ಪೂ. ಭಾರ್ಗವರಾಮ (೩ ವರ್ಷ) ಇವರು ಶ್ರೀರಾಮನವಮಿಯ ದಿನದಂದು (೨.೪.೨೦೨೦ ರಂದು) ಶ್ರೀರಾಮನ ಹಾಕಿದಾಗ, ಅವರ ಕುಟುಂಬದವರಿಗೆ ಮತ್ತು ಮಂಗಳೂರು ಸೇವಾಕೇಂದ್ರದ ಸಾಧಕರಿಗೆ ಬಂದಂತಹ ಅನುಭೂತಿಯನ್ನು ಮುಂದೆ ನೀಡಲಾಗಿದೆ.
೧. ಸೌ. ಭವಾನಿ ಭರತ ಪ್ರಭು (ತಾಯಿ), ಮಂಗಳೂರು ಸೇವಾಕೇಂದ್ರ (೭.೪.೨೦೨೦)
೧ ಅ. ಶ್ರೀರಾಮನವಮಿಯ ಎರಡು ದಿನ ಮೊದಲು ಶ್ರೀರಾಮನ ದರ್ಶನವಾಗುವುದು. ಪೂ. ಭಾರ್ಗವರಾಮರಲ್ಲಿ ಶ್ರೀರಾಮ ಕಾಣಿಸುವುದು ಮತ್ತು ಇದರಿಂದ ‘ಶ್ರೀರಾಮನವಮಿಗೆ ಪೂ. ಭಾರ್ಗವರಾಮರಿಗೆ ಶ್ರೀರಾಮನಂತೆ ವಸ್ತ್ರಗಳನ್ನು ತೊಡಿಸಬೇಕೆಂದು ಅನಿಸುವುದು
‘ಶ್ರೀರಾಮನವಮಿಯ ಎರಡು ದಿನ ಮೊದಲು ನನಗೆ ಒಮ್ಮೊಮ್ಮೆ ಶ್ರೀರಾಮನ ದರ್ಶನವಾಗುತ್ತಿದ್ದರೆ, ಕೆಲವೊಮ್ಮೆ ಪೂ. ಭಾರ್ಗವರಾಮರೇ ನನಗೆ ಶ್ರೀರಾಮನಂತೆ ಕಾಣಿಸುತ್ತಿದ್ದರು. ಪೂ. ಭಾರ್ಗವರಾಮರು ಮಲಗುವಾಗ ‘ಅವರು ಶ್ರೀರಾಮರೇ ಆಗಿದ್ದಾರೆ ಎಂದೆನಿಸಿ ನನ್ನ ಭಾವಜಾಗೃತಿಯಾಗುತ್ತಿತ್ತು. ನನಗೆ ಈ ಅನುಭೂತಿ ಸತತವಾಗಿ ಬರುತ್ತಿತ್ತು. ಇದರಿಂದ ‘ಶ್ರೀರಾಮನವಮಿಗೆ ಪೂ. ಭಾರ್ಗವರಾಮರಿಗೆ ಶ್ರೀರಾಮನಂತೆ ಉಡುಪುಗಳನ್ನು ತೊಡಿಸಬೇಕು ಎಂದು ನನಗೆ ಇಚ್ಛೆಯಾಯಿತು.
೧ ಆ. ಶ್ರೀರಾಮನಂತೆ ವಸ್ತ್ರಗಳನ್ನು ತೊಡಿಸುವಾಗ ಪೂ. ಭಾರ್ಗವರಾಮ ಒಮ್ಮೆಲೆ ಶಾಂತ ಮತ್ತು ಸ್ಥಿರವಾಗಿರುವುದು ಹಾಗೂ ಆಗ ‘ಅವರು ತಮ್ಮನ್ನೇ ಮರೆತಿದ್ದಾರೆ ಎಂದೆನಿಸುವುದು
‘ಪೂ. ಭಾರ್ಗವರಾಮರಿಗೆ ಬಟ್ಟೆ ಹಾಕುವುದು-ತೆಗೆಯುವುದು ಎಂದರೆ ಕಠಿಣ ಕೆಲಸವಾಗಿದೆ. ರಾಮನ ಉಡುಪನ್ನು ಹಾಕುವ ಮುಂಚೆ ನಾನು ಪೂ. ಭಾರ್ಗವರಾಮರಲ್ಲಿ “ನಿನ್ನ ಬಳಿಯಿರುವ ಶ್ರೀರಾಮನು ಹೇಗಿದ್ದಾನೆ ? ಎಂದು ನಾವು ಇಂದು ನೋಡೋಣ, “ನಿನ್ನ ತತ್ತ್ವವು ನನ್ನಲ್ಲಿ ಹೆಚ್ಚಾಗಲಿ ಎಂದು ಪ್ರಾರ್ಥಿಸೋಣ, ಎಂದು ಬಟ್ಟೆಗಳಿಗೆ ಪ್ರಾರ್ಥನೆಯನ್ನು ಮಾಡಿದೆವು. ಅವರಿಗೆ ಧೋತರವನ್ನು ಉಡಿಸುವಾಗ ಎಲ್ಲಾ ಅಲಂಕಾರಗಳನ್ನು ತೊಡಿಸುವಾಗ ಶಾಂತ ರೀತಿಯಲ್ಲಿ ಎಲ್ಲವನ್ನೂ ಮಾಡಿಸಿಕೊಂಡರು. ತಮ್ಮ ಕೈಯಿಂದ ಅವರು ಬಟ್ಟೆಗಳ ಮೇಲೆ ಕೈಯನ್ನು ಸವರುತ್ತಿದ್ದರು. ಭಾರ್ಗವರಾಮನು ತಮ್ಮನ್ನು ತಾವು ಮರೆತಿದ್ದಾರೆ ಎಂದೆನಿಸುತ್ತಿತ್ತು.
೧ ಇ. ಭಾರ್ಗವರಾಮರಿಗೆ ಬಟ್ಟೆಗಳನ್ನು ತೊಡಿಸುವಾಗ ಸಾಕ್ಷಾತ್ ಶ್ರೀರಾಮನಿಗೆ ಅಲಂಕರಿಸುವ ಅವಕಾಶವು ಸಿಕ್ಕಿದೆ, ಎಂದೆನಿಸಿ ಕೃತಜ್ಞತೆಯಿಂದ ಭಾವಜಾಗೃತಿಯಾಗುತ್ತಿತ್ತು
೧ ಈ. ಹಿಂದಿನ ಕಾಲದ ರಾಜರಂತೆ ಪೂ. ಭಾರ್ಗವರಾಮರು ಧನುಷ್ಯ -ಬಾಣವನ್ನು ಕೈಯಲ್ಲಿ ಹಿಡಿದುಕೊಳ್ಳುವ ಮೊದಲು ಅದಕ್ಕೆ ವಂದಿಸುವುದು
ಪೂ. ಭಾರ್ಗವರಾಮರಿಗೆ ಶ್ರೀರಾಮನಂತೆ ಎಲ್ಲ ವಸ್ತ್ರಾಲಂಕಾರಗಳನ್ನು ತೊಡಿಸಿದ ಬಳಿಕ ಕೊನೆಯಲ್ಲಿ ಅವರ ಕೈಯಲ್ಲಿ ಧನುಷ್ಯ-ಬಾಣಗಳನ್ನು ಕೊಡುವಾಗ ಅವರು ಧನುಷ್ಯ-ಬಾಣಕ್ಕೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದರು. ಹಿಂದಿನ ಕಾಲದ ರಾಜರು ಶಸ್ತ್ರಗಳನ್ನು ಧರಿಸುವಾಗ ತಮ್ಮ ಶಸ್ತ್ರಗಳಿಗೆ ವಂದಿಸುತ್ತಿದ್ದರೋ, ಅದೇ ರೀತಿ ಪೂ. ಭಾರ್ಗವರಾಮರು ಧನುಷ್ಯ-ಬಾಣಗಳನ್ನು ಹಿಡಿದುಕೊಳ್ಳೂವ ಮೊದಲು ಅದಕ್ಕೆ ನಮಸ್ಕರಿಸಿದರು. ಆಗ ‘ಇದೆಲ್ಲ ಅವರಿಗೆ ಹೇಗೆ ತಿಳಿಯಿತು ? ಎಂದು ನನಗೆ ಬಹಳ ಆಶ್ಚರ್ಯವೆನಿಸಿತು.
೧ ಉ. ಪೂ. ಭಾರ್ಗವರಾಮರ ಪಿತಾಂಬರ ಸರಿ ಮಾಡಲು ಕೆಳಗೆ ಬಗ್ಗಿದಾಗ ಅವರು ತಲೆಯ ಮೇಲೆ ಕೈಯಾಡಿಸುವುದು ಮತ್ತು ಆಶೀರ್ವಾದದ ಮುದ್ರೆಯಲ್ಲಿ ನಿಂತುಕೊಳ್ಳುವುದು
ಪೂ. ಭಾರ್ಗವರಾಮರನ್ನು ಅಲಂಕರಿಸಿದ ಬಳಿಕ ಅವರ ಪಿತಾಂಬರವನ್ನು ಸರಿ ಮಾಡಲು ನಾನು ಕೆಳಗೆ ಬಗ್ಗಿದೆನು. ಆಗ ಅವರು ನನ್ನ ತಲೆಯ ಮೇಲಿನಿಂದ ಕೈಯಾಡಿಸಿದರು ಮತ್ತು ಬಳಿಕ ಅವರು ಆಶೀರ್ವಾದದ ಮುದ್ರೆಯಲ್ಲಿ ನಿಂತುಕೊಂಡರು. ಆಗ ‘ಇದು ನನ್ನ ಭಾಗ್ಯವಾಗಿದೆ ಎಂದೆನಿಸಿ ನಾನು ಆ ಆಶೀರ್ವಾದವನ್ನು ಪಡೆದುಕೊಂಡೆನು. ಬಳಿಕ ‘ಇದು ಅವರ ಯಾವ ಸ್ಥಿತಿಯಾಗಿದೆ ! ಎನ್ನುವ ವಿಚಾರದಿಂದ ನನಗೆ ಬಹಳ ಭಾವಜಾಗೃತಿಯಾಯಿತು.
೧ ಊ. ಶ್ರೀರಾಮನ ವಸ್ತ್ರಗಳನ್ನು ತೊಡಿಸಿದ ಬಳಿಕ ಪೂ. ಭಾರ್ಗವರಾಮರು ಗಾಂಭೀರ್ಯದಿಂದ ಮತ್ತು ನಮ್ರತೆಯಿಂದ ವರ್ತಿಸುತ್ತಿದ್ದರು ಹಾಗೂ ಅವರ ಮಾಧ್ಯಮದಿಂದ ಶ್ರೀರಾಮನ ಬಾಲ್ಯಾವಸ್ಥೆಯನ್ನು ನೋಡುವಾಗ ಬಹಳ ಕೃತಜ್ಞತೆಯಿನಿಸುವುದು
ರಾಮನ ವಸ್ತ್ರಗಳನ್ನು ಧರಿಸಿದ ಬಳಿಕ ಗಾಂಭೀರ್ಯತೆಯಿಂದ ಮತ್ತು ನಮ್ರತೆಯಿಂದ ವರ್ತಿಸುತ್ತಿದ್ದರು. ಸುಮಾರು ೧ ಗಂಟೆ ಅವರಿಗೆ ಬಾಲ್ಯಾವಸ್ಥೆಯ ವಿಸ್ಮರಣೆಯಾಗಿತ್ತು. ಅವರು ಶ್ರೀರಾಮನಂತೆಯೇ ನಡೆದು ಬರುತ್ತಿರುವಾಗ ನನಗೆ ‘ಠುಮಕ ಚಲತ ರಾಮಚಂದ್ರ, ಈ ಹಾಡು ನೆನಪಾಗುತ್ತಿತ್ತು. ಪೂ. ಭಾರ್ಗವರಾಮರ ಮಾಧ್ಯಮದಿಂದ ಶ್ರೀರಾಮನ ಬಾಲ್ಯಾವಸ್ಥೆಯನ್ನು ನೋಡಲು ಸಿಕ್ಕಿದ ಬಗ್ಗೆ ಬಹಳ ಕೃತಜ್ಞತೆ ಎನಿಸುತ್ತಿತ್ತು. ರಾಮ ಮತ್ತು ಕೃಷ್ಣನ ತತ್ತ್ವವಿರುವ ಈ ಉಚ್ಚ ಜೀವವನ್ನು ಜನ್ಮಕ್ಕೆ ತಂದು ನಮ್ಮೆಲ್ಲರಿಗೂ ಅವರ ಬಾಲ್ಯಾವಸ್ಥೆಯ ದೈವತ್ವವನ್ನು ಅನುಭವಿಸುವ ಅವಕಾಶ ನೀಡಿರುವ ವಿಷ್ಣು ಸ್ವರೂಪಿ ಗುರುದೇವರ ಚರಣಗಳಲ್ಲಿ ಕೃತಜ್ಞತೆಗಳು.
೨. ಶ್ರೀಮತಿ ಅಶ್ವಿನಿ ಪ್ರಭು (ಅಜ್ಜಿ (ತಂದೆಯ ತಾಯಿ)), ಮಂಗಳೂರು, ಸೇವಾಕೇಂದ್ರ (೫.೪.೨೦೨೦)
೨ ಅ. ಶ್ರೀರಾಮನವಮಿಯ ದಿನದಂದು ಬೆಳಿಗ್ಗೆ ಪೂ. ಭಾರ್ಗವರಾಮರಿಗೆ ಪಾರಂಪರಿಕ ಸಾತ್ತ್ವಿಕ ವಸ್ತ್ರಗಳನ್ನು ತೊಡಿಸುವಾಗ ಬಹಳ ಅಡಚಣೆ ಕೊಡುವುದು
‘ಶ್ರೀರಾಮತತ್ತ್ವದ ಅತ್ಯಧಿಕ ಲಾಭವಾಗಬೇಕೆಂದು ಶ್ರೀರಾಮನವಮಿಯಂದು ಸೌ. ಭವಾನಿಯು (ಪೂ. ಭಾರ್ಗವರಾಮರ ತಾಯಿ) ಬೆಳಗ್ಗೆ ಬೇಗ ಎದ್ದು ಬಾಗಿಲಿಗೆ ತೋರಣ ಕಟ್ಟಿದಳು ಮತ್ತು ಬಾಗಿಲಿನಲ್ಲಿ ಶ್ರೀರಾಮತತ್ತ್ವದ ರಂಗೋಲಿಯನ್ನು ಹಾಕಿದರು. ಆದರೆ ಪೂ. ಭಾರ್ಗವರಾಮರು ಬೆಳಗ್ಗೆ ಪಾರಂಪರಿಕ ಸಾತ್ತ್ವಿಕ ವೇಶಭೂಷಣವನ್ನು ತೊಡಿಸುವಾಗ ಬಹಳ ತೊಂದರೆ ಕೊಟ್ಟರು. ‘ಸಾತ್ತ್ವಿಕ ವಸ್ತ್ರ ತೊಡಿಸಬಾರದು, ಎಂದು ಅವರು ಬಹಳ ಗಲಾಟೆ ಮಾಡಿದರು. ಆಗ ಸಾಯಂಕಾಲ ‘ಅವರಿಗೆ ಶ್ರೀರಾಮನಂತೆ ವಸ್ತ್ರಗಳನ್ನು ಹೇಗೆ ಹಾಕುವುದು ? ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತಿತ್ತು.
೨ ಆ. ಸನಾತನದ ಎರಡನೇಯ ಬಾಲ ಸಂತ ಪೂ. ವಾಮನ ರಾಜಂದೇಕರ ಇವರ ತಾಯಿ ಸೌ. ಮಾನಸಿ ರಾಜಂದೇಕರ ಇವರು ಎಲ್ಲ ಆಭೂಷಣಗಳನ್ನು ಮೊದಲೇ ನೀಡಿದ್ದರಿಂದ ಸಂಚಾರ ನಿಷೇಧದ ಯಾವುದೇ ಪರಿಣಾಮವಾಗದೇ ಎಲ್ಲ ಪೂರ್ವಸಿದ್ಧತೆ ಉತ್ತಮವಾಗಿ ಮಾಡಲು ಸಾಧ್ಯವಾಯಿತು
ಸಾಯಂಕಾಲ ಪೂ. ಭಾರ್ಗವರಾಮ ಇವರಿಗೆ ಶ್ರೀರಾಮನ ವೇಷಭೂಷಣವನ್ನು ತೊಡಿಸಲು ‘ಕಿರೀಟ, ಆಭೂಷಣ ಹೇಗೆ ಮಾಡುವುದು ? ಎಲ್ಲಿಂದ ತರುವುದು ? ಎಂದು ನನ್ನ ಮನಸ್ಸಿನಲ್ಲಿ ಬರುತ್ತಿತ್ತು. ಶ್ರೀ ಗುರುಕೃಪೆಯಿಂದ ಸನಾತನದ ಎರಡನೇಯ ಬಾಲಸಂತ ಪೂ. ವಾಮನ ರಾಜಂದೇಕರ ಇವರ ತಾಯಿ ಸೌ. ಮಾನಸಿ ರಾಜಂದೇಕರ ಇವರು ಎಲ್ಲ ಆಭೂಷಣಗಳನ್ನು ಮೊದಲೇ ನೀಡಿದ್ದರಿಂದ ಸಂಚಾರ ನಿಷೇಧದ ಯಾವುದೇ ಪರಿಣಾಮವಾಗದೇ ಎಲ್ಲ ಪೂರ್ವಸಿದ್ಧತೆ ಉತ್ತಮವಾಗಿ ಮಾಡಲು ಸಾಧ್ಯವಾಯಿತು.
೨ ಇ. ಶ್ರೀರಾಮನಂತೆ ವೇಶಭೂಷಣಗಳನ್ನು ಮಾಡುವಾಗ ಪೂ. ಭಾರ್ಗವರಾಮರು ಶ್ರೀರಾಮನಂತೆ ಶಾಂತ, ಸ್ಥಿರ ಹಾಗೂ ಗಂಭೀರ ವಾಗಿರುವುದನ್ನು ನೋಡಿ ‘ಸಾಕ್ಷಾತ್ ಪ್ರಭು ಶ್ರೀರಾಮನೇ ಮುಂದೆ ನಿಂತಿದ್ದಾನೆ ಎಂದೆನಿಸಿ ಭಾವಜಾಗೃತಿಯಾಗುವುದು.
‘ಪೂ. ಭಾರ್ಗವರಾಮರು ವೇಶಭೂಷಣವನ್ನು ಧರಿಸದಿರಲು ಹಠ ಮಾಡಿದರೆ ಹೇಗೆ ಮಾಡುವುದು ಎಂಬ ವಿಚಾರವೂ ಬರುತ್ತಿತ್ತು ? ಈ ವಿಚಾರ ನನ್ನ ಮನಸ್ಸನ್ನು ಕಾಡುತ್ತಿತ್ತು; ಆದರೆ ಆಶ್ಚರ್ಯವೆಂದರೆ ಮಧ್ಯಾಹ್ನ ಮಲಗಿ ಎದ್ದ ಬಳಿಕ ಅವರು ಅತ್ಯಂತ ನಮ್ರತೆಯಿಂದ ಎಲ್ಲವನ್ನೂ ಮಾಡಿಸಿಕೊಂಡರು. ಪ್ರತಿ ದಿನ ಅವರಿಗೆ ತಿಲಕ ಹಚ್ಚುವಾಗಲೂ ಅವರ ತುಂಟ ತನದಿಂದಾಗಿ ಬಹಳ ತೊಂದರೆಯಾಗುತ್ತದೆ; ಆದರೆ ಆ ದಿನ ಸಾಯಂಕಾಲ ಪೂ. ಭಾರ್ಗವರಾಮರು ನಿಜವಾಗಿಯೂ ಪ್ರಭು ಶ್ರೀರಾಮನಂತೆ ಶಾಂತ, ಸ್ಥಿರ ಹಾಗೂ ಗಂಭೀರವಾಗಿರುವುದನ್ನು ನೋಡಿ ಸಾಕ್ಷಾತ್ ಪ್ರಭು ಶ್ರೀರಾಮನೇ ಎದುರಿಗಿದ್ದಾನೆ, ಎಂದೆನಿಸಿ ಭಾವ ಜಾಗೃತಿಯಾಗುತ್ತಿತ್ತು. ಆ ದಿನ ಸಾಯಂಕಾಲ ಅವರಿಗೆ ಶ್ರೀರಾಮನಂತೆ ವೇಶಭೂಷಣವನ್ನು ತೊಡಿಸಲಾಯಿತು.
ಯಾವಾಗಲೂ ಪೂ. ರಮಾನಂದ ಅಣ್ಣನವರ ಚಿಕ್ಕ ಮಗನೊಂದಿಗೆ ಎಲ್ಲವನ್ನು ಮರೆತು ಆಟವಾಡುವ ಮತ್ತು ಯಾರಾದರೂ ಚಾಕಲೇಟ್ ಕೊಟ್ಟರೆ ತಕ್ಷಣ ಬಾಯಿಗೆ ಹಾಕಿಕೊಳ್ಳುವ ಪೂ. ಭಾರ್ಗವರಾಮ ಆ ದಿನ ಶಾಂತ ಮತ್ತು ಗಂಭೀರವಾಗಿರುವುದು ಹಾಗೂ ಪೂ. ರಮಾನಂದ ಅಣ್ಣರಿಗೆ ನಮಸ್ಕಾರ ಮಾಡಿ ಅವರು ಕೊಟ್ಟ ಪ್ರಸಾದರೂಪಿ ಚಾಕಲೇಟ್‌ಅನ್ನು ಅಜ್ಜಿಯ ಕೈಗೆ ಕೊಡುವುದು. ಶ್ರೀರಾಮನಂತೆ ವಸ್ತ್ರಾಲಂಕಾರ ಧರಿಸಿದ ಬಳಿಕ ಪೂ. ಭಾರ್ಗವರಾಮರು ಧ್ಯಾನಮಂದಿರಕ್ಕೆ ಹೋಗಿ ದೇವತೆಗಳಿಗೆ ನಮಸ್ಕರಿಸಿದರು. ಬಳಿಕ ಅವರು ಪೂ. ರಮಾನಂದ ಅಣ್ಣನವರ ಕೋಣೆಗೆ ಹೋದರು. ಯಾವಾಗಲೂ ಅಣ್ಣನವರ ಚಿಕ್ಕ ಮಗನೊಂದಿಗೆ ಎಲ್ಲವನ್ನು ಮರೆತು ಆಟವಾಡುವ ಪೂ. ಭಾರ್ಗವರಾಮರು ಆ ದಿನ ಅವರು ಗಂಭೀರತೆಯಿಂದ ಪೂ. ಅಣ್ಣನವರಿಗೆ ನಮಸ್ಕರಿಸಿದರು. ಪೂ. ಅಣ್ಣ ನವರು ‘ಎಷ್ಟು ಚಾಕಲೇಟ್ ಬೇಕು ? ಎಂದು ಕೇಳುತ್ತಲೇ ಪೂ. ಭಾರ್ಗವರಾಮರು ‘ಮೂರು ಬೇಕು ಎಂದು ಹೇಳಿದರು. ಯಾವಾಗಲೂ ಅವರು ಚಾಕಲೇಟ್ ಕೈಗೆ ಬರುತ್ತಲೇ ಅದನ್ನು ತಿಂದು ಬಿಡುವವವರು ಆ ಚಾಕಲೇಟ್ ಗಳ ಪ್ರಸಾದವನ್ನು ಕೈಯಲ್ಲಿ ತೆಗೆದುಕೊಂಡು ನನ್ನ ಕೈಗೆ ಕೊಟ್ಟರು. ಇದರಿಂದ ನಮಗೆ ಬಹಳ ಆಶ್ಚರ್ಯವೆನಿಸಿತು.
೨ ಉ. ಸೇವಾಕೇಂದ್ರಕ್ಕೆ ಹೋಗಿ ಸಾಧಕರಿಗೆ ನಮಸ್ಕಾರ ಮಾಡುವುದು ಮತ್ತು ‘ಓಂ ಬರೆದಿರುವ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ‘ಜಯ ಶ್ರೀರಾಮ ಎಂದು ಘೋಷಣೆ ಕೂಗುತ್ತ ಅಂಗಳದಲ್ಲೆಲ್ಲ ಓಡಾಡುವುದು
ತದನಂತರ ಪೂ. ಭಾರ್ಗವರಾಮರು ಸೇವಾಕೇಂದ್ರಕ್ಕೆ ಹೋದರು. ಅವರು ಅಲ್ಲಿರುವ ಎಲ್ಲ ಸಾಧಕರಿಗೆ ನಮಸ್ಕಾರ ಮಾಡಿದರು. ಬಳಿಕ ಅವರ ಬಳಿ ಇದ್ದ ‘ಓಂ ಬರೆದಿದ್ದ ಭಗವಾಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ‘ಜಯ ಶ್ರೀರಾಮ ಎಂದು ಘೋಷಣೆ ಕೂಗುತ್ತ ಅವರು ಸಂಪೂರ್ಣ ಅಂಗಳದಲ್ಲಿ ತಿರುಗಾಡಿ ಬಂದರು.
೨ ಊ. ಪೂ. ಭಾರ್ಗವರಾಮರಿಗೆ ಪೂ. ರಾಧಾ ಪ್ರಭು ಇವರಿಂದ ಬೋರೆ ಹಣ್ಣನ್ನು ತೆಗೆದುಕೊಂಡು ತಿನ್ನಲು ಹೇಳಿದಾಗ ಅವರು ಆ ಕೃತಿಯನ್ನು ಪ್ರೀತಿಯಿಂದ ಮಾಡುವುದು ಮತ್ತು ಆ ಸಮಯದಲ್ಲಿ ತ್ರೇತಾಯುಗದ ಶಬರಿ ಮತ್ತು ಶ್ರೀರಾಮರ ಭಾವ ಭೇಟಿಯ ದೃಶ್ಯ ಕಣ್ಣೆದುರಿಗೆ ಬಂದು ಭಾವಜಾಗೃತಿಯಾಗುವುದು
ತದನಂತರ ಪೂ. ಭಾರ್ಗವರಾಮರಿಗೆ ಮುತ್ತಜ್ಜಿ ಪೂ.(ಶ್ರೀಮತಿ) ರಾಧಾ ಪ್ರಭು ಇವರಿಗೆ ಶಬರಿರೂಪದಲ್ಲಿ ನೋಡಿ ಅವರಿಂದ ಬೋರೆಹಣ್ಣನ್ನು ತೆಗೆದುಕೊಂಡು ತಿನ್ನಲು ಹೇಳುವುದು. ಆಗ ಪೂ. ಭಾರ್ಗವರಾಮರು ಇದೆಲ್ಲವನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಿದ್ದರು. ಅದನ್ನು ನೋಡಿ ನಮ್ಮೆಲ್ಲರ ಕಣ್ಣೆದುರಿಗೆ ತ್ರೇತಾಯುಗದ ಶಬರಿ ಮತ್ತು ಶ್ರೀರಾಮರ ಭಾವಭೇಟಿಯ ದೃಶ್ಯ ಕಣ್ಣೆದುರಿಗೆ ಬಂದಿತು ಮತ್ತು ನಮಗೆಲ್ಲರಿಗೂ ತುಂಬಾ ಭಾವಜಾಗೃತಿಯಾಯಿತು.
ಇವೆಲ್ಲವೂ ಆದ ಬಳಿಕ ಪೂ. ಭಾರ್ಗವರಾಮರ ಪುನಃ ಶ್ರೀಕೃಷ್ಣನಂತೆ ತುಂಟಾಟ ಪ್ರಾರಂಭವಾಯಿತು ಮತ್ತು ಶ್ರೀಕೃಷ್ಣ ಸ್ಮರಣೆಯಾಯಿತು. ಶ್ರೀರಾಮನವಮಿಗೆ ಪೂ. ಭಾರ್ಗವರಾಮರ ಮಾಧ್ಯಮದಿಂದ ಸಾಕ್ಷಾತ್ ಶ್ರೀರಾಮನನ್ನು ಸಗುಣ ರೂಪದಲ್ಲಿ ನೋಡುವ ಮತ್ತು ಅನುಭವಿಸುವ ಅನುಪಮ ಅವಕಾಶ ನೀಡಿದ್ದಕ್ಕಾಗಿ ಗುರುದೇವರ ಚರಣಗಳಲ್ಲಿ ಕೋಟಿಶಃ ಕೃತಜ್ಞತೆ !
೩. ಶ್ರೀ ಪ್ರಭಾಕರ ಪಡಿಯಾರ (ಅಜ್ಜ (ತಾಯಿಯ ತಂದೆ)) (೭.೪.೨೦೨೦)
೩ ಅ. ಶ್ರೀರಾಮನವಮಿಯ ದಿನದಂದು ಭಾವವೃದ್ಧಿ ಸತ್ಸಂಗದಲ್ಲಿ ಶ್ರೀರಾಮನ ವರ್ಣನೆ ನಡೆದಿರುವಾಗ ಪೂ. ಭಾರ್ಗವರಾಮರ ರೂಪ ಕಣ್ಣೆದುರಿಗೆ ಬರುವುದು ಮತ್ತು ಆ ದಿನ ಶ್ರೀರಾಮರ ವೇಶಭೂಷಣದಲ್ಲಿ ಅವರ ಸ್ಥಿರ ಮತ್ತು ಗಂಭೀರ ದೃಷ್ಟಿಯನ್ನು ನೋಡಿ ಭಗವಂತನ ಕೃಪೆಯನ್ನು ಅನುಭವಿಸಲು ಸಾಧ್ಯವಾಗುವುದು
‘ಭಾವವೃದ್ಧಿ ಸತ್ಸಂಗದಲ್ಲಿ ಶ್ರೀರಾಮನ ವರ್ಣನೆಯನ್ನು ಹೇಳುತ್ತಿರುವಾಗ ನನ್ನ ಕಣ್ಣೆದುರಿಗೆ ಪೂ. ಭಾರ್ಗವರಾಮರ ರೂಪವೇ ಬರುತ್ತಿತ್ತು. ಪೂ. ಭಾರ್ಗವರಾಮರ ಶ್ರೀ ರಾಮನ ವೇಷಭೂಷಣವಿರುವ ಛಾಯಾಚಿತ್ರವಿರುವ ಕಿರುಸಂದೇಶವನ್ನು ನೋಡುವಾಗ ನನ್ನ ಭಾವಜಾಗೃತಿಯಾಯಿತು. ಮನೆಯಲ್ಲಿ ಶ್ರೀರಾಮನ ಭಜನೆ ನಡೆದಿರುವಾಗ ಸೌ. ಭವಾನಿಯು ‘ವೀಡಿಯೊ ಕಾಲ್ ಮಾಡಿ ನಮಗೆ ಶ್ರೀರಾಮನ ಭಜನೆಯಲ್ಲಿ ಮಗ್ನನಾಗಿದ್ದ ಪೂ. ಭಾರ್ಗವರಾಮರನ್ನು ತೋರಿಸಿದಳು. ಅವರು ಆನಂದದಿಂದ ತಾಳವನ್ನು ಹಿಡಿದು ಭಜನೆಯನ್ನು ಕೇಳುತ್ತಿದ್ದರು. ಆಗ ‘ಆ ಭಜನೆ ಈಶ್ವರನ ಚರಣಗಳಿಗೆ ತಲುಪುತ್ತಿದೆ ಎಂದು ನನಗೆ ಅನಿಸಿತು. ಪೂ. ಭಾರ್ಗವರಾಮರ ವಯಸ್ಸು ಚಿಕ್ಕದಿದ್ದರೂ ಅವರ ಸ್ಥಿರ ಮತ್ತು ಗಂಭೀರ ದೃಷ್ಟಿಯನ್ನು ನೋಡಿ ‘ಭಗವಂತನು ನಮ್ಮ ಮೇಲೆ ಮಾಡಿರುವ ಕೃಪೆಯನ್ನು ನಾವು ಅನುಭವಿಸುತ್ತಿದ್ದೇವೆ, ಎಂದು ನನಗೆ ಅನಿಸಿತು.
೪. ಶ್ರೀ ಪ್ರಶಾಂತ ಹರಿಹರ, ಮಂಗಳೂರು ಸೇವಾಕೇಂದ್ರ (೮.೪.೨೦೨೦)
೪ ಅ. ಯಾವಾಗಲೂ ಪೂ. ಭಾರ್ಗವರಾಮರ ನಡವಳಿಕೆಯಲ್ಲಿರುವ ಮುಗ್ಧತೆ ಆ ದಿನ ಕಾಣಿಸದಿರುವುದು ಅವರ ಮುಖಕಮಲದ ಮೇಲೆ ರಾಜರಲ್ಲಿರುವಂತಹ ಗಾಂಭೀರ್ಯದ ಅರಿವಾಗುವುದು ಮತ್ತು ಅವರನ್ನು ನೋಡುವಾಗ ‘ಪ್ರತ್ಯಕ್ಷ ಶ್ರೀರಾಮನನ್ನೇ ನೋಡುತ್ತಿದ್ದೇವೆ, ಎಂದೆನಿಸುವುದು
‘ಪೂ. ಭಾರ್ಗವರಾಮರು ಸೇವಾಕೇಂದ್ರದೊಳಗೆ ಪ್ರವೇಶಿಸಲು ತಮ್ಮ ಪುಟ್ಟ ಹೆಜ್ಜೆಗಳಿಂದ ಮೆಟ್ಟಿಲುಗಳನ್ನು ಏರಿ ಮೇಲೆ ಬರುತ್ತಿರುವಾಗ ಅವರ ಮುಖಕಮಲದ ಮೇಲೆ ರಾಜರಲ್ಲಿರುವ ಗಾಂಭೀರ್ಯತೆ ಕಾಣಿಸುತ್ತಿತ್ತು. ಸಾಮಾನ್ಯವಾಗಿ ಅವರು ಬಹಳ ತುಂಟರಾಗಿದ್ದಾರೆ. ಆದರೆ ಇಂದು ಶ್ರೀರಾಮನ ವೇಶಭೂಷಣದಲ್ಲಿ ಧನಸ್ಸು-ಬಾಣವನ್ನು ಕೈಯಲ್ಲಿ ಹಿಡಿದ ಬಳಿಕ ಅವರಲ್ಲಿರುವ ‘ಶ್ರೀರಾಮತತ್ವವೇ ಪ್ರಕಟವಾಗಿದೆ, ಎಂದು ನನಗೆ ಅನಿಸುತ್ತಿತ್ತು. ಅವರು ಕೈಯಲ್ಲಿ ಹಿಡಿದಿರುವ ಧನಸ್ಸು-ಬಾಣವನ್ನು ಸ್ಥಿರವಾಗಿ ಹಿಡಿದುಕೊಂಡಿದ್ದರು. ಅವರು ಸೇವಾಕೇಂದ್ರಕ್ಕೆ ಬಂದಬಳಿಕ ನಾವು ಅವರಿಗೆ ನಮಸ್ಕಾರ ಮಾಡಿದೆವು. ಆಗ ಅವರೂ ನಮಗೆ ನಮಸ್ಕಾರ ಮಾಡಿ ಸ್ಪಂದಿಸುತ್ತಿದ್ದರು. ಇತರ ಸಮಯದಲ್ಲಿ ಅವರಲ್ಲಿರುವ ಮುಗ್ಧತೆ ಇಂದು ಕಾಣಿಸುತ್ತಿರಲಿಲ್ಲ. ಇಂದು ಅವರನ್ನು ನೋಡುವಾಗ ‘ಪ್ರತ್ಯಕ್ಷ ಶ್ರೀರಾಮನನ್ನೇ ನೋಡುತ್ತಿದ್ದೇವೆ, ಎಂದು ನನಗೆ ಅನಿಸುತ್ತಿತ್ತು.
೫. ಕು. ಮಂಗಲಾ ಗೌಡ, ಮಂಗಳೂರು ಸೇವಾಕೇಂದ್ರ (೩.೪.೨೦೨೦)
೫. ಅ.‘ಶ್ರೀರಾಮನ ರೂಪದ ಪೂ. ಭಾರ್ಗವರಾಮರನ್ನು ನೋಡಿದಾಗ ಅವರು ಶ್ರೀರಾಮನೇ ಆಗಿದ್ದಾರೆ ಎಂದೆನಿಸುವುದು ಮತ್ತು ಯಾವಾಗಲೂ ಛಾಯಾಚಿತ್ರವನ್ನು ತೆಗೆಯುವಾಗ ಸ್ಪಂದಿಸದಿರುವ ಪೂ. ಭಾರ್ಗವರಾಮರು ಆ ದಿನ ಅವರ ಛಾಯಾಚಿತ್ರವನ್ನು ತೆಗೆಯುವಾಗಲೂ ಶಾಂತ ಮತ್ತು ಸ್ಥಿರವಾಗಿರುವುದು
‘ಪೂ. ಭಾರ್ಗವರಾಮರು ಶ್ರೀರಾಮನ ವೇಶಭೂಷಣವನ್ನು ಧರಿಸಿಕೊಂಡು ಗಣಕಯಂತ್ರದ ಸೇವೆ ನಡೆಯುವಲ್ಲಿಗೆ ಬಂದಾಗ ಅವರನ್ನು ನೋಡಿ ನನಗೆ ಭಾವಜಾಗೃತಿಯಾಯಿತು. ಅವರು ಇಂದು ಶ್ರೀರಾಮನಂತೆ ಗಂಭೀರ ಮತ್ತು ಸ್ಥಿರವಾಗಿದ್ದರು. ಅವರನ್ನು ನೋಡಿದಾಗ ಅವರು ‘ಪೂ. ಭಾರ್ಗವರಾಮ ಆಗಿದ್ದಾರೆ ಎಂದೆನಿಸುತ್ತಿರಲಿಲ್ಲ. ‘ಅವರು ಶ್ರೀರಾಮನೇ ಆಗಿದ್ದಾರೆ ಎಂದೆನಿಸುತ್ತಿತ್ತು. ಸಾಧಕರು ಅವರ ಛಾಯಾಚಿತ್ರವನ್ನು ತೆಗೆಯುತ್ತಿರುವಾಗ ಅವರು ಶಾಂತವಾಗಿದ್ದರು. ಇತರ ಸಮಯದಲ್ಲಿ ಅವರು ಛಾಯಾಚಿತ್ರವನ್ನು ತೆಗೆಯುವಾಗ ಸ್ಪಂದಿಸುವುದಿಲ್ಲ.
೬. ಕು. ಕುಸುಮಾವತಿ, ಮಂಗಳೂರು ಸೇವಾಕೇಂದ್ರ (೪.೪.೨೦೨೦)
೬ ಅ. ಪೂ. ಭಾರ್ಗವರಾಮರಿಗೆ ‘ಏನು ಕೊಡುವಿರಿ ? ಎಂದು ಕೇಳಿದಾಗ ‘ಚಾಕಲೇಟ್ ಕೊಡುತ್ತೇನೆ ಎಂದು ಅವರು ಹೇಳುವುದು. ಆಗ ‘ಚಾಕಲೇಟ್ ಎಲ್ಲಿಂದ ಕೊಡುವಿರಿ ? ಎಂದು ಕೇಳಿದಾಗ ಅವರು ತಮ್ಮ ಹೃದಯದ ಕಡೆಗೆ ಬೆರಳು ಮಾಡಿ ತೋರಿಸುವುದು ಮತ್ತು ಆ ಸಮಯದಲ್ಲಿ ಅವರು ಆನಂದವನ್ನು ನೀಡುತ್ತಿರುವಂತೆ ಅನಿಸುವುದು
‘ಪೂ. ಭಾರ್ಗವರಾಮರು ರಾಮನವಮಿಯಂದು ಶ್ರೀರಾಮನ ವೇಶಭೂಷಣವನ್ನು ಧರಿಸಿದ್ದರು. ಅವರು ನಾವು ಸೇವೆಯನ್ನು ಮಾಡುತ್ತಿದ್ದ ಸ್ಥಳಕ್ಕೆ ಬಂದರು. ಆಗ ಅವರು ನನಗೆ ಶ್ರೀರಾಮನಂತೆಯೇ ಕಾಣಿಸುತ್ತಿದ್ದರು. ಅವರು ಹತ್ತಿರ ಬಂದ ಬಳಿಕ ನಾನು ಅವರಿಗೆ ‘ನನಗೆ ಏನು ಕೊಡುವಿರಿ ? ಎಂದು ಕೇಳಿದೆನು. ಆಗ ‘ಚಾಕಲೇಟ್ ಕೊಡುತ್ತೇನೆ ಎಂದು ನನಗೆ ಹೇಳಿದರು. ಅವರ ಕೈಯಲ್ಲಿ ಏನೂ ಇಲ್ಲದ ಕಾರಣ ನಾನು ಅವರಿಗೆ ‘ಚಾಕಲೇಟ್ ಎಲ್ಲಿಂದ ಕೊಡುವಿರಿ ? ಎಂದು ಕೇಳಿದೆನು. ಆಗ ಅವರು ತಮ್ಮ ಹೃದಯದ ಕಡೆಗೆ ಕೈ ಮಾಡಿ ‘ಇಲ್ಲಿಂದ ಎಂದು ಹೇಳಿದರು. ಆಗ ‘ಅವರು ನನಗೆ ಆನಂದವನ್ನು ನೀಡುತ್ತಿದ್ದಾರೆ ಎಂದು ನನಗೆ ಅನಿಸಿತು. ಆ ಸಮಯದಲ್ಲಿ ಪೂ. ಭಾರ್ಗವರಾಮ ಗಂಭೀರ ಮತ್ತು ಸ್ಥಿರವೆನಿಸಿದರು. ಸಾಮಾನ್ಯವಾಗಿ ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಈ ರೀತಿ ಗಂಭೀರ ಮತ್ತು ಸ್ಥಿರವಾಗಿರುವುದಿಲ್ಲ.
೭. ಶ್ರೀ ಕೀರ್ತನ ಭಟ್, ಮಂಗಳೂರು ಸೇವಾಕೇಂದ್ರ (೬.೪.೨೦೨೦)
೭ ಅ. ಪೂ. ಭಾರ್ಗವರಾಮರ ಶ್ರೀರಾಮನ ವೇಷದಲ್ಲಿರುವ ಛಾಯಾಚಿತ್ರವನ್ನು ತೆಗೆಯುವಾಗ ಅವರ ಮುಖದ ಮೇಲೆ ಚೈತನ್ಯ ಮತ್ತು ರಾಜರಲ್ಲಿರುವಂತಹ ಗಾಂಭೀರ್ಯತೆಯು ಅರಿವಾಗುವುದು
‘ಪೂ. ಭಾರ್ಗವರಾಮರ ಶ್ರೀರಾಮನ ವೇಷಭೂಷಣದಲ್ಲಿರುವ ಛಾಯಾಚಿತ್ರಗಳನ್ನು ತೆಗೆಯಲು ಆರಂಭಿಸಿದಾಗ ಪೂ. ಭಾರ್ಗವರಾಮರ ಮುಖಕಮಲವು ಶ್ರೀರಾಮನಂತೆ ಗಂಭೀರವಾಯಿತು. ಆದರೆ ನಮ್ಮಂತಹ ಸಾಮಾನ್ಯರ ಮುಖದ ಮೇಲೆ ಕಾಣಿಸುವಂತಹ ಗಾಂಭೀರ್ಯತೆ ಅವರ ಮುಖದಲ್ಲಿರಲಿಲ್ಲ. ಆ ಮುಖದಲ್ಲಿ ಚೈತನ್ಯದ ಅರಿವಾಗುತ್ತಿತ್ತು. ಅವರ ಮುಖಕಮಲದ ಮೇಲೆ ರಾಜರಲ್ಲಿರುವಂತಹ ರಾಜಗಾಂಭೀರ್ಯತೆಯ ಅರಿವಾಗುತ್ತಿತ್ತು. ಅವರು ‘ದೂರದೃಷ್ಟಿಯಿಂದ ಯಾವುದೋ ವಿಚಾರವನ್ನು ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು.
೭ ಆ. ಸೇವಾಕೇಂದ್ರ ಎಲ್ಲ ಸಾಧಕರಿಗೆ ಶ್ರೀರಾಮರೂಪನ ದರ್ಶನವನ್ನು ಮಾಡಿಸಲು ಪೂ. ಭಾರ್ಗವರಾಮರು ಸ್ವತಃ ಎಲ್ಲ ಸಾಧಕರ ಬಳಿಗೆ ಹೋಗುವುದು
ಮಂಗಳೂರು ಸೇವಾಕೇಂದ್ರದ ಎಲ್ಲ ಸಾಧಕರನ್ನು ತಮ್ಮ ಈ ಶ್ರೀರಾಮನ ರೂಪದ ದರ್ಶನವನ್ನು ಮಾಡಿಸಲು ಅವರು ತಾವೇ ಎಲ್ಲ ಸಾಧಕರ ಬಳಿಗೆ ಹೋದರು. ಅವರು ‘ಬರುವುದಿಲ್ಲವೆಂದು ಹಠ ಹಿಡಿಯಲಿಲ್ಲ. ಸೌ. ಭವಾನಿ ಅಕ್ಕ (ಪೂ. ಭಾರ್ಗವರಾಮರ ತಾಯಿ) ಅವರು ಜೊತೆಯಲ್ಲಿ ಇಲ್ಲದಿರುವಾಗಲೂ ಅವರು ಕು. ಚರಣದಾಸ ಮತ್ತು ಕು. ಗುರುದಾಸ ಈ ಬಾಲಸಾಧಕರೊಂದಿಗೆ ಸಂಪೂರ್ಣ ಸೇವಾಕೇಂದ್ರದಲ್ಲಿ ತಿರುಗಾಡಿ ಬಂದರು. ಆಗ ‘ಅವರು ತಮ್ಮ ಎಲ್ಲ ಪ್ರಜೆಗಳಿಗೆ ದರ್ಶನವನ್ನು ನೀಡಿದರು, ಎಂದು ನನಗೆ ಅನಿಸಿತು.
೭ ಇ. ಪೂ. ಭಾರ್ಗವರಾಮರು ಅವರ ಬಳಿಯಿದ್ದ ಭಗವಾ ಧ್ವಜವನ್ನು ಅತ್ಯಂತ ಉತ್ಸಾಹದಿಂದ ಹಾರಿಸುತ್ತಿದ್ದರು. ಆ ಧ್ವಜ ಎಲ್ಲೆಡೆಯೂ ಹಾರಿಸುತ್ತ ಹೋಗುವಾಗ ಅವರಿಗೆ ಆನಂದವಾಗುತ್ತಿತ್ತು.
೭ ಈ. ಕೃತಜ್ಞತೆ
ಪೂ. ಭಾರ್ಗವರಾಮರ ಶ್ರೀರಾಮರೂಪದ ಛಾಯಾಚಿತ್ರವನ್ನು ತೆಗೆಯಬೇಕಾಗಿದ್ದರಿಂದ ನನ್ನ ಸಂಪೂರ್ಣ ಗಮನ ಛಾಯಾಚಿತ್ರ ಸರಿಯಾಗಿ ತೆಗೆಯುವ ಕಡೆಗೆ ಇದ್ದಿತು. ಅವರ ನಿರೀಕ್ಷಣೆಯ ಕಡೆಗೆ ನನ್ನ ಗಮನವಿರಲಿಲ್ಲ. ಆದಾಗ್ಯೂ ಇಂದು ಆ ದಿನದಂದು ಗಮನಕ್ಕೆ ಬಂದ ಅಂಶಗಳನ್ನು ಬರೆಯಲು ಕುಳಿತಾಗ ಅವರ ಕೃಪೆಯಿಂದ ನಾನು ಅನುಭವಿಸಿದ ಚಿಕ್ಕ-ಪುಟ್ಟ ಕ್ಷಣಗಳ ಸ್ಮರಣೆಯಾಗಿ ಬರೆಯಲು ನನಗೆ ಸಾಧ್ಯವಾಯಿತು. ಅವರ ಛಾಯಾಚಿತ್ರಗಳನ್ನು ತೆಗೆಯುವ ಸೇವೆಯನ್ನು ನೀಡಿ ಅವರು ನನ್ನಿಂದ ಮಾಡಿಸಿಕೊಂಡಿರುವುದಾಗಿ ಮತ್ತು ಅವರ ವಿಷಯದಲ್ಲಿ ಅಂಶಗಳನ್ನು ಬರೆದುಕೊಂಡಿರುವ ಬಗ್ಗೆ ನಾನು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ಅರ್ಪಿಸುತ್ತೇನೆ.