ಹಿಂದೂಗಳೇ, ‘ಗೋಗ್ರಾಸವನ್ನು ಆಕಳಿಗೇ ಕೊಡುತ್ತೀರಲ್ಲ ?

ಹಿಂದೂ ಧರ್ಮದಲ್ಲಿ ‘ಗೋಗ್ರಾಸವನ್ನು ಪುಣ್ಯದಾಯಕವೆಂದು ತಿಳಿಯಲಾಗುತ್ತದೆ. ನಮ್ಮಲ್ಲಿ ಹಬ್ಬಹರಿದಿನಗಳಂದು ಗೋಗ್ರಾಸನ್ನು ನೀಡದೇ ಭೋಜನ ಮಾಡದಿರುವ ಹಿಂದೂಗಳಿದ್ದಾರೆ, ಹಾಗೆಯೇ ಈಗಲೂ ನಿಯಮಿತವಾಗಿ ಪ್ರತಿದಿನ ಗೋಗ್ರಾಸ ನೀಡದೇ ಭೋಜನ ಮಾಡದಿರುವ ಹಿಂದೂಗಳೂ ನಮ್ಮಲ್ಲಿದ್ದಾರೆ; ಆದರೆ ಈ ತುತ್ತನ್ನು ಆಕಳಿಗೇ (ಗೋವುಗಳಿಗೇ) ತಿನ್ನಿಸುತ್ತೀರಲ್ಲ, ಎಂಬುದನ್ನು ನೋಡುವುದು ಮಾತ್ರ ಆವಶ್ಯಕವಾಗಿದೆ. ಮುಂಬೈಯ ಅನೇಕ ದೇವಸ್ಥಾನಗಳ ಹತ್ತಿರ ಹಣ ಪಡೆದು ಗೋಗ್ರಾಸ ನೀಡಲು ಆಕಳುಗಳನ್ನು ಕಟ್ಟಿರುತ್ತಾರೆ; ಆದರೆ ಅವುಗಳಲ್ಲಿನ ಶೇ. ೯೯ ರಷ್ಟು ಆಕಳುಗಳಾಗಿರುವುದಿಲ್ಲ, ಅವು ಜರ್ಸಿ ಪ್ರಾಣಿಗಳಾಗಿರುತ್ತವೆ. ನಾವು ಯಾವುದಕ್ಕೆ ಜರ್ಸಿ ಆಕಳು ಎಂದು ತಿಳಿಯುತ್ತೇವೆಯೋ, ಅವು ಆಕಳುಗಳಲ್ಲ, ಅವು ಯರೋಪಿನ ‘ಹೊಲ್ಸ್ಟೆನ್ ಫ್ರೀಜೀಯನ್ ಎಂಬ ಪ್ರಾಣಿಗಳಾಗಿವೆ. ಈ ಪ್ರಾಣಿಗಳು ಆಕಳುಗಳಂತೆ  ಕಾಣಿಸುವುದರಿಂದ ಭಾರತದಲ್ಲಿನ ಭಾಷಾಂತರಕಾರರು ಅವುಗಳಿಗೆ ಆಂಗ್ಲದಲ್ಲಿ ‘ಕೌ ಎಂದು ಹೇಳಲು ಪ್ರಾರಂಭಿಸಿದರು. ಇದರಿಂದಾಗಿ ಭಾರತದಲ್ಲಿ ಈ ಪ್ರಾಣಿಗಳಿಗೆ ಈಗ ಆಕಳು (ಗೋವು) ಎಂದು ಕರೆಯುತ್ತಾರೆ. ಅನೇಕರಿಗೆ ಇದರ ಬಗ್ಗೆ ಮಾಹಿತಿಯಿಲ್ಲ ಮತ್ತು ಯಾರಿಗೆ ಮಾಹಿತಿಯಿದೆಯೋ, ಆ ಹಿಂದೂಗಳ ಕಡೆಗೆ ಬೇರೆ ಯಾವುದೇ ಪರ್ಯಾಯವಿಲ್ಲ. ಆದುದರಿಂದ ಅಜ್ಞಾನ ಮತ್ತು ಅಸಹಾಯಕತೆ ಈ ಎರಡೂ ಕಾರಣಗಳಿಂದಾಗಿ ಹಿಂದೂಗಳು ಈ ಜರ್ಸಿ ಪ್ರಾಣಿಗಳಿಗೆ ಅನ್ನದ ತುತ್ತನ್ನು ನೀಡಿ ಗೋಗ್ರಾಸ ನೀಡಿದ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ; ಆದರೆ ಕುದುರೆ ಮತ್ತು ಕತ್ತೆಗಳಲ್ಲಿ ಯಾವ ಭೇದವಿದೆಯೋ, ಅಷ್ಟೇ ಭೇದ ದೇಶಿ ಮತ್ತು ಜರ್ಸಿ ಆಕಳುಗಳಲ್ಲಿದೆ. ಭಾರತೀಯ ಆಕಳು ಮೂಲದಲ್ಲಿಯೇ ಸಾತ್ತ್ವಿಕ ಮತ್ತು ಶಾಂತವಾಗಿರುತ್ತದೆ. ಅದರ ಕೂಗು ಕೇಳುವಂತಹದ್ದಾಗಿರುತ್ತದೆ, ಅದು ಶಾಂತವಾಗಿ ಮಲಗುತ್ತದೆ; ಆದರೆ ಜರ್ಸಿ ಆಕಳಿನ ಕೂಗು ಕೇಳಬಾರದೆಂದು ಅನಿಸುತ್ತದೆ. ಅದು ಹಂದಿಯ ಹಾಗೆ ಕಾಲುಗಳನ್ನು ಚಾಚಿ ಮಲಗುತ್ತದೆ. ದೇಶಿ ಆಕಳಿನ ಹಾಲು ಪ್ರೋಟಿನಯುಕ್ತವಾಗಿರುತ್ತದೆ. ಹಾಗೆಯೇ ದೇಶಿ ಆಕಳಿನ ಹಾಲು ತುಪ್ಪ, ಮೊಸರು, ಸೆಗಣಿ, ಗೋಮೂತ್ರ ಇವುಗಳಿಂದ ತಯಾರಿಸಿದ ಪಂಚಗವ್ಯವು ಔಷಧಿಯಾಗಿದೆ. ಇದಕ್ಕೆ ವಿರುದ್ಧ ಜರ್ಸಿ ಆಕಳಿನ (ಪ್ರಾಣಿಯ) ಹಾಲು ವಿಷಸಮಾನವಾಗಿರುತ್ತದೆ. ಈ ಹಾಲಿನಿಂದಾಗಿ ದಮ್ಮು, ಅಸ್ಥಮಾ, ಹೃದ್ರೋಗ ಮುಂತಾದ ರೋಗಗಳು ಬರುತ್ತವೆ; ಆದರೆ ಇದರ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಬಹುತೇಕ ಜನರು ಆಕಳೆಂದು ತಿಳಿದು ಜರ್ಸಿ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಭಾರತೀಯ ತಳಿಯ ಆಕಳುಗಳ ಸಾನ್ನಿಧ್ಯದಲ್ಲಿರು ವುದರಿಂದ ಒತ್ತಡ ದೂರವಾಗುತ್ತದೆ, ಇದರ ಬಗ್ಗೆ ಈಗ ವಿದೇಶಗಳಲ್ಲಿಯೂ ಸಂಶೋಧನೆ ನಡೆದಿದೆ. ಭಾರತದಲ್ಲಿ ಮಾತ್ರ ಈ ಅಮೂಲ್ಯ ಕಾಮಧೇನುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಮತಾಂಧರ ಓಲೈಕೆಯಿಂದಾಗಿ ಆಕಳುಗಳ ಕುತ್ತಿಗೆಯ ಮೇಲೆ ತಿರುಗುವ ಚೂರಿಯನ್ನು ಕಾಂಗ್ರೆಸ್ ಸರಕಾರ ತಡೆಯಲಿಲ್ಲ. ಆಕಳು ಕೇವಲ ಹಿಂದೂಗಳ ಶ್ರದ್ಧೆಗಷ್ಟೇ ಸೀಮಿತವಾಗಿ ರದೇ ರಾಷ್ಟ್ರದ ಸಮೃದ್ಧಿಯ ದ್ಯೋತಕವೂ ಆಗಿದೆ. ನಾವು ಗೋವಂಶಗಳ ಹತ್ಯೆಯ ವಾರ್ತೆಗಳು ನಿಯಮಿತವಾಗಿ ಕೇಳುತ್ತೇವೆ. ಗುಜರಾತದಲ್ಲಿ ‘ಗೀರ ಆಕಳುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರಕಾರವು ಬ್ರಾಝಿಲ್ ದೇಶದಿಂದ ೧ ಲಕ್ಷ ಭಾರತೀಯ ವಂಶದ ಗೋವಂಶ ಗಳ ವೀರ್ಯದ ಬೇಡಿಕೆಯನ್ನು ಮಾಡಲಿದೆ. ಭಾಜಪ ಸರಕಾರದ ಈ ಉಪಕ್ರಮವು ಅತ್ಯಂತ ಪ್ರಶಂಸನೀಯವಾಗಿದೆ. ಭಾರತೀಯ ವಂಶದ ಆಕಳುಗಳ ಸಂವರ್ಧನೆಗಾಗಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಗಳನ್ನು ಮಾಡಬೇಕಾಗಿದೆ; ಆದರೆ ಗೋಸಂವರ್ಧನೆಯನ್ನು ಮಾಡುವಾಗ ಗೋಮಾತೆಯ ಕುತ್ತಿಗೆಯ ಮೇಲೆ ಚೂರಿಯನ್ನು ತಿರುಗಿಸುವ ಕೈಗಳನ್ನು ತಡೆಗಟ್ಟುವುದೂ ಸಹ ಅಷ್ಟೇ ಮಹತ್ವದ್ದಾಗಿದೆ ಎಂಬುದನ್ನು ಗಮನದಲ್ಲಿಡಬೇಕು. – ಶ್ರೀ. ಪ್ರೀತಮ್ ನಾಚಣಕರ, ಮುಂಬೈ