ಪರಾತ್ಪರ ಗುರು ಡಾಕ್ಟರರ ಸತ್ಸಂಗದಲ್ಲಿ ಅವರ ಸೂರ್ಯ ಸಮಾನ ತೇಜಃಪುಂಜದ ರೀತಿಯ ಪ್ರಕಾಶದ ರೂಪದಲ್ಲಿ ದಿವ್ಯ ದರ್ಶನವಾಗುವುದು, ಇದು ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಹಾಗೂ ನಿರ್ಗುಣ ರೂಪದ ಸಾಕ್ಷಿ ! – ಸದ್ಗುರು (ಸೌ.) ಬಿಂದಾ ಸಿಂಗಬಾಳ

ಪರಾತ್ಪರ ಗುರು ಡಾ. ಆಠವಲೆ
(ಸದ್ಗುರು) ಸೌ. ಬಿಂದಾ ಸಿಂಗಬಾಳ

‘ಕಳೆದ ಕೆಲವು ತಿಂಗಳುಗಳಿಂದ ಪರಾತ್ಪರ ಗುರು ಡಾಕ್ಟರರ ದಿವ್ಯ ಸತ್ಸಂಗದಲ್ಲಿ ಈಶ್ವರನ ಕೃಪೆಯಿಂದ ನನಗೆ ಈ ಮುಂದಿನ ಅನುಭೂತಿ ಬರುತ್ತಿದೆ. ನನಗೆ ಗುರುದೇವರ ಸ್ಥೂಲರೂಪದಲ್ಲಿ ದರ್ಶನವಾಗದೇ, ಅದೇ ರೀತಿ ಅವರ ಅಸ್ತಿತ್ವವು ಅರಿವಾಗದೇ ಅವರು ಪ್ರಕಾಶದ ರೂಪದಲ್ಲಿ ಕಾಣಿಸುತ್ತಾರೆ. ಅವರ ಸ್ಥಾನದಲ್ಲಿ ನನಗೆ ಒಮ್ಮೆ ಹಳದಿ, ಮತ್ತೊಮ್ಮೆ ಬಿಳಿ ಬಣ್ಣದ ಪ್ರಕಾಶಮಾನ ಗೋಲಾಕಾರ ಕಾಣಿಸುತ್ತದೆ. ಆ ಪ್ರಕಾಶ ಸೂರ್ಯನಂತಹ ತೇಜಃಪುಂಜ ಹಾಗೂ ಕಣ್ಣುಗಳು ಬೆಳಗುತ್ತದೆ, ಹೀಗೆ ದಿವ್ಯವಾಗಿರುವುದರಿಂದ ನಾನು ಸ್ಥೂಲದ ಕಣ್ಣುಗಳಿಂದ ಆ ಪ್ರಕಾಶದತ್ತ ನೋಡಲು ಸಾಧ್ಯವಿಲ್ಲ. ಹೀಗಿದ್ದರೂ ‘ಆ ಪ್ರಕಾಶದತ್ತ ಪುನಃ ಪುನಃ ನೋಡಬೇಕು, ಎಂದು ನನಗೆ ಅನಿಸುತ್ತದೆ.

ಪರಾತ್ಪರ ಗುರುದೇವರ ಅಖಂಡ ನಿರ್ಗುಣ ಸ್ಥಿತಿಯ, ಅದೇರೀತಿ ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಸಾಕ್ಷಿ ಸಿಗುತ್ತಿದೆ, ಅಂತಹ ಮಹಾನ ಮತ್ತು ಏಕಮೇವಾದ್ವೀತಿಯ ಗುರುದೇವರ ದಿವ್ಯ ಸತ್ಸಂಗ ಅನುಭವಿಸಲು ಆಗುತ್ತಿದೆ. ಅದಕ್ಕಾಗಿ ಕೃಪಾವಾತ್ಸಲ್ಯ ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಇದನ್ನು ಅನುಭವಿಸಿದ ನಂತರ ನನ್ನ ಮನಸ್ಸು ನಿರ್ವಿಚಾರವಾಗಿ ‘ನಾನೂ ಪ್ರಕಾಶದ ರೂಪದಲ್ಲಿಯೇ ಇದ್ದೇನೆ, ಎಂದೆನಿಸುತ್ತದೆ ಹಾಗೂ ನನಗೆ ನನ್ನತನದ ಬೇರೆಯೇ ಅಸ್ತಿತ್ವದ ಅರಿವಾಗುವುದಿಲ್ಲ.

– ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೨.೨೦೨೦)