ ರಾಮನಾಥಿ ಆಶ್ರಮಕ್ಕೆ ಪೂರ್ವಾಮ್ನಾಯ ಶ್ರೀಗೋವರ್ಧನಮಠ ಪುರಿ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದಸರಸ್ವತಿ ಮಹಾರಾಜರು ಬಂದಿದ್ದರು. ಆ ಸಮಯದಲ್ಲಿ ನಾನು ಇಲ್ಲಿರಲಿಲ್ಲ. ನಾನು ಮುಂಬಯಿಯಲ್ಲಿ ವಾಸಿಸುತ್ತಿದ್ದೆನು. ಆ ವಾರ್ತೆಯನ್ನು ನಾನು ‘ಸನಾತನ ಪ್ರಭಾತ ದಿನಪತ್ರಿಕೆಯಲ್ಲಿ ಓದಿದ್ದೆನು. ಆಗ ಅವರು ‘ನಿರ್ದೋಷಂ ಹಿ ಸಮಂ ಬ್ರಹ್ಮ |(ಶ್ರೀಮದ್ಭಗವದ್ಗೀತೆ, ಅಧ್ಯಾಯ ೫, ಶ್ಲೋಕ ೧೯) ಅಂದರೆ ‘ಸಚ್ಚಿದಾನಂದನ ಪರಮಾತ್ಮನು ದೋಷರಹಿತ ಮತ್ತು ಸಮಚಿತ್ತನಾಗಿದ್ದಾನೆ ಅದರ ಅರ್ಥವೆಂದರೆ ‘ಬ್ರಹ್ಮ ನಿರ್ದೋಷನಾಗಿದ್ದಾನೆ. ಬ್ರಹ್ಮನಲ್ಲಿ ಯಾವುದೇ ದೋಷ ಅಥವಾ ವಿಕೃತಿಯಿರುವುದಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಎಂಬ ಷಡ್ರಿಪುಗಳಿವೆ. ಅವು ಬ್ರಹ್ಮನಲ್ಲಿ ಇರುವುದಿಲ್ಲ ಮತ್ತು ಬ್ರಹ್ಮನ ಮತ್ತೊಂದು ಗುಣವನ್ನು ಅವರು ‘ಬ್ರಹ್ಮ ಸಮ ಆಗಿದ್ದಾನೆ, ಎಂದು ಹೇಳಿದ್ದಾರೆ. ರಾಗ-ದ್ವೇಷ, ಶೀತ-ಉಷ್ಣ, ಇವೆಲ್ಲದರಲ್ಲಿ ಬ್ರಹ್ಮ ಸಮನಾಗಿರುತ್ತಾನೆ. ಅವನಿಗೆ ಯಾವುದರಲ್ಲಿಯೂ ಅಥವಾ ಯಾವುದೇ ವಿಶೇಷ ವಿಷಯಗಳ ಆಸಕ್ತಿಯಿರುವುದಿಲ್ಲ, ಅದರಂತೆ ಯಾವುದರಲ್ಲಿಯೂ ಅನಾಸಕ್ತಿಯೂ ಇರುವುದಿಲ್ಲ. ಶಂಕರಾಚಾರ್ಯರಿಗೆ ರಾಮನಾಥಿ ಆಶ್ರಮದಲ್ಲಿ ‘ನಿರ್ದೋಷಂ ಹಿ ಸಮಂ ಬ್ರಹ್ಮ | ಎಂದು ಏಕೆ ಹೇಳಬೇಕು ಎಂದು ಅನಿಸಿರಬಹುದು ? ರಾಮನಾಥಿ ಆಶ್ರಮದಲ್ಲಿ ಅವರಿಗೆ ‘ಯಾರು ದೋಷ ರಹಿತರಾಗಿ ಮತ್ತು ಸಮವೃತ್ತಿಯವರು, ಯಾರು ಯಾರೊಂದಿಗೂ ಅಧಿಕ ಮಿತ್ರತ್ವ ಮಾಡುವುದಿಲ್ಲವೋ ಮತ್ತು ಯಾರನ್ನು ದ್ವೇಷಿಸುವುದಿಲ್ಲವೋ, ಅಂತಹ ಸಾಧಕರು ಅವರಿಗೆ ಕಾಣಿಸಿರಬೇಕು. ಅದರಿಂದಲೇ ಅವರು ಹೀಗೆ ಹೇಳಿರಬೇಕು.
೯ ಆ. ದೋಷರಹಿತ ಮತ್ತು ಸಮವೃತ್ತಿಯ ಸಾಧಕರು ಬ್ರಹ್ಮನಲ್ಲಿ ಸ್ಥಿತರಾಗಿರುವುದು : ‘ಹೀಗೆ ಆಗುವುದರಿಂದ ಏನಾಗುತ್ತದೆ ? ಎಂದು ಆ ಶ್ಲೋಕದ ಮುಂದಿನ ಚರಣದಲ್ಲಿ ವಿವರಿಸಲಾಗಿದೆ. ತಸ್ಮಾದ್ಬ್ರಹ್ಮಣಿ ತೆ ಸ್ಥಿತಾಃ | – ಶ್ರೀಮದ್ಬಗವದ್ಗೀತೆ, ಅಧ್ಯಾಯ ೫, ಶ್ಲೋಕ ೧೯
ಅರ್ಥ : ಯಾರ ಮನಸ್ಸು ಸಮಭಾವದಲ್ಲಿ ಸ್ಥಿರವಾಗಿದೆಯೋ, ಅವರು ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಸ್ಥಿರವಾಗಿರುತ್ತಾನೆ. ಸಮವೃತ್ತಿಯಿಂದ ಆ ಸಾಧಕರು ಬ್ರಹ್ಮನಲ್ಲಿಯೇ ಸ್ಥಿರವಾಗಿರುತ್ತಾರೆ. ಯಾರು ದೋಷರಹಿತರಾಗಿದ್ದಾರೆಯೋ, ಯಾರಲ್ಲಿ ಯಾವುದೇ ಸ್ವಭಾವ ದೋಷವಿಲ್ಲವೋ, ಅವರಲ್ಲಿ ಸಮವೃತ್ತಿ ತನ್ನಿಂತಾನೇ ಬರುತ್ತದೆ. ದೋಷರಹಿತ ಮತ್ತು ಸಮವೃತ್ತಿ ಇದು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಒಂದು ವೇಳೆ ಸಮವೃತ್ತಿ ಪೂರ್ಣವಾಗಿ ಬಂದಿದ್ದರೆ, ಮನುಷ್ಯ ದೋಷರಹಿತನಾಗುವನು ಅಥವಾ ಪೂರ್ಣ ದೋಷರಹಿತನಾದರೆ, ಅವನು ತನ್ನಿಂತಾನೇ ಸಮವೃತ್ತಿಯವನಾಗುವನು. ಯಾವ ಸಾಧಕರು ದೋಷರಹಿತ ಮತ್ತು ಸಮವೃತ್ತಿಯವರಾಗಿದ್ದಾರೆಯೋ ಅವರು ಬ್ರಹ್ಮನಲ್ಲಿಯೇ ಲೀನವಾಗುತ್ತಾರೆ. ಶಂಕರಾಚಾರ್ಯರು ನಮ್ಮ ಆಶ್ರಮದಲ್ಲಿರುವ ನಿಮ್ಮೆಲ್ಲ ಸಾಧಕರನ್ನು ನೋಡಿಯೇ ಹೀಗೆ ಹೇಳಿರಬೇಕು. ಅವರು ದೋಷರಹಿತವಾಗಿರುವುದರ ಮಹತ್ವವನ್ನು ಹೇಳಿದ್ದಾರೆ; ಏಕೆಂದರೆ ಇದೇ ಸಾಧನೆಯ ಮೂಲವಾಗಿದೆ. ನಾವು ಯಾವಾಗ ಭಕ್ತಿಯನ್ನು ಮಾಡಿದರೂ, ಪೂಜೆಯನ್ನು ಮಾಡುತ್ತೇವೆಯೋ, ಜಪವನ್ನು ಮಾಡುತ್ತೇವೆಯೋ, ಆಗ ಏನಾಗುತ್ತದೆ ? ನಾವು ೧೦ ಸಲ ನಾಮಜಪ ವನ್ನು ಮಾಡುವ ಸಂಕಲ್ಪವನ್ನು ಮಾಡಿದರೆ, ಒಂದು ಸಾವಿರ ಸಲ ನಾಮಜಪ ಮಾಡುವ ಸಂಕಲ್ಪವನ್ನು ಮಾಡಿದರೆ, ೧ ಲಕ್ಷ ನಾಮಜಪವನ್ನು ಮಾಡುವ ಸಂಕಲ್ಪವನ್ನು ಮಾಡಿದರೂ, ಇದರಿಂದ ಭಗವಂತನು ಪ್ರಸನ್ನನಾಗುವುದಿಲ್ಲ; ಆದರೆ, ಯಾವಾಗ ನಾವು ಗಮನವಿಟ್ಟು ನಾಮಜಪವನ್ನು ಮಾಡುತ್ತೇವೆಯೋ, ನಮ್ಮ ಗಮನ ಸಾಂಸಾರಿಕ ವಿಷಯಗಳಲ್ಲಿ ಸಿಲುಕಿಕೊಳ್ಳದೇ, ಅದು ಭಗವಂತನೆಡೆಗೆ ಇರುತ್ತದೆಯೋ, ಆಗ ಚಿತ್ತದಲ್ಲಿ ವಿಕೃತಿಯಿರುವುದಿಲ್ಲ. ಅದು ಹೆಚ್ಚುತ್ತ ನಿಧಾನವಾಗಿ ಅದು ಅವನ ಪ್ರವೃತ್ತಿಯಾಗುತ್ತದೆ ಮತ್ತು ಮನುಷ್ಯ ವಿಕೃತಿರಹಿತನಾಗುತ್ತಾನೆ.
೯ ಇ. ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ, ‘ಮನುಷ್ಯನನ್ನು ದೋಷರಹಿತಗೊಳಿಸುವುದು ಸಾಧನೆಯ ಉದ್ದೇಶವಾಗಿರುವುದು : ಪ್ರತಿಯೊಂದು ಸಾಧನೆಯಲ್ಲಿ ಇದೇ ಉದ್ದೇಶವಿರುತ್ತದೆ. ಅದು ಭಕ್ತಿಮಾರ್ಗವಿರಲಿ ಅಥವಾ ಪತಂಜಲಿಯೋಗವಿರಲಿ, ಯಾರಿಗೆ ‘ಯೋಗಶ್ಚಿತ್ತವೃತ್ತಿನಿರೋಧಃ | (ಪಾತಂಜಲಯೋಗದರ್ಶನ, ಸಮಾಧಿಪಾದ, ಸೂತ್ರ ೨) ಅಂದರೆ ‘ಯೋಗ ಚಿತ್ತದ ವೃತ್ತಿಯನ್ನು ನಿರೋಧಗೊಳಿಸುತ್ತದೆ ಎಂದು ಹೇಳಲಾಗಿದೆ. ಚಿತ್ತದ ವೃತ್ತಿ ಹೀಗಿರುತ್ತದೆ ? ಯೋಗ ಮನಸ್ಸಿನಲ್ಲಿ ಬರುವ ಅಸಂಖ್ಯಾತ ಒಳ್ಳೆಯ-ಕೆಟ್ಟ ಹೀಗೆ ಎಲ್ಲ ವಿಚಾರಗಳನ್ನು ತಡೆಯುತ್ತದೆ. ಎಲ್ಲ ವಿಚಾರಗಳು ನಿಂತ ಬಳಿಕ ದೋಷಗಳು ಎಲ್ಲಿ ಉಳಿಯುತ್ತವೆ ? ಪ್ರತಿಯೊಂದು ಸಾಧನೆಯ ಉದ್ದೇಶ ‘ಮನುಷ್ಯನನ್ನು ದೋಷರಹಿತಗೊಳಿಸುವುದು ಆಗಿರುತ್ತದೆ ಮತ್ತು ಅದೇ ಪ್ರತಿಯೊಂದು ಪ್ರಕಾರದ ಸಾಧನೆಯ ಪ್ರಮುಖ ಅಂಶವಾಗಿದೆ. ಕೇವಲ ಕರ್ಮವನ್ನು ಮಾಡಿದರೆ, ಮೋಸ ಹೋಗುವಿರಿ; ಆದರೆ ನಾವು ನಿಷ್ಕಾಮ ಕರ್ಮವನ್ನು ಮಾಡಿದರೆ, ನಮ್ಮ ಮನಸ್ಸಿನಲ್ಲಿ ವಿಕೃತಿ ಉಳಿಯುವುದೇ ಇಲ್ಲ. ಇದೇ ಮೂಲ ಅಂಶವಾಗಿದೆ. ಈ ವಿಷಯವನ್ನು ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಪ್ರತ್ಯಕ್ಷದಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ.
ಇಂತಹ ಉಚ್ಚ ಕೋಟಿಯ ಗುರುಗಳು ನಮಗೆಲ್ಲರಿಗೂ ಲಭಿಸಿದ್ದಾರೆ. ಅವರಿಗೆ ನನ್ನ ನಮಸ್ಕಾರಗಳು !
– ಅನಂತ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ) ಢವಳಿ, ಫೋಂಡಾ, ಗೋವಾ ( ೨೭.೬.೨೦೧೯)
(ಪೂ. ಅನಂತ ಆಠವಲೆಯವರು ಅವರ ಸಂತ ಸನ್ಮಾನ ಸಮಾರಂಭದ ಸಮಯದಲ್ಲಿ ಹೇಳಿದ ಅಂಶಗಳು)