ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗದ ಆಯೋಜನೆ ಮಾಡಲಾಗುತ್ತಿದೆ. ಇತ್ತೀಚೆಗೆ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಜಾಗತಿಕ ಸಂಕಟಗಳು : ಧರ್ಮದ ಕುರಿತು ದೃಷ್ಟಿಕೋನ ಮತ್ತು ಉಪಾಯ ಇದರ ಬಗ್ಗೆ ಮಾರ್ಗದರ್ಶನ ಮಾಡಿದರು. ಅವರು ಮಾಡಿದ ಮಾರ್ಗದರ್ಶನದ ಆಯ್ದ ಭಾಗವನ್ನು ಇಲ್ಲಿ ಕ್ರಮಶಃ ಮುದ್ರಿಸುತ್ತಿದ್ದೇವೆ.
ಆಪತ್ತುಗಳ ವರ್ಗೀಕರಣ
ಉತ್ಪತ್ತಿಗನುಸಾರ ಆಪತ್ತುಗಳು ನೈಸರ್ಗಿಕ ಹಾಗೂ ಮಾನವ ನಿರ್ಮಿತವಾಗಿರುತ್ತವೆ.
೧. ನೈಸರ್ಗಿಕ ಆಪತ್ತುಗಳು
ನೈಸರ್ಗಿಕ ಆಪತ್ತುಗಳನ್ನು ಕೆಳಗೆ ಕೊಡಲಾದ ವಿಭಿನ್ನ ವಿಧಗಳಲ್ಲಿ ನೋಡಬಹುದಾಗಿದೆ.
೧. ವಾಯುಜನ್ಯ ಆಪತ್ತುಗಳು – ಚಂಡಮಾರುತ, ಸುಂಟರಗಾಳಿ, ಬಿರುಗಾಳಿ
೨. ಜಲಜನ್ಯ ಆಪತ್ತುಗಳು – ನೆರೆ, ಮೇಘಸ್ಫೋಟ, ಬರಗಾಲ, ತ್ಸುನಾಮಿ
೩. ಭೂಮಿಜನ್ಯ ಆಪತ್ತುಗಳು – ಭೂಕಂಪ, ಜ್ವಾಲಾಮುಖಿ, ಭೂಕುಸಿತ, ಹಿಮಪಾತ
೪. ಸಾಂಕ್ರಾಮಿಕ ರೋಗಗಳು – ಪ್ಲೇಗ್, ಡೆಂಗ್ಯೂ, ಚಿಕನಗುನಿಯಾ, ಸ್ವೈನ್ ಫ್ಲು, ಮಲೇರಿಯಾ ಇತ್ಯಾದಿ
ಇದರಲ್ಲಿ ಅನೇಕ ಬಾರಿ ಒಂದು ಆಪತ್ತಿನಿಂದಾಗಿ ಇನ್ನೊಂದು ಆಪತ್ತು ಆರಂಭವಾಗುತ್ತದೆ. ಉದಾ. ಸಾಗರದ ಆಳದಲ್ಲಿ ಭೂಕಂಪವಾಗುವುದರಿಂದ ತ್ಸುನಾಮಿ ಬರುವ ಸಾಧ್ಯತೆಗಳಿರುತ್ತದೆ, ಹಾಗೆಯೇ ತ್ಸುನಾಮಿ ಅಥವಾ ನೆರೆಯ ನಂತರ ಮಹಾಮಾರಿಗಳು ಬರುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ನೈಸರ್ಗಿಕ ಆಪತ್ತುಗಳಲ್ಲಿ ಮಾನವನಿರ್ಮಿತ ಕಾರಣಗಳಿಂದ ಸಂಹಾರದ ಪ್ರಮಾಣವು ಹೆಚ್ಚಾಗುತ್ತದೆ, ಉದಾ. ಉತ್ತರಾಖಂಡದಲ್ಲಿ ಗಂಗಾ ನದಿಯ ಜಲಮಾರ್ಗದಲ್ಲಿ ಮಾನವ ನಿರ್ಮಿತ ಮನೆಗಳು ಹಾಗೂ ಉಪಹಾರ ಗೃಹಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಯಿತು.
೨. ಮಾನವನಿರ್ಮಿತ ಆಪತ್ತುಗಳು
ಮಾನವ ನಿರ್ಮಿತ ಆಪತ್ತುಗಳಲ್ಲಿ ಕೆಳಗಿನಂತೆ ವಿಧಗಳಿವೆ –
೧. ಔದ್ಯೋಗಿಕ ಅವಘಡಗಳು
೨. ಪರಿಸರದ ಮಾಲಿನ್ಯ
೩. ವಿವಿಧ ಯುದ್ಧಗಳು, ಭಯೋತ್ಪಾದನಾ ಚಟುವಟಿಕೆಗಳು
೪. ಜೈವಿಕ ಯುದ್ಧಕ್ಕಾಗಿ ಅನುಕೂಲ ವಾತಾವರಣದಲ್ಲಿ ವಿಭಿನ್ನ ಜೀವಾಣು ಹಾಗೂ ರೋಗಾಣುಗಳೊಂದಿಗೆ ಘಾತಕ ಕೀಟಗಳನ್ನು ಸಂವರ್ಧನೆ ಮಾಡಿ ಅವುಗಳನ್ನು ಶತ್ರುಗಳ ಡೇರೆಗಳ ಮೇಲೆ ಬಿಡಲಾಗುತ್ತದೆ. ಕೊನೆಗೆ ಆ ಪ್ರದೇಶಗಳಲ್ಲಿ ಆ ರೋಗಾಣು ಹರಡಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತದೆ.
೫. ರಾಸಾಯನಿಕ ಯುದ್ಧದ ಸಮಯಯಲ್ಲಿ ವಿಷಪೂರಿತ ಅನಿಲಗಳು ಅಥವಾ ಬಾಂಬ್‌ಗಳನ್ನು ಶತ್ರುಗಳ ಡೇರೆಗಳ ಮೇಲೆ ಎಸೆಯಲಾಗುತ್ತದೆ.
೬. ದೊಡ್ಡ ಕಂಪನಿಗಳ ಕಾರ್ಖಾನೆಗಳಲ್ಲಿನ ಬೇಜವಾಬ್ದಾರಿ ನಿರ್ವಹಣೆ ಅಥವಾ ದೋಷಪೂರಿತ ಯಂತ್ರಗಳಿಂದಾಗಿ ಉಂಟಾಗುವ ಆಪತ್ತುಗಳು. ಇವುಗಳನ್ನು ಪರಿಸರದ ಮೇಲಿನ ತೊಂದರೆದಾಯಕ ಅವಘಡಗಳೆಂದೂ ಹೇಳಬಹುದು, ಉದಾ: ಭೋಪಾಲ ಅನಿಲ ದುರಂತ, ಚರ್ನೋಬಿಲ್ ಪರಮಾಣು ದುರ್ಘಟನೆ, ಫುಕುಶಿಮಾ ಪರಮಾಣು ದುರಂತ ಇತ್ಯಾದಿಗಳು ಪ್ರಮುಖವಾಗಿವೆ.
೭. ಕಾಡ್ಗಿಚ್ಚು ಅಥವಾ ನಗರಗಳಲ್ಲಿ ಬೆಂಕಿ
೮. ವಿಮಾನ ಅಪಘಾತ, ರಸ್ತೆ ಅಪಘಾತ ಹಾಗೂ ರೈಲು ಅಪಘಾತ
– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ